ಕನ್ನಡ ಸುದ್ದಿ  /  ಜೀವನಶೈಲಿ  /  Beauty Tips: ಚರ್ಮ ಬೇಗ ಸುಕ್ಕುಗಟ್ಟುವುದನ್ನು ತಡೆಗಟ್ಟಲು ಈ ಟಿಪ್ಸ್‌ ಫಾಲೋ ಮಾಡಿ

Beauty Tips: ಚರ್ಮ ಬೇಗ ಸುಕ್ಕುಗಟ್ಟುವುದನ್ನು ತಡೆಗಟ್ಟಲು ಈ ಟಿಪ್ಸ್‌ ಫಾಲೋ ಮಾಡಿ

Beauty Tips: ಸೂರ್ಯನಿಂದ ಬರುವ ಯುವಿ ಕಿರಣಗಳು ವೇಗವಾಗಿ ಚರ್ಮದ ಮೇಲೆ ಪ್ರಭಾವ ಬೀರುತ್ತದೆ. ಹಾಗಾಗಿ ಚಿಕ್ಕ ವಯಸ್ಸಿನಲ್ಲಿಯೇ ಚರ್ಮ ಸುಕ್ಕುಗಟ್ಟಿದಂತಾಗುವುದನ್ನು ತಡೆಯಲು ನೀವು ಅಳವಡಿಸಿಕೊಳ್ಳಲೇ ಬೇಕಾದ ಕೆಲವು ಅಂಶಗಳು ಇಲ್ಲಿವೆ.

Beauty Tips: ಚರ್ಮ ಬೇಗ ಸುಕ್ಕುಗಟ್ಟುವುದನ್ನು ತಡೆಗಟ್ಟಲು ಈ ಟಿಪ್ಸ್‌ ಫಾಲೋ ಮಾಡಿ
Beauty Tips: ಚರ್ಮ ಬೇಗ ಸುಕ್ಕುಗಟ್ಟುವುದನ್ನು ತಡೆಗಟ್ಟಲು ಈ ಟಿಪ್ಸ್‌ ಫಾಲೋ ಮಾಡಿ

ಚಿಕ್ಕ ವಯಸ್ಸಿನಲ್ಲಿಯೇ ಚರ್ಮ ಸುಕ್ಕುಗಟ್ಟಲು ಅನೇಕ ಕಾರಣಗಳಿವೆ. ಅವುಗಳಲ್ಲಿ ಪ್ರಮುಖವಾಗಿ ಬಿಸಿಲು, ನಮ್ಮ ದಿನಚರಿ, ಆಹಾರಾಭ್ಯಾಸ ಪ್ರಮುಖವಾಗಿದೆ. ನೈಸರ್ಗಿಕವಾಗಿಯೇ ಚರ್ಮವು ಹೆಚ್ಚು ವೇಗವಾಗಿ ವಯಸ್ಸಾದಂತೆ ಕಾಣಿಸಲು ಪ್ರಮುಖವಾಗಿ ಸೂರ್ಯನ ಬಿಸಿಲೇ ಕಾರಣ. ಅದರಿಂದ ರಕ್ಷಣೆ ಒದಗಿಸಿಕೊಳ್ಳುವುದರ ಮೂಲಕ ಚರ್ಮವನ್ನು ಕಾಪಾಡಿಕೊಳ್ಳಬಹುದು. ಉದಾಹರಣೆಗೆ ಹಗುರವಾದ ಮತ್ತು ಉದ್ದನೆಯ ತೋಳಿನ ಅಂಗಿ, ಪ್ಯಾಂಟ್, ಅಗಲವಾದ ಟೋಪಿ ಮತ್ತು ಯುವಿ ರಕ್ಷಣೆಯಿರುವ ಸನ್‌ಗ್ಲಾಸ್‌ ಮತ್ತು ಸೌಮ್ಯವಾದ ಸನ್‌ಸ್ಕ್ರೀನ್ ಲೋಷನ್‌ ಬಳಕೆ. ಬಟ್ಟೆಯಿಂದ ಮುಚ್ಚಲು ಸಾಧ್ಯವಾಗದ ಚರ್ಮದ ಭಾಗಗಳಿಗೆ ಪ್ರತಿದಿನ ಸನ್‌ಸ್ಕ್ರಿನ್‌ ಲೋಷನ್‌ ಹಚ್ಚುವುದು ಇವೆಲ್ಲವು ಚರ್ಮವು ಸುಕ್ಕುಗಳಾಗದಂತೆ ತಡೆಯುವ ಮಾರ್ಗಗಳು ಎಂದು ಚರ್ಮರೋಗ ತಜ್ಞರು ಹೇಳುತ್ತಾರೆ. ಇದಲ್ಲದೇ ಸೂರ್ಯನ ಬಿಸಿಲಿನಿಂದಾಗುವ ಟ್ಯಾನ್‌ನಿಂದ ದೂರವಿರಲು ಟ್ಯಾನರ್‌ ಗಳನ್ನು ಹಚ್ಚಿಕೊಳ್ಳುವುದು ಉತ್ತಮ. ಬಿಸಿಲಿನಿಂದ ಚರ್ಮವು ಟ್ಯಾನ್‌ ಆದಾಗ ಅದು ಕಂದು ಬಣ್ಣಕ್ಕೆ ತಿರುಗುತ್ತದೆ ಮತ್ತು ವಯಸ್ಸಾದಂತೆ ಕಾಣಿಸುತ್ತದೆ. ಸೂರ್ಯನಿಂದ ಬರುವ ಯುವಿ ಕಿರಣಗಳು ಇನ್ನಷ್ಟು ವೇಗವಾಗಿ ಚರ್ಮದ ಮೇಲೆ ಪ್ರಭಾವ ಬೀರುತ್ತವೆ. ಹಾಗಾಗಿ ಚಿಕ್ಕ ವಯಸ್ಸಿನಲ್ಲಿಯೇ ಚರ್ಮ ಸುಕ್ಕುಗಟ್ಟಿದಂತಾಗುವುದನ್ನು ತಡೆಯಲು ನೀವು ಅಳವಡಿಸಿಕೊಳ್ಳಲೇ ಬೇಕಾದ ಕೆಲವು ಅಂಶಗಳಿವೆ. ಅವುಗಳು ಹೀಗಿವೆ.

ಟ್ರೆಂಡಿಂಗ್​ ಸುದ್ದಿ

ಧೂಮಪಾನ ನಿಲ್ಲಿಸಿ

ನೀವು ಧೂಮಪಾನ ಮಾಡುತ್ತಿದ್ದರೆ, ದಯವಿಟ್ಟು ನಿಲ್ಲಿಸಿ. ಧೂಮಪಾನದಿಂದ ಚರ್ಮವು ಬಹಳ ಬೇಗನೆ ವಯಸ್ಸಾದಂತೆ ಕಾಣಿಸುತ್ತದೆ. ಅದರಿಂದ ಚರ್ಮ ಸುಕ್ಕುಗಟ್ಟಿ ಕಳೆಗುಂದುತ್ತದೆ.

ಮುಖಭಾವಗಳನ್ನು ಮಾಡುವಾಗ ಎಚ್ಚರವಿರಲಿ

ನೀವು ಮುಖಭಾವ ಮಾಡಿದಾಗ ಸ್ನಾಯುಗಳನ್ನು ಸಂಕುಚಿತಗೊಳಿಸುತ್ತೀರಿ. ಅನೇಕ ವರ್ಷಗಳಿಂದ ಒಂದೇ ಸ್ನಾಯುಗಳನ್ನು ಪದೇ ಪದೇ ಸಂಕುಚಿತಗೊಳಿಸಿದರೆ ಅಲ್ಲಿ ನೆರಿಗೆಗಳು ಶಾಶ್ವತವಾಗಿ ಮೂಡುತ್ತವೆ. ಸನ್‌ಗ್ಲಾಸ್‌ಗಳನ್ನು ಧರಿಸುವುದರಿಂದ ಕಣ್ಣುಗಳನ್ನು ಸಂಕುಚಿಸಿದಾಗ ಉಂಟಾಗುವ ಗೆರೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಸಮತೋಲಿತ ಆಹಾರ ಸೇವಿಸಿ

ಆರೋಗ್ಯಕರ, ಸಮತೋಲಿತ ಆಹಾರ ಸೇವಿಸಿ. ತಾಜಾ ಹಣ್ಣು ಮತ್ತು ತರಕಾರಿಗಳನ್ನು ತಿನ್ನುವುದು ಚಿಕ್ಕ ವಯಸ್ಸಿನಲ್ಲಿ ಚರ್ಮದ ಮೇಲಾಗುವ ಹಾನಿಯನ್ನು ತಡೆಯಲು ಸಹಾಯ ಮಾಡುತ್ತದೆ ಎಂದು ಕೆಲವು ಅಧ್ಯಯನಗಳ ಸಂಶೋಧನೆಗಳು ಹೇಳುತ್ತವೆ. ಸಕ್ಕರೆ ಅಥವಾ ಇತರ ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ಗಳನ್ನು ಒಳಗೊಂಡಿರುವ ಆಹಾರವು ವಯಸ್ಸಾಗುವಿಕೆಯನ್ನು ವೇಗಗೊಳಿಸುತ್ತದೆ ಎಂಬುದೂ ಸಹ ಅಧ್ಯಯನಿಂದ ತಿಳಿದುಬಂದಿದೆ.

ಮಿತವಾಗಿ ಆಲ್ಕೋಹಾಲ್ ಸೇವಿಸಿ

ಆಲ್ಕೋಹಾಲ್ ಚರ್ಮವನ್ನು ಒರಟಾಗಿಸುತ್ತದೆ. ಇದು ಚರ್ಮವನ್ನು ನಿರ್ಜಲೀಕರಣಗೊಳಿಸುತ್ತದೆ ಮತ್ತು ಚರ್ಮವನ್ನು ಹಾನಿಗೊಳಿಸುತ್ತದೆ. ಇದರಿಂದ ವಯಸ್ಸಾದವರಂತೆ ಕಾಣಿಸಬಹುದು.

ವ್ಯಾಯಾಮ ಮಾಡಿ

ದಿನವೂ ವ್ಯಾಯಾಮ ಮಾಡಿ. ಮಧ್ಯಮ ವ್ಯಾಯಾಮವು ರಕ್ತಪರಿಚಲನೆಯನ್ನು ಸುಧಾರಿಸುತ್ತದೆ ಮತ್ತು ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ ಎಂದು ಕೆಲವು ಅಧ್ಯಯನ ಮತ್ತು ಸಂಶೋಧನೆಗಳು ಸೂಚಿಸುತ್ತವೆ.

ಚರ್ಮವನ್ನು ನಿಧಾನವಾಗಿ ಸ್ವಚ್ಛಗೊಳಿಸಿ

ನಿಮ್ಮ ಚರ್ಮವನ್ನು ಸ್ವಚ್ಛವಾಗಿ ಸ್ಕ್ರಬ್ ಮಾಡುವುದರಿಂದ ತ್ವಚೆಯ ಮೇಲಿನ ರಕ್ತಪರಿಚಲನೆ ಉತ್ತೇಜಿಸುತ್ತದೆ. ಆದರೆ ಅತಿಯಾಗಿ ಸ್ಕ್ರಬ್‌ ಮಾಡುವುದು ಚರ್ಮದ ಹಾನಿಗೆ ಕಾರಣವಾಗಿ, ಸುಕ್ಕುಗಟ್ಟುವಿಕೆಯನ್ನು ವೇಗಗೊಳಿಸುತ್ತದೆ. ಮೃದುವಾಗಿ ತೊಳೆಯುವುದರಿಂದ ಮೇಕ್ಅಪ್ ಮತ್ತು ಇತರ ವಸ್ತುಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.

ದಿನಕ್ಕೆ ಕನಿಷ್ಠ ಎರಡು ಬಾರಿ ಮುಖ ತೊಳೆಯಿರಿ

ದಿನಕ್ಕೆ ಎರಡು ಬಾರಿ ಅಥವಾ ಹೆಚ್ಚು ಬೆವರಿದಾಗ ಮುಖವನ್ನು ತೊಳೆಯಿರಿ. ವಿಶೇಷವಾಗಿ ಟೋಪಿ ಅಥವಾ ಹೆಲ್ಮೆಟ್ ಧರಿಸಿದಾಗ ಬವರಿನಿಂದ ಚರ್ಮವು ಬೇಗನೆ ಹಾಳಾಗುತ್ತದೆ. ಆದ್ದರಿಂದ ಬೆವರು ಬಂದಾಗ ಸಾಧ್ಯವಾದಷ್ಟು ಬೇಗ ಚರ್ಮವನ್ನು ತೊಳೆಯಿರಿ.

ಮುಖಕ್ಕೆ ಮಾಯಿಶ್ಚರೈಸರ್ ಹಚ್ಚಿ

ಮಾಯಿಶ್ಚರೈಸರ್ ನಮ್ಮ ಚರ್ಮದಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳುತ್ತದೆ. ಇದು ಹೆಚ್ಚು ತಾರುಣ್ಯದಿಂದ ಕೂಡಿರಲು ಸಹಾಯ ಮಾಡುತ್ತದೆ.

ಸ್ಕಿನ್‌ ಕೇರ್‌ ಪ್ರಾಡೆಕ್ಟ್‌ಗಳ ಬಳಕೆ ಕಡಿಮೆ ಮಾಡಿ

ಚರ್ಮದ ಆರೈಕೆಗಾಗಿ ಸ್ಕಿನ್‌ ಕೇರ್‌ ಉತ್ಪನ್ನಗಳನ್ನು ಬಳಸುವುದನ್ನು ಕಡಿಮೆ ಮಾಡಿ. ಸ್ಕಿನ್‌ ಕೇರ್‌ ಉತ್ಪನ್ನಗಳು ನಿಮ್ಮ ಚರ್ಮವು ಸುಡುವಂತೆ ಮಾಡುತ್ತದೆ ಮತ್ತು ತುರಿಕೆ ಬಂದಂತಾಗಿ ಅದು ಕಿರಿಕಿರಿಯನ್ನುಂಟು ಮಾಡುತ್ತದೆ.