ಕನ್ನಡ ಸುದ್ದಿ  /  Lifestyle  /  Skin Care And Holi Party

Skin care and Holi party: ಹೋಳಿ ಪಾರ್ಟಿಯಲ್ಲಿ ಮಿಂಚಬೇಕೆ? ಈ ಟಿಪ್ಸ್‌ಗಳನ್ನು ಅನುಸರಿಸಲು ಮರೆಯದಿರಿ

Skin care and Holi party: ಹೋಳಿ ಪಾರ್ಟಿಯಲ್ಲಿ ಭಾಗವಹಿಸುವ ಯೋಚನೆ ಇದೆಯೇ? ಹೋಳಿಯಾಡಿ ಚರ್ಮ ಕಳೆಗುಂದಿರುತ್ತದೆ ಎನ್ನುವ ಭಯವೇ? ಪಾರ್ಟಿಯಲ್ಲಿ ಮಿಂಚಬೇಕು ಎಂಬ ಬಯಕೆಯ ನಡುವೆ ತ್ವಚೆಯ ಬಗ್ಗೆಯೂ ಚಿಂತಿಸುತ್ತಿದ್ದೀರಾ? ಬಣ್ಣಗಳಿಂದ ಚರ್ಮವನ್ನು ರಕ್ಷಿಸಿಕೊಳ್ಳಲು ಇಲ್ಲಿವೆ ಕೆಲವು ಟಿಪ್ಸ್‌.

ಸ್ಕಿನ್‌ ಕೇರ್‌
ಸ್ಕಿನ್‌ ಕೇರ್‌

ಇದು ದೇಶವೇ ರಂಗಾಗಿರುವ ಹೊತ್ತು. ಹೌದು, ಇದು ಹೋಳಿಯ ಸಮಯ. ಹೋಳಿ ಬಣ್ಣಗಳಲ್ಲಿ ನಲಿದಾಡುವ ಮೊದಲು ನಮ್ಮ ಚರ್ಮದ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ಹೋಳಿ ಹಬ್ಬದ ಎಷ್ಟು ಸಂಭ್ರಮವೋ, ಹೋಳಿಯ ಬಣ್ಣ ಚರ್ಮಕ್ಕೆ ಅಷ್ಟೇ ಅಪಾಯಕಾರಿ. ಸೂರ್ಯ ಕಿರಣ, ರಾಸಾಯನಿಕ ಬಣ್ಣಗಳ ಕಾರಣದಿಂದ ಚರ್ಮ ಹಾಗೂ ಕೂದಲಿನ ಮೇಲೆ ದೀರ್ಘಕಾಲದ ಪರಿಣಾಮ ಉಂಟಾಗಬಹುದು. ನೈಸರ್ಗಿಕ ಬಣ್ಣ ಎಂಬ ಹೆಸರಿನಲ್ಲೇ ವ್ಯಾಪಾರಸ್ಥರು ನಮ್ಮನ್ನು ಮರಳು ಮಾಡುತ್ತಾರೆ. ಯಾಕೆಂದರೆ ಮೇಲ್ನೋಟಕ್ಕೆ ಬಣ್ಣವನ್ನು ನೈಸರ್ಗಿಕ, ರಾಸಾಯನಿಕಯುಕ್ತ ಎಂದು ಕಂಡು ಹಿಡಿಯಲು ಸಾಧ್ಯವಿಲ್ಲ. ನೈಸರ್ಗಿಕ ಬಣ್ಣಗಳು ಪರಿಸರಸ್ನೇಹಿ ಹಾಗೂ ಅವುಗಳ ಚರ್ಮಕ್ಕೆ ಹಾನಿಯುಂಟು ಮಾಡುವುದಿಲ್ಲ. ಆದರೆ ಇದರಲ್ಲಿ ರಾಸಾಯನಿಕಗಳನ್ನು ಬೆರೆಸಿ ಅದನ್ನು ಕೆಡಿಸುತ್ತಾರೆ. ಅದರ ಬಗ್ಗೆ ಜಾಗೃತಿ ವಹಿಸಬೇಕು.

ಹೋಳಿ ಹಬ್ಬದ ರಂಗಿನಲ್ಲಿ ಮಿಂದೆದ್ದ ಬಳಿಕ ಹೋಳಿ ಹಬ್ಬದ ಪಾರ್ಟಿ ಮಾಡುವುದು ಸಾಮಾನ್ಯ. ಈ ಪಾರ್ಟಿಯಲ್ಲಿ ನಿಮ್ಮ ಚರ್ಮ ಕಳೆಗುಂದಿದಂತಿದ್ದರೆ ಏನು ಚೆನ್ನ ಅಲ್ಲವೇ? ಚರ್ಮ ಕಳೆಗುಂದದೆ, ಚರ್ಮದ ಕಾಂತಿಯನ್ನು ಹಾಗೇ ಉಳಿಸಿಕೊಂಡು ಪಾರ್ಟಿಯಲ್ಲಿ ಮಿಂಚಬೇಕೇ? ಈ ಕೆಲವು ಸೂತ್ರಗಳನ್ನು ಅನುಸರಿಸಿ.

ಇಂಟರ್‌ನ್ಯಾಷನಲ್‌ ಆಸ್ತೆಟಿಕ್ಸ್‌ನ ವ್ಯವಸ್ಥಾಪಕ ನಿರ್ದೇಶಕಿ ಡಾ. ಗೀತಿಕಾ ಮಿತ್ತಲ್‌ ಹೋಳಿ ಪಾರ್ಟಿಯಲ್ಲಿ ಹೊಳಪಿನ ಚರ್ಮ ನಿಮ್ಮದಾಗಿಸಲು ಕೆಲವೊಂದು ಟಿಪ್ಸ್‌ಗಳನ್ನು ಇಲ್ಲಿ ತಿಳಿಸಿದ್ದಾರೆ.

ಮಾಯಿಶ್ಚರೈಸರ್‌

ಹೋಳಿ ಆಚರಣೆಗೆ ಮನೆಯಿಂದ ಹೊರ ಹೊರಡುವ ಮೊದಲು ಚರ್ಮಕ್ಕೆ ಮಾಯಿಶ್ಚರೈಸರ್‌ ಮಾಡುವುದನ್ನು ಮರೆಯದಿರಿ. ತೆಂಗಿನೆಣ್ಣೆ ನೈಸರ್ಗಿಕ ಮಾಯಿಶ್ಚರೈಸರ್‌. ಆ ಕಾರಣಕ್ಕೆ ನಿಮ್ಮ ಚರ್ಮ, ಕತ್ತು, ಕೈ, ಕಾಲಿಗೆ ತೆಂಗಿನೆಣ್ಣೆ ಹಚ್ಚಿ ಚೆನ್ನಾಗಿ ಮಸಾಜ್‌ ಮಾಡಿ. ತೆಂಗಿನೆಣ್ಣೆ ನಿಮ್ಮ ಮುಖಕ್ಕೆ ಹೊಂದುವುದಿಲ್ಲ ಎಂದರೆ ಮಾಯಿಶ್ಚರೈಸರ್‌ ಕ್ರೀಮ್‌ ಬಳಸಬಹುದು. ತುಟಿಗಳಿಗೆ ವ್ಯಾಸಲಿನ್‌ ಜೆಲ್ಲಿ ಅಥವಾ ಪೆಟ್ರೋಲಿಯಂ ಜೆಲ್ಲಿ ಬಳಸಬಹುದು.

ಆಯಿಲ್‌ ಮಸಾಜ್‌

ಹೋಳಿ ಹಬ್ಬ ಮುಗಿದ ನಂತರ ಉತ್ತಮ ಗುಣಮಟ್ಟದ ನೈಸರ್ಗಿಕ ಎಣ್ಣೆಯಿಂದ ಕೂದಲಿಗೆ ಮಸಾಜ್‌ ಮಾಡುವುದನ್ನು ಮರೆಯದಿರಿ. ಇದು ನಿಮ್ಮ ಕೂದಲನ್ನು ರಾಸಾಯನಿಕಗಳಿಂದ ರಕ್ಷಿಸಿಕೊಳ್ಳುವ ಉತ್ತಮ ವಿಧಾನವಾಗಿದೆ. ಆಗರ್ನ್‌ ಆಯಿಲ್‌ ಅಥವಾ ತೆಂಗಿನೆಣ್ಣೆ ಬಳಸುವುದು ಉತ್ತಮ.

ಹೈಡ್ರಾ ಫೇಶಿಯಲ್‌

ಹೈಡ್ರಾ ಫೇಶಿಯಲ್ ಮತ್ತು ಪ್ರೊಫಿಲೋ ಮುಂತಾದ ಚಿಕಿತ್ಸೆಗಳಿಂದ ಚರ್ಮವನ್ನು ಬೇಗನೆ ಹೈಡ್ರೇಟ್‌ ಮಾಡಬಹುದು. ಪ್ರೊಫಿಲೋ ಚರ್ಮಕ್ಕೆ ನೈಸರ್ಗಿಕ ಹೊಳಪು ನೀಡುವುದಲ್ಲದೆ, ದೀರ್ಘಾವಧಿವರೆಗೆ ಚರ್ಮದಲ್ಲಿ ತೇವಾಂಶ ಉಳಿಯುವಂತೆ ಮಾಡುತ್ತದೆ. ನೀವು ಹೋಳಿಯಲ್ಲಿ ಭಾಗವಹಿಸುವ ವಾರದ ಮೊದಲು ಇದನ್ನು ಮಾಡಿಸಿಕೊಳ್ಳುವುದು ಉತ್ತಮ.

ಟೋನರ್‌ ಬಳಕೆ

ಹೋಳಿಯಾಡಿದ ನಂತರ ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಸ್ಕಿನ್‌ ಟೋನರ್‌ ಬಳಕೆ ಮಾಡಿ. ಪ್ರತಿದಿನ ಸ್ನಾನದ ನಂತರ ಮಾಯಿಶ್ಚರೈಸರ್‌ ಬಳಕೆಯ ಮೊದಲು ಟೋನರ್‌ ಹಚ್ಚಬೇಕು. ಇದು ಚರ್ಮದ ರಂಧ್ರಗಳನ್ನು ಮುಚ್ಚಲು ಸಹಾಯ ಮಾಡುತ್ತದೆ. ಇದರಿಂದ ರಾಸಾಯನಿಕ ಬಣ್ಣಗಳನ್ನು ಚರ್ಮದ ಆಳಕ್ಕೆ ಸೇರಿ ಚರ್ಮಕ್ಕೆ ಹಾನಿಯಾಗುವುದನ್ನು ತಪ್ಪಿಸಬಹುದು, ಅಲ್ಲದೇ ಹೋಳಿ ಪಾರ್ಟಿಯಲ್ಲಿ ನಿಮ್ಮ ಅಂದ ಇನ್ನಷ್ಟು ಹೊಳೆಯಬಹುದು.

ಸನ್‌ಸ್ಕ್ರೀನ್‌ ಹಚ್ಚಿ

ನೀವು ಹೋಳಿಯಾಡಲು ಆರಂಭಿಸಲು ಮೊದಲು ಉತ್ತಮ ಗುಣಮಟ್ಟದ ಸನ್‌ಸ್ಕ್ರೀನ್‌ ಬಳಕೆ ಮಾಡುವುದು ಕಡ್ಡಾಯ. ಸನ್‌ಸ್ಕ್ರೀನ್‌ ಬಳಕೆಯಿಂದ ಕೇವಲ ಚರ್ಮವನ್ನು ರಕ್ಷಿಸಿಕೊಳ್ಳುವುದು ಮಾತ್ರವಲ್ಲ, ಬಣ್ಣಗಳಿಂದ ಉಂಟಾಗುವ ಟ್ಯಾನ್‌ ಅನ್ನು ಇದು ತಡೆಯುತ್ತದೆ. ಆ ಕಾರಣಕ್ಕೆ ಹೋಳಿಗೂ ಮೊದಲು ಹಾಗೂ ಹೋಳಿಯ ನಂತರ ಸನ್‌ಬ್ಲಾಕ್‌ ಬಳಸುವುದು ಕಡ್ಡಾಯ.

ವಿಭಾಗ