ಕನ್ನಡ ಸುದ್ದಿ  /  ಜೀವನಶೈಲಿ  /  ಚರ್ಮದ ಪ್ರಕಾರಕ್ಕೆ ಅನುಗುಣವಾಗಿ ದಿನದಲ್ಲಿ ಎಷ್ಟು ಬಾರಿ ಮುಖ ತೊಳೆಯಬೇಕು? ಕಾಂತಿಯುತ ತ್ವಚೆ ನಿಮ್ಮದಾಗಲು ಈ ನಿಯಮ ಪಾಲನೆ ಕಡ್ಡಾಯ

ಚರ್ಮದ ಪ್ರಕಾರಕ್ಕೆ ಅನುಗುಣವಾಗಿ ದಿನದಲ್ಲಿ ಎಷ್ಟು ಬಾರಿ ಮುಖ ತೊಳೆಯಬೇಕು? ಕಾಂತಿಯುತ ತ್ವಚೆ ನಿಮ್ಮದಾಗಲು ಈ ನಿಯಮ ಪಾಲನೆ ಕಡ್ಡಾಯ

ತ್ವಚೆಯ ಕಾಂತಿ ಸದಾ ಹೊಳೆಯುತ್ತಿರಬೇಕು, ಚರ್ಮ ಆರೋಗ್ಯವಂತವಾಗಿರಬೇಕು ಎಂದು ಎಲ್ಲರೂ ಬಯಸುವುದು ಸಹಜ. ನಿಮ್ಮದು ಸದಾ ಹೊಳೆಯುವ ತ್ವಚೆಯಾಗಬೇಕು ಅಂದ್ರೆ ನೀವು ಮುಖ ತೊಳೆಯುವ ರೀತಿಯನ್ನೂ ಗಮನಿಸಬೇಕಾಗುತ್ತದೆ. ನಿಮ್ಮ ಚರ್ಮದ ಪ್ರಕಾರ ನೀವು ಎಷ್ಟು ಬಾರಿ, ಹೇಗೆ ಮುಖ ತೊಳೆಯಬೇಕು ಎಂಬ ವಿವರ ಇಲ್ಲಿದೆ.

ಚರ್ಮದ ಪ್ರಕಾರಕ್ಕೆ ಅನುಗುಣವಾಗಿ ದಿನದಲ್ಲಿ ಎಷ್ಟು ಬಾರಿ ಮುಖ ತೊಳೆಯಬೇಕು? ಇಲ್ಲಿದೆ ಉತ್ತರ
ಚರ್ಮದ ಪ್ರಕಾರಕ್ಕೆ ಅನುಗುಣವಾಗಿ ದಿನದಲ್ಲಿ ಎಷ್ಟು ಬಾರಿ ಮುಖ ತೊಳೆಯಬೇಕು? ಇಲ್ಲಿದೆ ಉತ್ತರ

ಇತ್ತೀಚಿನ ದಿನಗಳಲ್ಲಿ ಜನರು ಚರ್ಮದ ಕಾಳಜಿಗೆ ಹೆಚ್ಚು ಮಹತ್ವ ನೀಡುತ್ತಾರೆ. ತ್ವಚೆಯ ಆರೋಗ್ಯ ವೃದ್ಧಿಸಲು ಸ್ವಚ್ಛತೆ ಕೂಡ ಅಷ್ಟೇ ಮುಖ್ಯ. ಅದಕ್ಕಾಗಿ ಆಗಾಗ ಮುಖ ತೊಳೆಯುತ್ತಿರಬೇಕು. ಅದರಲ್ಲೂ ಬೇಸಿಗೆಯಲ್ಲಿ ಧೂಳು, ಬೆವರಿನ ಕಾರಣದಿಂದ ಚರ್ಮದ ಅಂದಗೆಡುತ್ತದೆ. ಹಾಗಾಗಿ ಮುಖ ತೊಳೆಯುವುದು ಅವಶ್ಯ. ಆದರೆ ಇದೀಗ ಮುಖ ತೊಳೆಯುವ ವಿಚಾರವೂ ಚರ್ಚೆಗೆ ಕಾರಣವಾಗಿದೆ. ಮುಖವನ್ನು ಹೇಗೆ, ಎಷ್ಟು ಬಾರಿ ತೊಳೆಯಬೇಕು ಎಂಬ ಗೊಂದಲ ಹಲವರಲ್ಲಿರುವುದು ಸಹಜ. ಚರ್ಮ ವೈದ್ಯರಾದ ಡಾ. ರಿಂಕಿ ಕಪೂರ್‌ ಅವರ ಪ್ರಕಾರ ನಮ್ಮ ಚರ್ಮದ ಪ್ರಕಾರಕ್ಕೆ ಅನುಗುಣವಾಗಿ ಯಾವಾಗ ಮತ್ತು ಎಷ್ಟು ಬಾರಿ ಮುಖ ತೊಳೆಯಬೇಕು ಎಂಬುದನ್ನು ನಿರ್ಧರಿಸಬೇಕು.

ಟ್ರೆಂಡಿಂಗ್​ ಸುದ್ದಿ

ಬೆಳಿಗ್ಗೆ ಮುಖ ತೊಳೆಯಬೇಕೆ ಬೇಡವೇ?

ಇದು ಎಲ್ಲರಿಗೂ ಒಂದೇ ರೀತಿ ಅನ್ವಯವಾಗುವುದಿಲ್ಲ ಎಂದು ಹೇಳುತ್ತಾರೆ ರಿಂಕಿ ಕಪೂರ್‌. ಕೆಲವರು ಬೆಳಗೆದ್ದು ಫೇಶ್‌ವಾಶ್‌ನಿಂದ ಸ್ವಚ್ಛವಾಗಿ ಮುಖ ತೊಳೆಯುವುದರಿಂದ ರಾತ್ರಿ ವೇಳೆ ಚರ್ಮದಲ್ಲಿ ಕಾಣಿಸಿದ ಎಣ್ಣೆಯಂಶ ಹಾಗೂ ಬೆವರು ಸ್ವಚ್ಛವಾಗುತ್ತದೆ ಎಂದರೆ, ಇನ್ನೂ ಕೆಲವರು ತ್ವಚೆಯ ಮೇಲಿನ ಮೇಕಪ್‌ ಹಾಗೂ ಪರಿಸರದ ಮಾಲಿನ್ಯಕಾರಕಗಳನ್ನು ತೆಗೆದುಹಾಕಲು ರಾತ್ರಿಯಲ್ಲಿ ಫೇಸ್ ವಾಶ್ ಬಳಕೆ ಮಾಡುವುದು ಉತ್ತಮ ಎನ್ನುತ್ತಾರೆ. ಆದರೆ ಇದು ನಿಮ್ಮ ಚರ್ಮದ ಗುಣಕ್ಕೆ ಅನುಗುಣವಾಗಿರುತ್ತದೆ ಎನ್ನುವುದು ತಜ್ಞರ ಅಭಿಪ್ರಾಯ.

ಎಣ್ಣೆ ಚರ್ಮ, ಮೊಡವೆ ಇರುವವರು ಮುಖ ತೊಳೆಯಬೇಕಾದ ವಿಧಾನ 

 ಇವರು ದಿನದಲ್ಲಿ ಎರಡು ಬಾರಿ ಚರ್ಮಕ್ಕೆ ಫೇಸ್‌ವಾಶ್‌ ಬಳಸಬೇಕು. ಇದರಿಂದ ನಿಮ್ಮ ತ್ವಚೆಯ ಆಕರ್ಷಣೆ ಹೆಚ್ಚುತ್ತದೆ.

ಬೆಳಿಗ್ಗೆ ಮುಖ ತೊಳೆಯುವುದು: ನಿಮ್ಮ ತ್ವಚೆಯನ್ನು ಬೆಳಗಿನ ವಾತಾವರಣಕ್ಕೆ ಸಿದ್ಧ ಮಾಡುತ್ತದೆ. ರಾತ್ರಿ ಮುಖದಲ್ಲಿ ಉತ್ಪತ್ತಿಯಾಗಿರುವ ಎಣ್ಣೆಯಾಂಶವನ್ನು ತೆಗೆದುಹಾಕುತ್ತದೆ. ಸನ್‌ಸ್ಕ್ರೀನ್‌ ಅಥವಾ ಮಾಯಿಶ್ಚರೈಸರ್‌ನಂತಹ ಉತ್ಪನ್ನಗಳನ್ನು ಹೀರಿಕೊಳ್ಳಲು ಅನುವು ಮಾಡಿಕೊಡುತ್ತದೆ.

ರಾತ್ರಿ ಮುಖ ತೊಳೆಯುವುದು: ಮೇಕಪ್‌, ಕೊಳೆ, ಧೂಳು ತೆಗೆದು ಹಾಕಲು ಅತ್ಯಗತ್ಯ. ಇದು ಚರ್ಮಕ್ಕೆ ಹಾನಿಯಾಗುವ ಅಂಶಗಳನ್ನು ಸ್ವಚ್ಛ ಮಾಡುತ್ತದೆ. ಆದರೆ ಒಂದು ವಿಚಾರ ನೆನಪಿಡಿ ಅತಿಯಾಗಿ ಮುಖ ತೊಳೆಯುವುದರಿಂದ ನೈಸರ್ಗಿಕ ಎಣ್ಣೆಯಂಶ ಚರ್ಮದಿಂದ ಹೊರ ಹೋಗಬಹುದು. ಇದರಿಂದ ಶುಷ್ಕತೆ ಹಾಗೂ ಕಿರಿಕಿರಿ ಉಂಟಾಗಬಹುದು.

ಶುಷ್ಕ ಹಾಗೂ ಒಣಚರ್ಮ ಹೊಂದಿರುವವರು ಹೀಗೆ ಮುಖ ತೊಳೆಯಿರಿ 

ಒಣ ಚರ್ಮ ಇರುವವರು ಅತಿಯಾಗಿ ಫೇಶ್‌ವಾಶ್‌ ಬಳಸಿ ಪದೇ ಪದೇ ಮುಖ ತೊಳೆಯುವುದರಿಂದ ಚರ್ಮದ ನೈಸರ್ಗಿಕ ತೇವಾಂಶ ನಾಶವಾಗಬಹುದು. ಕೊಳೆ ಹಾಗೂ ಮೇಕಪ್‌ ತೆಗೆಯಲು ಹೆಚ್ಚು ರಾಸಾಯನಿಕವಲ್ಲದ, ಸೂಕ್ಷ್ಮ ಫೇಶ್‌ವಾಶ್‌ ಬಳಸಿ.

ನಿಮ್ಮ ತ್ವಚೆಯ ಪ್ರಕಾರಕ್ಕೆ ಅನುಗುಣವಾಗಿ ಮುಖ ತೊಳೆಯುವ ವಿಧಾನ

ವಿವಿಧ ಪ್ರಕಾರದ ಚರ್ಮ ಹೊಂದಿದವರು ದಿನದ ಬೇರೆ ಬೇರೆ ಸಮಯದಲ್ಲಿ ಫೇಶ್‌ವಾಶ್‌ ಬಳಸಬೇಕು ಎಂದು ಡಾ. ರಿಂಕು ಇಂಡಿಯನ್‌ ಎಕ್ಸ್‌ಪ್ರೆಸ್‌ಗೆ ನೀಡದ ಸಂದರ್ಶನದಲ್ಲಿ ಹೇಳಿದ್ದಾರೆ.

ಒಣ ಚರ್ಮ: ಚರ್ಮದ ನೈಸರ್ಗಿಕ ಎಣ್ಣೆಯಂಶ ಕಾಪಾಡಿಕೊಳ್ಳಲು ದಿನಕ್ಕೊಮ್ಮೆ ಫೇಶ್‌ವಾಶ್‌ ಬಳಸಬೇಕು. ರಾತ್ರಿ ಹೊತ್ತು ಬಳಸಿದರೆ ಉತ್ತಮ.

ಎಣ್ಣೆ ಚರ್ಮ, ಮೊಡವೆ ಇರುವವರು: ಇವರು ದಿನದಲ್ಲಿ ಎರಡು ಬಾರಿ ಫೇಶ್‌ವಾಶ್‌ ಬಳಸಬಹುದು. ಆದರೆ ಅತಿಯಾಗಿ ಮುಖ ತೊಳೆಯುವುದು ಪದೇ ಪದೇ ಫೇಸ್‌ವಾಶ್‌ ಬಳಸುವುದು ಇವರಿಗೂ ಒಳಿತಲ್ಲ.

ಎಣ್ಣೆ ಹಾಗೂ ಒಣ ಸಮ್ಮಿಶ್ರ ಚರ್ಮದವರು: ಇವರು ದಿನಕ್ಕೆ ಎರಡು ಬಾರಿ ಸೌಮ್ಯಗುಣದ ಫೇಸ್‌ವಾಶ್‌ ಬಳಸಿ ಮುಖ ತೊಳೆಯಬೇಕು. ಇದರಿಂದ ಮುಖದ ಟಿ-ವಲಯಗಳಾದ ಹಣೆ, ಮೂಗು ಹಾಗೂ ಗಲ್ಲದ ಮೇಲಿನ ಎಣ್ಣೆಯಂಶ ನಿಯಂತ್ರಿಸಲು ಸಹಾಯ ಮಾಡುತ್ತದೆ.

ನಿಮ್ಮ ಚರ್ಮ ಹೇಳುವುದನ್ನು ಆಲಿಸಿ

ಒಂದಿಷ್ಟು ದಿನ ಬೇರೆ ಬೇರೆ ವಿಧದಲ್ಲಿ ಹಾಗೂ ಸಮಯದಲ್ಲಿ ಮುಖ ತೊಳೆದು ಚರ್ಮ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ನೋಡಬೇಕು. ಶುಷ್ಕತೆ, ಕಿರಿಕಿರಿ, ಎಣ್ಣೆಯಂಶವನ್ನು ಗಮನಿಸಿ ನಿಮ್ಮ ಚರ್ಮಕ್ಕೆ ಯಾವುದು ಹೊಂದುತ್ತದೆ ನೋಡಬೇಕು.

ನೆನಪಿಡಿ, ಚರ್ಮದ ಸ್ವಚ್ಛವಾಗಿರುವುದು ಆರೋಗ್ಯಕರ ಹಾಗೂ ಕಾಂತಿಯುತ ಮೈಬಣ್ಣಕ್ಕೆ ಅಡಿಪಾಯವಾಗಿದೆ. ನಿಮ್ಮ ಚರ್ಮದ ಪ್ರಕಾರವನ್ನು ಅರ್ಥ ಮಾಡಿಕೊಂಡು ಸರಿಯಾದ ಶುದ್ಧೀಕರಣ ದಿನಚರಿಯನ್ನು ಅನುಸರಿಸಿ. ಆಗ ನೀವು ಸದಾ ಆರೋಗ್ಯಕರ ಹೊಳಪಿನ ತ್ವಚೆ ಹೊಂದುತ್ತೀರಿ.

ವಿಭಾಗ