Skin Care: ತ್ವಚೆ ಕಳೆಗುಂದುತ್ತಿದೆ ಎಂಬ ಬೇಸರವೇ, ಮುಖದಲ್ಲಿ ಮೊಡವೆಗಳಾಗಿವೆಯೇ: ಆಲಂ ಕಲ್ಲನ್ನು ಬಳಸಿ, ಪ್ರಯೋಜನ ಪಡೆಯಿರಿ-skin care how to use alum for skin how to use phitkari on face benefits of alum for skin prk ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Skin Care: ತ್ವಚೆ ಕಳೆಗುಂದುತ್ತಿದೆ ಎಂಬ ಬೇಸರವೇ, ಮುಖದಲ್ಲಿ ಮೊಡವೆಗಳಾಗಿವೆಯೇ: ಆಲಂ ಕಲ್ಲನ್ನು ಬಳಸಿ, ಪ್ರಯೋಜನ ಪಡೆಯಿರಿ

Skin Care: ತ್ವಚೆ ಕಳೆಗುಂದುತ್ತಿದೆ ಎಂಬ ಬೇಸರವೇ, ಮುಖದಲ್ಲಿ ಮೊಡವೆಗಳಾಗಿವೆಯೇ: ಆಲಂ ಕಲ್ಲನ್ನು ಬಳಸಿ, ಪ್ರಯೋಜನ ಪಡೆಯಿರಿ

ತ್ವಚೆ ಕಳೆಗುಂದುತ್ತಿದೆ ಎಂಬ ಬೇಸರವೇ? ಮುಖದಲ್ಲಿ ಮೊಡವೆಗಳಾಗಿವೆಯೇ?ಅದನ್ನು ಹೋಗಲಾಡಿಸುವುದು ಹೇಗೆ ಎಂದು ಚಿಂತಿಸುತ್ತಿದ್ದೀರಾ?ತ್ವಚೆಯ ಕಾಂತಿ ಹೆಚ್ಚಿಸಲು, ತಲೆಗೂದಲಿನ ಹೊಟ್ಟಿನ ಸಮಸ್ಯೆ ನಿವಾರಿಸಲು ಆಲಂ ಕಲ್ಲನ್ನು (Phitkari) ಉಪಯೋಗಿಸಿ. ತ್ವಚೆಯ ಸಮಸ್ಯೆ ಜೊತೆಗೆ ತಲೆಗೂದಲಿನ ಸಮಸ್ಯೆಗೂ ಆಲಂ ಕಲ್ಲು ಸಹಕಾರಿ. ಇಲ್ಲಿದೆ ಇನ್ನಷ್ಟು ಮಾಹಿತಿ.

ತ್ವಚೆಯ ಸಮಸ್ಯೆ ಜೊತೆಗೆ ತಲೆಗೂದಲಿನ ಸಮಸ್ಯೆಗೂ ಆಲಂ ಕಲ್ಲು ಸಹಕಾರಿ.
ತ್ವಚೆಯ ಸಮಸ್ಯೆ ಜೊತೆಗೆ ತಲೆಗೂದಲಿನ ಸಮಸ್ಯೆಗೂ ಆಲಂ ಕಲ್ಲು ಸಹಕಾರಿ. (Getty Images)

ಫಿಟ್ಕರಿ ಇದನ್ನು ಆಲಂ ಕಲ್ಲು ಎಂದೂ ಕರೆಯಲಾಗುತ್ತದೆ. ಇದೊಂದು ಸ್ಫಟಿಕದಂತಹ ಕಲ್ಲಾಗಿದ್ದು, ಸೌಂದರ್ಯ ಮತ್ತು ತ್ವಚೆಗೆ ಶತಮಾನಗಳಿಂದಲೂ ಬಳಸಲ್ಪಡುವ ನೈಸರ್ಗಿಕ ವಸ್ತುವಾಗಿದೆ. ಈ ಸ್ಫಟಿಕದಂತಹ ವಸ್ತುವನ್ನು ಸಾಮಾನ್ಯವಾಗಿ ಕಡೆಗಣಿಸಲಾಗುತ್ತದೆ. ಆದರೆ, ಇದು ಚರ್ಮ ಮತ್ತು ಕೂದಲು ಎರಡಕ್ಕೂ ಹಲವಾರು ಪ್ರಯೋಜನಗಳನ್ನು ನೀಡುತ್ತದೆ. ಆಲಂ ಕಲ್ಲನ್ನು ಸೌಂದರ್ಯ ದಿನಚರಿಯಲ್ಲಿ ಹೇಗೆ ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

ತ್ವಚೆಯ ಹೊಳಪಿಗೆ ಆಲಂ ಕಲ್ಲಿನ ಪ್ರಯೋಜನ

ಚರ್ಮವನ್ನು ಬಿಗಿಗೊಳಿಸುತ್ತದೆ ಮತ್ತು ಸುಕ್ಕುಗಳನ್ನು ಕಡಿಮೆ ಮಾಡುತ್ತದೆ: ಆಲಂ ಕಲ್ಲು ಅದರ ವಿಶಿಷ್ಟ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ.ಇದು ಚರ್ಮವನ್ನು ಬಿಗಿಗೊಳಿಸಲು ಮತ್ತು ಸುಕ್ಕುಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಚರ್ಮಕ್ಕೆ ಇದನ್ನು ಹಚ್ಚಿದಾಗ ಕಾಲಜನ್ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ಇದರಿಂದ ತ್ವಚೆಯ ಕಾಂತಿ ಹೆಚ್ಚಿ, ಯೌವನದಂತೆ ಕಂಗೊಳಿಸುವಲ್ಲಿ ಸಹಕಾರಿಯಾಗಿದೆ.

ಹೇಗೆ ಬಳಸುವುದು

- ಒಂದು ಚಿಟಿಕೆ ಪುಡಿ ಮಾಡಿದ ಆಲಂ ಕಲ್ಲನ್ನು ರೋಸ್ ವಾಟರ್ ಜೊತೆಗೆ ಮಿಶ್ರಣ ಮಾಡಿ ಪೇಸ್ಟ್ ಮಾಡಿಕೊಳ್ಳಿ.

- ಸೂಕ್ಷ್ಮ ರೇಖೆಗಳು ಅಥವಾ ಚರ್ಮವು ಕಳೆಗುಂದುತ್ತಿರುವ ಸ್ಥಳಗಳಿಗೆ ಹಚ್ಚಿ.

- 10-15 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.

ಮೊಡವೆಗಳಿಗೆ ಪರಿಹಾರ: ಆಲಮ್‌ನ ಬ್ಯಾಕ್ಟೀರಿಯಾ ವಿರೋಧಿ ಮತ್ತು ನಂಜುನಿರೋಧಕ ಗುಣಲಕ್ಷಣಗಳು ಮೊಡವೆಗಳ ವಿರುದ್ಧ ಪ್ರಬಲ ಪರಿಹಾರವಾಗಿದೆ. ಇದು ಮೊಡವೆಗಳನ್ನು ಉಂಟುಮಾಡುವ ಬ್ಯಾಕ್ಟೀರಿಯಾವನ್ನು ಕೊಲ್ಲಲು ಸಹಾಯ ಮಾಡುತ್ತದೆ ಮತ್ತು ಉರಿಯೂತವನ್ನು ಕಡಿಮೆ ಮಾಡುವಲ್ಲಿ ಸಹಕಾರಿಯಾಗಿದೆ.

ಹೇಗೆ ಬಳಸುವುದು

- ಆಲಂ ಕಲ್ಲಿನ ಒಂದು ಸಣ್ಣ ತುಂಡನ್ನು ನೀರಿನಲ್ಲಿ ಕರಗಿಸಿ.

- ಹತ್ತಿ ಉಂಡೆಯನ್ನು ದ್ರಾವಣದಲ್ಲಿ ಅದ್ದಿ ಮತ್ತು ಮೊಡವೆ ಪೀಡಿತ ಪ್ರದೇಶಗಳಿಗೆ ಹಚ್ಚಿ.

- ಇದನ್ನು 20 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ತಣ್ಣೀರಿನಿಂದ ತೊಳೆಯಿರಿ. ಉತ್ತಮ ಫಲಿತಾಂಶಗಳಿಗಾಗಿ ಪ್ರತಿದಿನ ಪುನರಾವರ್ತಿಸಿ.

ಕಪ್ಪು ಕಲೆಗಳು ಮತ್ತು ಪಿಗ್ಮೆಂಟೇಶನ್ ಅನ್ನು ಕಡಿಮೆ ಮಾಡುತ್ತದೆ: ಆಲಂ ಕಲ್ಲಿನ ನಿಯಮಿತ ಬಳಕೆಯು ಚರ್ಮದ ಮೇಲಿನ ಕಪ್ಪು ಕಲೆಗಳು ಮತ್ತು ಹೈಪರ್ಪಿಗ್ಮೆಂಟೇಶನ್ ಅನ್ನು ಕಡಿಮೆಗೊಳಿಸುತ್ತದೆ. ಇದರ ನೈಸರ್ಗಿಕ ಬ್ಲೀಚಿಂಗ್ ಗುಣಲಕ್ಷಣಗಳು ಕಲೆಗಳನ್ನು ಮಸುಕಾಗಿಸಲು ಸಹಾಯ ಮಾಡುತ್ತದೆ.

ಹೇಗೆ ಬಳಸುವುದು:

- ನಿಂಬೆ ರಸ ಮತ್ತು ಜೇನುತುಪ್ಪದೊಂದಿಗೆ ಆಲಂ ಪುಡಿಯನ್ನು ಬೆರೆಸಿ ಫೇಸ್ ಮಾಸ್ಕ್ ರಚಿಸಿ.

- ಕಣ್ಣಿನ ಪ್ರದೇಶವನ್ನು ಹೊರತುಪಡಿಸಿ, ಮುಖಕ್ಕೆ ಸಮವಾಗಿ ಹಚ್ಚಿರಿ.

- 15 ನಿಮಿಷಗಳ ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.

ತಲೆಗೂದಲಿಗೆ ಆಲಂ ಕಲ್ಲಿನ ಪ್ರಯೋಜನ

ಡ್ಯಾಂಡ್ರಫ್ ಹೋಗಲಾಡಿಸಲು, ತಲೆಗೂದಲನ್ನು ಬಲಪಡಿಸಲು ಸಹಕಾರಿ: ಶಿಲೀಂಧ್ರಗಳು ಅಥವಾ ಹೆಚ್ಚುವರಿ ತೈಲ ಉತ್ಪಾದನೆಯಿಂದ ಉಂಟಾಗುವ ತಲೆಹೊಟ್ಟು ಸಮಸ್ಯೆಗೆ ಆಲಂ ಕಲ್ಲು ಸಹಕಾರಿಯಾಗಿದೆ. ಇದರ ಆಂಟಿಫಂಗಲ್ ಗುಣಲಕ್ಷಣಗಳು ನೆತ್ತಿಯನ್ನು ಶುದ್ಧೀಕರಿಸಲು ಮತ್ತು ಕಿರಿಕಿರಿಯನ್ನು ಶಮನಗೊಳಿಸಲು ಸಹಾಯ ಮಾಡುತ್ತದೆ. ಇದರ ನಿಯಮಿತ ಬಳಕೆಯು ಕೂದಲಿನ ಕಿರುಚೀಲಗಳನ್ನು ಬಲಪಡಿಸುತ್ತದೆ ಮತ್ತು ಕೂದಲು ಉದುರುವಿಕೆಯನ್ನು ಕಡಿಮೆ ಮಾಡುತ್ತದೆ.

ಹೇಗೆ ಬಳಸುವುದು

- ಸ್ವಲ್ಪ ಪ್ರಮಾಣದ ಆಲಂ ಕಲ್ಲಿನ ಪುಡಿಯನ್ನು ನೀರಿನಲ್ಲಿ ಕರಗಿಸಿ.

- ಶಾಂಪೂ ಹಾಕಿದ ನಂತರ, ಆಲಂ ಕಲ್ಲಿನ ದ್ರಾವಣವನ್ನು ಹಚ್ಚಿರಿ. ನೆತ್ತಿ ಮತ್ತು ಕೂದಲಿಗೆ ನಿಧಾನವಾಗಿ ಮಸಾಜ್ ಮಾಡಿ. 5 ನಿಮಿಷಗಳ ಕಾಲ ಹಾಗೆಯೇ ಬಿಟ್ಟು ನಂತರ ನೀರಿನಿಂದ ತೊಳೆಯಿರಿ.

ಆಲಂ ಕಲ್ಲು ಪರಿಣಾಮಕಾರಿ ನೈಸರ್ಗಿಕ ಘಟಕಾಂಶವಾಗಿದ್ದು, ಇದು ನಿಮ್ಮ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಬಹುದು. ಚರ್ಮ ಸುಕ್ಕಾಗುವಿಕೆ, ಕಳೆಗುಂದುವಿಕೆ, ಮೊಡವೆ ಅಥವಾ ತಲೆಗೂದಲಿನಲ್ಲಿ ಹೊಟ್ಟು ಇತ್ಯಾದಿ ಸಮಸ್ಯೆಯನ್ನು ಹೊಂದಿದ್ದರೆ ಆಲಂ ಕಲ್ಲನ್ನು ಬಳಸಬಹುದು. ಖಂಡಿತಾ ಇದು ಪರಿಣಾಮಕಾರಿ ಪ್ರಯೋಜನ ನೀಡುತ್ತದೆ. ಆದರೆ, ಇದನ್ನು ಹಚ್ಚುವ ಮುನ್ನ ಅಲರ್ಜಿ ಸಮಸ್ಯೆ ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಇದಕ್ಕಾಗಿ ಪ್ಯಾಚ್ ಪರೀಕ್ಷೆಯನ್ನು ಮಾಡಿ. ನಂತರವೇ ತ್ವಚೆ, ಕೂದಲಿಗೆ ಹಚ್ಚಬೇಕು.

mysore-dasara_Entry_Point