ಕನ್ನಡ ಸುದ್ದಿ  /  Lifestyle  /  Skin Care Myths And Misconceptions Need To Stop Believing Healthy And Radiant Skin Beauty Tips In Kannada Rst

Skin Care: ಅಂದದ ತ್ವಚೆಗಿರಲಿ ಆರೈಕೆ; ಸೌಂದರ್ಯ ಕಾಳಜಿ ವಿಷಯದಲ್ಲಿನ ಸತ್ಯ ಮಿಥ್ಯೆಗಳು ಹೀಗಿವೆ

Skin Care myths: ಚರ್ಮದ ಕಾಳಜಿಯ ವಿಷಯದಲ್ಲಿ ನಾವು ಅನುಸರಿಸುವ ಎಲ್ಲಾ ಕ್ರಮಗಳು ಸರಿಯಲ್ಲ. ತ್ವಚೆಯ ಆರೋಗ್ಯಕ್ಕೆ ಸಂಬಂಧಿಸಿ ಹಿಂದಿನಿಂದಲೂ ಕೇಳಿಕೊಂಡು ಬಂದ ವಿಷಯಗಳಲ್ಲೂ ತಪ್ಪುಗ್ರಹಿಕೆಗಳಿವೆ. ಚರ್ಮದ ಕಾಳಜಿಯ ವಿಚಾರದಲ್ಲಿನ ಸತ್ಯ ಹಾಗೂ ಮಿಥ್ಯೆಗಳ ಬಗ್ಗೆ ತಜ್ಞರ ಮಾತು ಇಲ್ಲಿದೆ.

ಚರ್ಮದ ಕಾಳಜಿಯ ವಿಷಯದಲ್ಲಿನ ಸತ್ಯ ಮಿಥ್ಯಗಳು
ಚರ್ಮದ ಕಾಳಜಿಯ ವಿಷಯದಲ್ಲಿನ ಸತ್ಯ ಮಿಥ್ಯಗಳು

ಚರ್ಮ ಹಾಗೂ ಸೌಂದರ್ಯದ ಕಾಳಜಿಯ ವಿಚಾರಕ್ಕೆ ನಾವೆಲ್ಲರೂ ಸಾಕಷ್ಟು ತಲೆ ಕೆಡಿಸಿಕೊಳ್ಳುತ್ತೇವೆ. ಅದರಲ್ಲೂ ಹೆಣ್ಣುಮಕ್ಕಳಿಗೆ ಸೌಂದರ್ಯ ಕಾಳಜಿಯ ಬಗ್ಗೆ ವಿಶೇಷ ಒಲವು. ಆ ಕಾರಣಕ್ಕೆ ಕಂಡ, ಕೇಳಿದ ಸಲಹೆಗಳನ್ನೆಲ್ಲಾ ಪಾಲಿಸುತ್ತಾರೆ. ಆದರೆ ನಾವು ಕೇಳಿದ ವಿಷಯಗಳು, ಅನುಸರಿಸುವ ಕ್ರಮಗಳೆಲ್ಲವೂ ನಮ್ಮ ಸೌಂದರ್ಯವನ್ನು ಹೆಚ್ಚಿಸುತ್ತವೆ ಎಂದೇನಿಲ್ಲ. ಕೆಲವೊಮ್ಮೆ ಎಲ್ಲೆಲ್ಲೋ ಕೇಳಿದ ಸಲಹೆಗಳನ್ನು ಅನುಸರಿಸಿ ಚರ್ಮಕ್ಕೆ ಹಾನಿಯಾಗುವ ಸಾಧ್ಯತೆಯೂ ಹೆಚ್ಚು.

ನಾವು ಹಿಂದಿನಿಂದಲೂ ಕೇಳಿಕೊಂಡ ಬಂದ, ಅನುಸರಿಸುತ್ತಿರುವ ಕೆಲವು ಕ್ರಮಗಳಲ್ಲಿ ಸತ್ಯಕ್ಕಿಂತ ಮಿಥ್ಯೆವೇ ಹೆಚ್ಚಿದೆ.

ಹಿಂದುಸ್ತಾನ್‌ ಲೈಫ್‌ಸ್ಟೈಲ್‌ ವಿಭಾಗಕ್ಕೆ ಸಂದರ್ಶನ ನೀಡಿದ ಅಕಿಹಿ ಸಹ ಸಂಸ್ಥಾಪಕಿ ತುಳಸಿ ಗೋಸಾಯಿ ತ್ವಚೆಯ ಆರೈಕೆಯ ಕುರಿತ ಕೆಲವು ಮಿಥ್ಯೆಗಳು ಹಾಗೂ ತಪ್ಪು ಕಲ್ಪನೆಗಳ ಬಗ್ಗೆ ತಿಳಿಸಿದ್ದಾರೆ.

ಮಿಥ್ಯೆ: ಎಣ್ಣೆ ಪದಾರ್ಥಗಳನ್ನು ತಿನ್ನುವುದರಿಂದ ಮೊಡವೆ ಕಾಣಿಸುತ್ತದೆ

ಸತ್ಯ: ಸತ್ಯವೆಂದರೆ ಎಣ್ಣೆ ಪದಾರ್ಥದಲ್ಲಿ ಇರುವ ಸೆಬಮ್‌ ಎಂಬ ಅಂಶವು ಮೊಡವೆಗಳಿಗೆ ಕಾರಣವಾಗುತ್ತದೆ. ಆದರೆ ಅದು ಚರ್ಮದ ಗುಣದ ಮೇಲೆ ಅವಲಂಬಿತವಾಗಿದೆ. ಯಾವುದೇ ನಿರ್ದಿಷ್ಟ ಆಹಾರವು ಮೊಡವೆಗಳನ್ನು ಉಂಟು ಮಾಡುತ್ತದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ.

ಮಿಥ್ಯೆ: ಎಣ್ಣೆ ಚರ್ಮದವರಿಗೆ ಮಾಯಿಶ್ಚರೈಸರ್‌ ಅವಶ್ಯಕತೆ ಇಲ್ಲ

ಸತ್ಯ: ಎಣ್ಣೆ ಚರ್ಮದವರು ಸೇರಿ ಎಲ್ಲಾ ರೀತಿ ಚರ್ಮದ ಗುಣವನ್ನು ಹೊಂದಿರುವವರು ಮಾಯಿಶ್ಚರೈಸರ್‌ ಬಳಕೆ ಕಡ್ಡಾಯ. ಮಾಯಿಶ್ಚರೈಸರ್‌ ಬಳಕೆಯಿಂದ ಚರ್ಮದ ನಿರ್ಜಲೀಕರಣ ಸಮಸ್ಯೆಯನ್ನು ತಪ್ಪಿಸುವ ಜೊತೆಗೆ ಚರ್ಮದ ಆರೋಗ್ಯವನ್ನೂ ಕಾಪಾಡಿಕೊಳ್ಳಬಹುದು. ಮಾಯಿಶ್ಚರೈಸರ್‌ ಚರ್ಮದಲ್ಲಿ ಎಣ್ಣೆಯಂಶ ಬಿಡುಗಡೆಯ ನಿಯಂತ್ರಣಕ್ಕೂ ಸಹಾಯ ಮಾಡುತ್ತದೆ.

ಮಿಥ್ಯೆ: ಬೇಸಿಗೆಯಲ್ಲಿ ಮಾತ್ರ ಸನ್‌ಸ್ಕ್ರೀನ್‌ ಬಳಕೆ

ಸತ್ಯ: ಮಳೆಗಾಲ ಹಾಗೂ ಚಳಿಗಾಲದಲ್ಲೂ ಯುವಿ ಕಿರಣಗಳು ಚರ್ಮಕ್ಕೆ ಹಾನಿಯುಂಟು ಮಾಡುತ್ತವೆ. ಆ ಕಾರಣಕ್ಕೆ ಪ್ರತಿನಿತ್ಯ ಸನ್‌ಸ್ಕ್ರೀನ್‌ ಲೋಷನ್‌ ಬಳಸುವುದು ಅವಶ್ಯ. ಬೇಸಿಗೆಯಲ್ಲಿ ಮಾತ್ರ ಸನ್‌ಸ್ಕ್ರೀನ್‌ ಬಳಸಬೇಕು ಎಂಬುದು ತಪ್ಪು.

ಮಿಥ್ಯೆ: ದುಬಾರಿ ಬೆಲೆಯ ಚರ್ಮದ ಉತ್ಪನ್ನಗಳು ಮಾತ್ರ ಪರಿಣಾಮ ಬೀರುತ್ತವೆ

ಸತ್ಯ: ಚರ್ಮದ ಆರೈಕೆಗೆ ನಾವು ಬಳಸುವ ಉತ್ಪನ್ನಗಳು ದುಬಾರಿ, ಅಗ್ಗ ಎಂಬುದು ಮುಖ್ಯವಾಗುವುದಿಲ್ಲ. ನಮ್ಮ ಚರ್ಮದ ಗುಣ ಹಾಗೂ ಕಾಳಜಿಗೆ ಉತ್ತಮವಾಗಿ ಕಾರ್ಯನಿರ್ವಹಿಸುವ ಉತ್ಪನ್ನಗಳು ಯಾವುದು ಎಂಬುದು ಮುಖ್ಯವಾಗುತ್ತದೆ.

ಮಿಥ್ಯೆ: ಉತ್ತಮ ಫಲಿತಾಂಶಕ್ಕಾಗಿ ಹಲವು ಉತ್ಪನ್ನಗಳನ್ನು ಬಳಸಬೇಕು

ಸತ್ಯ: ಹಲವು ಉತ್ಪನ್ನಗಳನ್ನು ಒಟ್ಟಿಗೆ ಬಳಸುವುದರಿಂದ ಚರ್ಮದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಬಹುದು. ಇದು ಚರ್ಮದ ಕಿರಿಕಿರಿ ಬಿರುಕಿಗೂ ಕಾರಣವಾಗಬಹುದು. ಆ ಕಾರಣಕ್ಕೆ ನಿಮ್ಮ ಚರ್ಮಕ್ಕೆ ಅನುಗುಣವಾಗಿ ವೈದ್ಯರು ಸೂಚಿಸಿದ ಉತ್ಪನ್ನ ಬಳಸುವುದು ಹಾಗೂ ಪ್ಯಾಕೇಜಿಂಗ್‌ನಲ್ಲಿ ಬರೆದಿರುವ ಸೂಚನೆ ಅನುಸರಿಸುವುದು ಅವಶ್ಯವಾಗುತ್ತದೆ.

ಮಿಥ್ಯೆ: ನೈಸರ್ಗಿಕ ಉತ್ಪನ್ನಗಳು ಚರ್ಮಕ್ಕೆ ಉತ್ತಮ

ಸತ್ಯ: ನೈಸರ್ಗಿಕ ಪದಾರ್ಥಗಳು ನಿಮ್ಮ ಚರ್ಮಕ್ಕೆ ಪ್ರಯೋಜನಕಾರಿ ಆಗಿದ್ದರೂ, ಎಲ್ಲಾ ನೈಸರ್ಗಿಕ ಉತ್ಪನ್ನಗಳು ಚರ್ಮಕ್ಕೆ ಹೊಂದುವುದಿಲ್ಲ. ಕೆಲವು ಉತ್ಪನ್ನಗಳು ಚರ್ಮಕ್ಕೆ ಕಿರಿಕಿರಿ ಉಂಟು ಮಾಡಬಹುದು ಅಥವಾ ಹಾನಿ ಉಂಟು ಮಾಡಬಹುದು.

ಮಿಥ್ಯೆ: ಸ್ಕಿನ್‌ ಕೇರ್‌ ಉತ್ಪನ್ನಗಳು ಚರ್ಮದ ಎಲ್ಲಾ ಸಮಸ್ಯೆಗಳನ್ನು ನಿವಾರಿಸುತ್ತವೆ.

ಸತ್ಯ: ಸ್ಕಿನ್‌ ಕೇರ್‌ ಉತ್ಪನ್ನಗಳು ಚರ್ಮದ ಕಾಂತಿ ಹಾಗೂ ನೋಟವನ್ನು ಹೆಚ್ಚಿಸುತ್ತವೆ. ಆದರೆ ಇವು ಚರ್ಮದ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ನೀಡುವುದಿಲ್ಲ. ಅನುವಂಶೀಯತೆ, ಜೀವನಶೈಲಿ ಹಾಗೂ ಒಟ್ಟಾರೆ ಆರೋಗ್ಯದ ಅಂಶಗಳನ್ನು ಚರ್ಮದ ಆರೋಗ್ಯದ ಮೇಲೆ ಪ್ರಮುಖ ಪಾತ್ರ ವಹಿಸುತ್ತವೆ.

ವಿಭಾಗ