ಸಲಾಡ್‌, ಕೇಸರಿಬಾತ್‌ಗೆ ಮಾತ್ರವಲ್ಲ ನಿಮ್ಮ ಚರ್ಮ ಲಕ ಲಕ ಅಂತ ಹೊಳೆಯೋಕೂ ಬೇಕು ಪೈನಾಪಲ್‌; ಹೀಗೆ ಬಳಸಿ
ಕನ್ನಡ ಸುದ್ದಿ  /  ಜೀವನಶೈಲಿ  /  ಸಲಾಡ್‌, ಕೇಸರಿಬಾತ್‌ಗೆ ಮಾತ್ರವಲ್ಲ ನಿಮ್ಮ ಚರ್ಮ ಲಕ ಲಕ ಅಂತ ಹೊಳೆಯೋಕೂ ಬೇಕು ಪೈನಾಪಲ್‌; ಹೀಗೆ ಬಳಸಿ

ಸಲಾಡ್‌, ಕೇಸರಿಬಾತ್‌ಗೆ ಮಾತ್ರವಲ್ಲ ನಿಮ್ಮ ಚರ್ಮ ಲಕ ಲಕ ಅಂತ ಹೊಳೆಯೋಕೂ ಬೇಕು ಪೈನಾಪಲ್‌; ಹೀಗೆ ಬಳಸಿ

Pineapple in Skin care: ಪೈನಾಪಲ್‌ ಆರೋಗ್ಯಕ್ಕೆ ಮಾತ್ರವಲ್ಲದೆ ಸೌಂದರ್ಯದ ಆರೈಕೆಗೂ ಸಹಾಯ ಮಾಡುತ್ತದೆ. ಅನಾನಸ್‌ನಲ್ಲಿರುವ ಬ್ರೋಮೆಲಿನ್ ಎಂಬ ಅಂಶವು ಚರ್ಮದ ಉರಿಯೂತ, ಕಿರಿಕಿರಿಯನ್ನು ತಪ್ಪಿಸುತ್ತದೆ.

ಚರ್ಮದ ಅಂದಕ್ಕೆ ಸಹಕಾರಿ ಪೈನಾಪಲ್
ಚರ್ಮದ ಅಂದಕ್ಕೆ ಸಹಕಾರಿ ಪೈನಾಪಲ್ (PC: Unsplash , Pixabay)

Pineapple in Skin care: ಮುಖದಲ್ಲಿ ಒಂದೂ ಮೊಡವೆ ಇಲ್ಲದೆ, ಕಲೆ ಇಲ್ಲದೆ ಫಳ ಪಳ ಹೊಳೆಯುತ್ತಿದ್ರೆ ನೂರು ಜನರ ನಡುವೆ ಅವರೇ ಆಕರ್ಷಕವಾಗಿ ಕಾಣುತ್ತಾರೆ. ಮಾರುಕಟ್ಟೆಯಲ್ಲಿ ದೊರೆಯುವ ಕೃತಕ ಪ್ರಾಡೆಕ್ಟ್‌ಗಳಿಗಿಂತ ನೈಸರ್ಗಿಕವಾಗಿ ದೊರೆಯುವ ಹಣ್ಣು, ಹಂಫಲು, ಮನೆ ಮದ್ದುಗಳಿಂದ ಮುಖದ ಅಂದವನ್ನು ಹೆಚ್ಚಿಸಿಕೊಂಡರೆ ಅದು ಶಾಶ್ವತವಾಗಿರುತ್ತದೆ. ವಯಸ್ಸಾದರೂ ನಿಮ್ಮ ಚರ್ಮ ಕುಂದುವುದಿಲ್ಲ.

ಪ್ರಕೃತಿ ನಮಗೆ ನೀಡಿರುವ ರುಚಿಯಾದ ಹಣ್ಣುಗಳಲ್ಲಿ ಅನಾನಸ್‌ ಕೂಡಾ ಒಂದು. ಇದರಲ್ಲಿರುವ ಫೈಬರ್‌ ಅಂಶ ದೇಹಕ್ಕೆ ಒಳ್ಳೆಯದು. ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ. ಇದರಲ್ಲಿರುವ ಮ್ಯಾಂಗನೀಸ್‌ ಅಂಶ ಮೂಳೆಯನ್ನು ಬಲಪಡಿಸುತ್ತದೆ. ಈ ಹಣ್ಣು ಆರೋಗ್ಯಕ್ಕೆ ಮಾತ್ರವಲ್ಲದೆ ಸೌಂದರ್ಯದ ಆರೈಕೆಗೂ ಸಹಾಯ ಮಾಡುತ್ತದೆ. ಅನಾನಸ್‌ನಲ್ಲಿರುವ ಬ್ರೋಮೆಲಿನ್ ಎಂಬ ಅಂಶವು ಚರ್ಮದ ಉರಿಯೂತ, ಕಿರಿಕಿರಿಯನ್ನು ತಪ್ಪಿಸುತ್ತದೆ. ಜೊತೆಗೆ ನಿಮ್ಮ ಚರ್ಮಕ್ಕೆ ಕೂಡಾ ಇದು ಬಹಳ ಒಳ್ಳೆಯದು. ಚರ್ಮದ ಆರೈಕೆಯಲ್ಲಿ ಅನಾನಸ್‌ ಪಾತ್ರವೇನು? ಇದು ಸೌಂದರ್ಯವನ್ನು ಹೆಚ್ಚಿಸುವಲ್ಲಿ ಹೇಗೆ ಕೆಲಸ ಮಾಡುತ್ತದೆ? ಫೇಸ್‌ ಪ್ಯಾಕ್‌ ಬಳಸುವುದು ಹೇಗೆ ಅನ್ನೋದನ್ನು ತಿಳಿಯೋಣ.

ಕಲೆಗಳು ಮಾಯವಾಗಲು: ಅನಾನಸ್‌ನಲ್ಲಿರುವ ವಿಟಮಿನ್‌ ಸಿ ಮತ್ತು ಅಮೈನೋ ಆಮ್ಲಗಳು ಚರ್ಮವು ಹೆಚ್ಚು ಕಾಲಜನ್ ಉತ್ಪಾದಿಸಲು ಸಹಾಯ ಮಾಡುತ್ತದೆ. ಇದು ಚರ್ಮವನ್ನು ಬಿಗಿಯಾಗಿ ಇರಿಸುತ್ತದೆ. ಚರ್ಮದಲ್ಲಿ ಡೆಡ್‌ ಸೆಲ್‌ಗಳನ್ನು ತೆಗೆದು ಚರ್ಮ ಹೊಳೆಯುವಂತೆ ಮಾಡುತ್ತದೆ. ಇದರಲ್ಲಿರುವ ವಿಟಮಿನ್ ಸಿ ಅಂಶದಿಂದ ಮೊಡವೆ ಕಡಿಮೆಯಾಗಿ ಕ್ರಮೇಣ ಕಲೆಗಳು ಮಾಯವಾಗುತ್ತದೆ.

ತ್ವಚೆ ತೇವಾಂಶದಿಂದ ಇರಲು: ಒಂದೊಂದು ವಾತಾವರಣದಲ್ಲಿ ಒಬ್ಬೊಬ್ಬರಿಗೆ ಚರ್ಮ ಬೇಗ ಡ್ರೈ ಆಗುತ್ತದೆ. ಆದರೆ ಚರ್ಮಕ್ಕೆ ತೇವಾಂಶ ಇರಬೇಕು ಎಂದರೆ ಅನಾನಸ್‌ ಫೇಸ್‌ ಮಾಸ್ಕ್‌ ತಯಾರಿಸಿ ಹಚ್ಚಿಕೊಳ್ಳಿ. ಒಂದು ಸ್ಪೂನ್‌ ಅನಾನಸ್‌ ಪ್ಯೂರಿ, ಜೇನುತುಪ್ಪ, 2 ಚಮಚ ಓಟ್ಸ್‌ ಪುಡಿಯನ್ನು ಬೆರೆಸಿ ಪೇಸ್ಟ್‌ ತಯಾರಿಸಿ. ಈ ಮಿಶ್ರಣವನ್ನು ಮುಖ, ಕುತ್ತಿಗೆಗೆ ಹಚ್ಚಿ 15-20 ನಿಮಿಷಗಳ ನಂತರ ತೊಳೆದು ಮಾಯಿಶ್ಚರೈಸರ್‌ ಹಚ್ಚಿ.

ಓಪನ್‌ ಪೋರ್ಸ್‌ ಸಮಸ್ಯೆಗೆ: ಚರ್ಮದ ಸಮಸ್ಯೆಗಳಲ್ಲಿ ಅನೇಕರಿಗೆ ಓಪನ್‌ ಪೋರ್ಸ್‌ ಹೆಚ್ಚಾಗಿ ಕಾಡುತ್ತದೆ. ಇದನ್ನು ಹೋಗಲಾಡಿಸಲು ಅನಾನಸ್‌ ಪ್ಯೂರಿ , ಗಟ್ಟಿ ಮೊಸರು, ಓಟ್‌ ಮೀಲ್‌ ಪುಡಿ ಸೇರಿಸಿ ಮುಖಕ್ಕೆ ಪ್ಯಾಕ್‌ ಹಚ್ಚಿ 10-15 ನಿಮಿಷದ ನಂತರ ವಾಶ್‌ ಮಾಡಿ. ವಾರಕ್ಕೆ 2 ಬಾರಿ ಮೂರು ತಿಂಗಳ ಕಾಲ ಮಾಡಿದರೆ ಓಪನ್‌ ಪೋರ್ಸ್‌ ಕಡಿಮೆಯಾಗುತ್ತದೆ.

ಚರ್ಮಕ್ಕೆ ಹೊಳಪು ನೀಡುತ್ತದೆ: ಒಂದು ಸ್ಪೂನ್‌ ಅನಾನಸ್ ತಿರುಳು, ಒಂದು ಸ್ಪೂನ್‌ ಪಪ್ಪಾಯಿ ತಿರುಳು 2 ಸ್ಪೂನ್‌ ಜೊಜೊಬಾ ಎಣ್ಣೆಯನ್ನು ಮಿಶ್ರಣ ಮಾಡಿ. ಮುಖಕ್ಕೆ ಹಚ್ಚಿ 10 ನಿಮಿಷಗಳ ಕಾಲ ಒಣಗಲು ಬಿಡಿ. ನಂತರ ಮೃದುವಾಗಿ ಮಸಾಜ್ ಮಾಡಿ ಮುಖ ತೊಳೆಯಿರಿ. ವಾರಕ್ಕೆ ಎರಡು ಬಾರಿ ಹೀಗೆ ಮಾಡಿದರೆ ತ್ವಚೆಯು ಹೊಳೆಯುತ್ತದೆ.

ಚರ್ಮ ತಿಳಿಯಾಗಲು: 1 ಸ್ಪೂನ್‌ ಅನಾನಸ್‌ ಪ್ಯೂರಿ, 2 ಸ್ಪೂನ್‌ ಅಲೊವೆರಾ ಜೆಲ್‌, 2 ಹನಿ ಟಿ ಟ್ರೀ ಎಣ್ಣೆಯನ್ನು ಸೇರಿಸಿ ಮಿಕ್ಸ್‌ ಮಾಡಿ. ಇದನ್ನು ಮುಖಕ್ಕೆ ಹಚ್ಚಿ 10-15 ನಿಮಿಷಗಳ ಕಾಲ ಬಿಟ್ಟು ತೊಳೆಯಿರಿ. ವಾರಕ್ಕೆ ಎರಡು ಮೂರು ಬಾರಿ ಹೀಗೆ ಮಾಡಿದರೆ ಚರ್ಮಕ್ಕೆ ಒಳ್ಳೆ ಬಣ್ಣ ಬರುತ್ತದೆ.

ಮತ್ತೇಕೆ ತಡ ಈಗಲೇ ಪೈನಾಪಲ್‌ ಮನೆಗೆ ತನ್ನಿ.

Whats_app_banner