Skin Care Tips: ಸೂಕ್ಷ್ಮ ಚರ್ಮ ಹೊಂದಿರುವವರು ಯಾವ ಸನ್‌ಸ್ಕ್ರೀನ್‌ ಬಳಸಬೇಕು? ಎಸ್‌ಪಿಎಫ್‌ ಬಗ್ಗೆ ಇರುವ ತಪ್ಪು ಕಲ್ಪನೆಗಳೇನು ?-skin care tips how to select sunscreen for sensitive skin myths about spf beauty tips in kannada rsa ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Skin Care Tips: ಸೂಕ್ಷ್ಮ ಚರ್ಮ ಹೊಂದಿರುವವರು ಯಾವ ಸನ್‌ಸ್ಕ್ರೀನ್‌ ಬಳಸಬೇಕು? ಎಸ್‌ಪಿಎಫ್‌ ಬಗ್ಗೆ ಇರುವ ತಪ್ಪು ಕಲ್ಪನೆಗಳೇನು ?

Skin Care Tips: ಸೂಕ್ಷ್ಮ ಚರ್ಮ ಹೊಂದಿರುವವರು ಯಾವ ಸನ್‌ಸ್ಕ್ರೀನ್‌ ಬಳಸಬೇಕು? ಎಸ್‌ಪಿಎಫ್‌ ಬಗ್ಗೆ ಇರುವ ತಪ್ಪು ಕಲ್ಪನೆಗಳೇನು ?

Skin Care Tips: ಬಿಸಿಲು ಇರಲಿ, ಮಳೆ ಬೀಳುತ್ತಿರಲಿ ಅಥವಾ ಚಳಿ ಇರಲಿ. ತ್ವಚೆಯ ಆರೋಗ್ಯ ಕಾಪಾಡಲು ಸನ್‌ಸ್ಕ್ರೀನ್‌ ಬಳಕೆ ಮಾಡಬೇಕು. ಆದರೆ ಯಾವ ಸನ್‌ಸ್ಕ್ರೀನ್‌ಗಳು ತ್ವಚೆಯ ಆರೋಗ್ಯಕ್ಕೆ ಒಳ್ಳೆಯದು..? ಸನ್‌ಸ್ಕ್ರೀನ್‌ ಖರೀದಿಸುವಾಗ ಯಾವೆಲ್ಲ ವಿಷಯಗಳ ಬಗ್ಗೆ ಗಮನ ಹರಿಸಬೇಕು ಎನ್ನುವುದಕ್ಕೆ ಮಾಹಿತಿ ಇಲ್ಲಿದೆ

ಸನ್‌ಸ್ಕ್ರೀನ್‌ ಬಳಕೆಯಿಂದಾಗುವ ಪ್ರಯೋಜನಗಳು
ಸನ್‌ಸ್ಕ್ರೀನ್‌ ಬಳಕೆಯಿಂದಾಗುವ ಪ್ರಯೋಜನಗಳು (PC: Pixabay)

ಚರ್ಮದ ಆರೈಕೆ: ಬೇಸಿಗೆಯಿರಲಿ , ಮಳೆ ಬರಲಿ ಅಥವಾ ಚಳಿಯೇ ಇರಲಿ ಸನ್‌ಸ್ಕ್ರೀನ್‌ ಬಳಕೆ ಮಾಡುವುದು ಅತ್ಯಗತ್ಯವಾಗಿದೆ. ಇದು ನಿಮ್ಮ ಚರ್ಮದ ಆರೈಕೆಯ ಒಂದು ಭಾಗವಾಗಿದ್ದಷ್ಟೂ ನಿಮ್ಮ ತ್ಚಚೆಯ ಆರೋಗ್ಯಕ್ಕೆ ಒಳ್ಳೆಯದು. ಸನ್‌ಸ್ಕ್ರೀನ್‌ ನಿಮ್ಮ ಚರ್ಮವು ನೇರಳಾತೀತ ಕಿರಣಗಳಿಂದ ಹಾನಿಯಾಗುವುದನ್ನು ತಪ್ಪಿಸುತ್ತವೆ. ವಯಸ್ಸಿಗೂ ಮೊದಲೇ ತ್ಚಚೆಯು ವಯಸ್ಸಾದವರಂತೆ ಕಾಣುವುದನ್ನೂ ಕಡಿಮೆ ಮಾಡುತ್ತದೆ. ಹೀಗಾಗಿ ನಿಮ್ಮ ಚರ್ಮದ ಪ್ರಕಾರಕ್ಕೆ ಸರಿಯಾಗಿ ಸನ್‌ಸ್ಕ್ರೀನ್‌ ಆಯ್ಕೆ ಮಾಡಿಕೊಳ್ಳುವುದು ತುಂಬಾನೇ ಮುಖ್ಯವಾಗಿದೆ.

ಸೂಕ್ಷ್ಮವಾದ ಚರ್ಮವನ್ನು ಹೊಂದಿರುವ ಮಹಿಳೆಯರು ಸರಿಯಾದ ಸನ್‌ಸ್ಕ್ರೀನ್‌ ಆಯ್ಕೆ ಮಾಡಿಕೊಂಡಿಲ್ಲ ಎಂದರೆ ಮುಖದಲ್ಲಿ ತುರಿಕೆಯ ಅನುಭವವಾಗಬಹುದು. ಹೀಗಾಗಿ ಸೂಕ್ಷ್ಮ ಚರ್ಮವನ್ನು ಹೊಂದಿರುವವರು ಯಾವ ರೀತಿಯ ಸನ್‌ಸ್ಕ್ರೀನ್‌ ಆಯ್ಕೆ ಮಾಡಿಕೊಳ್ಳಬೇಕು ಎನ್ನುವುದಕ್ಕೆ ಮಾಹಿತಿ ಇಲ್ಲಿದೆ ನೋಡಿ.

ಸೂಕ್ಷ್ಮ ಚರ್ಮ ಎಂದರೇನು..?

ಸೂಕ್ಷ್ಮ ಚರ್ಮವನ್ನು ಹೊಂದಿರುವವರು ಸೂರ್ಯನ ಬೆಳಕು, ಕಠಿಣವಾದ ರಾಸಾಯನಿಕಗಳನ್ನು ಹೊಂದಿರುವ ಸೌಂದರ್ಯವರ್ಧಕಗಳನ್ನು ಬಳಕೆ ಮಾಡಿದಾಗ ಇವರ ಮುಖ ಕೆಂಪಾಗಬಹುದು ಅಥವಾ ತುರಿಕೆ, ಶುಷ್ಕತೆಯ ಅನುಭವ ಇವರಿಗಾಗುತ್ತದೆ. ತ್ವಚೆಗೆ ಸಂಬಂಧಿಸಿದ ಯಾವುದೇ ಅಲರ್ಜಿಯ ಲಕ್ಷಣಗಳನ್ನು ಇವರು ಬೇಗನೇ ಅನುಭವಿಸುತ್ತಾರೆ.

ಸೂಕ್ಷ್ಮ ತ್ವಚೆ ಹೊಂದಿರುವವರಿಗೆ ಸನ್‌ಸ್ಕ್ರೀನ್‌ ಏಕೆ ಅಗತ್ಯ..?

ಸನ್‌ಸ್ಕ್ರೀನ್‌ ಸೂಕ್ಷ್ಮ ತ್ವಚೆಯನ್ನು ಹೊಂದಿರುವವರು ಕಡ್ಡಾಯವಾಗಿ ಬಳಕೆ ಮಾಡಲೇಬೇಕು. ಸೂಕ್ಷ್ಮ ತ್ವಚೆಯನ್ನು ಹೊಂದಿರುವವರು ಸೂರ್ಯನ ನೇರಳಾತೀತ ಕಿರಣಗಳಿಂದ ಪಾರಾಗಬೇಕು ಎಂದರೆ ಇವರಿಗಿರುವ ಒಂದೇ ಅಸ್ತ್ರ ಅದು ಸನ್‌ಸ್ಕ್ರೀನ್‌

ಸನ್‌ಸ್ಕ್ರೀನ್‌ಗಳಲ್ಲಿ ಎಷ್ಟು ಬಗೆ..?

ಸನ್‌ಸ್ಕ್ರೀನ್‌ಗಳನ್ನು ನಾವು 2 ರೀತಿಯಲ್ಲಿ ವಿಂಗಡಣೆ ಮಾಡಬಹುದಾಗಿದೆ. ಒಂದು ಕೆಮಿಕಲ್ ಹಾಗೂ ಇನ್ನೊಂದು ಫಿಸಿಕಲ್ . ಕೆಮಿಕಲ್ ಅಥವಾ ರಾಸಾಯನಿಕ ಸನ್‌ಸ್ಕ್ರೀನ್‌ಗಳು ಯುವಿ ಕಿರಣಗಳನ್ನು ಹೀರಿಕೊಂಡು ಅವುಗಳನ್ನು ಶಾಖವಾಗಿ ಪರಿವರ್ತಿಸುತ್ತದೆ. ಅದೇ ರೀತಿ ಫಿಸಿಕಲ್ ಸನ್ಸ್ಕ್ರೀನ್ಗಳು ಯುವಿ ಕಿರಣಗಳು ಹಾಗೂ ತ್ವಚೆಯ ನಡುವೆ ಒಂದು ತಡೆಗೋಡೆಯ ರೀತಿ ವರ್ತಿಸುತ್ತದೆ.

ಸೂಕ್ಷ್ಮ ಚರ್ಮ ಹೊಂದಿರುವವರಿಗೆ ಉತ್ತಮ ಸನ್‌ಸ್ಕ್ರೀನ್‌ ಯಾವುದು ..?

ಸೂಕ್ಷ್ಮ ಚರ್ಮ ಹೊಂದಿರುವವರು ಸನ್‌ಸ್ಕ್ರೀನ್‌ ಆಯ್ಕೆ ಮಾಡಿಕೊಳ್ಳುವಾಗ ಅದು ಸುಗಂಧ ಮುಕ್ತವಾಗಿದೆಯೇ ಎಂದು ನೋಡಿಕೊಳ್ಳಬೇಕು. ಅಲ್ಲದೇ ಈ ಸನ್‌ಸ್ಕ್ರೀನ್‌ಗಳು ಹೈಪೋಲಾರ್ಜನಿಕ್ ಹಾಗೂ ಚರ್ಮ ಶಾಸ್ತ್ರಜ್ಞರು ಇದಕ್ಕೆ ಒಪ್ಪಿಗೆಯ ಮುದ್ರೆ ಒತ್ತಿದ್ದಾರೆಯೇ ಎಂಬುದನ್ನೂ ಪರೀಕ್ಷಿಸಿಕೊಳ್ಳಬೇಕು. ಝಿಂಕ್ ಆಕ್ಸೈಡ್ ಹಾಗೂ ಟೈಟಾನಿಯಂ ಡೈ ಆಕ್ಸೈಡ್ಗಳನ್ನು ಹೊಂದಿರುವ ಸನ್‌ಸ್ಕ್ರೀನ್‌ಗಳನ್ನು ಆಯ್ಕೆ ಮಾಡಿಕೊಳ್ಳಿ. ಇವುಗಳು ತ್ವಚೆಗೆ ಕಿರಿಕಿರಿ ಅನುಭವವನ್ನು ನೀಡುವುದಿಲ್ಲ.

SPF 100 ಸೂಕ್ಷ್ಮ ಚರ್ಮಕ್ಕೆ ಒಳ್ಳೆಯದೇ?

ಹೆಚ್ಚಿನ SPF ಹೊಂದಿರುವ ಸನ್‌ಸ್ಕ್ರೀನ್ ಹೆಚ್ಚು ರಕ್ಷಣೆ ನೀಡುತ್ತದೆ ಎಂದು ಜನರು ಸಾಮಾನ್ಯವಾಗಿ ನಂಬಿಕೊಳ್ಳುತ್ತಾರೆ. ಆದರೆ 2019 ರ ಜರ್ನಲ್ ಆಫ್ ದಿ ಅಮೇರಿಕನ್ ಅಕಾಡೆಮಿಯಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ,ಸಮುದ್ರಗಳಿಗೆ ಪ್ರವಾಸಕ್ಕೆ ತೆರಳಿದವರ ಪೈಕಿ ಎಸ್‌ಪಿಎಫ್ 50 ಸನ್‌ಸ್ಕ್ರೀನ್‌ ಬಳಕೆ ಮಾಡಿದವರಿಗಿಂತ ಎಸ್‌ಪಿಎಫ್ 100 ಸನ್‌ಸ್ಕ್ರೀನ್‌ ಬಳಕೆ ಮಾಡಿದವರೇ ಹೆಚ್ಚು ಚರ್ಮದ ಹಾನಿ ಅನುಭವಿಸಿದ್ದರು ಎನ್ನಲಾಗಿದೆ .

ಆದರೆ ಸೂಕ್ಷ್ಮ ಚರ್ಮವನ್ನು ಹೊಂದಿರುವವರಿಗೆ ಎಸ್‌ಪಿಎಫ್ 100 ಒಳ್ಳೆಯದ್ದು ಎಂದು ಹೇಳಲು ಸಾಧ್ಯವಿಲ್ಲ. ಸೂರ್ಯನ ವಿಕರಣಗಳಿಂದ ಪಾರಾಗಲು ಎಸ್‌ಪಿಎಫ್‌ 30 ಸನ್‌ಸ್ಕ್ರೀನ್‌ಗಳನ್ನು ನೀವು ಸರಿಯಾಗಿ ಹಚ್ಚಿದರೂ ಸಾಕು ಎಂದು ಚರ್ಮಶಾಸ್ತ್ರಜ್ಞರು ಹೇಳುತ್ತಾರೆ. ಹೆಚ್ಚಿನ ಎಸ್‌ಪಿಎಫ್‌ಗಳು ಸೂರ್ಯನಿಂದ ಸ್ವಲ್ಪ ಮಟ್ಟಿಗೆ ಮಾತ್ರ ಹೆಚ್ಚಿನ ರಕ್ಷಣೆಯನ್ನು ನೀಡುತ್ತವೆ. ಆದರೆ ಸೂಕ್ಷ್ಮ ಚರ್ಮವನ್ನು ಹೊಂದಿರುವವರು ಅದರ ಕಡೆ ಗಮನ ನೀಡುವುದನ್ನು ಬಿಟ್ಟು ಸನ್‌ಸ್ಕ್ರೀನ್‌ಗಳಲ್ಲಿ ಬಳಕೆ ಮಾಡಲಾದ ರಾಸಾಯನಿಕಗಳ ಕಡೆಗೆ ಗಮನ ನೀಡುವುದು ಒಳ್ಳೆಯದು.

mysore-dasara_Entry_Point