ಕನ್ನಡ ಸುದ್ದಿ  /  Lifestyle  /  Skin Care Tips Mens Beauty Summer Season And Skin Protection Sun Protection Lifestyle Beauty Tips For Men In Kannada Rst

Skincare Tips: ಪುರುಷರಲ್ಲೂ ಇರಲಿ ಸೌಂದರ್ಯ ಕಾಳಜಿ; ಬಿಸಿಲಿನಿಂದ ತ್ವಚೆಯನ್ನು ಕಾಪಾಡಿಕೊಳ್ಳಲು ಇಲ್ಲಿದೆ ಸುಲಭ ಮಾರ್ಗ

Skin Care Tips For Men: ಸೌಂದರ್ಯ ಕಾಳಜಿ ಹೆಣ್ಣುಮಕ್ಕಳಿಗೆ ಮಾತ್ರವಲ್ಲ, ಗಂಡು ಮಕ್ಕಳು ಚರ್ಮ ಹಾಗೂ ಸೌಂದರ್ಯದ ಕಾಳಜಿ ಮಾಡಬೇಕು. ಈ ಬಿರುಬೇಸಿಗೆಯಲ್ಲಿ ಸೌಂದರ್ಯದ ಕುರಿತು ಹೆಚ್ಚು ಕಾಳಜಿ ವಹಿಸಬೇಕು. ಸೂರ್ಯನ ರಕ್ಷಣೆಯಿಂದ ತೇವಾಂಶ ಹೆಚ್ಚಿಸುವವರೆಗೆ ಈ ಸಲಹೆಗಳು ನಿಮಗೆ ಸಹಾಯ ಮಾಡಬಹುದು.

ಬೇಸಿಗೆಯಲ್ಲಿ ಹೀಗಿರಲಿ ಪುರುಷರ ಚರ್ಮದ ಕಾಳಜಿ
ಬೇಸಿಗೆಯಲ್ಲಿ ಹೀಗಿರಲಿ ಪುರುಷರ ಚರ್ಮದ ಕಾಳಜಿ

ಜೂನ್‌ ತಿಂಗಳು ಆರಂಭವಾದರೂ ಮಳೆ ಇನ್ನೂ ಆರಂಭವಾಗಿಲ್ಲ. ಬಿಸಿಲಿನ ತಾಪವೂ ಜೋರಾಗಿದ್ದು, ಚರ್ಮದ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಚರ್ಮದ ಕಾಳಜಿ ವಿಷಯಕ್ಕೆ ಬಂದರೆ ಹೆಣ್ಣುಮಕ್ಕಳು, ಗಂಡುಮಕ್ಕಳು ಎಂದಿಲ್ಲ ಪ್ರತಿಯೊಬ್ಬರು ಕಾಳಜಿ ವಹಿಸುವುದು ಅವಶ್ಯವಾಗಿದೆ. ಅತಿಯಾದ ಬಿಸಿಲು, ಶಾಖ ಹಾಗೂ ಆರ್ದ್ರತೆಯು ಚರ್ಮದ ಟೋನ್‌ ಕೆಡಲು ಕಾರಣವಾಗಬಹುದು. ಅಲ್ಲದೆ ಹಲವು ರೀತಿಯ ಸಮಸ್ಯೆಗಳಿಗೂ ಕಾರಣವಾಗಬಹುದು. ಆದರೆ ಕೆಲವು ಸರಳ ಹಾಗೂ ಪರಿಣಾಮಕಾರಿ ತ್ವಚೆ ಸಲಹೆಗಳನ್ನು ಅನುಸರಿಸುವುದರಿಂದ ಚರ್ಮವನ್ನು ಆರೋಗ್ಯಕರವಾಗಿ, ತಾಜಾವಾಗಿ ಕಾಣುವಂತೆ ಮಾಡಬಹುದು.

ಹಾಗಾದರೆ ಬೇಸಿಗೆಯಲ್ಲಿ ಪುರುಷರು ಅಂದ ಹೆಚ್ಚಿಸಿಕೊಳ್ಳುವುದು ಹೇಗೆ? ಇಲ್ಲಿದೆ ಸುಲಭ ಸಲಹೆ.

ಸೂರ್ಯನ ಬೆಳಕಿನಿಂದ ತ್ವಚೆಯನ್ನು ರಕ್ಷಿಸಿ

ಬಿಸಿಲಿನಲ್ಲಿ ಹೊರ ಹೋಗುವಾಗ ಸೂರ್ಯನ ಅತಿ ನೇರಳೆ ಕಿರಣಗಳಿಂದ ಚರ್ಮವನ್ನು ರಕ್ಷಿಸಿಕೊಳ್ಳಲು ಎಸ್‌ಪಿಎಫ್‌ ಅಂಶ ಇರುವ ಸನ್‌ಸ್ಕ್ರೀನ್‌ ಕ್ರೀಮ್‌ ಬಳಸುವುದು ಅವಶ್ಯ. ಹೆಚ್ಚಿನ ರಕ್ಷಣೆಗಾಗಿ ಅಗಲವಾದ ಅಂಚುಳ್ಳ ಟೋಪಿ ಹಾಗೂ ಸನ್‌ಗ್ಲಾಸ್‌ ಧರಿಸುವುದನ್ನು ಮರೆಯದಿರಿ.

ಆಗಾಗ ಚರ್ಮವನ್ನು ಸ್ವಚ್ಛಗೊಳಿಸಿ

ಬೆವರು, ಧೂಳು ಹಾಗೂ ಅತಿಯಾದ ಎಣ್ಣೆಯಂಶವು ಚರ್ಮದ ರಂಧ್ರಗಳ ಮುಚ್ಚುವಿಕೆಗೆ ಕಾರಣವಾಗಬಹುದು. ಅಲ್ಲದೆ ಇದರಿಂದ ಮೊಡವೆಯಂತಹ ಸಮಸ್ಯೆಗಳು ಕಾಣಿಸಬಹುದು. ಆ ಕಾರಣಕ್ಕೆ ದಿನಕ್ಕೆ ಎರಡು ಬಾರಿ ಸೌಮ್ಯವಾಗಿರುವ ಫೇಸ್‌ವಾಶ್‌ನಿಂದ ಮುಖ ತೊಳೆಯುವ ಅಭ್ಯಾಸ ರೂಢಿಸಿಕೊಳ್ಳಿ. ಇದರಿಂದ ಕಲ್ಮಶಗಳು ದೂರಾಗುತ್ತವೆ ಹಾಗೂ ಚರ್ಮವು ತಾಜಾವಾಗಿರುತ್ತದೆ. ಗಡಸು ಅಂಶ ಇರುವ ಸೋಪ್‌ ಬಳಸುವುದು, ಸ್ಕ್ರಬ್‌ ಮಾಡುವುದು ಮಾಡದಿರಿ. ಸೋಪಿನ ಬದಲು ಪುರುಷರ ಚರ್ಮಕ್ಕೆ ಹೊಂದುವ ಫೇಸ್‌ವಾಶ್‌ ಬಳಸುವುದು ಸೂಕ್ತ.

ಚರ್ಮಕ್ಕೆ ತೇವಾಂಶ ನೀಡಿ

ಬೇಸಿಗೆಯಲ್ಲಿ ಸಾಕಷ್ಟು ನೀರು ಕುಡಿಯುವ ಮೂಲಕ ಚರ್ಮದ ತೇವಾಂಶವನ್ನು ಕಾಪಾಡಿಕೊಳ್ಳಿ. ದಿನವಿಡೀ ಆಗಾಗ ನೀರು ಕುಡಿಯುತ್ತಿರಿ. ಶಾಖ ಹಾಗೂ ಆರ್ದ್ರತೆಯು ಚರ್ಮವು ತೇವಾಂಶ ಕಳೆದುಕೊಳ್ಳಲು ಕಾರಣವಾಗಬಹುದು. ಇದರಿಂದ ಚರ್ಮ ಒಣಗುವ, ಜೊತೆ ಕಾಂತಿಯು ಕಳೆದುಕೊಳ್ಳಬಹುದು. ಬೇಸಿಗೆಯಲ್ಲಿ ಎಣ್ಣೆ ರಹಿತ ಮಾಯಿಶ್ಚರೈಸರ್‌ ಬಳಕೆ ಉತ್ತಮ.

ತೇವಾಂಶವನ್ನು ಆಕರ್ಷಿಸುವ ಮತ್ತು ಉಳಿಸಿಕೊಳ್ಳುವ ಹೈಲುರಾನಿಕ್ ಆಮ್ಲದಂತಹ ಪದಾರ್ಥಗಳನ್ನು ಹೊಂದಿರುವ ಮಾಯಿಶ್ಚರೈಸರ್‌ಗಳನ್ನು ಬಳಸಿ.

ನಿಯಮಿತವಾಗಿ ಎಕ್ಸ್‌ಫೋಲಿಯೇಟ್‌ ಮಾಡಿ

ಎಕ್ಸ್‌ಫೋಲಿಯೇಟ್‌ ಮಾಡುವುದರಿಂದ ಚರ್ಮದ ನಿರ್ಜೀವ ಕೋಶಗಳನ್ನು ತೊಡೆದು ಹಾಕಬಹುದು. ಇದು ಚರ್ಮ ರಂಧ್ರಗಳನ್ನು ಮುಚ್ಚುತ್ತದೆ. ಚರ್ಮವನ್ನು ಮೃದುಗೊಳಿಸುತ್ತದೆ. ಆ ಕಾರಣಕ್ಕೆ ಬೇಸಿಗೆಯಲ್ಲಿ ವಾರದಲ್ಲಿ ಎರಡು ಬಾರಿ ಚರ್ಮಕ್ಕೆ ಎಕ್ಸ್‌ಫೋಲಿಯೇಟ್‌ ಮಾಡುವುದು ಅವಶ್ಯ. ಆದರೆ ಚರ್ಮಕ್ಕೆ ಹಾನಿಯಾಗಷ್ಟು ಎಕ್ಸ್‌ಫೋಲಿಯೇಟ್‌ ಮಾಡುವುದು ತಪ್ಪು.

ತುಟಿ ಕಾಳಜಿಯೂ ಇರಲಿ

ನಿಮ್ಮ ತುಟಿಯನ್ನೂ ಬಿಸಿಲಿನಿಂದ ಕಾಪಾಡುವುದು ಮುಖ್ಯವಾಗುತ್ತದೆ. ಸೂರ್ಯನ ಬಿಸಲಿನಿಂದ ತುಟಿ ಒಣಗಬಹುದು. ಹಾಗಾಗಿ ಎಸ್‌ಪಿಎಫ್‌ ಅಂಶ ಇರುವ ಲಿಪ್‌ ಬಾಮ್‌ ಬಳಸಿ. ತುಟಿ ತೇವಾಂಶ ಕಾಪಾಡಲು ಶೀಯಾ ಬಟರ್‌ ಅಥವಾ ಜೇನುಮೇಣ ಬಳಸಬಹುದು.

ಆರೋಗ್ಯಕರ ಜೀವನಶೈಲಿ

ಇನ್ನು ಚರ್ಮದ ಆರೋಗ್ಯಕ್ಕೆ ಆರೋಗ್ಯಕರ ಜೀವನಶೈಲಿಯು ಅವಶ್ಯ. ಸಾಕಷ್ಟು ಹಣ್ಣು, ತರಕಾರಿ, ನೀರು ಸೇವನೆಯು ಅವಶ್ಯ. ಒಮೆಗಾ 3 ಕೊಬ್ಬಿನಾಮ್ಲ ಇರುವ ಆಹಾರ ಪದಾರ್ಥಗಳ ಸೇವನೆಗೂ ಒತ್ತು ನೀಡಿ. ಅತಿಯಾದ ಮದ್ಯಪಾನ ಹಾಗೂ ಧೂಮಪಾನಕ್ಕೆ ಕಡಿವಾಣ ಹಾಕಿ. ಇದರಿಂದ ಚರ್ಮದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಮಾತ್ರವಲ್ಲ. ಚರ್ಮದ ಅಂದವನ್ನೂ ಹೆಚ್ಚಿಸಿಕೊಳ್ಳಬಹುದು.

ಇದನ್ನೂ ಓದಿ

Mango Face Pack: ಮಾವಿನ ತಿರುಳಿನಲ್ಲಿದೆ ತ್ವಚೆಯ ಅಂದದ ಗುಟ್ಟು; ಮ್ಯಾಂಗೊ ಫೇಸ್‌ಪ್ಯಾಕ್‌ನಿಂದ ಸೌಂದರ್ಯ ಹೆಚ್ಚಿಸಿಕೊಳ್ಳುವುದು ಹೇಗೆ ನೋಡಿ

Beauty Tips: ಬೇಸಿಗೆಯಲ್ಲಿ ಹೇರಳವಾಗಿ ಸಿಗುವ ಮಾವಿನಹಣ್ಣು ಆರೋಗ್ಯ ವೃದ್ಧಿಸುವ ಜೊತೆಗೆ ತ್ವಚೆಯ ಅಂದವನ್ನೂ ಹೆಚ್ಚಿಸುತ್ತದೆ. ಬೇಸಿಗೆಯಲ್ಲಿ ಮ್ಯಾಂಗೋ ಫೇಸ್‌ಪ್ಯಾಕ್‌ ಹಚ್ಚುವುದರಿಂದ ತ್ವಚೆಯ ಹಲವು ರೀತಿಯ ಪ್ರಯೋಜನಗಳಿವೆ. ಹಾಗಾದರೆ ಇದರ ಉಪಯೋಗಗಳ ಬಗ್ಗೆ ನೀವು ತಿಳಿಯಿರಿ.

ಮಾವಿನಹಣ್ಣು ಆರೋಗ್ಯದೊಂದಿಗೆ ಸೌಂದರ್ಯಕ್ಕೂ ಮದ್ದು. ಬೇಸಿಗೆಯಲ್ಲಿ ಹೇರಳವಾಗಿ ಸಿಗುವ ಮಾವಿನಹಣ್ಣು ತ್ವಚೆಯ ಅಂದವನ್ನೂ ಹೆಚ್ಚಿಸುತ್ತದೆ. ಇದರ ಫೇಸ್‌ಪ್ಯಾಕ್‌ ಮುಖಕ್ಕೆ ಹಚ್ಚುವುದರಿಂದ ಚರ್ಮದ ಕಾಂತಿ ಹೆಚ್ಚುವ ಜೊತೆಗೆ, ಸೌಂದರ್ಯವರ್ಧನೆಯೂ ಸಾಧ್ಯ. ಇದರಿಂದ ಚರ್ಮದ ಆರೋಗ್ಯ ಸಲಹೆ ರೀತಿಯ ಪ್ರಯೋಜನಗಳಿವೆ.

ವಿಭಾಗ