Skin Care Tips: ನಿಮ್ಮ ತ್ವಚೆಯ ಆರೋಗ್ಯ ಕಾಪಾಡಿಕೊಳ್ಳಲು ಸೇವಿಸಲೇಬೇಕು ಈ ಸೂಪರ್ಫುಡ್
Skin Care Tips: ನಿಮ್ಮ ತ್ವಚೆಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಮಾರುಕಟ್ಟೆಯಲ್ಲಿ ಲಭ್ಯವಿರುವ ಕ್ರೀಮ್ಗಳ ಮೊರೆ ಹೋಗುತ್ತಿದ್ದರೆ ಇದನ್ನು ಮೊದಲು ನಿಲ್ಲಿಸಿ. ಏಕೆಂದರೆ ನಿಮ್ಮ ಆಹಾರದಲ್ಲಿ ಈ ಸೂಪರ್ಫುಡ್ಗಳನ್ನು ಸೇರಿಸಿಕೊಳ್ಳುವ ಮೂಲಕ ನೀವು ನೈಸರ್ಗಿಕವಾಗಿ ಆರೋಗ್ಯಕರ ಚರ್ಮವನ್ನು ಹೊಂದಬಹುದಾಗಿದೆ .
Skin Care Tips: ನಾವು ಯಾವ ರೀತಿಯ ಆಹಾರವನ್ನು ಸೇವಿಸುತ್ತೇವೆ ಎಂಬುದು ನಮ್ಮ ಸಂಪೂರ್ಣ ಆರೋಗ್ಯವನ್ನು ನಿರ್ಧರಿಸುತ್ತದೆ. ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು, ಆಂಟಿ ಆಕ್ಸಿಡೆಂಟ್ಗಳು ಸೇರಿದಂತೆ ವಿವಿಧ ಉಪಯೋಗಕಾರಿ ಅಂಶಗಳನ್ನು ಒಳಗೊಂಡ ಆಹಾರವನ್ನು ನಾವು ಸೂಪರ್ ಫುಡ್ ಎಂದು ಕರೆಯಬಹುದು.
ಚರ್ಮದ ಆರೈಕೆಗೆ ಬೇಕು ಸೂಪರ್ ಫುಡ್
ವಯಸ್ಸಾಗುವಿಕೆ. ಚರ್ಮದ ಕಾಂತಿಯಲ್ಲಿ ಉಂಟಾಗುವ ಬದಲಾವಣೆಗಳು ಇವುಗಳೆಲ್ಲವನ್ನು ನಿಯಂತ್ರಿಸುವ ಶಕ್ತಿ ನಾವು ಸೇವಿಸುವ ಆಹಾರಕ್ಕೆ ಇರುತ್ತದೆ.
ಪ್ರತಿಯೊಂದು ಆಹಾರವೂ ಅದರದ್ದೇ ಆದ ವಿಶೇಷ ಶಕ್ತಿಯನ್ನು ಹೊಂದಿರುತ್ತದೆ. ಉದಾಹರಣೆಗೆ ಅವಕಾಡೋಗಳು ಚರ್ಮವನ್ನು ಹೈಡ್ರೇಟ್ ಮಾಡಿದರೆ, ಬ್ಲೂಬೆರ್ರಿಗಳು ಚರ್ಮದ ವಯಸ್ಸಾಗುವಿಕೆಯನ್ನು ತಡೆಗಟ್ಟುವ ಸಾಮರ್ಥ್ಯ ಹೊಂದಿರುತ್ತವೆ. ಅರಿಶಿಣ ಆಂಟಿಆಕ್ಸಿಡಂಟ್ಗಳಂತೆ ಕಾರ್ಯ ನಿರ್ವಹಿಸುತ್ತದೆ. ಇದೇ ರೀತಿ ಒಂದೊಂದು ಸೂಪರ್ ಫುಡ್ಗಳು ದೇಹಕ್ಕೆ ತನ್ನದೇ ಆದ ರೀತಿಯಲ್ಲಿ ಲಾಭವನ್ನು ನೀಡುತ್ತವೆ. ಇಂಥಾ ನೈಸರ್ಗಿಕ ವಿಧಾನದ ಮೂಲಕ ನೀವು ಸುಲಭವಾಗಿ ನಿಮ್ಮ ಚರ್ಮದ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದಾಗಿದೆ.
ಅವಕಾಡೋದಲ್ಲಿ ನಿಮ್ಮ ಆರೋಗ್ಯಕರ ಕೊಬ್ಬು, ಜೀವಸತ್ವಗಳು ಇದ್ದು ಚರ್ಮವನ್ನು ಹೈಡ್ರೇಟ್ ಮಾಡುವ ಕೆಲಸವನ್ನು ಮಾಡುತ್ತವೆ. ಯಾರ ಚರ್ಮ ಶುಷ್ಕವಾಗಿರುತ್ತದೆಯೋ ಅವರು ಬಟರ್ ಫ್ರೂಟ್ ಸೇವಿಸಬಹುದು. ಇದು ಮಾತ್ರವಲ್ಲದೆ ಅಲೋವೆರಾವಂತೂ ಎಲ್ಲರ ಮೆಚ್ಚಿನ ತ್ಚಚೆ ಆರೈಕೆಯ ಸಾಧನವಾಗಿದೆ. ಇದು ಚರ್ಮದ ಮೇಲೆ ಉಂಟಾಗುವ ಯಾವುದೇ ರೀತಿಯ ಅಲರ್ಜಿ ಹಾಗೂ ಉರಿಯೂತಗಳನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿರುತ್ತದೆ.
ಒಮೆಗಾ 3 ಅಂಶದಿಂದ ಸಮೃದ್ಧವಾಗಿರುವ ಚಿಯಾ ಸೀಡ್ಸ್
ಇನ್ನು ಬ್ಲೂಬೆರ್ರಿ ಹಣ್ಣುಗಳು ಆಂಟಿ ಆಕ್ಸಿಡಂಟ್ ಅಂಶವನ್ನು ಅಗಾಧವಾಗಿ ಹೊಂದಿರುತ್ತದೆ. ಅರಿಶಿಣವು ಮುಖದ ಮೇಲಿನ ಮೊಡವೆಗಳನ್ನು ಹೋಗಲಾಡಿಸುವಲ್ಲಿ ಸಹಕಾರಿಯಾಗಿದೆ.
ಈ ರೀತಿಯ ಸೂಪರ್ಫುಡ್ಗಳ ಸೇವನೆಯಿಂದ ನಿಮ್ಮ ಚರ್ಮವು ಪುನರ್ ಯವ್ವನಕ್ಕೆ ಮರಳಲು ಸಹಾಯವಾಗುತ್ತದೆ. ಅಲ್ಲದೇ ತ್ವಚೆಗೆ ನೈಸರ್ಗಿಕ ರೀತಿಯಲ್ಲಿ ತಮ್ಮದೇ ಆದ ಕೊಡುಗೆಗಳನ್ನು ನೀಡುತ್ತವೆ. ಸೂಪರ್ ಫುಡ್ಗಳ ಸಾಲಿಗೆ ಸೇರುವ ಇನ್ನೊಂದು ಪದಾರ್ಥವೆಂದರೆ ಅದು ದಾಳಿಂಬೆ ಹಣ್ಣು. ಇದರಲ್ಲಿಯೂ ಆಂಟಿ ಆಕ್ಸಿಡಂಟ್ ಪ್ರಮಾಣ ಸಮೃದ್ಧವಾಗಿದೆ. ಚರ್ಮದ ಬಣ್ಣವನ್ನು ಸುಧಾರಿಸುವಲ್ಲಿ ದಾಳಿಂಬೆ ಪ್ರಮುಖ ಪಾತ್ರ ವಹಿಸುತ್ತದೆ. ಇತ್ತೀಚೆಗೆ ಜನರು ಹೆಚ್ಚು ಬಳಸುತ್ತಿರುವ ಚಿಯಾ ಸೀಡ್ಸ್ನಲ್ಲಿ ಒಮೆಗಾ 3 ಅಂಶವಿದೆ. ಇದು ತ್ವಚೆ ಹಾಗೂ ಕೂದಲಿನ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತದೆ. ಈ ಸೂಪರ್ಫುಡ್ಗಳು ಯಾವ ವಿಧದ ದೇಹದ ಮೇಲೆಯೂ ಅಡ್ಡಪರಿಣಾಮ ಬೀರುವುದೇ ಇಲ್ಲ. ಎಲ್ಲಾ ರೀತಿಯಿಂದಲೂ ತ್ವಚೆಗೆ ಆರೈಕೆಯನ್ನೇ ನೀಡುತ್ತಾ ಬರುತ್ತವೆ.
ವಿಭಾಗ