ಕನ್ನಡ ಸುದ್ದಿ  /  ಜೀವನಶೈಲಿ  /  ಕರ್ನಾಟಕವನ್ನು ಸಮರ್ಥವಾಗಿ ಪ್ರತಿನಿಧಿಸಬಹುದಾದ ಒಂಬತ್ತು ಅಥವಾ ಹತ್ತು ಮಹಿಳಾ ಸಂಸದರು ಯಾರು? ಉತ್ತರ ಕೇಳಿ ನಗಬೇಡಿ ಪ್ಲೀಸ್‌

ಕರ್ನಾಟಕವನ್ನು ಸಮರ್ಥವಾಗಿ ಪ್ರತಿನಿಧಿಸಬಹುದಾದ ಒಂಬತ್ತು ಅಥವಾ ಹತ್ತು ಮಹಿಳಾ ಸಂಸದರು ಯಾರು? ಉತ್ತರ ಕೇಳಿ ನಗಬೇಡಿ ಪ್ಲೀಸ್‌

ಕರ್ನಾಟಕವನ್ನು ಸಮರ್ಥವಾಗಿ ಪ್ರತಿನಿಧಿಸಬಹುದಾದ ಒಂಬತ್ತು ಅಥವ ಹತ್ತು ಮಹಿಳಾ ಸಂಸದರು ಯಾರು? ಈ ಪ್ರಶ್ನೆಗೆ ನಿಮ್ಮ ಉತ್ತರವೇನು? ಫೇಸ್‌ಬುಕ್‌ ಬಳಕೆದಾರರು ಈ ಪ್ರಶ್ನೆಗೆ ಏನೆಲ್ಲ ಉತ್ತರ ನೀಡಿದ್ದಾರೆ ನೋಡೋಣ ಬನ್ನಿ.

ಕರ್ನಾಟಕವನ್ನು ಸಮರ್ಥವಾಗಿ ಪ್ರತಿನಿಧಿಸಬಹುದಾದ ಒಂಬತ್ತು ಅಥವಾ ಹತ್ತು ಮಹಿಳಾ ಸಂಸದರು ಯಾರು?
ಕರ್ನಾಟಕವನ್ನು ಸಮರ್ಥವಾಗಿ ಪ್ರತಿನಿಧಿಸಬಹುದಾದ ಒಂಬತ್ತು ಅಥವಾ ಹತ್ತು ಮಹಿಳಾ ಸಂಸದರು ಯಾರು?

ಹಿಂದೂಸ್ತಾನ್‌ ಟೈಮ್ಸ್‌ ಕನ್ನಡವು ಪ್ರತಿನಿತ್ಯ ಸೋಷಿಯಲ್‌ ಮೀಡಿಯಾ ರೌಂಡಪ್‌ನಲ್ಲಿ ಫೇಸ್‌ಬುಕ್‌ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸುವ ಆಸಕ್ತಿದಾಯಕ ಪೋಸ್ಟ್‌ಗಳನ್ನು ಪ್ರಕಟಿಸುವ ಸಂಗತಿ ಓದುಗರಾದ ನಿಮಗೆ ತಿಳಿದಿದೆ. ಇಂದು ನಮ್ಮ ಕಣ್ಣಿಗೆ ಆರ್‌ಕೆ ಕೌಂಡಿನ್ಯ ಅವರ ಒಂದು ಸಾಲಿನ ಫೇಸ್‌ಬುಕ್‌ ಪೋಸ್ಟ್‌ ಕಣ್ಣಿಗೆ ಬಿದ್ದಿದೆ. ಅವರು ಒಂದು ಬೆಳಗ್ಗೆ ಎಂಟು ಗಂಟೆಯ ಆಸುಪಾಸು "ಕರ್ನಾಟಕವನ್ನು ಸಮರ್ಥವಾಗಿ ಪ್ರತಿನಿಧಿಸಬಹುದಾದ ಒಂಬತ್ತು ಅಥವ ಹತ್ತು ಮಹಿಳಾ ಸಂಸದರು ಯಾರು?" ಎಂಬ ಪ್ರಶ್ನೆ ಕೇಳಿದ್ದರು. ಈ ಪ್ರಶ್ನೆ ಕೇಳಿದ ನಿಮಿಷದಲ್ಲಿಯೇ ಬಗೆಬಗೆಯ ಉತ್ತರಗಳನ್ನು ಫೇಸ್‌ಬುಕ್‌ ಬಳಕೆದಾರರು ನೀಡಿದ್ದಾರೆ.

ಈ ಪ್ರಶ್ನೆಗೆ ಕೆಲವರು ಗಂಭೀರವಾಗಿ ಆಲೋಚಿಸಿ ಉತ್ತರಿಸಲು ಪ್ರಯತ್ನಿಸಿದ್ದಾರೆ. ಇನ್ನು ಕೆಲವರು ತಮಾಷೆಯ ಕಾಮೆಂಟ್‌ ಮಾಡಿದ್ದಾರೆ. ಕೆಲವೊಂದು ಉತ್ತರಗಳನ್ನು ನೋಡಿದಾಗ ನಿಮ್ಮ ಮುಖದಲ್ಲಿ ನಗಮೂಡಬಹುದು. ಕೆಲವೊಂದು ಉತ್ತರಗಳು ಯೋಚನೆಗೆ ಹಚ್ಚಬಹುದು. ಬನ್ನಿ ಏನೆಲ್ಲ ಕಾಮೆಂಟ್‌ಗಳು ಬಂದಿವೆ ಎಂದು ನೋಡೋಣ.

ಟ್ರೆಂಡಿಂಗ್​ ಸುದ್ದಿ

ನಾನಂತೂ ಅಲ್ಲ. ನಂಗೆ ಮಾತಾಡೋಕೂ ಬರಲ್ಲ. ಗಲಾಟೆ ಮಾಡೋಕೂ ಬರಲ್ಲ ಎಂದು ಮಂಗಳ ರಾಗ್‌ ಹೆಗಡೆ ಕಾಮೆಂಟ್‌ ಮಾಡಿದ್ದಾರೆ. ಅದಕ್ಕೆ ಲೋಕೇಶ್‌ ರಾಜ್‌ "ನೀವು ಅಲ್ಲಿಗೆ ಹೋಗಿ ಇಂಗು ಮೆಣಸು ಒಗ್ಗರಣೆ ಕೊಟ್ಟರೆ ಸಾಕು! ಮಾತಾಡೋದೆ ಬೇಡ, ವಿರೋಧಿಗಳು ಗಪ್ ಚುಪ್ ಅಷ್ಟೇ....." ಎಂದು ತಮಾಷೆಯ ಮಾರುತ್ತರ ನೀಡಿದ್ದಾರೆ.

ಆಲ್ದೂರ್‌ ಚಂದ್ರು ಅವರು ಶೋಭಾ ಕರಂದ್ಲಾಜೆ ಸೂಕ್ತ ವ್ಯಕ್ತಿ ಎಂದಿದ್ದಾರೆ. ಮಂಜುನಾಥ್‌ ಬ್ಯಾಳಿ ಅವರು "ಸುಧಾ ಮೂರ್ತಿ" ಸಮರ್ಥರು ಎಂದಿದ್ದಾರೆ. ರಾಘು ರಾವ್‌ ಅವರು "ಸುಮಲತಾ,

ರಮ್ಯಾ, ಡಿಂಪಲ್ ಕ್ವೀನ್ ರಚಿತಾ ರಾಮ್, ಅನುಶ್ರೀ, ರಾಧಕ್ಕ ವಿಜಯಲಕ್ಷ್ಮಿ, ಅಯ್ಯೋ ಶ್ರದ್ಧಾ, ಶೋಭಕ್ಕ" ಎಂದಿದ್ದಾರೆ. ದಿನಕರ್‌ ರಾವ್‌ ಅವರು "ತೇಜಸ್ವಿನಿ ಅನಂತಕುಮಾರ್, ದಿವ್ಯಸ್ಪಂದನ, ಶೋಭಾ ಕರಂದ್ಲಾಜೆ, ಲಕ್ಷ್ಮೀ ಹೆಬ್ಬಾಳ್‌ಕರ್, ಮಾಳವಿಕಾ ಅವಿನಾಶ್, ತೇಜಸ್ವಿನಿ ಗೌಡ, ಭವ್ಯ ನರಸಿಂಹಮೂರ್ತಿ, ವಿಜಯಲಕ್ಷ್ಮಿ ಶಿಬರೂರು" ಎಂದು ಪಕ್ಷಾತೀತವಾಗಿ ಹೆಸರು ಸೂಚಿಸಿದ್ದಾರೆ.

ಕರ್ನಾಟಕದ ಎಲ್ಲಾ ಗಂಡು ನಾಯಕರೂ ಸಮರ್ಥ ಹೆಂಗಸರೇ ಎಂದು ರಾಜೇಶ್‌ ಕಶ್ಯಪ್‌ ತಮಾಷೆ ಮಾಡಿದ್ದಾರೆ. "ಸುಧಾ ಮೂರ್ತಿ.ಶೋಭಾ ಕರಂದ್ಲಾಜೆ.ತೇಜಸ್ವಿನಿ ರಮೇಶ್‌, ಸುಮಲತಾ, ತೇಜಸ್ವಿನಿ ಅನಂತ್‌ಕುಮಾರ್‌, ಮಾಳವಿಕ, ಶಾರದ‌ ಡೈಮಂಡ್ ಎಂದು ಶಂಕರ್‌ ಎಸ್‌ಕೆ ಕಾಮೆಂಟ್‌ ಮಾಡಿದ್ದಾರೆ. "ನಾನೋಬ್ಳೆ ಅಂತೋರು ಇರೋದು, ಹತ್ತು ಜನರು ಸಿಗೋದಿಲ್ಲ" ಎಂದು ಸ್ನೇಹ ರಮಕಾಂತ್‌ ಕಾಮಿಡಿ ಮಾಡಿದ್ದಾರೆ. ನಮ್ಮನೆಯವಳು ಅನ್ನೋಕು ನಂಗೆ ಮದುವೆ ಆಗ್ಲಿಲ್ಲ ಎಂದು ಪರ್ವ ಮಲ್ನಾಡ್‌ ಹೇಳಿದ್ದಾರೆ. ಜಡಸದಲ್ಲಿ ಐದು "ಸಮರ್ಥ" ಮಹಿಳೆಯರು ಸಿಗುತ್ತಾರೆ ಎಂದು ಕಿರಣ್‌ ಸೂರ್ಯ ಉತ್ತರಿಸಿದ್ದಾರೆ. "ನೀವು ಏನೇ ಬಯಸಿದ್ರೂ....ಕೊನೆಗೆ ಹೋಗೋದು ಭವಾನಿ ರೇವಣ್ಣ, ಅನಿತಾ ಕುಮಾರಸ್ವಾಮಿ & ನಿಖಿಲಣ್ಣನ ಪತ್ನಿ... ಜೈ ಜಡಸ.." ಎಂದು ರಾಘವೇಂದ್ರ ವೈಲಯ್ಯ ಕಾಮೆಂಟ್‌ ಮಾಡಿದ್ದಾರೆ.

" ಪ್ರಸ್ತುತ ಇರೋದೇ ಮೂವರು ಮಹಿಳಾ ಸಂಸದರು ಅಲಾ? ಇರೋರಲ್ಲಿ ಯಾರೂ ಅರ್ಹರು ಅಂತನಿಸಲ್ಲ ನನಗೆ. ಅದ್ ಬಿಟ್ಟು ತೇಜಸ್ವಿನಿ ಅನಂತಕುಮಾರ್ ಅವ್ರನ್ನ ಹೆಸರಿಸಬೋದು. ಸುಧಾಮೂರ್ತಿಯವ್ರು ಒಂದೊಳ್ಳೆ ಆಯ್ಕೆ (ಅವರು ಮುಂದೆ ಬರೋದಾದ್ರೆ). ಅದ್ ಬಿಟ್ರೆ ಯಾರು ನೆನಪಾಗ್ತಿಲ್ಲ. ಶಾರದಾ ಡೈಮಾಂಡ್‌ಗೆ ಅವಕಾಶ ಕೊಟ್ಟು ನೋಡಬಹುದು" ಎಂದು ಇಂದುಧರ್‌ ಹಳೆಯಂಗಡಿ ಕಾಮೆಂಟ್‌ ಮಾಡಿದ್ದಾರೆ.

ಈಗ್ಯಾರ್ ಯಾರ್ ಇದಾರೋ ಅವರವರ ಹೆಂಡ್ರು ಎಂದು ನವೀನ್‌ ಸಾಗರ್‌ ಕಾಮೆಂಟ್‌ ಮಾಡಿದ್ದಾರೆ. ಈಗಿರೊ ಗಂಡಸರ ಹೆಂಡ್ತೀರೆ ಮುಂದೆ ಬರ್ತರೆ ಅಷ್ಟೇ ಎಂದು ಕುಲುಮೆಪಾಳ್ಯ ವಿಶು ಹೇಳಿದ್ದಾರೆ.

ಒಂಬತ್ತು ಅಥವಾ ಹತ್ತು ಮಹಿಳಾ ಸಂಸದರು ಯಾರು? ಎಂದು ಅತ್ರಾಡಿ ಸುರೇಶ್‌ ಹೆಗ್ಡೆ ಪ್ರಶ್ನಿಸಿದ್ದಾರೆ. "ಸೋನು ಗೌಡ, ಶಿಲ್ಪಾ ಗೌಡ, ಬಿಂದು ಗೌಡ(ಮಚ್ಚಾ ಫೇಮ್), ದಿವ್ಯ ವಸಂತ ಎಂದು ದೇವ್ರು ಆರ್‌ಕೆ ಉತ್ತರಿಸಿದ್ದಾರೆ. ಒಟ್ಟಾರೆ ಕೌಂಡಿನ್ಯ ಅವರ ಪ್ರಶ್ನೆಗೆ ಹಲವು ಉತ್ತರಗಳು ಬಂದಿದ್ದು, ಕೆಲವೊಂದು ಉತ್ತರಗಳನ್ನು ನೋಡಿದರೆ ನಗದೆ ಇರಲಾಗದು.