ಕನ್ನಡ ಸುದ್ದಿ  /  Lifestyle  /  Social Media Viral Post Funny Videos The Three Struggled To Transfer Water From A Can To A Bottle Entertainment Rsa

ಕ್ಯಾನ್‌ನಿಂದ ಬಾಟಲಿಗೆ ನೀರು ಹಾಕಲು ಒದ್ದಾಡಿದ ಮೂವರು; ಇವರದ್ದು ಪಕ್ಕಾ ವಾಟ್ಸಾಪ್​ ಯುನಿವರ್ಸಿಟಿ ಎಂದ ನೆಟ್ಟಿಗರು

ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ವಿಡಿಯೋಗಳು ವೈರಲ್​ ಆಗುತ್ತಲೇ ಇರುತ್ತದೆ. ಫನ್ನಿ ವಿಡಿಯೋಗಳಿಗಂತೂ ಇಲ್ಲಿ ಬರ ಇರುವುದೇ ಇಲ್ಲ. ಇದೀಗ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿರುವ ವಿಡಿಯೋದಲ್ಲಿ ಮೂವರು ಕ್ಯಾನ್​ನಿಂದ ಬಾಟಲಿಗೆ ನೀರು ವರ್ಗಾಯಿಸೋಕೆ ಎಷ್ಟೆಲ್ಲ ಹರಸಾಹಸ ಪಟ್ಟಿದ್ದಾರೆ ಅನ್ನೋದನ್ನು ನೀವೇ ನೋಡಿ

ಕ್ಯಾನ್‌ನಿಂದ ಬಾಟಲಿಗೆ ನೀರು ಹಾಕಲು ಒದ್ದಾಡಿದ ಮೂವರು; ಇವರದ್ದು ಪಕ್ಕಾ ವಾಟ್ಸಾಪ್​ ಯುನಿವರ್ಸಿಟಿ ಎಂದ ನೆಟ್ಟಿಗರು
ಕ್ಯಾನ್‌ನಿಂದ ಬಾಟಲಿಗೆ ನೀರು ಹಾಕಲು ಒದ್ದಾಡಿದ ಮೂವರು; ಇವರದ್ದು ಪಕ್ಕಾ ವಾಟ್ಸಾಪ್​ ಯುನಿವರ್ಸಿಟಿ ಎಂದ ನೆಟ್ಟಿಗರು

ಸುಮ್ಮನೇ ಕುಳಿತು ಬೋರಾದಾಗೆಲ್ಲ ಸೋಶಿಯಲ್​ ಮೀಡಿಯಾಗಳಲ್ಲಿ ಬರುವ ವಿಡಿಯೋಗಳನ್ನು ನೋಡಿದರೆ ಸಾಕು. ಟೈಂ ಹೇಗೆ ಪಾಸ್​ ಆಗುತ್ತೆ ಅನ್ನೊದೇ ಅರ್ಥವಾಗೋದಿಲ್ಲ. ಈಗಂತೂ ಇನ್​ಸ್ಟಾಗ್ರಾಂನ ರೀಲ್ಸ್​ ಹಾಗೂ ಯುಟ್ಯೂಬ್​ಗಳಲ್ಲಿ ಬರುವ ಶಾರ್ಟ್ಸ್​ ವಿಡಿಯೋಗಳು ನೋಡಿದಷ್ಟೂ ಇನ್ನೂ ನೋಡಬೇಕು ಎನಿಸುವಂತೆ ಮಾಡುತ್ತವೆ. ಇದರಲ್ಲಿ ಬರುವ ಕೆಲವು ಫನ್ನಿ ವಿಡಿಯೋಗಳು ಹೊಟ್ಟೆ ಹುಣ್ಣಾಗುವಂತೆ ನಗುವಂತೆ ಮಾಡುತ್ತವೆ. ಇನ್ನೂ ಕೆಲವು ವಿಡಿಯೋಗಳು ಜಗತ್ತಿನಲ್ಲಿ ಇಂಥಾ ಮೂರ್ಖರೂ ಇದ್ದಾರಾ ಎಂಬ ಪ್ರಶ್ನೆಯನ್ನು ಹುಟ್ಟು ಹಾಕುತ್ತವೆ. ಈಗ ಈ ಎಲ್ಲಾ ವಿಚಾರಗಳ ಬಗ್ಗೆ ಮಾತನಾಡಲು ಒಂದು ಕಾರಣ ಕೂಡ ಇದೆ. ಸೋಶಿಯಲ್​ ಮೀಡಿಯಾದಲ್ಲಿ ಸದ್ಯ ಒಂದು ವಿಡಿಯೋ ವೈರಲ್​ ಆಗುತ್ತಿದ್ದು ಇದನ್ನು ವೀಕ್ಷಿಸಿದ ನೆಟ್ಟಿಗರು ಇವರೇನು ವಾಟ್ಸಾಪ್​ ಯುನಿವರ್ಸಿಟಿಯಲ್ಲಿ ಪದವಿ ಪಡೆದವರಾ ಅಂತಾ ವ್ಯಂಗ್ಯ ಮಾಡುತ್ತಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿರುವ ಈ ವಿಡಿಯೋದಲ್ಲಿ ಮೂವರು ಒಂದು ಕ್ಯಾನ್​ನಿಂದ ಬಾಟಲಿಗೆ ಮಾದರಿಯ ವಸ್ತುವನ್ನು ವರ್ಗಾವಣೆ ಮಾಡೋದಕ್ಕೆ ಹರಸಾಹಸ ಪಟ್ಟಿದ್ದಾರೆ. ವಿಪರ್ಯಾಸ ಅಂದರೆ ಆ ಮೂವರಲ್ಲಿ ಯಾರಿಗೂ ಕೊನೆಗೂ ಕ್ಯಾನ್​ನಿಂದ ಸರಿಯಾದ ಕ್ರಮದಲ್ಲಿ ನೀರನ್ನು ಬಾಟಲಿಗೆ ಸುರಿಯಲು ಯಾರಿಂದಲೂ ಸಾಧ್ಯವಾಗುವುದಿಲ್ಲ. ಈ ವಿಡಿಯೋ ನೋಡಿದ ನೆಟ್ಟಿಗರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.

ಮೊದಲನೆಯದಾಗಿ ಒಬ್ಬ ವ್ಯಕ್ತಿ ಕ್ಯಾನ್​ನಿಂದ ನೀರನ್ನು ಬಾಟಲಿಗೆ ಸುರಿಯಲು ಮುಂದಾಗುತ್ತಾನೆ. ಆದರೆ ನೀರು ಬಾಟಲಿಯ ಒಳಗೆ ಬೀಳುವುದಕ್ಕಿಂತ ಹೆಚ್ಚಾಗಿ ಅದು ಬಾಟಲಿಯ ಸುತ್ತಮುತ್ತಲೂ ಚೆಲ್ಲಿ ಹೋಗುತ್ತದೆ. ಇದಾದ ಬಳಿಕ ನಿನಗಿಂತ ನಾನೇ ಬುದ್ಧಿವಂತ ಎಂದು ಬಂದ ಇನ್ನೊಬ್ಬ ವ್ಯಕ್ತಿಯ ಗಾಳಿಕೆಯ ಸಹಾಯದಿಂದ ಕ್ಯಾನ್​ನಲ್ಲಿದ್ದ ನೀರನ್ನು ಬಾಟಲಿಗೆ ಸುರಿಯುವ ಯತ್ನ ಮಾಡುತ್ತಾನೆ. ಆದರೆ ಇಲ್ಲಿ ಮಜಾ ಏನಪ್ಪ ಅಂದರೆ ಆತನಿಗೆ ಗಾಳಿಕೆಯನ್ನು ಹೇಗೆ ಬಳಕೆ ಮಾಡಬೇಕು ಅನ್ನೋದೇ ತಿಳಿದಿರುವುದಿಲ್ಲ. ಆತನ ಗಾಳಿಕೆಯನ್ನು ಉಲ್ಟಾ ಹಿಡಿದು ಕ್ಯಾನ್​ನಿಂದ ನೀರನ್ನು ಬಾಟಲಿಗೆ ಸುರಿದ ಪರಿಣಾಮ ಬಾಟಲಿಗೆ ನೀರು ಸುರಿಯವ ಪ್ರಯತ್ನದಲ್ಲಿ ವಿಫಲನಾಗುತ್ತಾನೆ.

ಇಬ್ಬರಿಂದಲೂ ಈ ಕೆಲಸ ಮಾಡಲು ಸಾಧ್ಯವಾಗದ್ದನ್ನು ಗಮನಿಸಿ ಮಹಿಳೆ ಅಲ್ಲಿಗೆ ಎಂಟ್ರಿ ಕೊಡುತ್ತಾಳೆ. ಆದರೆ ಆಕೆಯ ಹಣಬರಹ ಕೂಡ ಅಷ್ಟೇ. ಗಾಳಿಕೆಯನ್ನು ಬಾಟಲಿಯ ಬಾಯಿಯಲ್ಲಿ ಇಟ್ಟು ನೀರು ಸುರಿಯುವುದನ್ನು ಬಿಟ್ಟು ಕ್ಯಾನ್​ನ ಬಾಯಿಗೆ ಗಾಳಿಕೆಯನ್ನು ಸಿಕ್ಕಿಸಿ ನೀರು ಹಾಕಲು ಹೋಗಿ ಆಕೆಯು ಈ ಪ್ರಯತ್ನದಲ್ಲಿ ಅಸಫಲಳಾಗುತ್ತಾಳೆ. ಇಲ್ಲಿಗೆ ಮೂವರ ಬುದ್ಧಿಮಟ್ಟ ಎಷ್ಟಿದೆ ಎನ್ನುವುದು ಸೋಶಿಯಲ್​ ಮೀಡಿಯಾದಲ್ಲಿ ಸಾಬೀತಾಗುತ್ತದೆ.

ಈ ವಿಡಿಯೋ ನೋಡಿದ ನೆಟ್ಟಿಗರು ಈ ಮೂವರಿಗೆ ದೇವರು ಮೆದುಳು ಕೊಟ್ಟೇ ಇಲ್ವ ಅಂತ ಪ್ರಶ್ನೆ ಮಾಡಿದ್ದಾರೆ. ಇನ್ನೂ ಕೆಲವರು ವಾಟ್ಸಾಪ್​ನಿಂದ ಜ್ಞಾನ ಸಂಪಾದಿಸಿಕೊಂಡು ಮಾತನಾಡುವವರ ಮಾತುಗಳು ಇದೇ ರೀತಿ ಇರುತ್ತವೆ. ಅದಕ್ಕೆ ಯಾವುದೇ ಲಾಜಿಕ್​ ಇರುವುದಿಲ್ಲ ಅಂತಾ ವ್ಯಂಗ್ಯವಾಡಿದ್ದಾರೆ. ಸದ್ಯ ಸೋಶಿಯಲ್​ ಮೀಡಿಯಾದಲ್ಲಿ ಈ ವಿಡಿಯೋ ವೈರಲ್​ ಆಗುತ್ತಿದ್ದು ಸಾಕಷ್ಟು ಲೈಕ್ಸ್​, ಕಮೆಂಟ್ಸ್​ಗಳನ್ನು ಸಂಪಾದಿಸಿದೆ.