Soft Gulab Jamun Recipe: ಬಿರುಕು ಇಲ್ಲದ, ಕರಕಲಾಗದ ಜಾಮೂನು ತಯಾರಿಸಿ ನಿಮ್ಮವರನ್ನು ಇಂಪ್ರೆಸ್‌ ಮಾಡೋದು ಹೇಗೆ..?
ಕನ್ನಡ ಸುದ್ದಿ  /  ಜೀವನಶೈಲಿ  /  Soft Gulab Jamun Recipe: ಬಿರುಕು ಇಲ್ಲದ, ಕರಕಲಾಗದ ಜಾಮೂನು ತಯಾರಿಸಿ ನಿಮ್ಮವರನ್ನು ಇಂಪ್ರೆಸ್‌ ಮಾಡೋದು ಹೇಗೆ..?

Soft Gulab Jamun Recipe: ಬಿರುಕು ಇಲ್ಲದ, ಕರಕಲಾಗದ ಜಾಮೂನು ತಯಾರಿಸಿ ನಿಮ್ಮವರನ್ನು ಇಂಪ್ರೆಸ್‌ ಮಾಡೋದು ಹೇಗೆ..?

ಕೆಲವೊಮ್ಮೆ ಜಾಮೂನ್‌ ತಳ ಹಿಡಿದು ಕಪ್ಪಾಗುತ್ತದೆ, ಕೆಲವೊಮ್ಮೆ ಬಿರುಕುಗಳು ಕಾಣುತ್ತವೆ, ಇನ್ನೂ ಕೆಲವೊಮ್ಮೆ ಸರಿಯಾಗಿ ಕುಕ್‌ ಆಗಿರೊಲ್ಲ. ಆದರೆ ಜಾಮೂನ್‌ ಪ್ಯಾಕೆಟ್‌ ಮೇಲೆ ತೋರಿಸಿರುವಂತೆ ನಮಗೆ ಏಕೆ ತಯಾರಿಸೋಕೆ ಆಗೊಲ್ಲ ಅನ್ನೋದೆ ಎಲ್ಲರ ಕಂಪ್ಲೇಂಟ್‌.

ಮೃದುವಾದ ಜಾಮೂನ್‌ ತಯಾರಿಸುವ ಸೀಕ್ರೇಟ್
ಮೃದುವಾದ ಜಾಮೂನ್‌ ತಯಾರಿಸುವ ಸೀಕ್ರೇಟ್ (‌PC: Freepik)

ಮನೆಗೆ ಯಾರಾದರೂ ಗೆಸ್ಟ್‌ ಬರ್ತಿದ್ದಾರೆ ಅಂದರೆ ಅಥವಾ ಯಾವುದಾದ್ರೂ ವಿಶೇಷ ಸಂದರ್ಭಗಳಲ್ಲಿ ನಾವೆಲ್ಲರೂ ಸಿಹಿ ತಯಾರಿಸುತ್ತೇವೆ. ಆದರೆ ತಯಾರಿಸಿದ ಆ ಅಡುಗೆ ಸರಿಯಾಗದಿದ್ದಲ್ಲಿ ಮನಸ್ಸಿಗೆ ಬೇಸರವಾಗೋದು ಗ್ಯಾರಂಟಿ. ಗುಲಾಬ್ ಜಾಮೂನ್‌ ವಿಚಾರದಲ್ಲೂ ಹೀಗೆ ಆಗೋದು ಸಾಮಾನ್ಯ.

ಕೆಲವರು ಜಾಮೂನ್‌ ಮಾಡಿದರೆ ಕೆಲವೊಮ್ಮೆ ಕಪ್ಪಾಗುತ್ತದೆ, ಕೆಲವೊಮ್ಮೆ ಬಿರುಕುಗಳು ಕಾಣುತ್ತವೆ, ಇನ್ನೂ ಕೆಲವೊಮ್ಮೆ ಸರಿಯಾಗಿ ಕುಕ್‌ ಆಗಿರೊಲ್ಲ. ಆದರೆ ಜಾಮೂನ್‌ ಪ್ಯಾಕೆಟ್‌ ಮೇಲೆ ತೋರಿಸಿರುವಂತೆ ನಮಗೆ ಏಕೆ ತಯಾರಿಸೋಕೆ ಆಗೊಲ್ಲ ಅನ್ನೋದೆ ಎಲ್ಲರ ಕಂಪ್ಲೇಂಟ್‌. ನೀವು ಕೆಲವೊಂದು ಟಿಪ್ಸ್‌ ಫಾಲೋ ಮಾಡಿದರೆ ಖಂಡಿತ ರುಚಿಯಾದ, ಮೃದುವಾದ ಜಾಮೂನ್‌ಗಳನ್ನು ತಯಾರಿಸಿ ನೀವು ಮನೆಗೆ ಬಂದವರನ್ನು ಇಂಪ್ರೆಸ್‌ ಮಾಡಬಹುದು. ಹಾಗೇ ಈ ಜಾಮೂನ್‌ ತಯಾರಿಸಲು ಜಾಮೂನ್‌ ಪೌಡರ್‌ ಬೇಕು ಎಂದೇನಿಲ್ಲ.

ಬೇಕಾಗುವ ಸಾಮಗ್ರಿಗಳು

ಖೋವಾ - 250 ಗ್ರಾಂ

ಮಲಾಯ್‌ ಪನೀರ್‌ - 50 ಗ್ರಾಂ

ಮೈದಾ ಹಿಟ್ಟು - 4 ಟೇಬಲ್‌ ಸ್ಪೂನ್‌

ಸಕ್ಕರೆ - 4 ಕಪ್‌

ಏಲಕ್ಕಿ - 2

ಕೇಸರಿ ದಳ - ಚಿಟಿಕೆ

ರೋಸ್‌ ವಾಟರ್‌- 1 ಟೇಬಲ್‌ ಸ್ಪೂನ್‌

ಬೇಕಿಂಗ್‌ ಪೌಡರ್‌ - 1 ಟೀ ಸ್ಪೂನ್‌

ಎಣ್ಣೆ - ಕರಿಯಲು

ತಯಾರಿಸುವ ವಿಧಾನ

ಒಂದು ಪಾತ್ರೆಗೆ ಸಕ್ಕರೆ ಸೇರಿಸಿ, ಅದನ್ನು ಅಳತೆ ಮಾಡಿಕೊಂಡ ಲೋಟದಲ್ಲೇ 3 ಕಪ್‌ ನೀರು ಸೇರಿಸಿ ಮಿಕ್ಸ್‌ ಮಾಡಿ.

ಸ್ಟೋವ್‌ ಮೇಲಿಟ್ಟು ಮಧ್ಯಮ ಉರಿಯಲ್ಲಿ ಮಧ್ಯೆ ಮಧ್ಯೆ ತಿರುವಿ, ಇದರೊಂದಿಗೆ 2 ಕ್ರಷ್‌ ಮಾಡಿದ ಏಲಕ್ಕಿ, ಕೇಸರಿ ದಳ, ರೋಸ್‌ ವಾಟರ್‌ ಸೇರಿಸಿ ಪಾಕ ಮಾಡಿ ಸ್ಟೋವ್‌ ಆಫ್‌ ಮಾಡಿ.

ಅಗಲವಾದ ತಟ್ಟೆಯಲ್ಲಿ ಖೋವಾ ಸೇರಿಸಿ, ಸಣ್ಣ ಸಣ್ಣ ಭಾಗ ಮಾಡಿಕೊಂಡು ಕೈಗಳಿಂದ ಚೆನ್ನಾಗಿ ನಾದಿಕೊಳ್ಳಿ.

ಪನೀರನ್ನು ತುರಿದುಕೊಂಡು ಅದನ್ನು ಕೂಡಾ ನಾದಿಕೊಂಡು, ಖೋವಾ ಹಾಗೂ ಪನೀರ್‌ ಎರಡನ್ನೂ ಮಿಕ್ಸ್‌ ಮಾಡಿ

ಈ ಮಿಶ್ರಣಕ್ಕೆ‌ ಸ್ವಲ್ಪ ಸ್ವಲ್ಪವೇ ಮೈದಾ ಸೇರಿಸಿ ಮಿಕ್ಸ್‌ ಮಾಡಿ ಮತ್ತೆ ಗಂಟುಗಳು ಇಲ್ಲದಂತೆ ನಾದಿಕೊಳ್ಳಿ.

ಇದಕ್ಕೆ ಬೇಕಿಂಗ್‌ ಪೌಡರ್‌ ಸೇರಿಸಿ ಎಲ್ಲವೂ ಹೊಂದಿಕೊಳ್ಳುವಂತೆ ಮಿಕ್ಸ್‌ ಮಾಡಿ ಒಂದು ಪ್ಲಾಸ್ಟಿಕ್‌ ಕವರ್‌ನಿಂದ ಸುತ್ತಿ 15 ನಿಮಿಷ ಬಿಡಿ

ನಂತರ ಮತ್ತೊಮ್ಮೆ ಮೃದುವಾಗಿ ನಾದಿಕೊಂಡು ಈ ಹಿಟ್ಟಿನಿಂದ ಸಣ್ಣ ಸಣ್ಣ ಭಾಗಗಳನ್ನು ತೆಗೆದುಕೊಂಡು ಎರಡೂ ಕೈಗಳ ಮಧ್ಯೆ ನಾದಿಕೊಳ್ಳುತ್ತಾ, ಉಂಡೆಗಳನ್ನು ಮಾಡಿಕೊಳ್ಳಿ.

ಹಿಟ್ಟನ್ನು ಉಂಡೆ ಮಾಡಿಕೊಳ್ಳುವಾಗ ಉಳಿದ ಹಿಟ್ಟಿನ ಮಿಶ್ರಣದ ಮೇಲೆ ಒದ್ದೆ ಬಟ್ಟೆ ( ನೀರು ಸೋರದ ಬಟ್ಟೆ) ಮುಚ್ಚಿ. ಇಲ್ಲವಾದರೆ ಹಿಟ್ಟು ಬಿರುಕು ಬಿಡುವ ಸಾಧ್ಯತೆ ಇದೆ.

ಜಾಮೂನ್‌ಗಳನ್ನು ಬಿಸಿ ಎಣ್ಣೆಯಲ್ಲಿ ಕಡಿಮೆ ಉರಿಯಲ್ಲಿ ಕಂದು ಬಣ್ಣ ಬರುವರೆಗೂ ಫ್ರೈ ಮಾಡಿ.

ಜಾಮೂನ್‌ ಫ್ರೈ ಆಗುವರೆಗೂ ಸ್ಪಾಚುಲಾ ಸಹಾಯದಿಂದ ಎಣ್ಣೆಯನ್ನು ನಿಧಾನವಾಗಿ ತಿರುವುತ್ತಿರಿ. ಹೀಗೆ ಮಾಡುವುದರಿಂದ ಜಾಮೂನು ಸುತ್ತಲೂ ಚೆನ್ನಾಗಿ ಕುಕ್‌ ಆಗುತ್ತೆ.

ಕಂದು ಬಣ್ಣ ಬಂದ ನಂತರ ಜಾಮೂನುಗಳನ್ನು ಪಾಕದಲ್ಲಿ ಹಾಕಿ, 3-4 ಗಂಟೆಗಳ ಕಾಲ ಬಿಟ್ಟು ತಿನ್ನಿ.

ಗಮನಿಸಿ: ಪಾಕವನ್ನು ಬಹಳ ಗಟ್ಟಿ ಮಾಡಿಕೊಳ್ಳಬೇಡಿ

ಮೈದಾ ಹಿಟ್ಟನ್ನು ಹೆಚ್ಚಾಗಿ ಸೇರಿಸಬೇಡಿ, ಇದರಿಂದ ಜಾಮೂನ್‌ ಗಟ್ಟಿಯಾಗುತ್ತದೆ.

ಕರಿದ ಜಾಮೂನ್‌ಗಳನ್ನು ಪಾಕಕ್ಕೆ ಸೇರಿಸುವಾಗಿ ಪಾಕ ಅತಿ ಬಿಸಿಯಾಗಿಯೂ ಇರಬಾದರು, ತಣ್ಣಗೂ ಆಗಿರಬಾರದು.

ಒಂದು ವೇಳೆ ಜಾಮೂನ್‌ ತಯಾರಿಸುವಷ್ಟರಲ್ಲಿ ಹಿಟ್ಟು ಗಟ್ಟಿಯಾದರೆ, ಒಂದೆರಡು ಸ್ಪೂನ್‌ ಹಾಲು ಸೇರಿಸಿ ಮಿಕ್ಸ್‌ ಮಾಡಿ ಉಂಡೆಗಳನ್ನು ತಯಾರಿಸಿಕೊಳ್ಳಿ. ಏಕೆಂದರೆ ಮೃದುವಾದ ಜಾಮೂನ್‌ ಮಾಡಲು ಹಿಟ್ಟಿನಲ್ಲಿ ಸ್ವಲ್ಪವಾದರೂ ತೇವಾಂಶ ಇರಬೇಕು.

Whats_app_banner