Weight Loss Drinks: ತೂಕ ಹೆಚ್ಚಳದ ಚಿಂತೆ ಕಾಡುತ್ತಿದ್ದರೆ, ಇಲ್ಲಿದೆ ಪರಿಹಾರ; ತೂಕ ಇಳಿಕೆಗೂ ಆರೋಗ್ಯಕ್ಕೂ ಈ ಪಾನೀಯಗಳೇ ಬೆಸ್ಟ್‌
ಕನ್ನಡ ಸುದ್ದಿ  /  ಜೀವನಶೈಲಿ  /  Weight Loss Drinks: ತೂಕ ಹೆಚ್ಚಳದ ಚಿಂತೆ ಕಾಡುತ್ತಿದ್ದರೆ, ಇಲ್ಲಿದೆ ಪರಿಹಾರ; ತೂಕ ಇಳಿಕೆಗೂ ಆರೋಗ್ಯಕ್ಕೂ ಈ ಪಾನೀಯಗಳೇ ಬೆಸ್ಟ್‌

Weight Loss Drinks: ತೂಕ ಹೆಚ್ಚಳದ ಚಿಂತೆ ಕಾಡುತ್ತಿದ್ದರೆ, ಇಲ್ಲಿದೆ ಪರಿಹಾರ; ತೂಕ ಇಳಿಕೆಗೂ ಆರೋಗ್ಯಕ್ಕೂ ಈ ಪಾನೀಯಗಳೇ ಬೆಸ್ಟ್‌

Weight loss drinks: ಇತ್ತೀಚೆಗೆ ಹಲವರನ್ನು ಕಾಡುತ್ತಿರುವ ಸಮಸ್ಯೆಗಳಲ್ಲಿ ತೂಕ ಹೆಚ್ಚಳ ಪ್ರಮುಖ ಸ್ಥಾನದಲ್ಲಿದೆ. ಅಸಮರ್ಪಕ ಜೀವನಶೈಲಿಯ ಕಾರಣದಿಂದ ತೂಕ ಹೆಚ್ಚಳವಾಗುವುದು ಸಾಮಾನ್ಯವಾಗಿದೆ. ತೂಕ ಇಳಿಸಿಕೊಳ್ಳಲು ಇಲ್ಲದ ಸರ್ಕಸ್‌ ಮಾಡುವ ಬದಲು ಈ ಪಾನೀಯಗಳನ್ನು ಮನೆಯಲ್ಲಿ ತಯಾರಿಸಿ ಕುಡಿಯಿರಿ. ಇವು ತೂಕ ಇಳಿಕೆಗೂ ಆರೋಗ್ಯಕ್ಕೂ ಬೆಸ್ಟ್‌.

ತೂಕ ಇಳಿಕೆಗೆ ನೆರವಾಗುವ ಪಾನೀಯಗಳು
ತೂಕ ಇಳಿಕೆಗೆ ನೆರವಾಗುವ ಪಾನೀಯಗಳು

ಮಳೆಗಾಲ, ಬೇಸಿಗೆಕಾಲ, ಚಳಿಗಾಲ ಯಾವುದೇ ಆಗಿರಲಿ ತೂಕ ಇಳಿಸಿಕೊಳ್ಳುವುದು ನಿಜಕ್ಕೂ ಸವಾಲು. ಇತ್ತೀಚಿನ ಜೀವನಶೈಲಿಯಲ್ಲಿ ತೂಕ ಹೆಚ್ಚಳವಾಗುವುದು ಒಂದು ಪ್ರಮುಖ ಸಮಸ್ಯೆಯಾಗಿದೆ. ಮಿಲೇನಿಯಲ್‌ ಜಮಾನದ ಮಂದಿ ತೂಕ ಹೆಚ್ಚಳದಿಂದ ಬೇಸತ್ತಿರುವುದು ಅವರ ಮಾತಿನಲ್ಲೇ ಕಾಣಬಹುದು. ಹಾಗಂತ ತೂಕ ಇಳಿಸುವುದು ಕೂಡ ಸುಲಭವಲ್ಲ.

ಬೇಸಿಗೆಯಲ್ಲಿ ಈ ಕೆಲವು ಪಾನೀಯಗಳನ್ನು ಕುಡಿಯುವುದರಿಂದ ಜೀರ್ಣಕ್ರಿಯೆಯ ಮಟ್ಟ ಸುಧಾರಿಸುತ್ತದೆ. ಜೊತೆಗೆ ತೂಕ ಇಳಿಕೆಗೂ ಸಹಕಾರಿ. ಶುಂಠಿ, ದಾಲ್ಚಿನ್ನಿ, ಜೀರಿಗೆ, ನಿಂಬೆರಸವನ್ನು ಸೇರಿಸಿ ತಯಾರಿಸುವ ಈ ಪಾನೀಯಗಳು ಆರೋಗ್ಯಕ್ಕೂ ಉತ್ತಮ. ವೈರಸ್‌ಗಳ ಸೋಂಕು ತಡೆಯಲು ಇವು ಸಹಕಾರಿ. ಅಲ್ಲದೆ ದೇಹದಲ್ಲಿ ಕೊಬ್ಬಿನಾಂಶವನ್ನೂ ನಿವಾರಿಸುತ್ತವೆ. ತೂಕ ಇಳಿಕೆಗೆ ನೆರವಾಗುವ ಕೆಲವು ಪಾನೀಯಗಳು ಹೀಗಿವೆ.

ನಿಂಬೆ ಶುಂಠಿ ಪಾನೀಯ

ಬೇಕಾಗುವ ಸಾಮಗ್ರಿಗಳು: ನೀರು - 2 ಗ್ಲಾಸ್‌, ನಿಂಬೆರಸ - 2 ನಿಂಬೆಹಣ್ಣಿನದ್ದು, ಶುಂಠಿ - ಸಿಪ್ಪೆ ತೆಗೆದು ತುರಿದುಕೊಂಡಿದ್ದು - ಅರ್ಧ ಚಮಚ, ಜೇನುತುಪ್ಪ - 1 ಚಮಚ.

ತಯಾರಿಸುವ ವಿಧಾನ: ಒಂದು ಪಾತ್ರೆಗೆ ನೀರು ಸೇರಿಸಿ, ನಿಂಬೆಹಣ್ಣಿನಿಂದ ರಸ ಹಿಂಡಿ ಬದಿಗಿರಿಸಿಕೊಳ್ಳಿ. ನಿಂಬೆಹಣ್ಣಿನ ಸಿಪ್ಪೆಯನ್ನು ಕತ್ತರಿಸಿಕೊಳ್ಳಿ. ಈಗ ನೀರಿಗೆ ಅರ್ಧ ಚಮಚ ಕಾಳುಮೆಣಸಿನ ಪುಡಿ ಹಾಗೂ ಶುಂಠಿ ಸೇರಿಸಿ, 5 ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಕುದಿಸಿ. ಇದಕ್ಕೆ ನಿಂಬೆಹಣ್ಣಿನ ಸಿಪ್ಪೆ ಸೇರಿಸಿ, ಚೆನ್ನಾಗಿ ಕುದಿಸಿ. ಈ ನೀರು ಸ್ಪಲ್ಪ ತಣ್ಣದಾಗ ಮೇಲೆ ಸೋಸಿಕೊಳ್ಳಿ. ಈಗ ಸೋಸಿಕೊಂಡ ನೀರನ್ನು ಒಂದು ದೊಡ್ಡ ಲೋಟ ನೀರಿಗೆ ಸ್ವಲ್ಪ ಸೇರಿಸಿ. ಅದಕ್ಕೆ ಜೇನುತುಪ್ಪ ಹಾಗೂ ನಿಂಬೆರಸ ಸೇರಿಸಿ ಚೆನ್ನಾಗಿ ಕಲೆಸಿ. ಈ ನೀರನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು.

ಜೀರಿಗೆ ದಾಲ್ಚಿನ್ನಿ ಪಾನೀಯ

ಬೇಕಾಗುವ ಸಾಮಗ್ರಿಗಳು: ನೀರು - 2 ಕಪ್‌, ಜೀರಿಗೆ - 3 ಚಮಚ, ದಾಲ್ಚಿನ್ನಿ - 1 ತುಂಡು, ಜೇನುತುಪ್ಪ - 1 ಚಮಚ, ನಿಂಬೆರಸ - 1 ಚಮಚ

ತಯಾರಿಸುವ ವಿಧಾನ: ಅಗಲ ಪಾತ್ರೆಯಲ್ಲಿ ನೀರು ಕುಡಿಯಲು ಇಟ್ಟು ಅದಕ್ಕೆ ದಾಲ್ಚಿನ್ನಿ ಹಾಗೂ ಜೀರಿಗೆ ಸೇರಿಸಿ ಚೆನ್ನಾಗಿ ಕುದಿಸಿ. ಜೀರಿಗೆ ಹಾಗೂ ದಾಲ್ಚಿನ್ನಿ ಘಮ ಹರಡುವವರೆಗೂ ಕುದಿಸಬೇಕು. ನಂತರ ಸೋಸಿ. ಈ ನೀರನ್ನು ಒಂದು ದೊಡ್ಡ ಲೋಟ ನೀರಿಗೆ ಮಿಶ್ರಣ ಮಾಡಿ. ಅದಕ್ಕೆ ಮೇಲಿನಂತೆ ನಿಂಬೆರಸ ಹಾಗೂ ಜೇನುತುಪ್ಪ ಸೇರಿಸಿ. ಈ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ.

ಚಿಯಾ ಬೀಜ ಹಾಗೂ ನಿಂಬೆರಸ

ಬೇಕಾಗುವ ಸಾಮಗ್ರಿಗಳು: ಚಿಯಾಬೀಜ - 2 ಚಮಚ, ನೀರು - 2ಕಪ್‌, ಜೇನುತುಪ್ಪ - 1 ಚಮಚ, ನಿಂಬೆರಸ

ತಯಾರಿಸುವ ವಿಧಾನ: 2 ಚಮಚ ಚಿಯಾ ಬೀಜವನ್ನು 10 ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿ ಇಡಬೇಕು. ಅದಕ್ಕೆ 1 ಕಪ್‌ ನೀರು, ನಿಂಬೆರಸ ಹಾಗೂ ಜೇನುತುಪ್ಪ ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ಈ ನೀರನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ಇದು ತೂಕ ಇಳಿಕೆಗೆ ತುಂಬಾನೇ ಸಹಕಾರಿ.

ದಾಲ್ಚಿನ್ನಿ ಎಲೆ, ಕಾಮಕಸ್ತೂರಿ ಬೀಜ

ಬೇಕಾಗುವ ಸಾಮಗ್ರಿಗಳು: ನೀರು- 2 ಗ್ಲಾಸ್‌, ದಾಲ್ಚಿನ್ನಿ ಎಲೆ - 1, ಕಾಮಕಸ್ತೂರಿ ಬೀಜ - 1 ಚಮಚ, ನಿಂಬೆರಸ- ಅರ್ಧ ನಿಂಬೆಹಣ್ಣಿನದ್ದು, ಜೇನುತುಪ್ಪು - 1 ಚಮಚ

ತಯಾರಿಸುವ ವಿಧಾನ: ನೀರಿಗೆ ದಾಲ್ಚಿನ್ನಿ ಎಲೆಯನ್ನು ಸೇರಿಸಿ ಚೆನ್ನಾಗಿ ಕುದಿಸಿ. ಕಾಮಕಸ್ತೂರಿಬೀಜವನ್ನು ಸ್ವಲ್ಪ ನೀರಿನಲ್ಲಿ ಹಾಕಿ 10 ನಿಮಿಷಗಳ ಕಾಲ ನೆನೆಸಿಟ್ಟುಕೊಳ್ಳಿ. ಈ ಅದಕ್ಕೆ ಕುದಿಸಿದ ನೀರು, ನಿಂಬೆರಸ ಹಾಗೂ ಜೇನುತುಪ್ಪ ಸೇರಿಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುದಿಯಿರಿ. ಇದನ್ನು ಕುಡಿದು ಅರ್ಧ ಗಂಟೆಯ ನಂತರ ಉಪಾಹಾರ ಸೇವಿಸಿ.

ಈ ಪಾನೀಯಗಳನ್ನು ತಪ್ಪದೇ ಪ್ರತಿದಿನ ಕುಡಿಯುವುದರಿಂದ ಉತ್ತಮ ಫಲಿತಾಂಶ ನಿರೀಕ್ಷಿಸಬಹುದು.

Whats_app_banner