Special Days in August: ಸ್ವಾತಂತ್ರ್ಯ ದಿನ, ಸ್ನೇಹಿತರ ದಿನ, ರಕ್ಷಾಬಂಧನ; ಆಗಸ್ಟ್ ತಿಂಗಳಲ್ಲಿ ಬರುವ ವಿಶೇಷ ದಿನಗಳ ಪಟ್ಟಿ ಇಲ್ಲಿದೆ
ಆಗಸ್ಟ್ ತಿಂಗಳು ಎಂದಾಕ್ಷಣ ನೆನಪಾಗುವುದು ಸ್ವಾತಂತ್ರ್ಯ ದಿನ. ಆಗಸ್ಟ್ 15 ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ದಿನ. ಆದರೆ ಈ ವರ್ಷ ಆಗಸ್ಟ್‌ನಲ್ಲಿ ಸ್ವಾತಂತ್ರ್ಯ ದಿನ ಮಾತ್ರವಲ್ಲ ಸ್ನೇಹಿತರ ದಿನ, ರಕ್ಷಾಬಂಧನ, ಅಂತರರಾಷ್ಟ್ರೀಯ ಯುವದಿನ, ವಿಶ್ವ ಫೋಟೊಗ್ರಫಿ ದಿನ ಸೇರಿದಂತೆ ಹಲವು ವಿಶೇಷಗಳಿವೆ. 2024ರ ಆಗಸ್ಟ್‌ನಲ್ಲಿ ಏನೆಲ್ಲಾ ವಿಶೇಷಗಳಿವೆ ಎಂಬುದರ ಪಟ್ಟಿ ಇಲ್ಲಿದೆ.
Important Days and Dates in August 2024: ಪ್ರತಿ ತಿಂಗಳಿನಲ್ಲೂ ಹಲವು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ವಿಶೇಷ ದಿನಗಳಿರುತ್ತವೆ. ಆಗಸ್ಟ್ ಭಾರತೀಯರಿಗೆ ವಿಶೇಷ ತಿಂಗಳು. ಯಾಕೆಂದರೆ ಇದು ನಮಗೆ ಸ್ವಾತಂತ್ರ್ಯ ಸಿಕ್ಕ ತಿಂಗಳು. ಯಾವುದೇ ಮಹತ್ವದ ಘಟನೆ ನಡೆದ ದಿನವನ್ನು ಸ್ಮರಿಸಲು ಆ ದಿನವನ್ನು ವಿಶೇಷ ದಿನವನ್ನಾಗಿ ಪ್ರತಿವರ್ಷವೂ ಸ್ಮರಿಸಲಾಗುತ್ತದೆ. ಈ ವರ್ಷ ಆಗಸ್ಟ್ ತಿಂಗಳಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಜೊತೆಗೆ ಸ್ನೇಹಿತರ ದಿನ, ರಕ್ಷಾಬಂಧನ ಸೇರಿದಂತೆ ಹಲವು ವಿಶೇಷಗಳು ಬರುತ್ತವೆ. ಹಾಗಾದರೆ ಈ ವರ್ಷದ ಆಗಸ್ಟ್ ತಿಂಗಳಲ್ಲಿ ಏನೆಲ್ಲಾ ದಿನಗಳಿವೆ ಎಂಬುದರ ಪಟ್ಟಿ ಇಲ್ಲಿದೆ.
2024ರ ಆಗಸ್ಟ್ ತಿಂಗಳಲ್ಲಿ ಬರುವ ವಿಶೇಷ ದಿನಗಳಿವು
1. ವರ್ಲ್ ವೈಡ್ ವೆಬ್ ಡೇ (ಆಗಸ್ಟ್ 1)
2. ವಿಶ್ವ ಶ್ವಾಸಕೋಶದ ಕ್ಯಾನ್ಸರ್ ದಿನ (ಆಗಸ್ಟ್ 1)
3. ಸ್ತನ್ಯಪಾನ ಸಪ್ತಾಹ (ಆಗಸ್ಟ್ 1ರಿಂದ 7)
4. ಸ್ನೇಹಿತರ ದಿನ (ಆಗಸ್ಟ್ 4)
5. ಹಿರೋಶಿಮಾ ಡೇ (ಆಗಸ್ಟ್ 6)
6. ರಾಷ್ಟ್ರೀಯ ಕೈಮಗ್ಗ ದಿನ (ಆಗಸ್ಟ್ 7)
7. ಕ್ವಿಟ್ ಇಂಡಿಯಾ ಚಳುವಳಿ ದಿನ (ಆಗಸ್ಟ್ 9)
8. ನಾಗಸಾಕಿ ದಿನ (ಆಗಸ್ಟ್ 9)
9. ಅಂತರಾಷ್ಟ್ರೀಯ ಯುವ ದಿನ (ಆಗಸ್ಟ್ 12)
10. ವಿಶ್ವ ಆನೆ ದಿನ (ಆಗಸ್ಟ್ 12)
11. ಅಂತರಾಷ್ಟ್ರೀಯ ಎಡಗೈಯವರ ದಿನ (ಆಗಸ್ಟ್ 13)
12. ಸ್ವಾತಂತ್ರ್ಯ ದಿನ (ಆಗಸ್ಟ್ 15)
13. ರಕ್ಷಾ ಬಂಧನ (ಆಗಸ್ಟ್ 19)
14. ವಿಶ್ವ ಸಂಸ್ಕೃತ ದಿನ (ಆಗಸ್ಟ್ 19)
15. ವಿಶ್ವ ಛಾಯಾಗ್ರಹಣ ದಿನ(ಆಗಸ್ಟ್ 19)
16. ವಿಶ್ವ ಮಾನವೀಯ ದಿನ (ಆಗಸ್ಟ್ 19)
17. ವಿಶ್ವ ಸೊಳ್ಳೆ ದಿನ (ಆಗಸ್ಟ್ 20)
18. ಮಹಿಳಾ ಸಮಾನತೆಯ ದಿನ (ಆಗಸ್ಟ್ 26)
19. ಅಂತರಾಷ್ಟ್ರೀಯ ನಾಯಿ ದಿನ (ಆಗಸ್ಟ್ 26)
20. ರಾಷ್ಟ್ರೀಯ ಕ್ರೀಡಾ ದಿನ ಅಥವಾ ರಾಷ್ಟ್ರೀಯ ಖೇಲ್ ದಿವಸ್ (ಆಗಸ್ಟ್ 29)
21. ಪರಮಾಣು ಪರೀಕ್ಷೆಗಳ ವಿರುದ್ಧದ ಅಂತರಾಷ್ಟ್ರೀಯ ದಿನ (ಆಗಸ್ಟ್ 29)
22. ರಾಷ್ಟ್ರೀಯ ಸಣ್ಣ ಕೈಗಾರಿಕೆ ದಿನ (ಆಗಸ್ಟ್ 30)
ಆಗಸ್ಟ್ ತಿಂಗಳಲ್ಲಿ ಬರುವ ಪ್ರಮುಖ ವಿಶೇಷ ದಿನಗಳಿವು. ನೀವು ಯಾವ ದಿನವನ್ನು ಸಂಭ್ರಮದಿಂದ ಆಚರಿಸಬಹುದು ಎಂಬುದನ್ನು ಒಂದೇ ಗಮನಿಸಿಕೊಳ್ಳಿ. ಆ ವಿಶೇಷ ದಿನಕ್ಕೆ ಈಗಿನಿಂದಲೇ ಸಜ್ಜಾಗಿ.