Special Days in November: ಕನ್ನಡ ರಾಜ್ಯೋತ್ಸವ, ಮಕ್ಕಳ ದಿನಾಚರಣೆ, ವಿಶ್ವ ಮಧುಮೇಹ ದಿನ; ನವೆಂಬರ್ ತಿಂಗಳ ವಿಶೇಷ ದಿನಗಳ ಪಟ್ಟಿ ಇಲ್ಲಿದೆ
ಕನ್ನಡ ಸುದ್ದಿ  /  ಜೀವನಶೈಲಿ  /  Special Days In November: ಕನ್ನಡ ರಾಜ್ಯೋತ್ಸವ, ಮಕ್ಕಳ ದಿನಾಚರಣೆ, ವಿಶ್ವ ಮಧುಮೇಹ ದಿನ; ನವೆಂಬರ್ ತಿಂಗಳ ವಿಶೇಷ ದಿನಗಳ ಪಟ್ಟಿ ಇಲ್ಲಿದೆ

Special Days in November: ಕನ್ನಡ ರಾಜ್ಯೋತ್ಸವ, ಮಕ್ಕಳ ದಿನಾಚರಣೆ, ವಿಶ್ವ ಮಧುಮೇಹ ದಿನ; ನವೆಂಬರ್ ತಿಂಗಳ ವಿಶೇಷ ದಿನಗಳ ಪಟ್ಟಿ ಇಲ್ಲಿದೆ

ನವೆಂಬರ್ ತಿಂಗಳು ಎಂದರೆ ಚಳಿಗಾಲದ ಆರಂಭ. ಈ ತಿಂಗಳಲ್ಲಿ ಕರ್ನಾಟಕ ರಾಜ್ಯೋತ್ಸವದಿಂದ ಮಕ್ಕಳ ದಿನಾಚರಣೆವರೆಗೆ, ಮಧುಮೇಹ ದಿನದಿಂದ ಟೆಲಿವಿಷನ್ ದಿನದವರೆಗೆ ಹತ್ತು ಹಲವು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ವಿಶೇಷ ದಿನಗಳಿವೆ. ನವೆಂಬರ್‌ ವರ್ಷದ 11ನೇ ತಿಂಗಳಾಗಿದ್ದು, ಈ ತಿಂಗಳಿನಲ್ಲಿ 30 ದಿನಗಳಿರುತ್ತವೆ. ಈ ವರ್ಷ ನವೆಂಬರ್‌ ಬರುವ ವಿಶೇಷ ದಿನಗಳ ಪಟ್ಟಿ ಗಮನಿಸಿ.

ನವೆಂಬರ್ ತಿಂಗಳ ವಿಶೇಷ ದಿನಗಳ
ನವೆಂಬರ್ ತಿಂಗಳ ವಿಶೇಷ ದಿನಗಳ (PC: Canva)

ನವೆಂಬರ್ ತಿಂಗಳು ಎಂದರೆ ವರ್ಷದ 11ನೇ ತಿಂಗಳು. ಇನ್ನೆರಡು ತಿಂಗಳು ಕಳೆದರೆ 2024 ಮುಗಿದು ಹೋಗುತ್ತದೆ. ಹಿಂದೂ ಕ್ಯಾಲೆಂಡರ್ ಪ್ರಕಾರ ಇದು ಕಾರ್ತಿಕ ಮಾಸ. ಹಿಂದೂ ಧರ್ಮದಲ್ಲಿ ಕಾರ್ತಿಕ ಮಾಸಕ್ಕೆ ವಿಶೇಷ ಪ್ರಾಮುಖ್ಯವಿದೆ. ಆ ಕಾರಣದಿಂದ ನವೆಂಬರ್ ತಿಂಗಳಿಗೆ ವಿಶೇಷ ಮಹತ್ವ ನೀಡಲಾಗುತ್ತದೆ.

ನವೆಂಬರ್ ತಿಂಗಳು ಕನ್ನಡಿಗರಿಗೆ ಬಹಳ ವಿಶೇಷ. ಯಾಕೆಂದರೆ ನವೆಂಬರ್ 1 ಕರ್ನಾಟಕ ರಾಜ್ಯ ಉದಯವಾದ ದಿನ. ನವೆಂಬರ್ 1 ಅನ್ನು ಕನ್ನಡ ರಾಜ್ಯೋತ್ಸವ ಎಂದು ಅದ್ಧೂರಿಯಿಂದ ಆಚರಿಸಲಾಗುತ್ತದೆ. ನವೆಂಬರ್ 14 ಮಕ್ಕಳ ದಿನಾಚರಣೆ. ಇಷ್ಟೇ ಅಲ್ಲದೇ ನವೆಂಬರ್ ತಿಂಗಳಲ್ಲಿ ಹತ್ತು, ಹಲವು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ವಿಶೇಷ ದಿನಗಳಿವೆ. ನವೆಂಬರ್‌ನಲ್ಲಿ ಬರುವ ವಿಶೇಷ ದಿನಗಳ ಪಟ್ಟಿ ಇಲ್ಲಿದೆ ನೋಡಿ.

ನವೆಂಬರ್ 1: ಕನ್ನಡ ರಾಜ್ಯೋತ್ಸವ, ವಿಶ್ವ ಸಸ್ಯಹಾರಿ ದಿನ, ಹರಿಯಾಣ ದಿನ

ನವೆಂಬರ್ 3: ವಿಶ್ವ ಜೆಲ್ಲಿ ಫಿಶ್ ದಿನ, ವಿಶ್ವ ಸ್ಯಾಂಡ್‌ವಿಚ್‌ ದಿನ,

ನವೆಂಬರ್ 5: ವಿಶ್ವ ಸುನಾಮಿ ಜಾಗೃತಿ ದಿನ

ನವೆಂಬರ್ 6: ಯುದ್ಧ ಮತ್ತು ಸಶಸ್ತ್ರ ಸಂಘರ್ಷದಲ್ಲಿ ಪರಿಸರದ ಶೋಷಣೆಯನ್ನು ತಡೆಗಟ್ಟುವ ಅಂತರರಾಷ್ಟ್ರೀಯ ದಿನ, ರಾಷ್ಟ್ರೀಯ ನ್ಯಾಚೋಸ್ ದಿನ

ನವೆಂಬರ್ 7: ಶಿಶು ಸಂರಕ್ಷಣಾ ದಿನ, ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನ

ನವೆಂಬರ್‌ 8: ಎಲ್‌ಕೆ ಅಡ್ವಾಣಿ ಹುಟ್ಟಿದ ದಿನ, ವಿಶ್ವ ರೇಡಿಯಾಗ್ರಫಿ ದಿನ

ನವೆಂಬರ್ 9: ರಾಷ್ಟ್ರೀಯ ಕಾನೂನು ಸೇವೆಗಳ ದಿನ, ಉತ್ತರಾಖಂಡ ಸಂಸ್ಥಾಪನಾ ದಿನ, ಕರ್ತಾರಪುರ ಕಾರಿಡಾರ್ ಉದ್ಘಾಟನೆ, ವಿಶ್ವ ಸ್ವಾತಂತ್ರ್ಯ ದಿನ

ನವೆಂಬರ್ 10: ಶಾಂತಿ ಮತ್ತು ಅಭಿವೃದ್ಧಿಗಾಗಿ ವಿಶ್ವ ವಿಜ್ಞಾನ ದಿನ, ವಿಶ್ವ ಸಾರ್ವಜನಿಕ ಸಾರಿಗೆ ದಿನ, ವಿಶ್ವ ರೋಗನಿರೋಧಕ ದಿನ,

ನವೆಂಬರ್ 11: ರಾಷ್ಟ್ರೀಯ ಶಿಕ್ಷಣ ದಿನ

ನವೆಂಬರ್ 13: ವಿಶ್ವ ದಯಾ ದಿನ

ನವೆಂಬರ್ 14: ಮಕ್ಕಳ ದಿನಾಚರಣೆ, ಜವಹರಲಾಲ್ ನೆಹರೂ ಜನ್ಮದಿನ, ವಿಶ್ವ ಉಪಯುಕ್ತತೆ ದಿನ, ವಿಶ್ವ ಮಧುಮೇಹ ದಿನ

ನವೆಂಬರ್ 15: ಗುರುನಾನಕ್ ದೇವ್ ಅವರ ಜನ್ಮ ವಾರ್ಷಿಕೋತ್ಸವ, ಜಾರ್ಖಂಡ್ ಸಂಸ್ಥಾಪನಾ ದಿನ

ನವೆಂಬರ್ 16: ಸಹಿಷ್ಣುತೆಗಾಗಿ ಅಂತರಾಷ್ಟ್ರೀಯ ದಿನ, ರಾಷ್ಟ್ರೀಯ ಪತ್ರಿಕಾ ದಿನ

ನವೆಂಬರ್ 17: ಅಂತರಾಷ್ಟ್ರೀಯ ವಿದ್ಯಾರ್ಥಿಗಳ ದಿನ, ರಾಷ್ಟ್ರೀಯ ಅಪಸ್ಮಾರ ದಿನ

ನವೆಂಬರ್ 19: ಅಂತರರಾಷ್ಟ್ರೀಯ ಪುರುಷರ ದಿನ

ನವೆಂಬರ್ 20: ಸಾರ್ವತ್ರಿಕ ಮಕ್ಕಳ ದಿನ, ವಿಶ್ವ ದೀರ್ಘಕಾಲದ ಪ್ರತಿರೋಧಕ ಶ್ವಾಸಕೋಶದ ಕಾಯಿಲೆ ದಿನ ಅಥವಾ ವಿಶ್ವ COPD ದಿನ

ನವೆಂಬರ್ 21: ವಿಶ್ವ ದೂರದರ್ಶನ ದಿನ, ವಿಶ್ವ ಹಲೋ ದಿನ, ರಾಷ್ಟ್ರೀಯ ತತ್ವಶಾಸ್ತ್ರ ದಿನ

ನವೆಂಬರ್ 23: ರಾಷ್ಟ್ರೀಯ ಗೋಡಂಬಿ ದಿನ

ನವೆಂಬರ್ 25: ಮಹಿಳೆಯರ ಮೇಲಿನ ದೌರ್ಜನ್ಯ ನಿರ್ಮೂಲನೆಗಾಗಿ ಅಂತರಾಷ್ಟ್ರೀಯ ದಿನ

ನವೆಂಬರ್ 26: ರಾಷ್ಟ್ರೀಯ ಹಾಲು ದಿನ, ಭಾರತದ ಸಂವಿಧಾನ ದಿನ

ನವೆಂಬರ್ 28: ರೆಡ್ ಪ್ಲಾನೆಟ್ ಡೇ

ನವೆಂಬರ್ 29: ಅಂತರಾಷ್ಟ್ರೀಯ ಜಾಗ್ವಾರ್ ದಿನ

ನವೆಂಬರ್ 29: ಬ್ಲ್ಯಾಕ್ ಫ್ರೈಡೇ

Whats_app_banner