ಗಾಂಧಿ ಜಯಂತಿಯಿಂದ, ವಿಶ್ವ ಆಹಾರ ದಿನದವರೆಗೆ; ಅಕ್ಟೋಬರ್ ತಿಂಗಳಲ್ಲಿ ಬರುವ ವಿಶೇಷ ದಿನಗಳ ಪಟ್ಟಿ ಇಲ್ಲಿದೆ-special days in october 2024 here is the list of special days in the month of october smk ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಗಾಂಧಿ ಜಯಂತಿಯಿಂದ, ವಿಶ್ವ ಆಹಾರ ದಿನದವರೆಗೆ; ಅಕ್ಟೋಬರ್ ತಿಂಗಳಲ್ಲಿ ಬರುವ ವಿಶೇಷ ದಿನಗಳ ಪಟ್ಟಿ ಇಲ್ಲಿದೆ

ಗಾಂಧಿ ಜಯಂತಿಯಿಂದ, ವಿಶ್ವ ಆಹಾರ ದಿನದವರೆಗೆ; ಅಕ್ಟೋಬರ್ ತಿಂಗಳಲ್ಲಿ ಬರುವ ವಿಶೇಷ ದಿನಗಳ ಪಟ್ಟಿ ಇಲ್ಲಿದೆ

ಅಕ್ಟೋಬರ್ ತಿಂಗಳಲ್ಲಿ ಮುಖ್ಯವಾಗಿ ನವರಾತ್ರಿ ಆರಂಭವಾಗುತ್ತದೆ. ಒಂಭತ್ತು ದಿನಗಳ ಕಾಲ ಈ ಹಬ್ಬದ ಆಚರಣೆ ಇರುತ್ತದೆ. ಇದರ ಹೊರತಾಗಿಯೂ ಹಲವು ವಿಶೇಷ ದಿನಗಳು ಈ ತಿಂಗಳಿನಲ್ಲಿದೆ. ಅವುಗಳ ಪಟ್ಟಿಯನ್ನು ನಾವಿಲ್ಲಿ ನೀಡಿದ್ದೇವೆ ಗಮನಿಸಿ.

ಅಕ್ಟೋಬರ್ ತಿಂಗಳಲ್ಲಿ ಬರುವ ಸ್ಪೆಷಲ್‌ ಡೇಗಳ ಪಟ್ಟಿ ಇಲ್ಲಿದೆ
ಅಕ್ಟೋಬರ್ ತಿಂಗಳಲ್ಲಿ ಬರುವ ಸ್ಪೆಷಲ್‌ ಡೇಗಳ ಪಟ್ಟಿ ಇಲ್ಲಿದೆ

ಈ ವರ್ಷ ಅಕ್ಟೋಬರ್‌ನಲ್ಲಿ ಬರುವ ಪ್ರಮುಖ ದಿನಗಳ ಪಟ್ಟಿಯನ್ನು ನಾವು ನಿಮಗಿಲ್ಲಿ ನೀಡಿದ್ದೇವೆ. ಹಲವು ವಿಶೇಷ ದಿನಗಳನ್ನು ಹೊಂದಿರುವ ಈ ತಿಂಗಳಲ್ಲಿ ನೀವು ಏನೇನು ಮಾಡಬಹುದು ಯೋಚಿಸಿ. ಒಂಭತ್ತು ದಿನಗಳ ಕಾಲ ನವರಾತ್ರಿ ಆಚರಣೆ ಇದೆ. ಅಕ್ಟೋಬರ್ ವರ್ಷದ 10 ನೇ ತಿಂಗಳಾಗಿದ್ದು ಒಟ್ಟು 31 ದಿನಗಳನ್ನು ಹೊಂದಿದೆ. ಹಿರಿಯ ವ್ಯಕ್ತಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಎತ್ತಿಹಿಡಿಯಲು ಮತ್ತು ಈ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ತಿಂಗಳ ಮೊದಲನೇ ದಿನ ಅಕ್ಟೋಬರ್‌ 1ರಂದು ಅಂತರಾಷ್ಟ್ರೀಯ ಹಿರಿಯ ವ್ಯಕ್ತಿಗಳ ದಿನವನ್ನು ಆಚರಿಸಲಾಗುತ್ತದೆ.

ಅಕ್ಟೋಬರ್ 2 ಮಹಾತ್ಮ ಗಾಂಧೀಜಿಯವರ ಜನ್ಮದಿನ

ಮಹಾತ್ಮ ಗಾಂಧೀಜಿಯವರ ಜನ್ಮದಿನದ ಅಂಗವಾಗಿ ಪ್ರತಿ ವರ್ಷ ಅಕ್ಟೋಬರ್ 2 ರಂದು ಗಾಂಧಿ ಜಯಂತಿಯನ್ನು ಆಚರಿಸಲಾಗುತ್ತದೆ. ಅವರು ಗುಜರಾತ್‌ನ ಪೋರಬಂದರ್‌ನಲ್ಲಿ 2 ಅಕ್ಟೋಬರ್ 1869 ರಂದು ಜನಿಸಿದರು. ಅವರು ನೀಡಿದ ಕೊಡುಗೆಯನ್ನು ಸ್ಮರಿಸುವ ಸಲುವಾಗಿ ಈ ದಿನವನ್ನು ಆಚರಿಸಲಾಗುತ್ತದೆ. ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಕೂಡ ಇದೆ.

ಅಕ್ಟೋಬರ್ 3 ನವರಾತ್ರಿ ಆರಂಭ

ರಾಷ್ಟ್ರದ ಏಕೀಕರಣದ ವಾರ್ಷಿಕೋತ್ಸವವನ್ನು ಜರ್ಮನ್‌ನಲ್ಲಿ ಅಕ್ಟೋಬರ್ 3ರಂದು ಆಚರಿಸಲಾಗುತ್ತದೆ. ಆದರೆ ಭಾರತದಲ್ಲಿ ಈ ದಿನದಿಂದ ನವರಾತ್ರಿ ಆರಂಭವಾಗುತ್ತದೆ. ಚೈತ್ರ ನವರಾತ್ರಿ ಮತ್ತು ಶರದ್ ನವರಾತ್ರಿ ಎಂದು ಕರೆಯಲಾಗುವ ಹಬ್ಬದ ಆರಂಭವಾಗುತ್ತದೆ.

ಅಕ್ಟೋಬರ್ 4

ಪ್ರಾಣಿಗಳ ಹಕ್ಕುಗಳು ಮತ್ತು ಅವುಗಳ ಕಲ್ಯಾಣಕ್ಕಾಗಿ ವಿಶ್ವಾದ್ಯಂತ ಎನಿಮಲ್ ವೆಲ್‌ಪೇರ್ ಡೇ ಆಚರಣೆ ಮಾಡಲಾಗುತ್ತದೆ.

ಅಕ್ಟೋಬರ್ 5 - ವಿಶ್ವ ಶಿಕ್ಷಕರ ದಿನ ಆಚರಿಸಲಾಗುತ್ತದೆ.
ಅಕ್ಟೋಬರ್ 7 - ವಿಶ್ವ ಹತ್ತಿ ದಿನ
ಅಕ್ಟೋಬರ್ 8 - ಭಾರತೀಯ ವಾಯುಪಡೆ ದಿನ
ಅಕ್ಟೋಬರ್ 9 - ವಿಶ್ವ ಅಂಚೆ ದಿನ
ಅಕ್ಟೋಬರ್ 10 - ರಾಷ್ಟ್ರೀಯ ಅಂಚೆ ದಿನ
ಅಕ್ಟೋಬರ್ 10 - ವಿಶ್ವ ಮಾನಸಿಕ ಆರೋಗ್ಯ ದಿನ
ಅಕ್ಟೋಬರ್ 10 (ಅಕ್ಟೋಬರ್ ಎರಡನೇ ಗುರುವಾರ): ವಿಶ್ವ ದೃಷ್ಟಿ ದಿನ
ಅಕ್ಟೋಬರ್ 11 - ಹೆಣ್ಣು ಮಗುವಿನ ಅಂತರಾಷ್ಟ್ರೀಯ ದಿನ
11 ಅಕ್ಟೋಬರ್ - ದುರ್ಗಾ ಅಷ್ಟಮಿ
11 ಅಕ್ಟೋಬರ್ - ಮಹಾನವಮಿ
12 ಅಕ್ಟೋಬರ್ - ದಸರಾ
ಅಕ್ಟೋಬರ್ 13 - ವಿಪತ್ತು ಅಪಾಯ ಕಡಿತಕ್ಕಾಗಿ ಅಂತರಾಷ್ಟ್ರೀಯ ದಿನ
ಅಕ್ಟೋಬರ್ 13 - ಸ್ತನ ಕ್ಯಾನ್ಸರ್ ಜಾಗೃತಿ ದಿನ
ಅಕ್ಟೋಬರ್ 14 - ವಿಶ್ವ ಗುಣಮಟ್ಟ ದಿನ
15 ಅಕ್ಟೋಬರ್ - ಗರ್ಭಧಾರಣೆ ಮತ್ತು ಶಿಶುಗಳ ನಷ್ಟದ ನೆನಪಿನ ದಿನ
ಅಕ್ಟೋಬರ್ 15 - ಜಾಗತಿಕ ಕೈ ತೊಳೆಯುವ ದಿನ
ಅಕ್ಟೋಬರ್ 15 - ವಿಶ್ವ ಬಿಳಿ ಕಬ್ಬಿನ ದಿನ
ಅಕ್ಟೋಬರ್ 15 - ವಿಶ್ವ ವಿದ್ಯಾರ್ಥಿಗಳ ದಿನ
ಅಕ್ಟೋಬರ್ 16 - ವಿಶ್ವ ಆಹಾರ ದಿನ
ಅಕ್ಟೋಬರ್ 16: ವಿಶ್ವ ಅರಿವಳಿಕೆ ದಿನ
ಅಕ್ಟೋಬರ್ 16: ಬಾಸ್ ಡೇ

ಇದನ್ನೂ ಓದಿ: ಇಂದು ಅಂತರಾಷ್ಟ್ರೀಯ ಹಿರಿಯ ವ್ಯಕ್ತಿಗಳ ದಿನ; ನಿಮ್ಮ ಸುತ್ತಲಿನ ಹಿರಿಯರನ್ನು ಗೌರವಿಸಿ, ಅವರ ಅನುಭವವನ್ನು ಅಳವಡಿಸಿಕೊಳ್ಳಿ

ಅಕ್ಟೋಬರ್ 16: ವಿಶ್ವ ಬೆನ್ನುಹುರಿ ದಿನ
ಅಕ್ಟೋಬರ್ 17 - ಬಡತನ ನಿರ್ಮೂಲನೆಗಾಗಿ ಅಂತರಾಷ್ಟ್ರೀಯ ದಿನ
17 ಅಕ್ಟೋಬರ್ - ವಾಲ್ಮೀಕಿ ಜಯಂತಿ
ಅಕ್ಟೋಬರ್ 20 - ವಿಶ್ವ ಅಂಕಿಅಂಶ ದಿನ
ಅಕ್ಟೋಬರ್ 21 - ಪೊಲೀಸ್ ಸ್ಮರಣಾರ್ಥ ದಿನ
ಅಕ್ಟೋಬರ್ 23 - ಮೋಲ್ ಡೇ
ಅಕ್ಟೋಬರ್ 24 - ವಿಶ್ವಸಂಸ್ಥೆಯ ದಿನ
ಅಕ್ಟೋಬರ್ 24 - ವಿಶ್ವ ಅಭಿವೃದ್ಧಿ ಮಾಹಿತಿ ದಿನ
ಅಕ್ಟೋಬರ್ 28 - ಅಂತರಾಷ್ಟ್ರೀಯ ಅನಿಮೇಷನ್ ದಿನ
29 ಅಕ್ಟೋಬರ್ - ದೀಪಾವಳಿ ಆರಂಭ
ಅಕ್ಟೋಬರ್ 30 - ವಿಶ್ವ ಮಿತವ್ಯಯ ದಿನ
31 ಅಕ್ಟೋಬರ್ - ರಾಷ್ಟ್ರೀಯ ಏಕತಾ ದಿವಸ್ ಅಥವಾ ರಾಷ್ಟ್ರೀಯ ಏಕತಾ ದಿನ
31 ಅಕ್ಟೋಬರ್ - ಹ್ಯಾಲೋವೀನ್ ಡೇ

mysore-dasara_Entry_Point