Special Days in September: ಶಿಕ್ಷಕರ ದಿನ, ಗಣೇಶ ಚತುರ್ಥಿ, ಪ್ರವಾಸೋದ್ಯಮ ದಿನ; ಸೆಪ್ಟೆಂಬರ್ ತಿಂಗಳ ವಿಶೇಷ ದಿನಗಳ ಪಟ್ಟಿ
ಸೆಪ್ಟೆಂಬರ್ ತಿಂಗಳು ಎಂದರೆ ಕ್ಯಾಲೆಂಡರ್‌ನಲ್ಲಿ ಒಂಬತ್ತನೇ ತಿಂಗಳು. ಪ್ರತಿ ತಿಂಗಳಿನಂತೆ ಸೆಪ್ಟೆಂಬರ್‌ನಲ್ಲೂ ಹಲವು ರಾಷ್ಟ್ರೀಯ, ಅಂತರರಾಷ್ಟ್ರಿಯ ವಿಶೇಷ ದಿನಗಳಿರುತ್ತವೆ. ಈ ವರ್ಷ ಗಣೇಶ ಚತುರ್ಥಿ, ವಿಶ್ವ ಪ್ರವಾಸೋಧ್ಯಮ ದಿನ, ಓಣಂ, ಅನಂತ ಚತುದರ್ಶಿ ಸೇರಿದಂತೆ ಸೆಪ್ಟೆಂಬರ್ ತಿಂಗಳಲ್ಲಿ ಬರುವ ವಿಶೇಷ ದಿನಗಳು ಯಾವುವು ಎಂಬ ಪಟ್ಟಿ ಇಲ್ಲಿದೆ.
ಶಿಕ್ಷಕರ ದಿನಾಚರಣೆ, ಗಣೇಶ ಚತುರ್ಥಿಯಿಂದ ವಿಶ್ವ ಪ್ರವಾಸೋದ್ಯಮ ದಿನ, ಹೃದಯ ದಿನದವರೆಗೆ ಸೆಪ್ಟೆಂಬರ್ ತಿಂಗಳಲ್ಲಿ ಹತ್ತು ಹಲವು ವಿಶೇಷ ದಿನಗಳು ಬರುತ್ತವೆ. ಧಾರ್ಮಿಕ ಆಚರಣೆಗಳು ಹಾಗೂ ಸಾಮಾಜಿಕ ಆಚರಣೆಗಳು ಈ ತಿಂಗಳಲ್ಲಿ ಬರುತ್ತವೆ. ಕೇರಳದವರಿಗೆ ಬಹಳ ವಿಶೇಷ ಎನ್ನಿಸುವ ಹಬ್ಬವಾದ ಓಣಂ ಕೂಡ ಸೆಪ್ಟೆಂಬರ್ ತಿಂಗಳಿನಲ್ಲಿದೆ. ಇದಲ್ಲದೇ ಓಝೋನ್ ದಿನ, ತೆಂಗಿನಕಾಯಿ ದಿನ, ವಿಶ್ವ ಆತ್ಮಹತ್ಯೆ ತಡೆ ದಿನ ಕೂಡ ಇದೇ ತಿಂಗಳಲ್ಲಿ ಬರುತ್ತವೆ. ಸೆಪ್ಟೆಂಬರ್ 1 ರಿಂದ 30ರವರೆಗೆ ಯಾವೆಲ್ಲಾ ರಾಷ್ಟ್ರೀಯ, ಅಂತರರಾಷ್ಟ್ರೀಯ ದಿನಗಳಿವೆ, ಹಬ್ಬಗಳಿವೆ ಎಂಬ ಸಂಪೂರ್ಣ ವಿವರ ಇಲ್ಲಿದೆ.
ಸೆಪ್ಟೆಂಬರ್ 1: ರಾಷ್ಟ್ರೀಯ ಪೌಷ್ಟಿಕಾಂಶ ಸಪ್ತಾಹ
ಸೆಪ್ಟೆಂಬರ್ 2: ವಿಶ್ವ ತೆಂಗಿನಕಾಯಿ ದಿನ
ಸೆಪ್ಟೆಂಬರ್ 3: ಗಗನಚುಂಬಿ ದಿನ
ಸೆಪ್ಟೆಂಬರ್ 5: ಶಿಕ್ಷಕರ ದಿನ, ಅಂತರರಾಷ್ಟ್ರೀಯ ದತ್ತಿ ದಿನ
ಸೆಪ್ಟೆಂಬರ್ 6: ಹರ್ತಾಲಿಕಾ ತೀಜ್
ಸೆಪ್ಟೆಂಬರ್ 7: ಗಣೇಶ ಚತುರ್ಥಿ, ಬ್ರೆಜಿಲಿಯನ್ ಸ್ವಾತಂತ್ರ್ಯ ದಿನ
ಸೆಪ್ಟೆಂಬರ್ 8: ಅಂತರಾಷ್ಟ್ರೀಯ ಸಾಕ್ಷರತಾ ದಿನ, ವಿಶ್ವ ದೈಹಿಕ ಚಿಕಿತ್ಸಾ ದಿನ
ಸೆಪ್ಟೆಂಬರ್ 10: ವಿಶ್ವ ಆತ್ಮಹತ್ಯೆ ತಡೆ ದಿನ
ಸೆಪ್ಟೆಂಬರ್ 11: 9/11 ಸ್ಮರಣಾರ್ಥ ದಿನ, ದಿಗ್ವಿಜಯ್ ದಿವಸ್
ಸೆಪ್ಟೆಂಬರ್ 13: ವಿಶ್ವ ಚಾಕೊಲೇಟ್ ದಿನ
ಸೆಪ್ಟೆಂಬರ್ 14: ಹಿಂದಿ ದಿವಸ್
ಸೆಪ್ಟೆಂಬರ್ 15: ಇಂಜಿನಿಯರ್ಸ್ ಡೇ, ಇಂಟರ್ನ್ಯಾಷನಲ್ ಡೇ ಆಫ್ ಡೆಮಾಕ್ರಸಿ, ಓಣಂ
ಸೆಪ್ಟೆಂಬರ್ 16: ಮಲೇಷ್ಯಾ ದಿನ, ವಿಶ್ವ ಓಝೋನ್ ದಿನ, ವಿಶ್ವಕರ್ಮ ಪೂಜೆ
ಸೆಪ್ಟೆಂಬರ್ 17: ಈದ್ ಮಿಲಾದ್ ಉಮ್-ನಬಿ, ವಿಶ್ವ ರೋಗಿಗಳ ಸುರಕ್ಷತಾ ದಿನ, ಅನಂತ ಚತುದರ್ಶಿ
ಸೆಪ್ಟೆಂಬರ್ 18: ವಿಶ್ವ ಬಿದಿರು ದಿನ
ಸೆಪ್ಟೆಂಬರ್ 21: ಅಂತಾರಾಷ್ಟ್ರೀಯ ಶಾಂತಿ ದಿನ, ವಿಶ್ವ ಆಲ್ಝೈಮರ್ಸ್ ದಿನ, ಅಂತರಾಷ್ಟ್ರೀಯ ರೆಡ್ ಪಾಂಡಾ ದಿನ
ಸೆಪ್ಟೆಂಬರ್ 22: ವಿಶ್ವ ಘೇಂಡಾಮೃಗ ದಿನ, ವಿಶ್ವ ನದಿಗಳ ದಿನ, ರಾಷ್ಟ್ರೀಯ ಪುತ್ರಿಯರ ದಿನ, ರೋಸ್ ಡೇ (ಕ್ಯಾನ್ಸರ್ ರೋಗಿಗಳ ಕಲ್ಯಾಣ)
ಸೆಪ್ಟೆಂಬರ್ 23: ಅಂತರಾಷ್ಟ್ರೀಯ ಸಂಕೇತ ಭಾಷೆಯ ದಿನ
ಸೆಪ್ಟೆಂಬರ್ 25: ಅಂತ್ಯೋದಯ ದಿವಸ್, ವಿಶ್ವ ಫಾರ್ಮಾಸಿಸ್ಟ್ ದಿನ
ಸೆಪ್ಟೆಂಬರ್ 26: ವಿಶ್ವ ಗರ್ಭನಿರೋಧಕ ದಿನ, ವಿಶ್ವ ಪರಿಸರ ಆರೋಗ್ಯ ದಿನ
ಸೆಪ್ಟೆಂಬರ್ 27: ವಿಶ್ವ ಪ್ರವಾಸೋದ್ಯಮ ದಿನ, ಗೂಗಲ್ ಜನ್ಮ ವಾರ್ಷಿಕೋತ್ಸವ
ಸೆಪ್ಟೆಂಬರ್ 28: ವಿಶ್ವ ರೇಬೀಸ್ ದಿನ, ರಾಷ್ಟ್ರೀಯ ಪುತ್ರರ ದಿನ
ಸೆಪ್ಟೆಂಬರ್ 29: ವಿಶ್ವ ಹೃದಯ ದಿನ
ಸೆಪ್ಟೆಂಬರ್ 30: ಅಂತರಾಷ್ಟ್ರೀಯ ಅನುವಾದ ದಿನ
ಸೆಪ್ಟೆಂಬರ್‌ನಲ್ಲಿ ಬರುವ ಕೆಲವು ಪ್ರಮುಖ ವಿಶೇಷ ದಿನಗಳ ಪಟ್ಟಿ ಇಲ್ಲಿದೆ. ಇದನ್ನು ಹೊರತು ಪಡಿಸಿ ಭಾರತದಲ್ಲಿ ಹಲವು ಹಬ್ಬಗಳು ಹಾಗೂ ಆಚರಣೆಗಳು ನಡೆಯತ್ತವೆ.