2025 ರಲ್ಲಿ ಜನಿಸಿದ ಮಕ್ಕಳನ್ನು ಜನರೇಷನ್ ಬೀಟಾ ಎನ್ನುವುದೇಕೆ; ಪೀಳಿಗೆಯ ಹೆಸರುಗಳನ್ನು ಹೇಗೆ ನಿರ್ಧರಿಸಲಾಗುತ್ತೆ, ವೈಶಿಷ್ಟ್ಯ ತಿಳಿಯಿರಿ
ಕನ್ನಡ ಸುದ್ದಿ  /  ಜೀವನಶೈಲಿ  /  2025 ರಲ್ಲಿ ಜನಿಸಿದ ಮಕ್ಕಳನ್ನು ಜನರೇಷನ್ ಬೀಟಾ ಎನ್ನುವುದೇಕೆ; ಪೀಳಿಗೆಯ ಹೆಸರುಗಳನ್ನು ಹೇಗೆ ನಿರ್ಧರಿಸಲಾಗುತ್ತೆ, ವೈಶಿಷ್ಟ್ಯ ತಿಳಿಯಿರಿ

2025 ರಲ್ಲಿ ಜನಿಸಿದ ಮಕ್ಕಳನ್ನು ಜನರೇಷನ್ ಬೀಟಾ ಎನ್ನುವುದೇಕೆ; ಪೀಳಿಗೆಯ ಹೆಸರುಗಳನ್ನು ಹೇಗೆ ನಿರ್ಧರಿಸಲಾಗುತ್ತೆ, ವೈಶಿಷ್ಟ್ಯ ತಿಳಿಯಿರಿ

Generation Beta: ಜೆನ್ ಬೀಟಾದ ಮಕ್ಕಳು ಮುಂದುವರಿದ ಪೀಳಿಗೆಯವರಾಗಿದ್ದರೂ, ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಆಧುನಿಕ ತಂತ್ರಜ್ಞಾನ ಹಾಗೂ ಬದಲಾಗುತ್ತಿರುವ ಸಂದರ್ಭಗಳಿಗೆ ತಮ್ಮನ್ನು ಹೊಂದಿಕೊಳ್ಳುವ ಗುಣಗಳನ್ನು ಬೆಳೆಸಿಕೊಳ್ಳಬೇಕು. ಇವರನ್ನು ಜನರೇಷನ್ ಬೀಟಾ ಎಂದು ಏಕೆ ಕರೆಯುತ್ತಾರೆ, ಪೀಳಿಗೆಗಳಿಗೆ ಹೆಸರು ನಿರ್ಧರಿಸೋದು ಹೇಗೆ ಎಂಬುದನ್ನು ತಿಳಿಯಿರಿ.

2025 ರಿಂದ 2030 ವರ್ಷದೊಳಗೆ ಜನಿಸುವ ಮಕ್ಕಳನ್ನು ಜನರೇಷನ್ ಬೀಟಾ ಎಂದು ಕರೆಯಲಾಗುತ್ತೆ
2025 ರಿಂದ 2030 ವರ್ಷದೊಳಗೆ ಜನಿಸುವ ಮಕ್ಕಳನ್ನು ಜನರೇಷನ್ ಬೀಟಾ ಎಂದು ಕರೆಯಲಾಗುತ್ತೆ (AI Generated image)

2025 ರಿಂದ ಮತ್ತೊಂದು ಪೀಳಿಗೆ ಅಸ್ತಿತ್ವಕ್ಕೆ ಬಂದಿರುವ 'ಜೆನ್ ಜಿ' ಮತ್ತು 'ಜೆನ್ ಆಲ್ಫಾ' ನಡುವಿನ ವ್ಯತ್ಯಾಸದ ಬಗ್ಗೆ ಸಾಕಷ್ಟು ಮಂದಿ ಪೋಷಕರಿಗೆ ಮಾಹಿತಿ ಇಲ್ಲ. ಈ ಹೊಸ ತಲೆಮಾರಿನ ಹೆಸರು 'ಜನರೇಷನ್ ಬೀಟಾ'. 2025ರ ಜನವರಿ 1 ಮತ್ತು 2039 ರ ನಡುವೆ ಜನಿಸಿದ ಮಕ್ಕಳನ್ನು ಜನರೇಷನ್ ಬೀಟಾ ಅಥವಾ ಜೆನ್ ಬೀಟಾ ಎಂದು ಕರೆಯಲಾಗುತ್ತದೆ. ಈ ಹೊಸ ಪೀಳಿಗೆಯ ಮಕ್ಕಳು ತಮ್ಮದೇ ಆದ ರೀತಿಯಲ್ಲಿ ಜಗತ್ತನ್ನು ಹೊಸ ರೀತಿಯಲ್ಲಿ ರೂಪಿಸುತ್ತಾರೆ. ಈ ಜನರೇಷನ್ ಬೀಟಾವನ್ನು ಅತ್ಯಂತ ಬುದ್ಧಿವಂತ ಮತ್ತು ಅತ್ಯಂತ ಮುಂದುವರಿದ ಪೀಳಿಗೆ ಎಂದು ಪರಿಗಣಿಸಲಾಗುತ್ತದೆ. ಎಲ್ಲವೂ ಒಂದು ಕ್ಲಿಕ್ ನಲ್ಲಿ ಮುಗಿಸುವಷ್ಟು ಅತ್ಯಾಧುನಿಕ ತಂತ್ರಜ್ಞಾನವನ್ನು ಇವರು ಹೊಂದಿರುತ್ತಾರೆ. ಕೃತಕ ಬುದ್ಧಿಮತ್ತೆ, ರೊಬೊಟಿಕ್ಸ್ ಮತ್ತು ವರ್ಚುವಲ್ ರಿಯಾಲಿಟಿಯಂತಹ ಅತ್ಯಾಧುನಿಕ ತಂತ್ರಜ್ಞಾನಗಳು ಈಗಾಗಲೇ ಅಸ್ತಿತ್ವದಲ್ಲಿರುವ ಯುಗದಲ್ಲಿ ಈ ಮಕ್ಕಳು ಜನಿಸುತ್ತಾರೆ.

ಜೆನ್ ಬೀಟಾ ಮಕ್ಕಳು ಮುಂದುವರಿದ ಪೀಳಿಗೆಗೆ ಸೇರಿದವರಾಗಿದ್ದರೂ, ಹೆಚ್ಚುತ್ತಿರುವ ಜಾಗತಿಕ ತಾಪಮಾನ, ನಗರಗಳ ಅತಿಯಾದ ವಿಸ್ತರಣೆ ಮತ್ತು ಜನಸಂಖ್ಯೆಯ ಬೆಳವಣಿಗೆಯಂತಹ ಅನೇಕ ಸವಾಲುಗಳನ್ನು ಎದುರಿಸುತ್ತಾರೆ. ಇದನ್ನು ಎದುರಿಸಲು, ಅವರು ಸ್ಮಾರ್ಟ್, ಸ್ನೇಹಪರ ಮತ್ತು ಬದಲಾಗುತ್ತಿರುವ ಸಂದರ್ಭಗಳಿಗೆ ತಮ್ಮನ್ನು ಹೊಂದಿಕೊಳ್ಳುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು. ಒಂದು ಪೀಳಿಗೆಯು ಸಾಮಾನ್ಯವಾಗಿ 15-20 ವರ್ಷಗಳ ಅವಧಿಯಾಗಿದೆ. ಅದರ ಹೆಸರನ್ನು ಆ ಕಾಲದ ಐತಿಹಾಸಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಘಟನೆಗಳ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ.

ಶ್ರೇಷ್ಠ ಪೀಳಿಗೆ (1901-1924)

ಈ ಪೀಳಿಗೆಯು ಮಹಾ ಆರ್ಥಿಕ ಕುಸಿತ ಮತ್ತು ಎರಡನೇ ಮಹಾಯುದ್ಧದ ಸಮಯದಲ್ಲಿ ಜೀವನವನ್ನು ನಡೆಸಿತು. ಈ ಪೀಳಿಗೆಯು ತಮ್ಮ ಸ್ಥಿತಿಸ್ಥಾಪಕತ್ವ ಮತ್ತು ಸಾಂಪ್ರದಾಯಿಕ ಮೌಲ್ಯಗಳಿಗೆ ಹೆಸರುವಾಸಿಯಾಗಿದೆ.

ಮಹಾ ಆರ್ಥಿಕ ಕುಸಿತ ಮತ್ತು ಎರಡನೇ ಮಹಾಯುದ್ಧದ ಪರಿಣಾಮಗಳಿಂದಾಗಿ ಇವರನ್ನು (1925-1945) ಮೌನ ಪೀಳಿಗೆ ಎಂತಲೂ ಕರೆಯಲಾಗುತ್ತದೆ. ಈ ಪೀಳಿಗೆಯ ಮಕ್ಕಳು ಕಠಿಣ ಪರಿಶ್ರಮಿಗಳು ಮತ್ತು ಸ್ವಾವಲಂಬಿಗಳಾಗಿದ್ದರು.

ಬೇಬಿ ಬೂಮರ್ ಜನರೇಷನ್ (1946-1964)

ಎರಡನೇ ಮಹಾಯುದ್ಧದ ನಂತರ ಜನಸಂಖ್ಯೆಯಲ್ಲಿ ಭಾರಿ ಹೆಚ್ಚಳದಿಂದಾಗಿ ಈ ಪೀಳಿಗೆಯನ್ನು ಬೇಬಿ ಬೂಮರ್ಸ್ ಎಂದು ಹೆಸರಿಸಲಾಯಿತು. ಈ ಪೀಳಿಗೆಯು ಆಧುನಿಕತೆಯನ್ನು ಅಳವಡಿಸಿಕೊಂಡಿತು. ಬೇಬಿ ಬೂಮರ್ಸ್ ಪೀಳಿಗೆಯ ಜನರು ತಮ್ಮ ಮಗುವನ್ನು ಹೊಸ ರೀತಿಯಲ್ಲಿ ಬೆಳೆಸಿದರು.

ಜನರೇಷನ್ X (1965-1979) ಪೀಳಿಗೆ

ಎಕ್ಸ್ ಪೀಳಿಗೆಯನ್ನು ಹೊಸದು. ಏಕೆಂದರೆ ಈ ಜನರೇಷನ್ ನವರು ಇಂಟರ್ನೆಟ್ ಮತ್ತು ವೀಡಿಯೊ ಆಟಗಳ ಆರಂಭವನ್ನು ಗುರುತಿಸಿದರು. ಈ ಪೀಳಿಗೆಯ ಜನರು ವೇಗವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ ಬೆಳೆದಿದ್ದಾರೆ. ಈ ಪೀಳಿಗೆಯ ಪೋಷಕರು ತಮ್ಮ ಮಕ್ಕಳಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಲು ಪ್ರಯತ್ನಿಸಿದರು.

ಮಿಲೇನಿಯಲ್ಸ್ ಅಥವಾ ಜನರೇಷನ್ Y (1981-1996) ಪೀಳಿಗೆ

ಈ ಪೀಳಿಗೆಯ ಜನರು ಹೆಚ್ಚು ಬದಲಾವಣೆಯನ್ನು ಕಂಡರು. ಅಲ್ಲದೆ, ಸಾಕಷ್ಟು ಹೊಸ ತಂತ್ರಜ್ಞಾನವನ್ನು ಕಲಿತರು. ಇವರು ತಂತ್ರಜ್ಞಾನದೊಂದಿಗೆ ತಮ್ಮನ್ನು ತಾವು ನವೀಕರಿಸಿಕೊಂಡಿದ್ದಾರೆ.

ಜನರೇಷನ್ Z (1995-2012)

ಈ ಪೀಳಿಗೆಯು ಇಂಟರ್ನೆಟ್, ಸಾಮಾಜಿಕ ಮಾಧ್ಯಮ ಮತ್ತು ಜಾಗತಿಕ ಸಂಪರ್ಕದೊಂದಿಗೆ ಬೆಳೆಯಿತು ಮತ್ತು ವೈಯಕ್ತಿಕತೆಗೆ ಒತ್ತು ನೀಡಿತು ಎಂದು ಕೆಲವೊಂದು ಮಾಧ್ಯಮಗಳು ವರದಿ ಮಾಡಿವೆ.

ಜನರೇಷನ್ ಆಲ್ಫಾ (2013-2024)

ಈಗಷ್ಟೇ ಮುಕ್ತಾಯವಾಗಿರುವ ಪೀಳಿಗೆಯೇ ಜನರೇಷನ್ ಆಲ್ಫಾ (20213-2024) ಇದು ಹುಟ್ಟುವ ಮೊದಲೇ ಸಾಮಾಜಿಕ ಮಾಧ್ಯಮ ಮತ್ತು ಇಂಟರ್ನೆಟ್ ವೇದಿಕೆಯನ್ನು ಹೊಂದಿದ ಮೊದಲ ಪೀಳಿಗೆಯಾಗಿದೆ. ಈ ಪೀಳಿಗೆಯ ಮಕ್ಕಳ ಪೋಷಕರು ಇಂಟರ್ನೆಟ್, ಮೊಬೈಲ್ ಫೋನ್ ಗಳು ಮತ್ತು ಸಾಮಾಜಿಕ ಮಾಧ್ಯಮಗಳೊಂದಿಗೆ ಬೆಳೆದವರಾಗಿದ್ದಾರೆ.

Whats_app_banner