ಕುಟುಂಬ, ಸ್ನೇಹಿತರೊಂದಿಗೆ ಸಮಯ ಕಳೆಯಿರಿ: ಒಂಟಿತನವು ಸೋಂಕಿಗೆ ಕಾರಣವಾಗಬಹುದು, ಅಧ್ಯಯನದಲ್ಲಿ ಬಹಿರಂಗ
ಕನ್ನಡ ಸುದ್ದಿ  /  ಜೀವನಶೈಲಿ  /  ಕುಟುಂಬ, ಸ್ನೇಹಿತರೊಂದಿಗೆ ಸಮಯ ಕಳೆಯಿರಿ: ಒಂಟಿತನವು ಸೋಂಕಿಗೆ ಕಾರಣವಾಗಬಹುದು, ಅಧ್ಯಯನದಲ್ಲಿ ಬಹಿರಂಗ

ಕುಟುಂಬ, ಸ್ನೇಹಿತರೊಂದಿಗೆ ಸಮಯ ಕಳೆಯಿರಿ: ಒಂಟಿತನವು ಸೋಂಕಿಗೆ ಕಾರಣವಾಗಬಹುದು, ಅಧ್ಯಯನದಲ್ಲಿ ಬಹಿರಂಗ

ಒಂಟಿತನವು ಬಹುತೇಕ ಪ್ರತಿಯೊಬ್ಬರ ಜೀವನದ ಒಂದು ಹಂತದಲ್ಲಿ ಎದುರಿಸಬೇಕಾದ ಒಂದು ಅಧ್ಯಾಯವಾಗಿದೆ. ಕೆಲವರು ಒಂಟಿಯಾಗಿರಲು ಬಯಸುತ್ತಾರೆ. ಆದರೆ ದೀರ್ಘಕಾಲದವರೆಗೆ ಒಬ್ಬಂಟಿಯಾಗಿರಲು ಬಯಸಿದರೆ, ಇದು ಮಾನಸಿಕ ಆರೋಗ್ಯವನ್ನು ಹಾನಿಗೊಳಿಸುವುದಲ್ಲದೆ ಸೋಂಕುಗಳಿಗೆ ಕಾರಣವಾಗಬಹುದು ಎಂದು ಅಧ್ಯಯನವೊಂದು ತಿಳಿಸಿದೆ.

ಕುಟುಂಬ, ಸ್ನೇಹಿತರೊಂದಿಗೆ ಸಮಯ ಕಳೆಯಿರಿ: ಒಂಟಿತನವು ಸೋಂಕಿಗೆ ಕಾರಣವಾಗಬಹುದು, ಅಧ್ಯಯನದಲ್ಲಿ ಬಹಿರಂಗ
ಕುಟುಂಬ, ಸ್ನೇಹಿತರೊಂದಿಗೆ ಸಮಯ ಕಳೆಯಿರಿ: ಒಂಟಿತನವು ಸೋಂಕಿಗೆ ಕಾರಣವಾಗಬಹುದು, ಅಧ್ಯಯನದಲ್ಲಿ ಬಹಿರಂಗ

ಒಂಟಿತನವು ಬಹುತೇಕ ಪ್ರತಿಯೊಬ್ಬರ ಜೀವನದ ಒಂದು ಹಂತದಲ್ಲಿ ಎದುರಿಸಬೇಕಾದ ಒಂದು ಅಧ್ಯಾಯವಾಗಿದೆ. ವೈಯಕ್ತಿಕ ಆಯ್ಕೆ ಅಥವಾ ಇನ್ನಿತರ ಕಾರಣದಿಂದಾಗಿ ಕೆಲವು ದಿನಗಳನ್ನು ಪ್ರತ್ಯೇಕವಾಗಿ ಕಳೆಯಬೇಕಾಗುತ್ತದೆ. ಆದರೆ, ದೀರ್ಘಕಾಲದವರೆಗೆ ಈ ಭಾವನೆಯಲ್ಲಿ ಉಳಿದರೆ, ದುಷ್ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಒಂಟಿತನವು ಮಾನಸಿಕ ಆರೋಗ್ಯವನ್ನು ಹಾನಿಗೊಳಿಸುವುದಲ್ಲದೆ ಅದು ಸೋಂಕುಗಳಿಗೆ ಕಾರಣವಾಗಬಹುದು.

ಇತ್ತೀಚಿನ ಅಧ್ಯಯನವೊಂದರ ಪ್ರಕಾರ ಈ ವಿಚಾರ ಬೆಳಕಿಗೆ ಬಂದಿದೆ. ಏಕಾಂಗಿಯಾಗಿರಲು ಬಯಸದೆ ಸಾಧ್ಯವಾದಷ್ಟು ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಂಪರ್ಕದಲ್ಲಿರಬೇಕು. ಪರಸ್ಪರ ಸಂಪರ್ಕದಲ್ಲಿದ್ದಾಗ, ನಿಮ್ಮನ್ನು ನೀವು ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢವಾಗಿರಿಸಿಕೊಳ್ಳಬಹುದು.

ಅಧ್ಯಯನ ಏನು ಹೇಳುತ್ತದೆ?

ಯುಕೆಯ ಕೇಂಬ್ರಿಡ್ಜ್ ವಿಶ್ವವಿದ್ಯಾಲಯ ಮತ್ತು ಚೀನಾದ ಫುಡಾನ್ ವಿಶ್ವವಿದ್ಯಾಲಯದ ಸಂಶೋಧಕರು ಯುಕೆ ಬಯೋಬ್ಯಾಂಕ್ ಅಧ್ಯಯನದಲ್ಲಿ 42,000 ಕ್ಕೂ ಹೆಚ್ಚು ವಯಸ್ಕರಿಂದ ರಕ್ತದ ಮಾದರಿಗಳನ್ನು ಪರೀಕ್ಷಿಸಿದ್ದಾರೆ. ಸಾಮಾಜಿಕ ಪ್ರತ್ಯೇಕತೆ ಮತ್ತು ಒಂಟಿತನವು ರಕ್ತದಲ್ಲಿನ ವಿವಿಧ ಪ್ರೋಟೀನ್‌ಗಳೊಂದಿಗೆ ಸಂಬಂಧ ಹೊಂದಿದೆ ಎಂದು ಸಂಶೋಧಕರು ಕಂಡುಕೊಂಡರು. ಇದು ಉರಿಯೂತ, ಪ್ರತಿರಕ್ಷಣಾ ವ್ಯವಸ್ಥೆ ಮತ್ತು ಒತ್ತಡ ನಿಯಂತ್ರಣದಂತಹ ಗಂಭೀರ ಆರೋಗ್ಯ ಸಮಸ್ಯೆಗಳ ಮೇಲೆ ಪರಿಣಾಮ ಬೀರುತ್ತದೆ.

ಎಷ್ಟು ರೀತಿಯ ಪ್ರೋಟೀನ್‍ಗಳನ್ನು ಗುರುತಿಸಲಾಗಿದೆ?

ಸಾಮಾಜಿಕವಾಗಿ ದೂರವಿರುವುದು ವ್ಯಕ್ತಿಯನ್ನು ಸಾಮಾಜಿಕ ಸಂವಹನ ಮತ್ತು ಚಟುವಟಿಕೆಗಳಿಂದ ದೂರವಿಡುತ್ತದೆ. ಆದರೆ ಒಂಟಿತನವೆಂದರೆ ಏಕಾಂಗಿಯಾಗಿರುವ ಭಾವನೆ. ಇವೆರಡೂ ವಿಭಿನ್ನವಾಗಿದ್ದರೂ, ನೇಚರ್ ಹ್ಯೂಮನ್ ಬಿಹೇವಿಯರ್‌ನಲ್ಲಿನ ಅಧ್ಯಯನವು ಎರಡಕ್ಕೂ ಸಂಬಂಧಿಸಿದ ಪ್ರೋಟೀನ್‌ಗಳಲ್ಲಿ ಗಮನಾರ್ಹವಾದ ಅತಿಕ್ರಮಣವನ್ನು ಕಂಡುಹಿಡಿದಿದೆ. ಸಂಶೋಧಕರು ಸಾಮಾಜಿಕ ಅಂತರಕ್ಕೆ ಸಂಬಂಧಿಸಿದಂತೆ 175 ಪ್ರೋಟೀನ್‍ಗಳನ್ನು ಮತ್ತು ಒಂಟಿತನಕ್ಕೆ ಸಂಬಂಧಿಸಿದ 26 ಪ್ರೋಟೀನ್‌ಗಳನ್ನು ಗುರುತಿಸಿದ್ದಾರೆ. ಅವುಗಳಲ್ಲಿ ಶೇ. 85 ರಷ್ಟು ಪ್ರೋಟೀನ್‌ಗಳು ಅತಿಕ್ರಮಿಸುತ್ತವೆ. ಈ ಪ್ರೋಟೀನ್‌ಗಳು ಉರಿಯೂತ, ಮಧುಮೇಹ ಮತ್ತು ಹೃದಯ ಸಂಬಂಧಿತ ಸಮಸ್ಯೆಗಳಂತಹ ಕಾಯಿಲೆಗಳಲ್ಲಿ ತೊಡಗಿಕೊಂಡಿವೆ.

ಗುರುತಿಸಲಾದ ಪ್ರಮುಖ ಪ್ರೋಟೀನ್ ಇದಾಗಿದೆ

ವರದಿಗಳ ಪ್ರಕಾರ ಎಡಿಎಂ ಗುರುತಿಸಲ್ಪಟ್ಟ ಪ್ರಮುಖ ಪ್ರೋಟೀನ್ ಆಗಿದ್ದು, ಇದು ಒತ್ತಡ ಮತ್ತು ಆಕ್ಸಿಟೋಸಿನ್‌ನಂತಹ ಸಾಮಾಜಿಕ ಹಾರ್ಮೋನುಗಳನ್ನು ನಿಯಂತ್ರಿಸುತ್ತದೆ. ಹೆಚ್ಚಿನ ಎಡಿಎಂ ಮಟ್ಟಗಳು ಭಾವನಾತ್ಮಕ ಮತ್ತು ಸಾಮಾಜಿಕ ಪ್ರಕ್ರಿಯೆಗೆ ಕಾರಣವಾದ ಸಣ್ಣ ಮೆದುಳಿನ ಪ್ರದೇಶಗಳೊಂದಿಗೆ ಸಂಬಂಧ ಹೊಂದಿವೆ ಮತ್ತು ಅಕಾಲಿಕ ಸಾವಿನ ಅಪಾಯವನ್ನು ಹೆಚ್ಚಿಸುತ್ತವೆ.

ಎರಡನೇ ಪ್ರೋಟೀನ್, ಎಎಸ್‌ಜಿಆರ್1, ಹೆಚ್ಚಿನ ಕೊಲೆಸ್ಟ್ರಾಲ್ ಮತ್ತು ಹೃದ್ರೋಗದ ಹೆಚ್ಚಿನ ಅಪಾಯದೊಂದಿಗೆ ಸಂಬಂಧಿಸಿದೆ. ಗುರುತಿಸಲಾದ ಇತರ ಪ್ರೋಟೀನ್‌ಗಳು ಇನ್ಸುಲಿನ್ ಪ್ರತಿರೋಧ, ಅಪಧಮನಿಯ ಹಾನಿ ಮತ್ತು ಕ್ಯಾನ್ಸರ್ ಪ್ರಗತಿಯೊಂದಿಗೆ ಸಂಬಂಧ ಹೊಂದಿವೆ.

ಉತ್ತಮ ಆರೋಗ್ಯಕ್ಕಾಗಿ ಏನು ಮಾಡಬೇಕು

ಉತ್ತಮ ದೈಹಿಕ ಆರೋಗ್ಯಕ್ಕಾಗಿ ಸಾಮಾಜಿಕವಾಗಿ ಸಂಪರ್ಕದಲ್ಲಿರಿ. ಸಮುದಾಯ ಕಾರ್ಯಕ್ರಮಗಳು, ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಸಂಶೋಧಕರು ಸಲಹೆ ನೀಡಿದ್ದಾರೆ. ಏಕೆಂದರೆ ಇವು ಒಂಟಿತನವನ್ನು ಕಡಿಮೆ ಮಾಡಲು ಮತ್ತು ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

Whats_app_banner