ಭಗವದ್ಗೀತೆ: ಮನಸ್ಸಿನ ಮೇಲೆ ಹಿಡಿತ ಸಾಧಿಸಿದರೆ ಮನುಷ್ಯ ಯಶಸ್ವಿಯಾಗುವುದು ಖಚಿತ; ಗೀತೆಯ ಈ 4 ಅಂಶಗಳನ್ನು ತಿಳಿಯಿರಿ
ಕನ್ನಡ ಸುದ್ದಿ  /  ಜೀವನಶೈಲಿ  /  ಭಗವದ್ಗೀತೆ: ಮನಸ್ಸಿನ ಮೇಲೆ ಹಿಡಿತ ಸಾಧಿಸಿದರೆ ಮನುಷ್ಯ ಯಶಸ್ವಿಯಾಗುವುದು ಖಚಿತ; ಗೀತೆಯ ಈ 4 ಅಂಶಗಳನ್ನು ತಿಳಿಯಿರಿ

ಭಗವದ್ಗೀತೆ: ಮನಸ್ಸಿನ ಮೇಲೆ ಹಿಡಿತ ಸಾಧಿಸಿದರೆ ಮನುಷ್ಯ ಯಶಸ್ವಿಯಾಗುವುದು ಖಚಿತ; ಗೀತೆಯ ಈ 4 ಅಂಶಗಳನ್ನು ತಿಳಿಯಿರಿ

ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆ. ವಿಶ್ವದ ಪ್ರಮುಖ ಧರ್ಮಗ್ರಂಥಗಳಲ್ಲಿ ಒಂದಾಗಿದೆ. ಸತ್ಯದ ಮಾರ್ಗವನ್ನು ಅನುಸುರಿಸುವುದು ಗೀತೆಯ ಅರ್ಥವಾಗಿದೆ. ಶ್ರೀಕೃಷ್ಣನ ಬೋಧನೆ ಇಂದಿನ ಜೀವನಕ್ಕೆ ಬಹಳ ಪ್ರಸ್ತತವಾಗಿದೆ. ಧರ್ಮೋಪದೇಶ ಇಂದಿಗೂ ನಮಗೆ ಮೌಲ್ಯಗಳನ್ನು ಕಲಿಸುತ್ತದೆ.

ಕುರುಕ್ಷೇತ್ರ ಯುದ್ಧದ ಸಮಯದಲ್ಲಿ ಅರ್ಜುನನಿಗೆ ಶ್ರೀಕೃಷ್ಣನ ಉಪದೇಶದ ಸಾರಾಂಶವೇ ಭಗವದ್ಗೀತೆ.
ಕುರುಕ್ಷೇತ್ರ ಯುದ್ಧದ ಸಮಯದಲ್ಲಿ ಅರ್ಜುನನಿಗೆ ಶ್ರೀಕೃಷ್ಣನ ಉಪದೇಶದ ಸಾರಾಂಶವೇ ಭಗವದ್ಗೀತೆ.

Bhagavad Gita Updesh: ಭಗವದ್ಗೀತೆಯನ್ನು ಜೀವನದ ಸಾರ ಎಂದು ಹೇಳಲಾಗುತ್ತದೆ. ಕೌರವರು ಮತ್ತು ಪಾಂಡವರ ನಡುವೆ ಮಹಾಯುದ್ಧ ನಡೆಯುವಾಗ ಅರ್ಜುನ ಕೌರವರ ಸೈನ್ಯದಲ್ಲಿನ ತಮ್ಮ ಸಂಬಂಧಿಕರನ್ನು ನೋಡಿ ಹತಾಶನಾಗುತ್ತಾನೆ. ಗಾಂಡೀವವನ್ನು ಅಂದರೆ ಬಿಲ್ಲುಬಾಣವನ್ನು ಕೆಳಕ್ಕೆ ಇಳಿಸಿ ನನ್ನ ಸ್ವಂತ ಬಂಧುಗಳನ್ನು ಹೇಗೆ ಕೊಲ್ಲಲಿ ಎಂದು ಮನಸ್ಸಿನಲ್ಲಿ ಪ್ರಶ್ನೆ ಮೂಡುತ್ತದೆ.

ಕೌರವರು ಮತ್ತು ಪಾಂಡವರ ನಡುವಿನ ಯುದ್ಧದ ಈ ಸನ್ನಿವೇಶದಲ್ಲಿ ಶ್ರೀಕೃಷ್ಣನು (Lord Krishna) ಅರ್ಜುನನಿಗೆ ಭಗವದ್ಗೀತೆಯ ಉಪದೇಶವನ್ನು ಬೋಧಿಸುತ್ತಾನೆ. ಇವು ಇಂದಿಗೂ ಜೀವನಕ್ಕೆ ಬಹಳ ಪ್ರಸ್ತುತವಾಗಿದ್ದು, ಮೌಲ್ಯಗಳನ್ನು ಕಲಿಸುತ್ತದೆ.

ಅರ್ಹತೆ ಮತ್ತು ದೋಷಗಳನ್ನ ಮೌಲ್ಯಮಾಪನ ಮಾಡಿಕೊಳ್ಳಬೇಕು

ಪ್ರತಿಯೊಬ್ಬ ವ್ಯಕ್ತಿಯೂ ತನ್ನನ್ನು ತಾನು ಮೌಲ್ಯಮಾಪನ ಮಾಡಿಕೊಳ್ಳುವುದು ಬಹಳ ಮುಖ್ಯ ಎಂದು ಶ್ರೀ ಕೃಷ್ಣನು ಗೀತೆಯಲ್ಲಿ ಹೇಳುತ್ತಾನೆ. ಒಬ್ಬ ವ್ಯಕ್ತಿಯು ತನ್ನ ಅರ್ಹತೆ ಮತ್ತು ದೋಷಗಳನ್ನು ಸ್ವತಃ ಮೌಲ್ಯಮಾಪನ ಮಾಡುವ ಮೂಲಕ ತನ್ನ ತಪ್ಪುಗಳನ್ನು ತಿದ್ದಿಕೊಳ್ಳಬಹುದು.

ನಿಮ್ಮನ್ನು ನೀವು ಅರ್ಥಮಾಡಿಕೊಂಡಾಗ ಯಾವುದೇ ದೃಢವಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಒಬ್ಬ ವ್ಯಕ್ತಿಯು ತನ್ನ ಸ್ವಂತ ಅರ್ಹತೆ ಮತ್ತು ದೋಷಗಳನ್ನು ತಿಳಿದಾಗ ಮಾತ್ರ ತನ್ನ ವ್ಯಕ್ತಿತ್ವವನ್ನು ಸರಿಯಾಗಿ ರೀತಿಯಲ್ಲಿ ನಿರ್ವಹಿಸಬಹುದು.

ಕೋಪವನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕು

ಮನುಷ್ಯನು ಕೋಪವನ್ನು ನಿಯಂತ್ರಿಸಿಕೊಳ್ಳಲು ಕಲಿಯಬೇಕು ಎಂದು ಶ್ರೀಕೃಷ್ಣ ಗೀತಿಯಲ್ಲಿ ಹೇಳುತ್ತಾನೆ. ಏಕೆಂದರೆ ಕೋಪಗೊಂಡ ವ್ಯಕ್ತಿಯು ತನ್ನ ನಿಯಂತ್ರಣವನ್ನು ಕಳೆದುಕೊಳ್ಳುತ್ತಾನೆ. ಕೋಪದಲ್ಲಿ ತಪ್ಪು ಕೆಲಸಗಳನ್ನು ಮಾಡುತ್ತಾನೆ. ಕೋಪದಲ್ಲಿ ಮಾಡಿದ ನಿರ್ಧಾರಗಳು ಸಾಮಾನ್ಯವಾಗಿ ತಪ್ಪಾಗಿಯೇ ಇರುತ್ತದೆ. ಆ ಬಳಿಕ ವ್ಯಕ್ತಿ ವಿಷಾಧಿಸುತ್ತಾನೆ. ಆದ್ದರಿಂದ ನೀವು ಕೋಪಗೊಂಡರೆ ನಿಮ್ಮನ್ನು ಶಾಂತಗೊಳಿಸಿಕೊಳ್ಳಲು ಪ್ರಯತ್ನಿಸಿ.

ಮನಸ್ಸನ್ನು ಹತೋಟಿಯಲ್ಲಿಕೊಳ್ಳಲು ಶಕ್ತರಾಗಿರಬೇಕು

ಶ್ರೀಕೃಷ್ಣ ಈ ವಿಷಯದಲ್ಲಿ ಬಹಳ ಸೂಚಿತವಾದ ಮಾತನ್ನು ಹೇಳಿದ್ದಾನೆ. ಮನಸ್ಸು ಎಲ್ಲವನ್ನೂ ತಿಳಿಯಲು ಪ್ರಯತ್ನಿಸುತ್ತದೆ. ಆದರ ಜೊತೆ ಜೊತೆಗೆ ತುಂಬಾ ಚಂಚಲವಾಗಿರುತ್ತದೆ. ಅದಕ್ಕಾಗಿಯೇ ಒಬ್ಬ ವ್ಯಕ್ತಿಯು ತನ್ನ ಮನಸ್ಸಿನ ಮೇಲೆ ಹಿಡಿತ ಸಾಧಿಸಬೇಕು. ಮನಸ್ಸನ್ನು ನಿಯಂತ್ರಿಸುವ ವ್ಯಕ್ತಿ ಯಶಸ್ಸಿನ ಹಾದಿಯಲ್ಲಿ ಸಾಗುತ್ತಾನೆ. ತನ್ನ ಜೀವನದಲ್ಲಿ ವಿಜಯಶಾಲಿಯಾಗುತ್ತಾನೆ. ಆದರೆ ಮನಸ್ಸು ಚಂಚಲವಾಗಿರುವವರು ಯಾವಾಗಲೂ ಹಿಂದೆ ಬೀಳುತ್ತಾರೆ.

ಮನುಷ್ಯ ಕರ್ಮದ ಫಲವನ್ನು ಪಡೆಯುತ್ತಾನೆ

ಭಗವದ್ಗೀತೆಯಲ್ಲಿರುವ ಶ್ರೀಕೃಷ್ಣನ ಬೋಧನೆ ಪ್ರಕಾರ ಮನುಷ್ಯ ತನ್ನ ಕರ್ಮದ ಫಲವನ್ನು ಪಡೆಯುತ್ತಾನೆ. ಆದ್ದರಿಂದ ಫಲಿತಾಂಶದ ಬಗ್ಗೆ ಯೋಚಿಸದೆ ಕೆಲಸದ ಮೇಲೆ ಮಾತ್ರ ಗಮನಹರಿಸಬೇಕು. ಉತ್ತಮ ಕ್ರಮ ಯಾವಾಗಲೂ ಉತ್ತಮ ಫಲಿತಾಂಶವನ್ನೇ ನೀಡುತ್ತದೆ.

-----------------------------------------------------------------------------------

ಸಂಬಂಧಿತ ಲೇಖನ

Whats_app_banner