Chanakya Niti: ಪ್ರತಿದಿನ ಬೆಳಗ್ಗೆ ಈ 5 ಕೆಲಸಗಳನ್ನು ಮಾಡಿದರೆ ಯಶಸ್ಸು ಖಚಿತ - ಚಾಣಕ್ಯರ ಸಲಹೆ ಹೀಗಿದೆ
ಕನ್ನಡ ಸುದ್ದಿ  /  ಜೀವನಶೈಲಿ  /  Chanakya Niti: ಪ್ರತಿದಿನ ಬೆಳಗ್ಗೆ ಈ 5 ಕೆಲಸಗಳನ್ನು ಮಾಡಿದರೆ ಯಶಸ್ಸು ಖಚಿತ - ಚಾಣಕ್ಯರ ಸಲಹೆ ಹೀಗಿದೆ

Chanakya Niti: ಪ್ರತಿದಿನ ಬೆಳಗ್ಗೆ ಈ 5 ಕೆಲಸಗಳನ್ನು ಮಾಡಿದರೆ ಯಶಸ್ಸು ಖಚಿತ - ಚಾಣಕ್ಯರ ಸಲಹೆ ಹೀಗಿದೆ

Chanakya Niti in Kannada: ಜೀವನದಲ್ಲಿ ಯಶಸ್ವಿಯಾಗಲು ಆಚಾರ್ಯ ಚಾಣಕ್ಯ ಅನೇಕ ವಿಷಯಗಳನ್ನು ಹೇಳಿದ್ದಾರೆ. ಪ್ರತಿದಿನ ಬೆಳಿಗ್ಗೆ ಕೆಲವನ್ನು ಪಾಲಿಸಿದರೆ ಜೀವನದಲ್ಲಿ ಯಶಸ್ಸು ಸಾಧಿಸಬಹುದು ಎಂದಿದ್ದಾರೆ.

ಚಾಣಕ್ಯ ನೀತಿ
ಚಾಣಕ್ಯ ನೀತಿ

ಸುಖ-ದುಃಖ, ನೋವು-ನಲಿವು, ಹಣ, ಆಸೆ, ಸೇರಿದಂತೆ ಜೀವನದ ಪ್ರತಿಯೊಂದು ವಿಚಾರಗಳ ಬಗ್ಗೆಯೂ ತಮ್ಮ ನೀತಿಯಲ್ಲಿ ಹೇಳಿರುವ ಆಚಾರ್ಯ ಚಾಣಕ್ಯ ಯಶಸ್ಸಿನ ಮಂತ್ರ ಕೂಡ ತಿಳಿಸಿದ್ದಾರೆ. ಚಾಣಕ್ಯನ ಪ್ರಕಾರ ಪ್ರತಿದಿನ ಬೆಳಿಗ್ಗೆ ಈ 5 ಕೆಲಸಗಳನ್ನು ಮಾಡಿದರೆ ನೀವು ಜೀವನದಲ್ಲಿ ಯಶಸ್ಸು ಸಾಧಿಸಬಹುದು. ಅವು ಈ ಕೆಳಕಂಡಂತಿವೆ..

1) ಜೀವನದಲ್ಲಿ ನಿಮ್ಮ ಮುಖ್ಯ ಗುರಿಯನ್ನು ಸಾಧಿಸಿ, ನೀವು ಯಶಸ್ವಿಯಾಗಲು ಬಯಸಿದರೆ 24 ಗಂಟೆಗಳಲ್ಲಿ ಒಂದು ಕ್ಷಣವನ್ನು ವ್ಯರ್ಥ ಮಾಡಬೇಡಿ. ಹೀಗಾಗಿ ನೀವು ತಡವಾಗಿ ಮಲಗಬೇಡಿ. ಪ್ರತಿದಿನ ಬೆಳಗ್ಗೆ ಬೇಗ ಎದ್ದೇಳಬೇಕು. ಆಗ ಮಾತ್ರ ಇಡೀ ದಿನದ ಕೆಲಸವನ್ನು ಸಮಯಕ್ಕೆ ಸರಿಯಾಗಿ ಮುಗಿಸಲು ಸಾಧ್ಯವಾಗುತ್ತದೆ. ಬೆಳಗ್ಗೆ ಎದ್ದವರ ಆರೋಗ್ಯವೂ ಚೆನ್ನಾಗಿರುತ್ತದೆ.

2) ಬೆಳಿಗ್ಗೆ ಎದ್ದ ನಂತರ ಸಮಯ ವ್ಯರ್ಥ ಮಾಡದೇ, ಸೋಮಾರಿಯಾಗದೇ ನಿಮ್ಮ ದಿನದ ಕುರಿತು ಚೆನ್ನಾಗಿ ಯೋಜಿಸಿ. ದಿನವಿಡೀ ಒಂದು ಯೋಜನೆಯ ಪ್ರಕಾರ ಕೆಲಸ ಮಾಡುವ ಜನರು ಜೀವನದಲ್ಲಿ ಯಶಸ್ವಿಯಾಗುತ್ತಾರೆ. ಯಾವ ಸಮಯದಲ್ಲಿ ಯಾವ ಕೆಲಸ ಮಾಡಬೇಕು ಎಂದು ಮೊದಲೇ ಪ್ಲಾನ್ ಮಾಡಿಕೊಳ್ಳಬೇಕು. ಆಗ ನಿಮ್ಮ ಸಮಯ ವ್ಯರ್ಥವೂ ಆಗುವುದಿಲ್ಲ, ಗುರಿಯೆಡೆಗೂ ಸಾಗಬಹುದು.

3) ಕಳೆದು ಹೋದ ಹಣ ಮರಳಿ ಬಂದರೂ ಕಳೆದು ಹೋದ ಸಮಯ ಮರಳಿ ಬರುವುದಿಲ್ಲ. ಯಾವುದೇ ಕೆಲಸವನ್ನು ನಾಳೆಯವರೆಗೆ ಮುಂದೂಡಬೇಡಿ. ಇಂದಿನ ಕೆಲಸವನ್ನು ಇಂದೇ ಮಾಡಿ. ನೀವು ಸಮಯವನ್ನು ಗೌರವಿಸಿದರೆ, ನೀವು ಎಲ್ಲದರಲ್ಲೂ ಯಶಸ್ವಿಯಾಗುತ್ತೀರಿ. ಸಮಯ ಅಮೂಲ್ಯವಾದುದು. ಅದನ್ನು ಮರಳಿ ಪಡೆಯಲು ಸಾಧ್ಯವಿಲ್ಲ.

4) ಇಂದಿನ ಬಿಡುವಿಲ್ಲದ ಸಮಯದಲ್ಲಿ ಜನರು ತಮ್ಮ ಆಹಾರವನ್ನು ಸರಿಯಾಗಿ ತೆಗೆದುಕೊಳ್ಳುತ್ತಿಲ್ಲ. ಆದರೆ ಆರೋಗ್ಯವಾಗಿರಲು ಸಮಯಕ್ಕೆ ಸರಿಯಾಗಿ ತಿನ್ನುವುದು ಬಹಳ ಮುಖ್ಯ. ಆರೋಗ್ಯಕರ ಆಹಾರವನ್ನು ಸೇವಿಸಿ. ಆಗ ಮಾತ್ರ ನೀವು ಪೂರ್ಣ ಉತ್ಸಾಹದಿಂದ ನಿಮ್ಮ ಗುರಿಯತ್ತ ಸಾಗಬಹುದು ಮತ್ತು ಯಶಸ್ವಿಯಾಗಬಹುದು. ಸರಿಯಾದ ಆಲೋಚನೆಗಳು ಸರಿಯಾದ ಆಹಾರದಿಂದ ಮಾತ್ರ ಬರುತ್ತವೆ.

5) ದೇಹವು ಅನಾರೋಗ್ಯದಿಂದ ಬಳಲುತ್ತಿದ್ದರೆ ಜೀವನದಲ್ಲಿ ಯಾವುದೇ ಗುರಿಯನ್ನು ಸಾಧಿಸಲಾಗುವುದಿಲ್ಲ. ಫಿಟ್ ಆಗಿರಲು ಬೆಳಗಿನ ನಡಿಗೆ, ಯೋಗ, ಧ್ಯಾನ ಮಾಡಿ. ನೀವು ಆರೋಗ್ಯವಂತರಾಗಿದ್ದರೆ, ನೀವು ಪೂರ್ಣ ಶಕ್ತಿಯಿಂದ ಎಲ್ಲಾ ಕೆಲಸಗಳನ್ನು ಮಾಡಬಹುದು. ಬೆಳಗ್ಗೆ ಯೋಗ ಮಾಡಿದರೆ ಮಾನಸಿಕವಾಗಿ ಸದೃಢರಾಗುತ್ತೀರಿ. ಆಗ ಮಾತ್ರ ಯಶಸ್ಸಿನ ಸಾಧ್ಯತೆಗಳು ಹೆಚ್ಚು.

Whats_app_banner