Chanakya Niti: ಚಾಣಕ್ಯನ ಪ್ರಕಾರ ಮಹಿಳೆಯರಲ್ಲಿರುವ ಅಪಾಯಕಾರಿ ಗುಣಗಳಿವು
ಕನ್ನಡ ಸುದ್ದಿ  /  ಜೀವನಶೈಲಿ  /  Chanakya Niti: ಚಾಣಕ್ಯನ ಪ್ರಕಾರ ಮಹಿಳೆಯರಲ್ಲಿರುವ ಅಪಾಯಕಾರಿ ಗುಣಗಳಿವು

Chanakya Niti: ಚಾಣಕ್ಯನ ಪ್ರಕಾರ ಮಹಿಳೆಯರಲ್ಲಿರುವ ಅಪಾಯಕಾರಿ ಗುಣಗಳಿವು

Chanakya Niti in Kannada: ಆಚಾರ್ಯ ಚಾಣಕ್ಯರು ಬೋಧಿಸಿದ ವಿಷಯಗಳು ಇಂದಿಗೂ ಅನ್ವಯಿಸುತ್ತವೆ. ಚಾಣಕ್ಯನ ನೀತಿ ಪ್ರಕಾರ ಮಹಿಳೆಯರು ಈ ಗುಣಗಳನ್ನು ಬದಲಿಸಿಕೊಳ್ಳಬೇಕಂತೆ.

ಚಾಣಕ್ಯ ನೀತಿ
ಚಾಣಕ್ಯ ನೀತಿ

ಸುಖ-ದುಃಖ, ನೋವು-ನಲಿವು, ಹಣ, ಆಸೆ, ಸೇರಿದಂತೆ ಜೀವನದ ಪ್ರತಿಯೊಂದು ವಿಚಾರಗಳ ಬಗ್ಗೆಯೂ ತಮ್ಮ ನೀತಿಯಲ್ಲಿ ಹೇಳಿರುವ ಆಚಾರ್ಯ ಚಾಣಕ್ಯ, ಮಹಿಳೆಯರ ಕೆಲವು ತಪ್ಪು ಗುಣಗಳು, ಅಭ್ಯಾಸಗಳ ಬಗ್ಗೆಯೂ ಹೇಳಿದ್ದಾರೆ. ಇವನ್ನು ಬದಲಾಯಿಸಿಕೊಳ್ಳದಿದ್ದರೆ ಅನೇಕ ರೀತಿಯ ಸಮಸ್ಯೆಗಳು ಎದುರಾಗುತ್ತವೆ ಎಂದು ಚಾಣಕ್ಯ ನೀತಿಯಲ್ಲಿ ಹೇಳಲಾಗಿದೆ. ಆದರೆ ಈ ಅಂಶಗಳು ಪುರುಷರಿಗೂ ಅನ್ವಯವಾಗುತ್ತದೆ.

ಮಹಿಳೆಯನ್ನು ಶಕ್ತಿಗೆ ಹೋಲಿಸಲಾಗುತ್ತದೆ. ಕುಟುಂಬ ಕಟ್ಟುವ ಶಕ್ತಿ ಮಹಿಳೆಗೆ ಇದೆ. ಹಾಗೆಯೇ ಮಹಿಳೆ ಮನಸ್ಸು ಮಾಡಿದರೆ ಸಂಸಾರವನ್ನು ಒಡೆಯುವ ಶಕ್ತಿಯೂ ಇದೆ. ಸಮಾಜದಲ್ಲಿ ಮಹಿಳೆಯರಿಗೆ ಗೌರವ ಸ್ಥಾನವಿದೆ. ಚಾಣಕ್ಯನ ಪ್ರಕಾರ ಮಹಿಳೆಯರಲ್ಲಿ ಕೆಲವು ಗುಣಗಳಿದ್ದರೆ ಜೀವನ ಬಂಗಾರವಾಗುತ್ತದೆ. ಹಾಗೆಯೇ ಅವಳಲ್ಲಿರುವ ಕೆಲವು ಗುಣಗಳು ಜೀವನವನ್ನು ನಾಶಮಾಡುತ್ತವೆ. ಚಾಣಕ್ಯನ ಪ್ರಕಾರ ಮಹಿಳೆಯರಲ್ಲಿ ಇರಬಾರದ ಗುಣಗಳು ಯಾವುವು ಎಂದು ನೋಡೋಣ..

ಚಾಣಕ್ಯನ ನೀತಿಶಾಸ್ತ್ರದ ಪ್ರಕಾರ, ಪುರುಷರಿಗಿಂತ ಮಹಿಳೆಯರು ಹೆಚ್ಚು ದುರಾಸೆಯುಳ್ಳವರಾಗಿದ್ದಾರೆ. ಅದು ಹಣ, ಆಭರಣ, ಬಟ್ಟೆ ಇತ್ಯಾದಿ ವಿಷಯಗಳಲ್ಲಿ ಆಗಿರಬಹುದು. ಮನುಷ್ಯನಿಗೆ ಆಸೆ ಇರಬೇಕು ಆದರೆ ದುರಾಸೆ ಇರಬಾರದು. ಇದು ಯಾವಾಗಲೂ ಅಪಾಯಕಾರಿಯಾಗುತ್ತದೆ. ಅತಿಯಾಸೆಯಿಂದಾಗಿ ಜೀವನದಲ್ಲಿ ಅನೇಕ ಕಷ್ಟಗಳನ್ನು ಎದುರಿಸಬೇಕಾಗುತ್ತದೆ.

ಚಾಣಕ್ಯನ ಪ್ರಕಾರ ಮಹಿಳೆಯರು ಏನನ್ನಾದರೂ ಮಾಡುವಾಗ ಹೆಚ್ಚು ಯೋಚಿಸುವುದಿಲ್ಲ. ಪ್ರತಿಯೊಂದು ಕೆಲಸವನ್ನು ಮಾಡುವಾಗ ಎಚ್ಚರಿಕೆಯ ಕ್ರಮಗಳನ್ನು ತೆಗೆದುಕೊಳ್ಳಬೇಕು. ಸ್ವಲ್ಪ ಎಡವಿದರೂ ನಿಮ್ಮನ್ನು ಅಪಾಯಕ್ಕೆ ಸಿಲುಕಿಸುತ್ತದೆ. ಯೋಚಿಸದೆ ಮಾಡುವ ಕ್ರಿಯೆಗಳು ಯಶಸ್ಸನ್ನು ನೀಡುವುದಿಲ್ಲ. ನೀವು ಯೋಚಿಸಿದರೆ ಮಾತ್ರ ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳುತ್ತೀರಿ. ಯೋಚಿಸದೆ ಮುಂದೆ ಹೋದರೆ ಸಮಸ್ಯೆಗಳು ಬರುವುದು ಖಂಡಿತ. ಹೀಗಾಗಿ ಎಚ್ಚರಿಕೆಯಿಂದ ಯೋಚಿಸಿ ಮತ್ತು ಹೆಜ್ಜೆ ಹಾಕಿ ಅಂತಾರೆ ಆಚಾರ್ಯ ಕೌಟಿಲ್ಯ.

ಕೆಲವು ಮಹಿಳೆಯರು ತುಂಬಾ ಸ್ವಾರ್ಥಿಗಳಾಗಿರುತ್ತಾರೆ. ತಮ್ಮ ಕೆಲಸ ಆಗಬೇಕಂದ್ರೆ ಏನು ಬೇಕಾದರೂ ಮಾಡುತ್ತಾರೆ. ಕೆಲವರಿಗೆ ಈ ಗುಣ ಇರುತ್ತದೆ. ಇದರಿಂದ ಬೇರೆಯವರಿಗೆ ಕೆಟ್ಟದ್ದು ಆಗುವುದಾದರೆ ಮಹಿಳೆಯರು ಈ ಗುಣಗಳನ್ನು ತ್ಯಜಿಸಬೇಕು ಎಂದು ಚಾಣಕ್ಯ ಹೇಳುತ್ತಾರೆ.

ಕೆಲವು ಮಹಿಳೆಯರು ಸುಳ್ಳು ಹೇಳುವ ಪ್ರವೃತ್ತಿಯನ್ನು ಹೊಂದಿರುತ್ತಾರೆ. ಅವರು ಹೇಳುವ ಸುಳ್ಳುಗಳೇ ಅವರನ್ನು ಸಂಕಷ್ಟಕ್ಕೆ ಸಿಲುಕಿಸುತ್ತವೆ. ಇಂತಹ ಗುಣಗಳನ್ನು ಮಹಿಳೆಯರು ಬಿಡಬೇಕು ಎಂದು ಚಾಣಕ್ಯ ಹೇಳುತ್ತಾರೆ.

ಜಗತ್ತಿನಲ್ಲಿ ಯಾವುದೇ ವ್ಯಕ್ತಿ ಪರಿಪೂರ್ಣನಾಗಲು ಸಾಧ್ಯವಿಲ್ಲ. ಪ್ರತಿಯೊಬ್ಬರಿಗೂ ಕೆಲವು ನ್ಯೂನತೆಗಳಿವೆ. ಮಹಿಳೆಯರು ಕೂಡ ಈ ಕೆಲವು ಗುಣಗಳನ್ನು ಬದಲಾಯಿಸಿಕೊಳ್ಳಬೇಕು ಎಂದು ಚಾಣಕ್ಯ ಹೇಳುತ್ತಾರೆ.

(ಗಮನಿಸಿ: ಇಲ್ಲಿ ಹೇಳಿರುವ ಅಂಶಗಳು ಕೇವಲ ಮಹಿಳೆಯರಿಗೆ ಮಾತ್ರ ಅನ್ವಯಿಸುವುದಿಲ್ಲ, ಪ್ರತಿಯೊಬ್ಬ ಮನುಷ್ಯನಿಗೂ ಅನ್ವಯಿಸುತ್ತದೆ. ದುರಾಸೆ, ಯೋಚಿಸದೆ ಮಾಡುವ ಕೆಲಸ, ಅತಿಯಾದ ಸ್ವಾರ್ಥ ಬುದ್ಧಿ, ಸುಳ್ಳು ಹೇಳುವ ಗುಣ ಯಾರಿಗೂ ಒಳ್ಳೆಯದು ಮಾಡುವುದಿಲ್ಲ ಎಂಬುದು ಇದರ ಸಾರವಾಗಿದೆ)

Whats_app_banner