Chanakya Niti: ಒಳ್ಳೆಯ ವ್ಯಕ್ತಿಗಳು ಈ ವಿಷಯಗಳನ್ನು ರಹಸ್ಯವಾಗಿಡುತ್ತಾರೆ; ಬುದ್ಧಿವಂತರ ಲಕ್ಷಣ ತಿಳಿಸಿದ ಆಚಾರ್ಯ ಚಾಣಕ್ಯ
ಕನ್ನಡ ಸುದ್ದಿ  /  ಜೀವನಶೈಲಿ  /  Chanakya Niti: ಒಳ್ಳೆಯ ವ್ಯಕ್ತಿಗಳು ಈ ವಿಷಯಗಳನ್ನು ರಹಸ್ಯವಾಗಿಡುತ್ತಾರೆ; ಬುದ್ಧಿವಂತರ ಲಕ್ಷಣ ತಿಳಿಸಿದ ಆಚಾರ್ಯ ಚಾಣಕ್ಯ

Chanakya Niti: ಒಳ್ಳೆಯ ವ್ಯಕ್ತಿಗಳು ಈ ವಿಷಯಗಳನ್ನು ರಹಸ್ಯವಾಗಿಡುತ್ತಾರೆ; ಬುದ್ಧಿವಂತರ ಲಕ್ಷಣ ತಿಳಿಸಿದ ಆಚಾರ್ಯ ಚಾಣಕ್ಯ

Chanakya Niti in Kannada: ಜೀವನದಲ್ಲಿ ಯಶಸ್ವಿಯಾಗಲು ಆಚಾರ್ಯ ಚಾಣಕ್ಯ ಅನೇಕ ವಿಷಯಗಳನ್ನು ಹೇಳಿದ್ದಾರೆ. ಚಾಣಕ್ಯರ ಪ್ರಕಾರ ಒಳ್ಳೆಯ ವ್ಯಕ್ತಿಗಳು ಕೆಲವು ವಿಷಯಗಳನ್ನು ರಹಸ್ಯವಾಗಿ ಇಡುತ್ತಾರೆ. ಇದು ಬುದ್ಧಿವಂತರ ಲಕ್ಷಣ ಕೂಡ.

ಚಾಣಕ್ಯ ನೀತಿ
ಚಾಣಕ್ಯ ನೀತಿ

ಆಚಾರ್ಯ ಚಾಣಕ್ಯರು ಬೋಧಿಸಿದ ವಿಷಯಗಳು ಇಂದಿಗೂ ಅನ್ವಯಿಸುತ್ತವೆ. ಸುಖ-ದುಃಖ, ನೋವು-ನಲಿವು, ಹಣ, ಆಸೆ, ಸೇರಿದಂತೆ ಜೀವನದ ಪ್ರತಿಯೊಂದು ವಿಚಾರಗಳ ಬಗ್ಗೆಯೂ ತಮ್ಮ ನೀತಿಯಲ್ಲಿ ಹೇಳಿರುವ ಆಚಾರ್ಯ ಚಾಣಕ್ಯ ಒಳ್ಳೆಯ ವ್ಯಕ್ತಿಗಳ ಪ್ರಮುಖ ಲಕ್ಷಣವೊಂದನ್ನು ತಿಳಿಸಿದ್ದಾರೆ. ಚಾಣಕ್ಯರ ಪ್ರಕಾರ ಒಳ್ಳೆಯ ವ್ಯಕ್ತಿಗಳು ಕೆಲವು ವಿಷಯಗಳನ್ನು ರಹಸ್ಯವಾಗಿ ಇಡುತ್ತಾರೆ.

ಒಳ್ಳೆಯ ವ್ಯಕ್ತಿಯಲ್ಲಿ ಇರಬೇಕಾದ ಗುಣಗಳ ಬಗ್ಗೆ ತಮ್ಮ ಶಿಷ್ಯರಿಗೆ ಅನೇಕ ಉಪದೇಶಗಳನ್ನು ನೀಡಿರುವ ಆಚಾರ್ಯ ಚಾಣಕ್ಯರು ಕೆಲವು ರಹಸ್ಯಗಳನ್ನು ಬಹಿರಂಗಪಡಿಸದಂತೆ ನೋಡಿಕೊಳ್ಳುವುದು ಬುದ್ಧಿವಂತರ ಲಕ್ಷಣವಾಗಿದೆ ಎಂದಿದ್ದಾರೆ. ಕೆಲವು ವಿಷಯಗಳನ್ನು ಬಹಿರಂಗ ಪಡಿಸದೆ ಮುಚ್ಚಿಟ್ಟಾಗ ಮಾತ್ರ ಬುದ್ದಿವಂತರಾಗುತ್ತಾರೆ. ರಹಸ್ಯವಾಗಿಡಬೇಕಾದ ಆ ವಿಷಯಗಳು ಯಾವುದು ನೋಡೋಣ.

ಚಾಣಕ್ಯ ನೀತಿ ಪ್ರಕಾರ ಒಬ್ಬ ಜ್ಞಾನಿಯು ತಾನು ತಯಾರಿಸಿದ ಔಷಧಿಗಳು, ಮಾಡಿದ ಸಹಾಯ, ಮನೆಯಲ್ಲಿನ ನ್ಯೂನತೆಗಳು, ಮಿಲನಕ್ಕೆ ಸಂಬಂಧಿಸಿದ ವಿಷಯ, ಮತ್ತು ತಾನು ಕೇಳುವ ಕೆಟ್ಟ ಮಾತುಗಳ ಬಗ್ಗೆ ಯಾರಿಗೂ ಹೇಳುವುದಿಲ್ಲ. ಔಷಧಿಗಳ ರಹಸ್ಯ ಹೇಳಿದರೆ ಔಷಧಿಯ ಪರಿಣಾಮ ಕಡಿಮೆಯಾಗುತ್ತದೆ. ತಾನು ಮಾಡಿದ ದಾನ-ಧರ್ಮವನ್ನು ಯಾರಿಗೂ ಹೇಳಬಾರದು. ದಾನ ಮಾಡುತ್ತಾ ಧರ್ಮ ಪಾಲಿಸಿಕೊಂಡು ಹೋಗಬೆಕು.

ಪ್ರತಿಯೊಂದು ಕುಟುಂಬದಲ್ಲೂ ಕೊರತೆಗಳಿರುತ್ತವೆ. ಅವುಗಳನ್ನು ಪರಿಹರಿಸಬೇಕೇ ಹೊರತು ಬಹಿರಂಗಪಡಿಸಬಾರದು. ಮನೆಯಲ್ಲಿನ ನ್ಯೂನತೆಗಳನ್ನು ಹೊರಗಡೆ ಹೇಳಿದರೆ ಮೋಸ ಹೋಗುವುದು, ಮೂರ್ಖರಾಗುವುದು ನೀವೇ ಎಂಬುದನ್ನು ಅರಿತುಕೊಳ್ಳಬೇಕು.

ಮಿಲನ, ಲೈಂಗಿ ಕ್ರಿಯೆ, ಸಂಗಾತಿಯೊಂದಿಗೆ ಏಕಾಂಗಿಯಾಗಿ ಕಳೆದ ಸಮಯ, ಆ ಸಮಯದಲ್ಲಿ ಚರ್ಚಿಸಿದ ವಿಷಯಗಳ ಬಗ್ಗೆ ಬೇರೆಯವರು ಹೇಳುವುದು ಮೂರ್ಖತನ. ಈ ಮಾತುಗಳು ಸಂಪೂರ್ಣವಾಗಿ ಮಲಗುವ ಕೋಣೆಯ ನಾಲ್ಕು ಗೋಡೆಗಳ ಒಳಗೆ ಇರಬೇಕು. ಇವುಗಳನ್ನು ಇತರರೊಂದಿಗೆ ಚರ್ಚಿಸುವುದು ಸೂಕ್ತವಲ್ಲ.

ಯಾರಾದರೂ ನಿಮಗೆ ಸುಳ್ಳು ವಿಷಯಗಳನ್ನು ಹೇಳಿದರೆ, ಕಟ್ಟ ವಿಷಯಗಳನ್ನು ಹೇಳಿದರೆ ಅಥವಾ ನೀವು ಕೇಳಲು ಇಷ್ಟಪಡದ ಯಾವುದನ್ನಾದರೂ ಕೇಳಿದರೆ, ಯಾವುದೇ ಸಂದರ್ಭದಲ್ಲೂ ಅದನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಈ ಪದಗಳು, ಮಾತುಗಳು ನಿಮ್ಮ ತುಟಿಗಳನ್ನು ಮೀರಿ ಹೊರಬರಬಾರದು. ಅಷ್ಟೆ ಅಲ್ಲ ಮಾತನಾಡುವಾಗ ಹಿತವಾಗಿ ಮಾತನಾಡಬೇಕು ಎಂದಿದ್ದಾರೆ ಆಚಾರ್ಯ ಚಾಣಕ್ಯ.

Whats_app_banner