Kartika Masam: ಕಾರ್ತಿಕ ಮಾಸದಲ್ಲಿ ಶಿವನನ್ನು ಆರಾಧಿಸುವುದರಿಂದ ಜೀವನದಲ್ಲಿ ಏನೆಲ್ಲಾ ಬದಲಾವಣೆ ಆಗಲಿದೆ ನೋಡಿ-spiritual news get rid of all problems by worship lord shiva in kartika masam monday special pooja sts ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Kartika Masam: ಕಾರ್ತಿಕ ಮಾಸದಲ್ಲಿ ಶಿವನನ್ನು ಆರಾಧಿಸುವುದರಿಂದ ಜೀವನದಲ್ಲಿ ಏನೆಲ್ಲಾ ಬದಲಾವಣೆ ಆಗಲಿದೆ ನೋಡಿ

Kartika Masam: ಕಾರ್ತಿಕ ಮಾಸದಲ್ಲಿ ಶಿವನನ್ನು ಆರಾಧಿಸುವುದರಿಂದ ಜೀವನದಲ್ಲಿ ಏನೆಲ್ಲಾ ಬದಲಾವಣೆ ಆಗಲಿದೆ ನೋಡಿ

Kartika Masam: ಶಿವನ ಪೂಜೆಯಲ್ಲಿದೆ ಈ ಮಾಸದಲ್ಲಿ ಶ್ರೀ ಸುಬ್ರಹ್ಮಣ್ಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಬಹುದು. ಮುಖ್ಯವಾಗಿ ವಿಶಾಖ ನಕ್ಷತ್ರ ಇದ್ದ ದಿನಗಳಲ್ಲಿ ಸುಬ್ರಹ್ಮಣ್ಯ ಸ್ವಾಮಿಯ ಪೂಜೆ ಮಾಡಿ ಉಪವಾಸ ಮಾಡಬೇಕು. ಸೂರ್ಯಾಸ್ತವಾಗುವ ಒಳಗೆ 6 ದೀಪಗಳನ್ನು ಇಟ್ಟು ಗೋಧಿ ಹಿಟ್ಟಿನಿಂದ ಮಾಡಿದ ಸಿಹಿ ಖಾದ್ಯವನ್ನು ನೈವೇದ್ಯವನ್ನಾಗಿ ನೀಡಬೇಕು.

ಕಾರ್ತಿಕ ಮಾಸದ ಶಿವನ ಆರಾಧನೆ ಮಾಡುವುದರಿಂದ ಉತ್ತಮ ಫಲ ದೊರೆಯಲಿದೆ
ಕಾರ್ತಿಕ ಮಾಸದ ಶಿವನ ಆರಾಧನೆ ಮಾಡುವುದರಿಂದ ಉತ್ತಮ ಫಲ ದೊರೆಯಲಿದೆ (PC: Freepik)

Kartika Masam: ಕಾರ್ತಿಕ ಮಾಸ ಆರಂಭವಾಗಿದೆ. ಈ ಮಾಸಕ್ಕೆ ಸಂಬಂಧಿಸಿದಂತೆ ಅನೇಕ ವಿಶೇಷತೆಗಳಿವೆ. ಕಾರ್ತಿಕ ಮಾಸದ ಶುಕ್ಲ ಪಕ್ಷದ ಅಷ್ಟಮಿಯನ್ನು ಗೋಪಾಷ್ಟಮಿ ಎಂದು ಕರೆಯುತ್ತೇವೆ. ಈ ವೇಳೆಯಲ್ಲಿ ಗೋಪೂಜೆ ಗೋಪ್ರದಕ್ಷಿಣೆಯನ್ನು ಆಚರಿಸುವುದು ಶ್ರೇಷ್ಠ. ನವಮಿಯ ದಿನ ಮಥುರಾ ಕ್ಷೇತ್ರದಲ್ಲಿ ಪ್ರದಕ್ಷಿಣೆ ಮಾಡಬೇಕು. ಈ ದಿನವನ್ನು ಯುಗಾದಿ ಎಂದು ಕೆಲವು ಕಡೆ ಪರಿಗಣಿಸಲಾಗುತ್ತದೆ. ಈ ದಿನ ಕೆಲವು ಕಡೆ ಪಿಂಡ ರಹಿತ ಶ್ರಾದ್ಧ ಮಾಡುತ್ತಾರೆ.

ಭೀಷ್ಮ ಪಂಚಕ ವ್ರತ

ಕಾರ್ತಿಕ ಶುದ್ಧ ಏಕಾದಶಿಯಿಂದ 5 ದಿನಗಳ ಕಾಲ ಭೀಷ್ಮ ಪಂಚಕ ವ್ರತ ಆಚರಿಸುವ ವಾಡಿಕೆ ಇದೆ. ಈ ಮಾಸದಲ್ಲಿ ತಾರಾ ಬಲವನ್ನು ಆಧರಿಸಿ ಶಿವ ಅಥವಾ ವಿಷ್ಣುವಿನ ಮೂಲ ಮಂತ್ರವನ್ನು ಆಗಮಿಕರ ಮೂಲಕ ಹೇಳಿಸಿಕೊಳ್ಳಬಹುದು. ತದ ನಂತರ ಇದನ್ನು ಆಚರಿಸುತ್ತಾ ಬಂದಲ್ಲಿ ಎಲ್ಲ ವಿಚಾರದಲ್ಲೂ ಯಶಸ್ಸು ದೊರೆಯುತ್ತದೆ. ಈ ಸಮಯದಲ್ಲಿ ತುಳಸಿ ಮಾಲೆಯನ್ನು ಧರಿಸಿ ವಿಷ್ಣುವಿನ ಪೂಜೆ ಮಾಡುವುದು ಶ್ರೇಷ್ಠ. ಆಶ್ಲೇಷ, ಜೇಷ್ಠ ಮತ್ತು ರೇವತಿ ನಕ್ಷತ್ರಗಳು ಬಂದ ದಿನ ತಾರಾ ಬಲವನ್ನು ನೋಡಿ ಮನೆಯಲ್ಲಿ ಪುರುಷ ಸೂಕ್ತ ಹೋಮವನ್ನು ಮಾಡಬೇಕು, ಇದರಿಂದ ಯಾವುದೇ ರೀತಿಯ ಋಣಾತ್ಮಕ ಶಕ್ತಿಗಳಿಂದ ತೊಂದರೆ ಇದ್ದಲ್ಲಿ ಅದರಿಂದ ಮುಕ್ತರಾಗಬಹುದು. ಒಂದು ವೇಳೆ ಮನೆಯಲ್ಲಿ ಋಣಾತ್ಮಕ ಶಕ್ತಿ ಇದ್ದಲ್ಲಿ ಅದರಿಂದಲೂ ಪಾರಾಗಬಹುದು.

ಮನು ಸೂಕ್ತ ಹೋಮ

ಇದೇ ನಕ್ಷತ್ರಗಳಲ್ಲಿ ಮನು ಸೂಕ್ತ ಹೋಮ ಮಾಡಿದರೆ ವಿರೋಧಿಗಳ ಉಪಟಳದಿಂದ ಪಾರಾಗಬಹುದು. ಈ ಹೋಮದ ಫಲವಾಗಿ ಕೊಟ್ಟ ಹಣವನ್ನು ಮರು ಪಡೆಯಲು ಸಾಧ್ಯವಾಗುತ್ತದೆ. ಆರೋಗ್ಯದಲ್ಲಿ ಉನ್ನತಿ ಕಂಡು ಬರುತ್ತದೆ. ಕಾರ್ತಿಕ ಸೋಮವಾರಗಳಲ್ಲಿ ಶಿವ ಪಾರ್ವತಿಯ ಪೂಜೆ ಮಾಡಿದಲ್ಲಿ ವಿವಾಹ ನಿಶ್ಚಯವಾಗುದು ಮಾತ್ರವಲ್ಲದೆ ಭಕ್ತರ ಮನಸ್ಸಿನ ಆಸೆಗಳು ಈಡೇರುತ್ತವೆ. ಸೋಮವಾರದಂದು ಬಿಲ್ವಪತ್ರೆಯಿಂದ ಶಿವನನ್ನು ಪೂಜಿಸಬೇಕು. ಕಾರ್ತಿಕ ಮಾಸದ ಅಮಾವಾಸ್ಯೆಯ ದಿನ ಮಹಾ ರುದ್ರ ಹೋಮ ಮಾಡಿದಲ್ಲಿ ವಿರೋಧಿಗಳ ಮನಸ್ಸನ್ನು ಗೆಲ್ಲಬಹುದು. ಬಹುದಿನದಿಂದ ಕಾಡುತ್ತಿರುವ ಅನಾರೋಗ್ಯದ ಸಮಸ್ಯೆಯು ನಿವಾರಣೆಯಾಗುವುದು. ಕಾರ್ತಿಕ ಮಾಸದಲ್ಲಿ ದ್ವಾದಶ ಲಿಂಗ ದರ್ಶನ ಪಡೆದಲ್ಲಿ ವಿಶೇಷ ಫಲಿತಾಂಶಗಳು ದೊರೆಯುತ್ತದೆ.

ಶ್ರೀ ಸುಬ್ರಹ್ಮಣ್ಯ ಸ್ವಾಮಿಗೆ ವಿಶೇಷ ಪೂಜೆ

ಕೇವಲ ಶಿವನ ಪೂಜೆಯಲ್ಲಿದೆ ಈ ಮಾಸದಲ್ಲಿ ಶ್ರೀ ಸುಬ್ರಹ್ಮಣ್ಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಬಹುದು. ಮುಖ್ಯವಾಗಿ ವಿಶಾಖ ನಕ್ಷತ್ರ ಇದ್ದ ದಿನಗಳಲ್ಲಿ ಸುಬ್ರಹ್ಮಣ್ಯ ಸ್ವಾಮಿಯ ಪೂಜೆ ಮಾಡಿ ಉಪವಾಸ ಮಾಡಬೇಕು. ಸೂರ್ಯಾಸ್ತವಾಗುವ ಒಳಗೆ 6 ದೀಪಗಳನ್ನು ಇಟ್ಟು ಗೋಧಿ ಹಿಟ್ಟಿನಿಂದ ಮಾಡಿದ ಸಿಹಿ ಖಾದ್ಯವನ್ನು ನೈವೇದ್ಯವನ್ನಾಗಿ ನೀಡಬೇಕು. ಸಂತಾನ ದೋಷವುಳ್ಳವರು 5 ಜನ ಪುಟ್ಟ ಮಕ್ಕಳಿಗೆ ಭೋಜನ ವ್ಯವಸ್ಥೆ ಮಾಡಬೇಕು. ಮನೆ ಕಟ್ಟಲು ಅಥವಾ ಕೊಳ್ಳಲು ವಿಫಲರಾಗುತ್ತಿದ್ದಲ್ಲಿ ನಾಗ ಪ್ರತಿಷ್ಠೆ ಮಾಡಿಸಿ ಅದಕ್ಕೆ ಗೂಡನ್ನು ಕಟ್ಟಿಸಿ ಕೊಡಬೇಕು.

ಗುರುವಾರ ಪೂಜೆ

ಗುರುವಾರದಂದು ಕೂಡಾ ಹಸುವಿಗೆ ಗೋಧಿ ಬೆಲ್ಲ ಮುಂತಾದ ಆಹಾರ ನೀಡಿದರೆ ಆರೋಗ್ಯದಲ್ಲಿ ಚೇತರಿಕೆ ಉಂಟಾಗುತ್ತದೆ. ಬೆಳಗಿನ ವೇಳೆ 8 ಗಂಟೆಯ ಒಳಗೆ ಗೋ ಪೂಜೆಯನ್ನು ಮಾಡಿದರೆ, ಎಲ್ಲಾ ರೀತಿಯ ಪಾಪದಿಂದ ವಿಮುಕ್ತವಾಗಬಹುದು. ಕುಂಡಲಿಯಲ್ಲಿ ಶುಕ್ರನ ದೋಷವಿದ್ದಲ್ಲಿ ಕಂದು ಬಣ್ಣದ ಹಸುವಿಗೆ ಪೂಜೆ ಸಲ್ಲಿಸಬೇಕು. ದೇವಾಲಯದಲ್ಲಿ ಶಾಸ್ತ್ರಾನುಸಾರ ಪೂಜೆ ಸಲ್ಲಿಸಬಹುದು. ಮನೆಯಲ್ಲಿ ಹಸುವನ್ನು ಪೂಜಿಸಿ ಅದಕ್ಕೆ ಆಹಾರವನ್ನು ನೀಡಿದಲ್ಲಿ ಆ ಮನೆಯಲ್ಲಿರುವ ಋಣಾತ್ಮಕ ಶಕ್ತಿಯು ಸಂಪೂರ್ಣ ನಾಶವಾಗುತ್ತದೆ. ಗುರುಗಳ ಆಶ್ರಮದಲ್ಲಿ ಇರುವ ಹಸುಗಳಿಗೆ ಆಹಾರ ವ್ಯವಸ್ಥೆ ಮಾಡಿದರೆ ಆಹಾರದ ಕೊರತೆ ಜನ್ಮ ಜನ್ಮಕ್ಕೂ ಬಾರದು. ಸೋಮವಾರದಂದು ಕುಟುಂಬದಲ್ಲಿರುವ ಹಿರಿಯ ದಂಪತಿ ಹೊಸ ವಸ್ತ್ರವನ್ನು ನೀಡಿ ಅವರ ಆಶೀರ್ವಾದ ಪಡೆದರೆ ಅಪಮೃತ್ಯು ಪರಿಹಾರವಾಗಿ ದೀರ್ಘಾಯುಷ್ಯ ಲಭಿಸುತ್ತದೆ.

mysore-dasara_Entry_Point