ಆತ್ಮ ಪ್ರೇರಣೆ, ಜೀವನದ ಯಶಸ್ಸಿಗಾಗಿ ಬೈಬಲ್‌ನಲ್ಲಿರುವ 20 ಸ್ಪೂರ್ತಿದಾಯಕ ಸಂದೇಶಗಳನ್ನು ತಿಳಿಯಿರಿ -Bible Quotes
ಕನ್ನಡ ಸುದ್ದಿ  /  ಜೀವನಶೈಲಿ  /  ಆತ್ಮ ಪ್ರೇರಣೆ, ಜೀವನದ ಯಶಸ್ಸಿಗಾಗಿ ಬೈಬಲ್‌ನಲ್ಲಿರುವ 20 ಸ್ಪೂರ್ತಿದಾಯಕ ಸಂದೇಶಗಳನ್ನು ತಿಳಿಯಿರಿ -Bible Quotes

ಆತ್ಮ ಪ್ರೇರಣೆ, ಜೀವನದ ಯಶಸ್ಸಿಗಾಗಿ ಬೈಬಲ್‌ನಲ್ಲಿರುವ 20 ಸ್ಪೂರ್ತಿದಾಯಕ ಸಂದೇಶಗಳನ್ನು ತಿಳಿಯಿರಿ -Bible Quotes

ಎಲ್ಲಾ ಧರ್ಮಗ್ರಂಥಗಳು ಮನುಷ್ಯನ ಏಳಿಗೆ, ಸುಖ, ಶಾಂತಿ, ಸಂತೋಷ ಮತ್ತು ನೆಮ್ಮದಿಗೆ ಸಂಬಂಧಿಸಿದ ಸಂದೇಶಗಳನ್ನು ನೀಡುತ್ತವೆ. ಆತ್ಮ ಪ್ರೇರಣೆ, ಜೀವನದಲ್ಲಿನ ಯಶಸ್ಸಿಗಾಗಿ ಬೈಬಲ್‌ನಲ್ಲಿರುವ 20 ಸ್ಪೂರ್ತಿದಾಯಕ ಸಂದೇಶಗಳು ಇಲ್ಲಿವೆ.

ಆತ್ಮ ಪ್ರೇರಣೆ, ಜೀವನದ ಯಶಸ್ಸಿಗಾಗಿ ಬೈಬಲ್‌ನಲ್ಲಿರುವ 20 ಸ್ಪೂರ್ತಿದಾಯಕ ಸಂದೇಶಗಳನ್ನು ತಿಳಿಯಿರಿ
ಆತ್ಮ ಪ್ರೇರಣೆ, ಜೀವನದ ಯಶಸ್ಸಿಗಾಗಿ ಬೈಬಲ್‌ನಲ್ಲಿರುವ 20 ಸ್ಪೂರ್ತಿದಾಯಕ ಸಂದೇಶಗಳನ್ನು ತಿಳಿಯಿರಿ

Bible Quotes: ಜಗತ್ತಿನ ಅತಿ ಹೆಚ್ಚು ಜನರ ಧಾರ್ಮಿಕ ಗ್ರಂಥವಾಗಿರುವ ಪವಿತ್ರ ಬೈಬಲ್ ಕ್ರಿಶ್ಚಿಯನ್ ಧರ್ಮ, ಜುದಾಯಿಸಂ, ಇಸ್ಲಾಂ, ಸಮರಿಟನಿಸಂ, ಬಹಾಯಿ ಹಾಗೂ ಇತರೆ ಅಬ್ರಹಾಮಿಕ್ ನಂಬಿಕೆಗಳಲ್ಲಿ ಪೂಜಿಸಲ್ಪಟ್ಟ ಪವಿತ್ರ ಪುಸ್ತಕಗಳ ಸಂಕಲನವಾಗಿದೆ. ಈ ಕೃತಿಗಳನ್ನು ಬದಲಾವಣೆಯ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಬೈಬಲ್ ಅನ್ನು ಆರಂಭದಲ್ಲಿ ಹೀಬ್ರೂ, ಅರಾಮಿಕ್ ಹಾಗೂ ಕೊಯಿನ್ ಗ್ರೀನ್ ಭಾಷೆಯಲ್ಲಿ ರಚಿಸಲಾಯಿತು. ಸೂಚನೆಗಳು, ಕಥೆಗಳು, ಕವನಗಳು ಹಾಗೂ ಭವಿಷ್ಯವಾಣಿಗಳನ್ನು ಬೈಬಲ್ ಒಳಗೊಂಡಿದೆ.

ಈ ಧಾರ್ಮಿಕ ಪುಸ್ತಕ ಸ್ಪೂರ್ತಿದಾಯಕ ಬುದ್ದಿವಂತಿಕೆಯನ್ನು ಸಹ ನೀಡುತ್ತೆ. ಒಬ್ಬ ವ್ಯಕ್ತಿಯು ಜೀವನದಲ್ಲಿ ಯಶಸ್ವಿಯಾಗಲು ಸಹಾಯ ಮಾಡುತ್ತದೆ. ನಿಮ್ಮ ಆತ್ಮಕ್ಕೆ ಸ್ಪೂರ್ತಿ ನೀಡಲು ಬೈಬಲ್‌ನಲ್ಲಿರುವ 20 ಸ್ಪೂರ್ದಾಯಕ ಸಂದೇಶಗಳು ಇಲ್ಲಿವೆ.

1. ನೀವು ದೇವರ ಆಲಯವಾಗಿದ್ದೀರೆಂದೂ ದೇವರ ಆತ್ಮನು ನಿಮ್ಮಲ್ಲಿ ವಾಸಮಾಡುತ್ತಾನೆಂದೂ ನಿಮಗೆ ಗೊತ್ತಿಲ್ಲವೋ (1ನೇ ಕೊರಿಂಥದವರಿಗೆ 3.16)

2. ಪ್ರೀತಿ ಬಹು ತಾಳ್ಮೆಯುಳ್ಳದ್ದು, ಪ್ರೀತಿ ದಯೆ ತೋರಿಸುವುದು, ಪ್ರೀತಿಯು ಹೊಟ್ಟೆಕಿಚ್ಚು ಪಡುವುದಿಲ್ಲ, ಹೊಗಳಿಕೊಳ್ಳುವುದಿಲ್ಲ, ಉಬ್ಬಿಕೊಳ್ಳುವುದ್ದಿಲ್ಲ (1ನೇ ಕೊರಿಂಥವರಿಗೆ 13.4)

3. ನಂಬಿಕೆ, ನಿರೀಕ್ಷೆ, ಪ್ರೀತಿ ಈ ಮೂರೇ ನಿಲ್ಲುತ್ತವೆ. ಇವುಗಳಲ್ಲಿ ದೊಡ್ಡದು ಪ್ರೀತಿಯೇ ( 1ನೇ ಕೊರಿಂಥವರಿಗೆ 13.13)

4. ಇದನ್ನು ನೆನಪಿಡಿ - ಸ್ವಲ್ಪವಾಗಿ ಬಿತ್ತುವವನು, ಸ್ವಲ್ಪವಾಗಿ ಕೊಯ್ಯುವನು, ಹೆಚ್ಚಾಗಿ ಬಿತ್ತುವವನು ಹೆಚ್ಚಾಗಿ ಕೊಯ್ಯುವನು (2ನೇ ಕೊರಿಂಥವರಿಗೆ 9.6)

5 ಪ್ರತಿಯೊಂದಕ್ಕೂ ಒಂದು ಸಮಯವಿದೆ. ಆಕಾಶದ ಕೆಳಗೆ ನಡೆಯುವ ಒಂದೊಂದು ಕೆಲಸಕ್ಕೂ ತಕ್ಕ ಸಮಯವುಂಟು (ಪ್ರಸಂಗಿ 3.1)

6 ನಿಮ್ಮ ಬಾಯೊಳಗಿಂದ ಯಾವ ಕೆಟ್ಟ ಮಾತೂ ಹೊರಡಬಾರದು. ಭಕ್ತಿಯನ್ನು ವೃದ್ಧಿಮಾಡುವಂತ ಕಾಲೋಚಿತವಾದ ಮಾತು ಇದ್ದರೆ ಕೇಳುವವರ ಹಿತಕ್ಕಾಗಿ ಅದನ್ನು ಆಡಿರಿ. (ಎಫೆಸದವರಿಗೆ 4.29)

7 ಎಲ್ಲಾ ದ್ವೇಷ ಕೋಪ ಕ್ರೋಧ ಕಲಹ ದೂಷಣೆ ಇವುಗಳನ್ನೂ ಸಕಲವಿಧವಾದ ದುಷ್ಟತನವನ್ನು ನಿಮ್ಮಿಂದ ದೂರ ಮಾಡಿರಿ.ಒಬ್ಬರಿಗೊಬ್ಬರಿಗೆ ಉಪಕಾರಿಗಳಾಗಿಯೂ ಕರುಣೆಯುಳ್ಳವರಾಗಿಯೂ ಕ್ಷಮಿಸುವವರಾಗಿಯೂ ಇರಿ. (ಎಫೆಸದವರಿಗೆ 4.31)

8 ಕತ್ತಲೆಗೆ ಸಂಬಂಧವಾದ ಕೃತ್ಯಗಳಿಂದ ಯಾವ ಪ್ರಯೋಜನವು ಬರಲಾರದು. ಅವುಗಳಲ್ಲಿ ಪಾಲುಗಾರರಾಗಿರದೆ ಅವುಗಳನ್ನು ಬೈಲಿಗೆ ತಂದು ಖಂಡಿಸಿ (ಎಫೆಸದವರಿಗೆ 5.11)

9 ನೀವು ನಡೆದುಕೊಳ್ಳುವ ರೀತಿಯನ್ನು ಚೆನ್ನಾಗಿ ನೋಡಿಕೊಳ್ಳಿರಿ, ಜ್ಞಾನವಿಲ್ಲದವರಾಗಿರದೆ ಜ್ಞಾನವಂತರಾಗಿರಿ (ಎಫೆಸದವರಿಗೆ 5.15)

10 ನಮ್ಮ ಹೋರಾಟವು ಮಾಂಸ ಮತ್ತು ರಕ್ತದ ವಿರುದ್ಧವಲ್ಲ, ಆದರೆ ಆಡಳಿತಗಾರರ ವಿರುದ್ಧ, ಅಧಿಕಾರಿಗಳ ವಿರುದ್ಧ, ಈ ಕತ್ತಲೆಯ ಪ್ರಪಂಚದ ಶಕ್ತಿಗಳ ವಿರುದ್ಧ ಮತ್ತು ಸ್ವರ್ಗೀಯ ಕ್ಷೇತ್ರಗಳಲ್ಲಿನ ದುಷ್ಟ ಶಕ್ತಿಕಗಳ ವಿರುದ್ಧ. (ಎಫೆಸದವರಿಗೆ 6.12)

11 ಆದರೆ ಆತ್ಮದ ಫಲವೆಂದರೆ ಪ್ರೀತಿ, ಸಂತೋಷ, ಶಾಂತಿ, ತಾಳ್ಮೆ, ದಯೆ, ಒಳ್ಳೆಯತನ ಮತ್ತು ನಿಷ್ಠೆ. ಗಲಾತ್ಯ 5.22

12 ಈಗ ನಂಬಿಕೆಯು ನಾವು ಏನನ್ನು ನಿರೀಕ್ಷಿಸುತ್ತೇವೆ ಎಂಬುದರ ಬಗ್ಗೆ ಖಚಿತವಾಗಿರುವುದು ಮತ್ತು ನಾವು ನೋಡದಿರುವ ಬಗ್ಗೆ ಖಚಿತವಾಗಿರುವುದು. (ಇಬ್ರಿಯಾ 11.1)

13 ಕೆಟ್ಟದ್ದನ್ನು ಒಳ್ಳೆಯದು ಮತ್ತು ಒಳ್ಳೆಯದನ್ನು ಕೆಟ್ಟದು ಎಂದು ಕರೆಯುವವರಿಗೆ ಅಯ್ಯೋ, ಕತ್ತಲೆಯನ್ನು ಬೆಳಕಿಗಾಗಿ ಮತ್ತು ಬೆಳಕನ್ನು ಕತ್ತಲೆಗೆ ಇಡುವವರು, ಕಹಿಯನ್ನು ಸಿಹಿ ಮತ್ತು ಸಿಹಿಯನ್ನು ಕಹಿ ಎಂದು ಇಡುತ್ತಾರೆ. (ಯೆಶಾಯ 5.20)

14 ಸೂರ್ಯನು ಸುಡುವ ಶಾಖದಿಂದ ಉದಯಿಸುತ್ತಾನೆ ಮತ್ತು ಸಸ್ಯವು ಒಣಗುತ್ತದೆ. ಅದರ ಹೂವು ಬೀಳುತ್ತದೆ ಮತ್ತು ಅದರ ಸೌಂದರ್ಯವು ನಾಶವಾಗುತ್ತದೆ. ಅದೇ ರೀತಿಯಲ್ಲಿ, ಶ್ರೀಮಂತರು ತಮ್ಮ ವ್ಯವಹಾರವನ್ನು ಮಾಡುವಾಗಲೂ ಮರೆಯಾಗುತ್ತಾರೆ. (ಜೇಮ್ಸ್ 1.11)

15 ಜನರು ತಾವು ಮಾಡುವದರಿಂದ ಸಮರ್ಥಿಸಲ್ಪಡುತ್ತಾರೆ ಮತ್ತು ಕೇವಲ ನಂಬಿಯಿಂದಲ್ಲ ಎಂದು ನೀವು ನೋಡುತ್ತೀರಿ (ಜೇಮ್ಸ್ 2.24)

16 ನಿಮ್ಮ ನಡುವೆ ಜಗಳಗಳು ಮತ್ತು ಜಗಳಗಳಿಗೆ ಕಾರಣವೇನು? ಅವು ನಿಮ್ಮೊಳಗಿನ ಕಾದಾಟದಿಂದ ನಿಮ್ಮ ಆಸೆಗಳಿಂದ ಬರುವುದಿಲ್ಲವೇ (ಜೇಮ್ಸ್ 4.1)

17 ನಿಮ್ಮಲ್ಲಿ ಯಾರಾದರೂ ತೊಂದರೆಯಲ್ಲಿದ್ದಾರೆಯೇ? ಅವರು ಪ್ರಾರ್ಥಿಸಲಿ. ಯಾರಾದರೂ ಸಂತೋಷವಾಗಿದ್ದಾರೆಯೇ? ಅವರು ಹೊಗಳಿಕೆಯ ಹಾಡುಗಳನ್ನು ಹಾಡಲಿ. (ಜೇಮ್ಸ್ 5.13)

18 ಕತ್ತಲೆಯಲ್ಲಿ ಬೆಳಕು ಹೊಳೆಯುತ್ತದೆ ಮತ್ತು ಕತ್ತಲೆಯು ಅದನ್ನು ಜಯಿಸಲಿಲ್ಲ. (ಯೋಹಾನ 1.5)

19 ನಾವು ಪಾಪವಿಲ್ಲದವರೆಂದು ಹೇಳಿಕೊಂಡರೆ, ನಾವು ನಮ್ಮನ್ನು ಮೋಸಗೊಳಿಸಿಕೊಳ್ಳುತ್ತೇವೆ ಮತ್ತು ಸತ್ಯವು ನಮ್ಮಲ್ಲಿಲ್ಲ. (1 ಯೋಹಾನ 1.8)

20 ಪ್ರೀತಿಯಲ್ಲಿ ಭಯವಿಲ್ಲ. ಆದರೆ ಪರಿಪೂರ್ಣ ಪ್ರೀತಿ ಭಯವನ್ನು ಹೊರಹಾಕುತ್ತದೆ, ಏಕೆಂದರೆ ಭಯವು ಶಿಕ್ಷೆಗೆ ಸಂಬಂಧಿಸಿದೆ. ಭಯಪಡುವವನು ಪ್ರೀತಿಯಲ್ಲಿ ಪರಿಪೂರ್ಣನಾಗುವುದಿಲ್ಲ. (1 ಯೋಹಾನ 4.18)

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

Whats_app_banner