Spiritual News: ಪ್ರತಿ ಹಿಂದುವೂ ನೋಡಬೇಕಾದ, ಶಿವನ ಅಗಾಧ ಶಕ್ತಿಗೆ ನಿದರ್ಶನವಾದ ಜ್ಯೋತಿರ್ಲಿಂಗಗಳಿವು
ಭಾರತದಲ್ಲಿ ಒಟ್ಟು 12 ಜ್ಯೋತಿರ್ಲಿಂಗಗಳಿದ್ದು ಪ್ರತಿ ಹಿಂದೂಗಳು ಇದನ್ನು ನೋಡಬೇಕು. ಇದನ್ನು ದ್ವಾದಶ ಜ್ಯೋತಿರ್ಲಿಂಗಗಳು ಎಂದು ಕರೆಯಲಾಗುತ್ತದೆ. ಕೇದಾರನಾಥ , ಮಹಾಕಾಳೇಶ್ವರ ಸೇರಿದಂತೆ ಕೆಲವು ಜ್ಯೋತಿರ್ಲಿಂಗಗಳು ಶಿವನ ಅಗಾಧ ಶಕ್ತಿಗೆ ನಿದರ್ಶನವಾಗಿದೆ.
Spiritual News: ಪ್ರತಿಯೊಬ್ಬ ಹಿಂದುವೂ ಜೀವನದಲ್ಲಿ ಒಮ್ಮೆಯಾದರೂ ಜ್ಯೋತಿರ್ಲಿಂಗಗಳಿಗೆ ಭೇಟಿ ನೀಡಬೇಕು. ಜ್ಯೋತಿರ್ಲಿಂಗಗಳು ಹಿಂದೂಗಳಿಗೆ ವಿಶೇಷ ಪವಿತ್ರ ಸ್ಥಳವೆಂದು ಪರಿಗಣಿಸಲಾಗಿದೆ. ಶೈವರು ಶಿವನನ್ನು ಮೂರ್ತಿ ಮತ್ತು ಲಿಂಗದ ರೂಪದಲ್ಲಿ ಪೂಜಿಸುತ್ತಾರೆ. ಶಿವನು ಲಿಂಗ ರೂಪದಲ್ಲಿ ಜ್ಯೋತಿಸ್ವರೂಪನಾಗಿದ್ದಾನೆ ಎಂದು ಭಕ್ತರು ನಂಬಿದ್ದಾರೆ.
ಭಾರತದಲ್ಲಿ ಒಟ್ಟು 12 ಜ್ಯೋತಿರ್ಲಿಂಗಗಳಿವೆ. ಅವುಗಳನ್ನು ದ್ವಾದಶ ಜ್ಯೋತಿರ್ಲಿಂಗಗಳು ಎಂದೂ ಕರೆಯುತ್ತಾರೆ. ಈ ಜ್ಯೋತಿರ್ಲಿಂಗಗಳಲ್ಲಿ ವಾರಣಾಸಿಯ ಕಾಶಿ ವಿಶ್ವನಾಥ ಮತ್ತು ಗುಜರಾತ್‌ನ ಸೋಮನಾಥ ಸೇರಿವೆ. ಈ ದೇವಾಲಯಗಳು ಶಿವನ ಅಗಾಧ ಶಕ್ತಿಯನ್ನು ಪ್ರತಿನಿಧಿಸುತ್ತವೆ. ಈ ಜ್ಯೋತಿರ್ಲಿಂಗಗಳು ವಿಶೇಷವಾದ ಸ್ಥಳಗಳಾಗಿದ್ದು, ಭಕ್ತರು ಭಗವಾನ್ ಶಿವನಿಗೆ ಹತ್ತಿರವಾಗುತ್ತಾರೆ. ಜೀವನದಲ್ಲಿ ಒಮ್ಮೆಯಾದರೂ ಇವುಗಳನ್ನು ಭೇಟಿ ಮಾಡಲು ಬಯಸುತ್ತಾರೆ. ಭಾರತದ ಕೆಲವು ಪ್ರಸಿದ್ಧ ಜ್ಯೋತಿರ್ಲಿಂಗಗಳು ಬಗ್ಗೆ ಇಲ್ಲಿದೆ ಒಂದಿಷ್ಟು ಮಾಹಿತಿ.
ಕೇದಾರನಾಥ ಜ್ಯೋತಿರ್ಲಿಂಗ
ಉತ್ತರಾಖಂಡದ ಹಿಮಾಲಯದ ಮಧ್ಯದಲ್ಲಿರುವ ಕೇದಾರನಾಥ ಜ್ಯೋತಿರ್ಲಿಂಗವು ಬಹಳ ಪ್ರಸಿದ್ಧವಾಗಿದೆ. ಇದು ಭಕ್ತರ ಅಪ್ರತಿಮ ಶಿವಭಕ್ತಿಗೆ ಸಾಕ್ಷಿಯಾಗಿದೆ. ಪುರಾಣಗಳ ಪ್ರಕಾರ, ಶಿವನು ಗೂಳಿಯ ರೂಪವನ್ನು ತಾಳಿ ಪಾಂಡವರಿಂದ ಅಡಗಿಕೊಂಡನು. ಆದರೆ ಭೀಮ ಅವನನ್ನು ಗುರುತಿಸುತ್ತಾನೆ. ಪುರಾಣಗಳ ಪ್ರಕಾರ ಪಾಂಡವರು ಶಿವನ ಆಶೀರ್ವಾದ ಕೋರಿ ಈ ದೇವಾಲಯವನ್ನು ನಿರ್ಮಿಸಿದರು. ಈ ದೇವಾಲಯವು ವರ್ಷದಲ್ಲಿ6 ತಿಂಗಳು ಮಾತ್ರ ತೆರೆದಿರುತ್ತದೆ. ಉಳಿದ ಆರು ತಿಂಗಳು ಹಿಮದಿಂದ ಆವೃತವಾಗಿರುತ್ತದೆ. ಈ ದೇವಾಲಯಕ್ಕೆ ಭೇಟಿ ನೀಡಲು ಸುಮಾರು20 ಕಿಮೀಗಿಂತಲೂ ಹೆಚ್ಚು ಚಾರಣ ಮಾಡಬೇಕು.
ಮಹಾಕಾಳೇಶ್ವರ ಜ್ಯೋತಿರ್ಲಿಂಗ
ಮಹಾಕಾಳೇಶ್ವರ ದೇವಾಲಯವು ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಪವಿತ್ರ ಶಿಪ್ರಾ ನದಿಯ ದಡದಲ್ಲಿದೆ. ಮಹಾ ಕಾಳೇಶ್ವರ ಎಂದರೆ ಸಮಯದ ಅಧಿಪತಿ ಎಂದರ್ಥ. ಇಲ್ಲಿ ಪ್ರತಿದಿನ ಬೆಳಿಗ್ಗೆ ಭಸ್ಮ ಆರತಿಯನ್ನು ಅರ್ಪಿಸಲಾಗುತ್ತದೆ ಇಲ್ಲಿ ಮಹಾಶಿವರಾತ್ರಿಯನ್ನು ಬಹಳ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಆ ಸಮಯದಲ್ಲಿ ಇಡೀ ಸ್ಥಳವು ಶಿವನ ನಾಮಸ್ಮರಣೆಯಿಂದ ಪ್ರತಿಧ್ವನಿಸುತ್ತದೆ.
ಕಾಶಿ ವಿಶ್ವನಾಥ ಜ್ಯೋತಿರ್ಲಿಂಗ
ಇದು ಬನಾರಸ್‌ನ ಗಂಗಾ ಘಾಟ್ ಬಳಿ ಇದೆ. ವಾರಣಾಸಿನಗರ, ಈ ಜ್ಯೋತಿರ್ಲಿಂಗವು ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿನಿಧಿಸುತ್ತದೆ. ದಂತಕಥೆಯ ಪ್ರಕಾರ, ಮೊದಲ ಜ್ಯೋತಿರ್ಲಿಂಗ ಪ್ರತಿಷ್ಠಾಪನೆಯಾಗಿದ್ದು ಇಲ್ಲೇ. ಕಾಶಿಯು ಶಿವನ ಶಾಶ್ವತ ನೆಲೆಯಾಗಿದೆ ಎಂದು ಭಕ್ತರು ನಂಬುತ್ತಾರೆ. ಸಾಯುವ ಮುನ್ನ ಒಮ್ಮೆಯಾದರೂ ಕಾಶಿಗೆ ಭೇಟಿ ನೀಡಬೇಕು ಎಂದು ಹೇಳಲಾಗುತ್ತದೆ. ಈ ದೇವಾಲಯವು ಶಿವನಿಗೆ ಬಹಳ ಪ್ರಿಯವಾಗಿದೆ. ಕಾಶಿಯಲ್ಲಿ ಮಡಿದವರ ಚಿತಾಭಸ್ಮವನ್ನು ಗಂಗೆಯಲ್ಲಿ ಬೆರೆಸಿದರೆ ಸತ್ತವರಿಗೆ ಮುಕ್ತಿ ಸಿಗುತ್ತದೆ ಎಂಬುದು ಜನರ ನಂಬಿಕೆ. ಶಿವನು ಭಕ್ತರಿಗೆ ಮೋಕ್ಷ ಮತ್ತು ಸಂತೋಷವನ್ನು ನೀಡುತ್ತಾನೆ ಎಂದು ನಂಬಲಾಗಿದೆ. ಈ ದೇವಾಲಯವನ್ನು ಹಲವು ಬಾರಿ ಜೀರ್ಣೋದ್ಧಾರ ಮಾಡಲಾಗಿದೆ.
ರಾಮೇಶ್ವರ ಜ್ಯೋತಿರ್ಲಿಂಗ
ರಾಮೇಶ್ವರಂ ಜ್ಯೋತಿರ್ಲಿಂಗವು ತಮಿಳುನಾಡಿನ ಹಿಂದೂ ಮಹಾಸಾಗರದ ಸಮೀಪದಲ್ಲಿದೆ. ಬ್ರಾಹ್ಮಣನಾದ ರಾವಣನನ್ನು ಸಂಹರಿಸಿದ ನಂತರ ಶ್ರೀರಾಮನು ಪಾಪವನ್ನು ಕಳೆದುಕೊಳ್ಳಲು ಇಲ್ಲಿ ಶಿವಲಿಂಗವನ್ನು ಸ್ಥಾಪಿಸಿದನು ಎಂಬ ಕಥೆ ಇದೆ. ಈ ಪುಣ್ಯಕ್ಷೇತ್ರಕ್ಕೆ ಬಂದರೆ ಪಾಪಗಳು ತೊಲಗುತ್ತದೆ ಎಂಬ ನಂಬಿಕೆ ಇದೆ.
ಸೋಮನಾಥ ದೇವಾಲಯ
ಗುಜರಾತ್ ಕರಾವಳಿಯಲ್ಲಿರುವ ಸೋಮನಾಥ ದೇವಾಲಯವು ಶಕ್ತಿ ಮತ್ತು ಭಕ್ತಿಯ ದ್ಯೋತಕವಾಗಿದೆ. ಅನೇಕ ಬಾರಿ ನಾಶವಾಗಿದ್ದರೂ, ಈ ದೇವಾಲಯವನ್ನು ಪುನರ್ನಿರ್ಮಿಸಲಾಗಿದೆ. ಇದು ಜ್ಯೋತಿರ್ಲಿಂಗಗಳಲ್ಲಿ ಮೊದಲನೆಯದು. ಶ್ರೀಕೃಷ್ಣನು ಬೆಳಗಿಸಿದ ದೀಪವು ಇಂದಿಗೂ ಇಲ್ಲಿ ಉರಿಯುತ್ತಿರುವುದು ವಿಶೇಷ.
ವೈದ್ಯನಾಥ ಜ್ಯೋತಿರ್ಲಿಂಗ
ಇದು ಜಾರ್ಖಂಡ್‌ನ ದಿಯೋಘರ್‌ನಲ್ಲಿದೆ. ರಾವಣನು ಶಿವಲಿಂಗವನ್ನು ಕೊಂಡೊಯ್ಯುವ ಸಮಯದಲ್ಲಿ, ಲಂಕೆಗೆ ಹೋಗುವ ದಾರಿಯಲ್ಲಿ ಎಲ್ಲಿಯಾದರೂ ಲಿಂಗವನ್ನು ಕೆಳಗೆ ಇಟ್ಟರೆ ಅಲ್ಲೇ ಉಳಿಯುವುದಾಗಿ ಶಿವನು ರಾವಣನಿಗೆ ಎಚ್ಚರಿಕೆ ನೀಡುತ್ತಾನೆ. ಒಂದು ಹಂತದಲ್ಲಿ ರಾವಣನು ಶಿವಲಿಂಗವನ್ನು ನೆಲದ ಮೇಲೆ ಇಡುತ್ತಾನೆ. ನಂತರ ಆ ಸ್ಥಳದಿಂದ ಶಿವಲಿಂಗವನ್ನು ತೆಗೆಯಲು ರಾವಣನಿಂದ ಸಾಧ್ಯವಾಗುವುದಿಲ್ಲ. ಅದರಿಂದ ರಾವಣನು ತನ್ನ ಒಂದೊಂದು ತಲೆಯನ್ನು ಕತ್ತರಿಸಿಕೊಂಡು ಬಂದನು. ರಾವಣನ ಭಕ್ತಿಯಿಂದ ಪ್ರಭಾವಿತನಾದ ಶಿವನು ಆತನ ಮುಂದೆ ಪ್ರತ್ಯಕ್ಷನಾಗಿ ಮತ್ತೆ ಆತನಿಗೆ ಜೀವ ನೀಡಿದು ಎಂಬ ಕಥೆ ಇದೆ.