ಕನ್ನಡ ಸುದ್ದಿ  /  ಜೀವನಶೈಲಿ  /  Success: ಯಶಸ್ಸಿನತ್ತ ನಿಮ್ಮನ್ನು ಪ್ರೇರೇಪಿಸುವ ಸಂಸ್ಕೃತ ಶ್ಲೋಕಗಳಿವು; ಅರ್ಥ ಸಹಿತ ವಿವರ ಹೀಗಿದೆ

Success: ಯಶಸ್ಸಿನತ್ತ ನಿಮ್ಮನ್ನು ಪ್ರೇರೇಪಿಸುವ ಸಂಸ್ಕೃತ ಶ್ಲೋಕಗಳಿವು; ಅರ್ಥ ಸಹಿತ ವಿವರ ಹೀಗಿದೆ

ಜೀವನದಲ್ಲಿ ಯಶಸ್ಸು ಸಾಧಿಸಲು ಎಲ್ಲರೂ ಬಯಸುತ್ತಾರೆ. ಯಶಸ್ಸಿನೆಡೆಗೆ ನಿಮ್ಮನ್ನು ಪ್ರೇರೇಪಿಸುವ ಹಲವು ಮಾರ್ಗಗಳಿವೆ. ಇದಕ್ಕೆ ಸಂಸ್ಕೃತ ಶ್ಲೋಕಗಳು ಸಹಕಾರಿ. ಅರ್ಥದೊಂದಿಗೆ ಆ ಶ್ಲೋಕಗಳು ಯಾವುವು ಎಂಬ ಮಾಹಿತಿ ಇಲ್ಲಿದೆ.

ಯಶಸ್ಸಿನತ್ತ ನಿಮ್ಮನ್ನು ಪ್ರೇರೇಪಿಸುವ ಸಂಸ್ಕೃತ ಶ್ಲೋಕಗಳು
ಯಶಸ್ಸಿನತ್ತ ನಿಮ್ಮನ್ನು ಪ್ರೇರೇಪಿಸುವ ಸಂಸ್ಕೃತ ಶ್ಲೋಕಗಳು (pixabay)

ಜೀವನದಲ್ಲಿ ಪ್ರತಿಯೊಬ್ಬರೂ ಯಶಸ್ವಿಯಾಗಲು ಬಯಸುತ್ತಾರೆ. ಏನನ್ನಾದರೂ ಸಾಧಿಸಿ, ಯಶಸ್ಸಿನ ಉತ್ತುಂಗಕ್ಕೇರಿ ಹಣ ಸಂಪಾದಿಸಬೇಕು ಎಂಬುದು ಪ್ರತಿಯೊಬ್ಬರ ಬಯಕೆ. ಯಶಸ್ಸು ಗಳಿಸಲು ಉತ್ತಮ ಆರೋಗ್ಯದೊಂದಿಗೆ ನೆಮ್ಮದಿಯ ಜೀವನ ಬೇಕೇಬೇಕು. ದೇಹ ಮತ್ತು ಮನಸ್ಸು ಆರೋಗ್ಯವಾಗಿದ್ದಾಗ, ಸಾಧನೆಯ ಹಾದಿ ಕೂಡಾ ಸುಲಭವಾಗುತ್ತದೆ. ಮನಸ್ಸಿನ ಆರೋಗ್ಯಕ್ಕೆ ಯೋಗ, ಧ್ಯಾನಗಳು ಸಹಕಾರಿ. ಇದೇ ವೇಳೆ ಹಿಂದೂ ಶಾಸ್ತ್ರಗಳ ಪ್ರಕಾರ, ಮನುಷ್ಯನು ತನ್ನ ಗುರಿ ಸಾಧಿಸಿ ಯಶಸ್ಸು ಪಡೆಯಲು ಕೆಲವೊಂದು ಪ್ರೇರಕ ಮಾರ್ಗಗಳಿವೆ. ಶ್ಲೋಕ ಪಠಣದಿಂದ ದೇಹದಲ್ಲಿ ನೈತಿಕ ಬಲ ತುಂಬುತ್ತದೆ.

ಟ್ರೆಂಡಿಂಗ್​ ಸುದ್ದಿ

ಶ್ಲೋಕಗಳು ಅರ್ಥಪೂರ್ಣವಾಗಿದ್ದು, ಜೀವನದಲ್ಲಿ ಯಶಸ್ವಿಯಾಗಲು ಮತ್ತು ನಿಮ್ಮ ಅಪೇಕ್ಷಿತ ಗುರಿಗಳನ್ನು ಸಾಧಿಸಲು ನಿಮ್ಮನ್ನು ಪ್ರೇರೇಪಿಸಬಲ್ಲ ಶ್ಲೋಕಗಳು ಇವೆ. ನಿಮಗಾಗಿ ಇಂಥಾ ಪ್ರೇರಕ ಸಂಸ್ಕೃತ ಶ್ಲೋಕಗಳು ಇಲ್ಲಿವೆ.

  • ವಿವೇಕಾಖ್ಯಾತಿರವಿಪ್ಲವಾ ಹಾನೋಪಾಯಃ।

ಅರ್ಥ: ವಾಸ್ತವ ಮತ್ತು ಅವಾಸ್ತವದ ನಡುವೆ ತಾರತಮ್ಯದ ಅಡೆತಡೆಯಿಲ್ಲದ ಜೀವನ, ಅಜ್ಞಾನದ ನಿಲುಗಡೆಗೆ ಸಾಧನವಾಗಿದೆ.

  • ಸಂಧಿವಿಗ್ರಹಯೋಸ್ತುಲ್ಯಾಯಾಂ ವೃದ್ಧೌ ಸಂಧಿಮುಪೇಯಾತ್ ।

ಅರ್ಥ: ಶಾಂತಿ ಅಥವಾ ಯುದ್ಧದಲ್ಲಿ ಸಮಾನ ಪ್ರಯೋಜನವಿದ್ದರೆ, ಅವನು (ರಾಜ) ಶಾಂತಿಯನ್ನು ಆರಿಸಿಕೊಳ್ಳಬೇಕು.

  • ಸರ್ವಂ ಪರವಶಂ ದುಃಖಂ ಸರ್ವಮಾತ್ಮವಶಂ ಸುಖಮ್ ।

ಏತದ್ ವಿದ್ಯಾತ್ ಸಮಾಸೇನ್ ಲಕ್ಷಣಂ ಸುಖದುಃಖಯೋಃ ॥

ಅರ್ಥ: ಇತರರ ನಿಯಂತ್ರಣದಲ್ಲಿರುವ ಎಲ್ಲವೂ ನೋವಿನಿಂದ ಕೂಡಿದೆ. ಸ್ವನಿಯಂತ್ರಣದಲ್ಲಿ ಇರುವುದೆಲ್ಲವೂ ಸುಖವೇ. ಇದು ಸಂತೋಷ ಮತ್ತು ನೋವಿನ ಸಂಕ್ಷಿಪ್ತ ವ್ಯಾಖ್ಯಾನ.

  • ಅಪ್ರಾಪ್ಯಂ ನಾಮ ನೇಹಾಸ್ತಿ ಧೀರಸ್ಯ ವ್ಯವಸಾಯಿನಃ ।

ಅರ್ಥ: ಧೈರ್ಯ ಮತ್ತು ಕಷ್ಟಪಟ್ಟು ದುಡಿಯುವವನಿಗೆ ಸಾಧಿಸಲಾಗದ್ದು ಯಾವುದೂ ಇಲ್ಲ.

  • ಸಿಂಹವತ್ಸರ್ವವೇಗೇನ ಪತನತ್ಯರ್ಥೇ ಕಿಲಾರ್ಥಿನಃ ॥

ಅರ್ಥ: ಕೆಲಸವನ್ನು ಪೂರ್ಣಗೊಳಿಸಲು ಉದ್ದೇಶಿಸಿರುವಾತ ಸಿಂಹದ ವೇಗದಲ್ಲಿ ಸಾಧ್ಯವಿರುವ ವೇಗದಿಂದ ಕಾರ್ಯ ಪ್ರವೃತ್ತನಾಗುತ್ತಾನೆ.

  • ಅನಾರಂಭಸ್ತು ಕಾರ್ಯಾಣಾಂ ಪ್ರಥಮಂ ಬುದ್ಧಿಲಕ್ಷಣಮ್ ।

ಆರಬ್ಧಸ್ಯಾಂತಗಮನಂ ದ್ವಿತೀಯಂ ಬುದ್ಧಿಲಕ್ಷಣಮ್ ॥

ಅರ್ಥ: ಕೆಲಸ ಕಾರ್ಯಗಳನ್ನು ಪ್ರಾರಂಭಿಸದಿರುವುದು ಬುದ್ಧಿವಂತಿಕೆಯ ಮೊದಲ ಲಕ್ಷಣವಾಗಿದೆ. ಒಮ್ಮೆ ಪ್ರಾರಂಭಿಸಿದರೆ, ಅದನ್ನು ಪೂರ್ಣಗೊಳಿಸುವುದು ಬುದ್ಧಿವಂತಿಕೆಯ ಎರಡನೇ ಲಕ್ಷಣವಾಗಿದೆ.

  • ಕಲ್ಪಯತಿ ಯೇನ ವೃತ್ತಿಂ ಯೇನ ಚ ಲೋಕೇ ಪ್ರಶಸ್ಯತೇ ಸದ್ವಿಃ ।

ಸ ಗುಣಸ್ತೇನ ಚ ಗುಣಿನಾ ರಕ್ಷ್ಯಃ ಸಂವರ್ಧನೀಯಶ್ಚ॥

ಅರ್ಥ: ಜೀವನೋಪಾಯಕ್ಕೆ ಬೇಕಾದ ಮತ್ತು ಎಲ್ಲರಿಂದ ಪ್ರಶಂಸಿಸಲ್ಪಡುವ ಕೌಶಲ್ಯವನ್ನು ನಿಮ್ಮ ಸ್ವಂತ ಬೆಳವಣಿಗಾಗಿ ಬೆಳೆಸಬೇಕು ಮತ್ತು ರಕ್ಷಿಸಬೇಕು.