ಕನ್ನಡ ಸುದ್ದಿ  /  ಜೀವನಶೈಲಿ  /  Spiritual News: ಸುಗಂಧಾ ಶಕ್ತಿಪೀಠ, ಗಂಡಕಿ ಚಂಡಿ ಶಕ್ತಿಪೀಠ; ಭಾರತದಲ್ಲಿ ಮಾತ್ರವಲ್ಲ ಹೊರ ದೇಶಗಳಲ್ಲೂ ಇವೆ ಶಕ್ತಿಪೀಠಗಳು

Spiritual News: ಸುಗಂಧಾ ಶಕ್ತಿಪೀಠ, ಗಂಡಕಿ ಚಂಡಿ ಶಕ್ತಿಪೀಠ; ಭಾರತದಲ್ಲಿ ಮಾತ್ರವಲ್ಲ ಹೊರ ದೇಶಗಳಲ್ಲೂ ಇವೆ ಶಕ್ತಿಪೀಠಗಳು

Spiritual News: ನಮಗೆ ತಿಳಿದಿರುವಂತೆ ಭಾರತದಲ್ಲಿ ಅನೇಕ ಶಕ್ತಿಪೀಠಗಳಿವೆ. ಆದರೆ ಪಾಕಿಸ್ತಾನ, ನೇಪಾಳ , ಬಾಂಗ್ಲಾದೇಶ ಸೇರಿದಂತೆ ಹೊರ ದೇಶಗಳಲ್ಲಿ ಕೂಡಾ ಶಕ್ತಿಪೀಠಗಳಿವೆ. ಆ ಶಕ್ತಿಪೀಠಗಳ ಬಗ್ಗೆ ಇಲ್ಲಿದೆ ಮಾಹಿತಿ.

ಹೊರದೇಶಗಳಲ್ಲಿರುವ ಶಕ್ತಿಪೀಠ
ಹೊರದೇಶಗಳಲ್ಲಿರುವ ಶಕ್ತಿಪೀಠ (PC: Unsplash)

Spiritual News: ಹಿಂದೂಗಳಿಗೆ ಶಕ್ತಿಪೀಠವು ಬಹಳ ಮಹತ್ವದ್ದಾಗಿದೆ. ಮಾತಾ ಸತಿಯ ದೇಹದ ಭಾಗಗಳು ಬಿದ್ದ ವಿವಿಧ ಸ್ಥಳಗಳನ್ನು ಶಕ್ತಿಪೀಠಗಳು ಎಂದು ಕರೆಯಲಾಗುತ್ತದೆ. ಪತ್ನಿಯ ದೇಹವನ್ನು ಹಿಡಿದು ತಾಂಡವ ಮಾಡುತ್ತಿದ್ದಾಗ ಶಿವನ ದೇಹದ ಭಾಗಗಳು ಬಿದ್ದವು ಎಂದು ಕೆಲವರು ಹೇಳುತ್ತಾರೆ. ಇನ್ನು ಕೆಲವರು ಹೇಳುವಂತೆ ಶಿವನು ಸತಿಯ ದೇಹವನ್ನು ಹೊತ್ತುಕೊಂಡು ಹೋಗುತ್ತಿದ್ದಾಗ ವಿಷ್ಣುವಿನ ಸುದರ್ಶನ ಚಕ್ರವನ್ನು ಬಳಸಿದ್ದರಿಂದ ಆಕೆಯ ದೇಹವು ಛಿದ್ರವಾಯಿತು ಎಂಬ ಕಥೆ ಇದೆ.

ಟ್ರೆಂಡಿಂಗ್​ ಸುದ್ದಿ

ಶಕ್ತಿ ಪೀಠಗಳ ಸಂಖ್ಯೆಯ ಬಗ್ಗೆ ಭಿನ್ನಾಭಿಪ್ರಾಯವಿದೆ. ಇವು 18, 51, 52, 108, ಪ್ರತಿಯೊಂದೂ ವಿಭಿನ್ನವಾಗಿ ಹೇಳುತ್ತದೆ. ಸತಿದೇವಿಯು ತನ್ನ ತಂದೆ ಮನೆಗೆ ಹೋದಾಗ ಅಲ್ಲಿ ಆಕೆಗೆ ಬಹಳ ಅವಮಾನವಾಗುತ್ತದೆ. ಅದನ್ನು ಸಹಿಸಲಾಗದೆ ಸತಿ ಯೋಗಾಗ್ನಿಯಲ್ಲಿ ಧುಮುಕುತ್ತಾಳೆ. ಭಗವಾನ್ ಶಿವನು ಯಜ್ಞಕ್ಕೆ ಅಡ್ಡಿಪಡಿಸುತ್ತಾನೆ ಮತ್ತು ಸತಿಯ ಮೃತ ದೇಹವನ್ನು ತೆಗೆದುಕೊಂಡು ಬೆಟ್ಟಗಳ ಸುತ್ತಲೂ ಅಲೆದಾಡುತ್ತಾನೆ. ಶಿವನು ಜಗದ್ರಕ್ಷಣಕಾರ್ಯವನ್ನು ತ್ಯಜಿಸಿದ್ದಾನೆಂದು ದೇವತೆಗಳು ವಿಷ್ಣುವಿಗೆ ದೂರು ನೀಡುತ್ತಾರೆ. ಇದರೊಂದಿಗೆ ವಿಷ್ಣುವು ತನ್ನ ಸುದರ್ಶನ ಚಕ್ರದಿಂದ ಸತಿಯ ದೇಹವನ್ನು ತುಂಡುಗಳಾಗಿ ಕತ್ತರಿಸುತ್ತಾನೆ. ಆ ರೀತಿ ಸತಿಯ ದೇಹದ ಭಾಗ ಬೀಳುವ ಸ್ಥಳವನ್ನು ಶಕ್ತಿ ಪೀಠ ಎಂದು ಕರೆಯಲಾಗುತ್ತದೆ.

ಆದರೆ ಸತಿಯ ಶಕ್ತಿ ಪೀಠಗಳು ಭಾರತದಲ್ಲಿ ಮಾತ್ರವಲ್ಲದೆ ಇತರ ದೇಶಗಳಲ್ಲಿಯೂ ಇವೆ. ಈ ಶಕ್ತಿ ಪೀಠಗಳನ್ನು ಭೇಟಿ ಮಾಡಲು ಭಕ್ತರು ದೂರದೂರುಗಳಿಂದ ಪ್ರಯಾಣಿಸುತ್ತಾರೆ.

ಹಿಂಗ್ಲಾಜ್ ಶಕ್ತಿಪೀಠ

ಈ ಹಿಂಗ್ಲಾಜ್ ಶಕ್ತಿಪೀಠ ಪಾಕಿಸ್ತಾನದ ಬಲೂಚಿಸ್ತಾನದಲ್ಲಿದೆ. ಇದು ಕರಾಚಿಯಿಂದ 250 ಕಿ.ಮೀ ದೂರದಲ್ಲಿದ್ದು ಪಾಕಿಸ್ತಾನದ ಅತಿದೊಡ್ಡ ಹಿಂದೂ ದೇವಾಲಯಗಳಲ್ಲಿ ಒಂದಾಗಿದೆ. ಇದು ಸತಿ ದೇವಿಯ ತಲೆಯ ಒಂದು ಭಾಗ ಬಿದ್ದ ಸ್ಥಳ ಎಂದು ನಂಬಲಾಗಿದೆ. ಇಲ್ಲಿರುವ ಕಿರಿದಾದ ಗುಹೆಯಲ್ಲಿ ಈ ಶಕ್ತಿ ಪೀಠವಿದೆ.

ಸುಗಂಧಾ ಶಕ್ತಿಪೀಠ

ಸುಗಂಧಾ ಶಕ್ತಿಪೀಠವು ಬಾಂಗ್ಲಾದೇಶದ ಶಿಕರ್‌ಪುರ ಗ್ರಾಮದಲ್ಲಿ ಸುನಂದಾ ದೇವಿಗೆ ಸಮರ್ಪಿತವಾದ ದೇವಾಲಯವಾಗಿದೆ. ಈ ಹಿಂದೂ ದೇವಾಲಯವು ಶಕ್ತಿ ಪೀಠಗಳಲ್ಲಿ ಒಂದೆಂದು ಗುರುತಿಸಲ್ಪಟ್ಟಿದೆ. ಭಗವಾನ್ ವಿಷ್ಣುವು ಶಿವನನ್ನು ಸಮಾಧಾನಪಡಿಸಲು ಸತಿಯ ದೇಹವನ್ನು ತನ್ನ ಸುದರ್ಶನ ಚಕ್ರದಿಂದ ಛಿದ್ರಗೊಳಿಸಿದನು. ಆಗ ಸತಿಯ ಮೂಗು ಈ ಜಾಗದಲ್ಲಿ ಬಿದ್ದಿತು ಎಂದು ಪುರಾಣಗಳಲ್ಲಿ ಉಲ್ಲೇಖವಾಗಿದೆ. ಸುಗಂಧಾ ಎಂದರೆ ಹಿಂದಿ/ಸಂಸ್ಕೃತದಲ್ಲಿ ಮೂಗು ಎಂದರ್ಥ.

ಗುಹ್ಯೇಶ್ವರಿ ಶಕ್ತಿ ಪೀಠ

ನೇಪಾಳದ ಕಠ್ಮಂಡುವಿನಲ್ಲಿ ಗುಹ್ಯೇಶ್ವರಿ ಶಕ್ತಿ ಪೀಠವಿದೆ. ವಿಷ್ಣುವಿನ ಸುದರ್ಶನ ಚಕ್ರದಿಂದ ಛಿದ್ರಗೊಂಡ ಸತಿದೇವಿಯ ದೇಹದ ಮೊಣ ಕಾಲು ಅಥವಾ ತೊಡೆ ಈ ಸ್ಥಳದಲ್ಲಿ ಬಿದ್ದಿದೆ ಎಂದು ನಂಬಲಾಗಿದೆ. ಪಶುಪತಿನಾಥದಿಂದ ಪೂರ್ವಕ್ಕೆ ಒಂದು ಕಿ.ಮೀ. ಇರುವ ಈ ಸ್ಥಳ ಪ್ರಮುಖ ಹಿಂದೂ ಪುಣ್ಯಕ್ಷೇತ್ರಗಳಲ್ಲಿ ಒಂದಾಗಿದೆ. ಅನೇಕ ಹಿಂದೂಗಳು ಭಾರತದಿಂದ ಈ ಶಕ್ತಿ ಪೀಠಕ್ಕೆ ಭೇಟಿ ನೀಡುತ್ತಾರೆ.

ದಾಕ್ಷಾಯಣಿ ಶಕ್ತಿ ಪೀಠ

ಟಿಬೆಟಿಯನ್ ಪ್ರದೇಶದ ಮಾನಸ ಸರೋವರದ ಅಡಿಯಲ್ಲಿ ದಾಕ್ಷಾಯಣಿ ಶಕ್ತಿಪೀಠವಿದೆ. ಇದನ್ನು ಮಾನಸ ದೇವಾಲಯ ಎಂದು ಕರೆಯುತ್ತಾರೆ. ಶಕ್ತಿಯ ರೂಪವಾದ ಮಾನಸ ದೇವಿ ಮತ್ತು ಶಿವನ ರೂಪವಾದ ಅಮರರನ್ನು ಇಲ್ಲಿ ಪೂಜಿಸಲಾಗುತ್ತದೆ. ಮಾತೆ ಸತಿ ದೇವಿಯ ಬಲಗೈ ಬಿದ್ದ ಶಕ್ತಿ ಪೀಠ ಇದಾಗಿದೆ ಎಂದು ಹೇಳಲಾಗುತ್ತದೆ. ಈ ಶಕ್ತಿಪೀಠಕ್ಕೆ ಹೋಗುವುದು ಬಹಳ ಕಷ್ಟ. ಈ ಎತ್ತರದ ಸ್ಥಳವನ್ನು ತಲುಪುವ ಮೊದಲು ಅಧಿಕಾರಿಗಳಿಂದ ಅನುಮತಿಯನ್ನು ಪಡೆಯಬೇಕು.

ಶಿವರ್ಕರೆ ಶಕ್ತಿಪೀಠ

ಪಾಕಿಸ್ತಾನದ ಮತ್ತೊಂದು ಶಕ್ತಿ ಸ್ಥಾನ ಶಿವರ್ಕರೆ. ಇದನ್ನು ಕರಾವಿಪುರ ಎಂದೂ ಕರೆಯುತ್ತಾರೆ. ಇದು ಸತಿ ದೇವಿಯ 3ನೇ ಕಣ್ಣು ಬಿದ್ದ ಸ್ಥಳ ಎಂದು ಪ್ರಾಚೀನ ಗ್ರಂಥಗಳು ಹೇಳುತ್ತವೆ. ಈ ದೇವಾಲಯದಲ್ಲಿ ಮಹಿಷಾಸುರಮರ್ದಿನಿ ದೇವಿಯನ್ನು ಪ್ರಾರ್ಥಿಸಲಾಗುತ್ತದೆ. ಇಲ್ಲಿ ಶಿವನನ್ನು ಕ್ರೋಧಿಶ ರೂಪದಲ್ಲಿ ಪೂಜಿಸಲಾಗುತ್ತದೆ. ಇದು ಕೋಪದ ಒಂದು ರೂಪ.

ಗಂಡಕಿ ಚಂಡಿ ಶಕ್ತಿಪೀಠ

ಗಂಡಕಿ ಚಂಡಿ ಶಕ್ತಿ ಪೀಠವನ್ನು ಮುಕ್ತಿನಾಥ ದೇವಾಲಯ ಎಂದೂ ಕರೆಯುತ್ತಾರೆ. ಇದು ನೇಪಾಳದಲ್ಲಿದೆ. ಈ ಶಕ್ತಿ ಪೀಠವು ಪೋಖರಾದ ಗಂಡಕಿ ನದಿಯ ಬಳಿ ಇದೆ. ಪುರಾಣದ ಪ್ರಕಾರ ಸತಿಯ ಬಲ ಕೆನ್ನೆ ಬಿದ್ದಿದೆ. ಇಲ್ಲಿ ಶಿವನನ್ನು ಚಕ್ರಪಾಣಿ ಎಂದು ಪೂಜಿಸಲಾಗುತ್ತದೆ.