ಪಂಚಗವ್ಯ ಎಂದರೇನು? ಮನುಷ್ಯನ ಆರೋಗ್ಯಕ್ಕೆ ಆಗುವ ಲಾಭಗಳು ಮತ್ತು ಮಹತ್ವ ತಿಳಿಯಿರಿ -Panchagavya
ಪಂಚಗವ್ಯದಿಂದ ಏನೆಲ್ಲಾ ಆರೋಗ್ಯ ಪ್ರಯೋಜನಗಳಿವೆ. ಇದನ್ನು ಹೇಗೆ ತಯಾರಿಸಲಾಗುತ್ತದೆ? ಅಧ್ಯಾತ್ಮಿಕವಾಗಿ ಪಂಚಗವ್ಯದ ಮಹತ್ವವನ್ನು ತಿಳಿಯಿರಿ.

ಗೋವನ್ನು ಗೋಮಾತೆ ಎಂದು ಪೂಜಿಸುತ್ತೇವೆ. ಆಡು ಭಾಷೆಯಲ್ಲಿ ಮಾತೇ ಎಂದರೆ ತಾಯಿ. ಹೆತ್ತ ತಾಯಿಯು ಮಗುವನ್ನು ಸಲಹುವಂತೆ ಗೋಮಾತೆಯು ಒಬ್ಬ ಮನುಷ್ಯನನ್ನು ಅವನ ಅಂತ್ಯ ಕಾಲದವರೆಗೂ ಕಾಪಾಡುತ್ತಾಳೆ. ಗೋವಿಗೆ ಸಂಬಂಧಿಸಿದ ಗೋಮೂತ್ರ, ಗೋಮಯ, ಹಸುವಿನ ಹಾಲು, ಹಸುವಿನ ಹಾಲಿನಿಂದ ತಯಾರಿಸಿದ ಮೊಸರು ಮತ್ತು ಹಸುವಿನ ಹಾಲಿನ ಸಹಾಯದಿಂದ ತಯಾರಿಸಿದ ತುಪ್ಪ ಇದರ ಮೂಲ ಅಂಶಗಳಾಗಿವೆ. ಇವುಗಳನ್ನು ಅನುಭವ ಉಳ್ಳವರು ಸರಿಯಾದ ಪ್ರಮಾಣದಲ್ಲಿ ಮಿಶ್ರ ಮಾಡಿದಾಗ ದೊರೆಯುವ ದ್ರಾವಣವನ್ನು ಪಂಚಗವ್ಯ (Panchagavya) ಎಂದು ಕರೆಯುತ್ತೇವೆ.
ನಾವೆಲ್ಲರೂ ತಿಳಿದಿರುವಂತೆ ಗೋವಿನಲ್ಲಿ ಎಲ್ಲಾ ದೇವಾನುದೇವತೆಗಳು ನೆಲೆಸಿರುತ್ತಾರೆ. ಆದ್ದರಿಂದ ಗೋವಿನಿಂದ ದೊರೆಯುವ ಪ್ರತಿಯೊಂದು ಉತ್ಪನ್ನವನ್ನು ದೇವತೆಗಳ ತೀರ್ಥ ಪ್ರಸಾದ ಎಂದು ಪರಿಗಣಿಸಬಹುದು. ಇಂದಿನ ದಿನಗಳಲ್ಲಿ ಅತ್ಯಂತ ಮುಂದುವರಿದ ದೇಶಗಳಲ್ಲಿಯೂ ಸಹ ಗೋಮೂತ್ರವನ್ನು ಪ್ರತಿದಿನವೂ ಸೇವಿಸುವ ಅಭ್ಯಾಸವನ್ನು ರೂಡಿಸಿಕೊಂಡಿದ್ದಾರೆ. ಇದರಿಂದ ಅನುಭವಸ್ಥರು ಹೇಳುವಂತೆ ಪ್ರಾಣಾಂತಿಕ ರೋಗವಾದ ಕ್ಯಾನ್ಸರ್ ನ ತೊಂದರೆಯಿಂದಲೂ ಪಾರಾಗಬಹುದು.
ಹಾಲು ಒಂದು ಸಮತೋಲನ ಆಹಾರ. ಹಾಲಿನ ಸೇವನೆಯಿಂದ ನಮ್ಮ ದೇಹದ ಮೂಳೆಗಳಿಗೆ ಸಹ ಶಕ್ತಿ ದೊರೆಯುತ್ತದೆ. ಮೊಸರಿಗೆ ಅಲ್ಪ ಪ್ರಮಾಣದ ಸಕ್ಕರೆಯನ್ನು ಬೆಳೆಸಿ ತಿನ್ನುವುದರಿಂದ ಅಜೀರ್ಣತೆಯೂ ದೂರವಾಗುತ್ತದೆ. ಇದೇ ರೀತಿ ತುಪ್ಪವನ್ನು ಬಳಸಿದರೆ ಜೀರ್ಣಾಂಗ ವ್ಯೂಹವು ಸಹಜ ಸ್ಥಿತಿಯಲ್ಲಿ ಸದಾಕಾಲವೂ ಇರುತ್ತದೆ. ಈ ಕಾರಣದಿಂದಾಗಿ ಪಂಚಗವ್ಯವನ್ನು ಸೇವಿಸುವುದು ನಮಗೆ ಹೆಚ್ಚಿನ ಅನುಕೂಲಗಳನ್ನು ನೀಡುತ್ತದೆ.
ಪಂಚಗವ್ಯವನ್ನು ಮಂತ್ರಗಳನ್ನು ಪಠಿಸುವ ಮುಖಾಂತರ ಕ್ರಮಬದ್ಧವಾದ ರೀತಿಯಲ್ಲಿ ತಯಾರಿಸಲಾಗುತ್ತದೆ. ಇದರಿಂದ ದೈಹಿಕವಾಗಿ ಅನೇಕ ಉಪಯೋಗಗಳು ದೊರೆಯುತ್ತವೆ. ಇದು ದೇಹವನ್ನು ಸಂಪೂರ್ಣವಾಗಿ ಶುದ್ಧೀಕರಿಸುತ್ತದೆ. ಅಷ್ಟು ಮಾತ್ರವಲ್ಲದೆ ಪಂಚಗವ್ಯವನ್ನು ತಯಾರಿಸುವ ವೇಳೆ ನಮ್ಮ ಮನಸ್ಸಿನ ಮೇಲೆ ಧನಾತ್ಮಕವಾದ ಪ್ರಭಾವ ಬೀರುತ್ತದೆ. ಜಗತ್ತಿನ ಪ್ರತಿಯೊಂದು ವಿಚಾರಕ್ಕೂ ಪ್ರತಿಯೊಂದು ಆಚಾರ ವಿಚಾರಗಳಿಗೂ ಬ್ರಹ್ಮದೇವನು ಬಲು ಮುಖ್ಯನಾಗುತ್ತಾನೆ. ಮನುಷ್ಯನ ಜನನಕ್ಕೆ ಬ್ರಹ್ಮನೇ ಕಾರಣನಾಗುತ್ತಾನೆ. ಆದ್ದರಿಂದ ಪಂಚಗವ್ಯವನ್ನು ತಯಾರಿಸುವ ಪಾತ್ರೆಯನ್ನು ಬ್ರಹ್ಮನಿಗೆ ಹೋಲಿಸಲಾಗುತ್ತದೆ. ಹಿಂದಿನ ಕಾಲದಲ್ಲಿ ಗೋಮೂತ್ರದಿಂದ ಮನೆಯನ್ನು ಶುಚಿಗೊಳಿಸಲಾಗುತ್ತಿತ್ತು. ಗೋಮೂತ್ರದ ಸಿಂಪಡಣೆಯಿಂದ ಕ್ರಿಮಿಕೀಟಗಳು ದೂರವಾಗುತ್ತಿತ್ತು. ಗೋ ಮಯವು ಇದಕ್ಕೆ ಹೊರತಲ್ಲ.
ಮೊದಲುಗಾಯಿತ್ರಿ ಮಂತ್ರವನ್ನು ಜಪಿಸುತ್ತ ಗೋಮೂತ್ರವನ್ನುಒಂದು ಪಾತ್ರೆಯಲ್ಲಿ ಶೇಖರಿಸಲಾಗುತ್ತದೆ. ಗೋಮಯವನ್ನು ಗಂಧವನ್ನು ಪೂಜೆ ಮಾಡುವ ಮಂತ್ರವನ್ನು ಹೇಳಿಕೊಂಡು ಶುಚಿಗೊಳಿಸಲಾಗುತ್ತದೆ. ಕ್ಷೀರಾಭಿಷೇಕ ಮಾಡುವ ಮಂತ್ರವನ್ನು ಹೇಳಿಕೊಂಡು ಹಾಲನ್ನು ಶುದ್ಧೀಕರಿಸಲಾಗುತ್ತದೆ. ಉಳಿದ ಅಭಿಷೇಕದ ಮಂತ್ರಗಳನ್ನು ಜಪಿಸುತ್ತಾ ಪಂಚಗವ್ಯವನ್ನು ತಯಾರಿಸಲಾಗುತ್ತದೆ. ಪ್ರತಿಯೊಂದು ಪದಾರ್ಥಗಳನ್ನು ತನ್ನದೇ ಆದ ಪ್ರಮಾಣದಲ್ಲಿ ಬಳಸಬೇಕೆಂಬ ನಿಯಮವಿದೆ. ಶಕ್ತಿಶಾಲಿ ಮಂತ್ರದಂದೇ ಪರಿಗಣಿಸಿರುವ ಓಂಕಾರವನ್ನು ಜಪಿಸುತ್ತ ಕೂರ್ಚುಗಳನ್ನು ಮಾತ್ರ ಸೇವಿಸುವ ವಾಡಿಕೆ ಇದೆ. ಇದರ ಸೇವನೆಯಿಂದಕೇವಲ ಮಡಿಯ ವಿಚಾರ ಮಾತ್ರವಲ್ಲದೆ ಔಷಧೀಯ ಗುಣಗಳು ಬಹುವಾಗಿ ಕಾಣ ಸಿಗುತ್ತದೆ.
ತಂಪಾಗಿರುವ ಹಾಲನ್ನು ಸೇವಿಸಿದರೆ ಕಫದ ತೊಂದರೆ ಕಂಡು ಬರುತ್ತದೆ ಆದರೆ ಅಲ್ಪ ಪ್ರಮಾಣದ ಪಂಚಗವ್ಯದ ಸೇವನೆಯಿಂದ ಸ್ವಾಸಕೋಶವು ಶುದ್ದಿಯಾಗುತ್ತದೆ ಮೂಳೆಗಳಿಗೆ ಹೆಚ್ಚಿನ ಶಕ್ತಿ ದೊರೆಯುವ ಕಾರಣ ನಿತ್ಯಕ್ತಿಯು ದೂರವಾಗುತ್ತದೆ ಮಾನಸಿಕವಾಗಿ ಸದೃಢ ಆಗಬೇಕಾದವರಿಗೆ ಇದೊಂದು ದಿವ್ಯ ಔಷಧಿ ಇದರ ಸೇವನೆಯಿಂದ ದೇಹದಲ್ಲಿರುವ ನೋವು ಕಡಿಮೆಯಾಗುತ್ತದೆ ಬಹುಕಾಲಕಾಡಬಲ್ಲ ರೋಗಗಳಾದ ಮಧುಮೇಹ ರಕ್ತದ ಒತ್ತಡದಂತಹ ದೋಷಗಳು ದೂರವಾಗುತ್ತವೆ ಆರಂಭದ ಹಂತದಲ್ಲಿ ಇರುವ ಮಹಾಮಾರಿಗಳು ಕಡಿಮೆ ಅವಧಿಯಲ್ಲಿ ದೂರವಾಗುತ್ತದೆ ದೇಹದ ಸುದ್ದಿಗೆ ಇದೊಂದು ಪರಿಣಾಮಕಾರಿ ಔಷಧಿಯಾಗಿದೆ ಇದರಿಂದಾಗಿ ದೇಹದ ಅಂಶಗಳು ದೂರವಾಗುತ್ತದೆ ಅಜೀರ್ಣದಿಂದ ಬಳಲುತ್ತಿರುವವರಿಗೆ ಜೀರ್ಣಶಕ್ತಿಯು ಹೆಚ್ಚಿ ಹಸಿವೆಯು ಕಂಡು ಬರುತ್ತದೆ ಅತಿಯಾದ ರುಚಿಯನ್ನು ಇಷ್ಟಪಡುವವರು ಇದರ ಸೇವನೆಯನ್ನು ಬಯಸುವುದಿಲ್ಲ.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)
