ಕನ್ನಡ ಸುದ್ದಿ  /  Lifestyle  /  Spiritual News Why Devotees Should Take Bath In River In Kartika Masam Lord Shiva Worship Lord Vishnu Rsm

Kartika Masam: ಕಾರ್ತಿಕ ಮಾಸದಲ್ಲಿ ನದಿ ನೀರಿನ ಸ್ನಾನ ಏಕೆ ಮಾಡಬೇಕು? ಯಾವ ಸಮಯದಲ್ಲಿ ಮಾಡಿದರೆ ಶುಭ ಫಲ?

Kartika Masam: ಮಹಾವಿಷ್ಣುವು ನೀರಿನಲ್ಲಿ ಮತ್ಸ್ಯ ರೂಪದಲ್ಲಿ ನೆಲೆಸಿರುತ್ತಾನೆ. ಆದ್ದರಿಂದಲೇ ಕಾರ್ತಿಕ ಮಾಸದಲ್ಲಿ ಜನರು ನದಿಯಲ್ಲಿ ಸ್ನಾನ ಮಾಡುತ್ತಾರೆ. ನದಿ ಸ್ನಾನ ಮಾಡುವುದರಿಂದ ಮೋಕ್ಷ ಪ್ರಾಪ್ತಿಯಾಗುತ್ತದೆ. ನದಿ ಸ್ನಾನ ಮಾಡಲು ನಿರ್ದಿಷ್ಟ ಸಮಯವಿದೆ. ಸೂರ್ಯೋದಯಕ್ಕೂ ಮುನ್ನ ನದಿಸ್ನಾನ ಮಾಡಬೇಕು.

ಕಾರ್ತಿಕ ಮಾಸದಲ್ಲಿ ನದಿ ನೀರಿನ ಸ್ನಾನಕ್ಕಿದ ಮಹತ್ವ
ಕಾರ್ತಿಕ ಮಾಸದಲ್ಲಿ ನದಿ ನೀರಿನ ಸ್ನಾನಕ್ಕಿದ ಮಹತ್ವ (PC: Unsplash)

Kartika Masam: ಕಾರ್ತಿಕ ಮಾಸ ಆರಂಭವಾಗಿದೆ. ಪ್ರತಿ ವರ್ಷ ದೀಪಾವಳಿ ಅಮವಾಸ್ಯೆ ಮುಗಿದ ಮರುದಿನದಿಂದ ಕಾರ್ತಿಕ ಮಾಸ ಆರಂಭವಾಗುತ್ತದೆ. ಈ ತಿಂಗಳು ಶಿವ ಮತ್ತು ವಿಷ್ಣುವಿಗೆ ಅತ್ಯಂತ ಮಂಗಳಕರವಾಗಿದೆ. ಅವರ ಅನುಗ್ರಹಕ್ಕಾಗಿ ಕಾರ್ತಿಕ ಮಾಸದಲ್ಲಿ ಭಕ್ತರು ಪೂಜೆ ಮಾಡುತ್ತಾರೆ. ವಿವಿಧ ದೇವಾಲಯಗಳಲ್ಲಿ ಶಿವನಿಗೆ ಪೂಜೆ ಮಾಡಲಾಗುತ್ತದೆ.

ಜನ್ಮಜನ್ಮಾಂತರಗಳ ಪಾಪ ನಿವಾರಣೆ

ಜೊತೆಗೆ ಕಾರ್ತಿಕ ಮಾಸದಲ್ಲಿ ಪ್ರತಿ ಸೋಮವಾರವೂ ಶಿವನನ್ನು ಪೂಜಿಸಿದರೆ ಜನ್ಮ ಜನ್ಮಾಂತರಗಳ ಪಾಪ ಕಳೆಯುತ್ತದೆ ಎಂಬ ನಂಬಿಕೆ ಇದೆ. ಶಿವನ ಪೂಜೆಯಲ್ಲಿದೆ ಈ ಮಾಸದಲ್ಲಿ ಶ್ರೀ ಸುಬ್ರಹ್ಮಣ್ಯ ಸ್ವಾಮಿಗೆ ಕೂಡಾ ಕೆಲವೆಡೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ಮುಖ್ಯವಾಗಿ ವಿಶಾಖ ನಕ್ಷತ್ರ ಇದ್ದ ದಿನಗಳಲ್ಲಿ ಸುಬ್ರಹ್ಮಣ್ಯ ಸ್ವಾಮಿಯ ಪೂಜೆ ಮಾಡಿ ಉಪವಾಸ ಮಾಡಿ ಸೂರ್ಯಾಸ್ತವಾಗುವ ಒಳಗೆ 6 ದೀಪಗಳನ್ನು ಇಟ್ಟು ಗೋಧಿ ಹಿಟ್ಟಿನಿಂದ ಮಾಡಿದ ಸಿಹಿ ಖಾದ್ಯವನ್ನು ನೈವೇದ್ಯವನ್ನಾಗಿ ನೀಡಿದರೆ ಜೀವನದಲ್ಲಿ ಕಷ್ಟಗಳು ನಿವಾರಣೆ ಆಗಲಿವೆ.

ನದಿನೀರಿನ ಸ್ನಾನಕ್ಕಿದೆ ಮಹತ್ವ

ಕಾರ್ತಿಕ ಮಾಸದಲ್ಲಿ ಮಾಸದಲ್ಲಿ ಸೂರ್ಯೋದಯಕ್ಕೂ ಮುನ್ನ ಎದ್ದು ತಲೆಗೆ ಸ್ನಾನ ಮಾಡಿ ದೀಪಕ್ಕೆ ಪೂಜೆ ಸಲ್ಲಿಸಬೇಕು. ಕಾರ್ತಿಕ ಮಾಸದಲ್ಲಿ ದೀಪಾರಾಧನೆಯು ಅತ್ಯಂತ ಪುಣ್ಯದಾಯಕ. ಹಾಗೆಯೇ ದೀಪವನ್ನು ದಾನ ಮಾಡುವುದರಿಂದ ಸಾಕಷ್ಟು ಪುಣ್ಯವನ್ನು ಪಡೆಯಬಹುದು. ಶಿವ ಮತ್ತು ವಿಷ್ಣುವಿನ ಆರಾಧನೆಯಿಂದ ಕಾರ್ತಿಕ ಮಾಸದಲ್ಲಿ ಪಾಪಗಳು ನಿವಾರಣೆಯಾಗುತ್ತವೆ. ಅಲ್ಲದೆ ಈ ತಿಂಗಳಲ್ಲಿ ಒಮ್ಮೆಯಾದರೂ ನದಿ ಸ್ನಾನ ಮಾಡಬೇಕು. ಇದನ್ನು ಕಾರ್ತಿಕ ಸ್ನಾನ ಎಂದೂ ಕರೆಯುತ್ತಾರೆ. ಪುಣ್ಯನದಿಗಳಲ್ಲಿ ಸ್ನಾನ ಮಾಡುವುದರಿಂದ ಎಲ್ಲಾ ಅನಿಷ್ಟಗಳು ದೂರವಾಗುತ್ತವೆ. ನದಿಯ ಹರಿವಿಗೆ ಎದುರಾಗಿ ನಿಂತು ಸ್ನಾನ ಮಾಡುವುದರಿಂದ ದೇಹಕ್ಕೆ ಸಾಕಷ್ಟು ಶಕ್ತಿ ಬರುತ್ತದೆ. ಇದಲ್ಲದೆ ಕಾರ್ತಿಕ ಮಾಸದಲ್ಲಿ ನದಿಗಳಿಗೆ ಔಷಧೀಯ ಶಕ್ತಿ ಇರುತ್ತದೆ ಎಂಬ ನಂಬಿಕೆ ಇದೆ. ನದಿಯಲ್ಲಿ ಸ್ನಾನ ಮಾಡುವುದರಿಂದ ಮಾನಸಿಕ ಮತ್ತು ದೈಹಿಕ ಕಾಯಿಲೆಗಳು ದೂರವಾಗುತ್ತವೆ. ನದಿಯಲ್ಲಿ ನಿಂತು ಶಿವನನ್ನು ಪ್ರಾರ್ಥಿಸಿ ಮೂರು ಬಾರಿ ಮುಳುಗಿ ಏಳಬೇಕು. ಈಗಿನ ಕಾಲದಲ್ಲಿ ಪ್ರತಿದಿನ ನದಿ ಸ್ನಾನ ಮಾಡಲು ಸಾಧ್ಯವಿಲ್ಲ. ಹಾಗಾಗಿ ಕಾರ್ತಿಕ ಮಾಸದಲ್ಲಿ ಒಮ್ಮೆಯಾದರೂ ನದಿಯಲ್ಲಿ ಸ್ನಾನ ಮಾಡಬೇಕು. ಪ್ರತಿದಿನ ದೀಪದ ಪೂಜೆ ಮಾಡಲು ಸಾಧ್ಯವಾಗದವರು ಕಾರ್ತಿಕ ಹುಣ್ಣಿಮೆಯಂದು 365 ಬತ್ತಿಗಳಿಂದ ದೀಪವನ್ನು ಹಚ್ಚಿದರೆ ವರ್ಷಪೂರ್ತಿ ದೀಪ ಬೆಳಗಿದ ಫಲ ಸಿಗುತ್ತದೆ.

ಮತ್ಸ್ಯರೂಪದಲ್ಲಿ ನೆಲೆಸಿರುವ ವಿಷ್ಣು

ಮಹಾವಿಷ್ಣುವು ನೀರಿನಲ್ಲಿ ಮತ್ಸ್ಯ ರೂಪದಲ್ಲಿ ನೆಲೆಸಿರುತ್ತಾನೆ. ಆದ್ದರಿಂದಲೇ ಕಾರ್ತಿಕ ಮಾಸದಲ್ಲಿ ಜನರು ನದಿಯಲ್ಲಿ ಸ್ನಾನ ಮಾಡುತ್ತಾರೆ. ನದಿ ಸ್ನಾನ ಮಾಡುವುದರಿಂದ ಮೋಕ್ಷ ಪ್ರಾಪ್ತಿಯಾಗುತ್ತದೆ. ನದಿ ಸ್ನಾನ ಮಾಡಲು ನಿರ್ದಿಷ್ಟ ಸಮಯವಿದೆ. ಸೂರ್ಯೋದಯಕ್ಕೂ ಮುನ್ನ ನದಿಸ್ನಾನ ಮಾಡಬೇಕು. ಸ್ನಾನ ಮಾಡುವಾಗ ದೇಹಕ್ಕೆ ಎಣ್ಣೆ ಹಚ್ಚಬೇಡಿ. ನದಿಯಲ್ಲಿ ಸ್ನಾನ ಮಾಡಿದ ನಂತರ ತುಳಸಿ ಗಿಡಕ್ಕೆ ನೀರು ಹಾಕಿ ತುಪ್ಪದ ದೀಪ ಹಚ್ಚಿ. ಕಾರ್ತಿಕ ಮಾಸದಲ್ಲಿ ಲಕ್ಷ್ಮಿ ದೇವಿಯ ಕೃಪೆಗೆ ಪಾತ್ರರಾಗಲು ತುಪ್ಪ ಹಾಗೂ ಅನ್ನವನ್ನು ಬೇಯಿಸಿ ನೈವೇದ್ಯವಾಗಿ ತಯಾರಿಸಬೇಕು. ಈ ನೈವೇದ್ಯವನ್ನು ಲಕ್ಷ್ಮೀ ಸಮೇತನಾದ ವಿಷ್ಣುವಿಗೆ ಅರ್ಪಿಸಿ ದೀಪವನ್ನು ಹಚ್ಚಬೇಕು. ಓಂ ನಮೋ ನಾರಾಯಣಾಯ ಎಂದು ಜಪಿಸಬೇಕು. ಹೀಗೆ ಮಾಡುವುದರಿಂದ ಮನೆಯಲ್ಲಿನ ಎಲ್ಲಾ ಆರ್ಥಿಕ ಸಮಸ್ಯೆಗಳು ದೂರವಾಗಿ ಸಂಪತ್ತು ಸೃಷ್ಟಿಯಾಗುತ್ತದೆ.