2025ರಲ್ಲಿ ಪುರಂದರ ದಾಸರ ಆರಾಧನೆ ಯಾವಾಗ? ದಿನಾಂಕ ಮತ್ತು ಕನ್ನಡದ ಸಂತನ ಮಹತ್ವ ತಿಳಿಯಿರಿ
ಕನ್ನಡ ಸುದ್ದಿ  /  ಜೀವನಶೈಲಿ  /  2025ರಲ್ಲಿ ಪುರಂದರ ದಾಸರ ಆರಾಧನೆ ಯಾವಾಗ? ದಿನಾಂಕ ಮತ್ತು ಕನ್ನಡದ ಸಂತನ ಮಹತ್ವ ತಿಳಿಯಿರಿ

2025ರಲ್ಲಿ ಪುರಂದರ ದಾಸರ ಆರಾಧನೆ ಯಾವಾಗ? ದಿನಾಂಕ ಮತ್ತು ಕನ್ನಡದ ಸಂತನ ಮಹತ್ವ ತಿಳಿಯಿರಿ

ಕರ್ನಾಟಕ ಸಂಗೀತ ಪಿತಾಮಹ ಎಂಬ ಖ್ಯಾತಿಯನ್ನು ಪಡೆದಿದ್ದ ಪುರಂದರ ದಾಸರ ವಾರ್ಷಿಕ ಆರಾಧನೆಯನ್ನು 2025ರ ಜನವರಿ 29 ರ ಬುಧವಾರ ಆಚರಿಸಲಾಗುತ್ತದೆ. ಭಕ್ತಿಯ ಕಣಜವಾಗಿದ್ದ ದಾಸರು ತಮ್ಮ ಜ್ಞಾನ ಹಾಗೂ ಅನುಭವದಿಂದ ಸಮಾಜಕ್ಕೆ ಹಾಡುಗಳ ಮೂಲಕ ಮಾರ್ಗದರ್ಶನ ನೀಡಿದವರು.

2025 ರಲ್ಲಿ ಪುರಂದರ ದಾಸರ ಆರಾಧನೆ ಯಾವಾಗ, ಕರ್ನಾಟಕದ ಸಂತ, ಸಂಗೀತ ಪಿತಾಮಹನ ಬಗ್ಗೆ ಮಾಹಿತಿ ಇಲ್ಲಿದೆ
2025 ರಲ್ಲಿ ಪುರಂದರ ದಾಸರ ಆರಾಧನೆ ಯಾವಾಗ, ಕರ್ನಾಟಕದ ಸಂತ, ಸಂಗೀತ ಪಿತಾಮಹನ ಬಗ್ಗೆ ಮಾಹಿತಿ ಇಲ್ಲಿದೆ

‘ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು’ ಎಂದು ನಾಲಿಗೆ ಹರಿಬಿಡುವವರ ವಿರುದ್ಧ ಹರಿತವಾಗಿಯೇ ನುಡಿದ ಹರಿ ದಾಸರು, ಕರ್ನಾಟಕ ಸಂಗೀತ ಪಿತಾಮಹ ಎಂಬ ಖ್ಯಾತಿಯನ್ನು ಪಡೆದಿದ್ದ ಪುರಂದರ ದಾಸರ ವಾರ್ಷಿಕ ಆರಾಧನೆಯನ್ನು 2025ರ ಜನವರಿ 29 ರ ಬುಧವಾರ ಆಚರಿಸಲಾಗುತ್ತದೆ. ಭಕ್ತಿಯ ಕಣಜವಾಗಿದ್ದ ದಾಸರು ತಮ್ಮ ಜ್ಞಾನ ಹಾಗೂ ಅನುಭವದಿಂದ ಸಮಾಜಕ್ಕೆ ಹಾಡುಗಳ ಮೂಲಕ ಮಾರ್ಗದರ್ಶನ ನೀಡಿದವರು. ಪುರಂದರ ದಾಸರು ರಚಿಸಿದ ಕೀರ್ತನೆಗಳು ಇಂದಿಗೂ ಪ್ರಸ್ತುತವಾಗಿದ್ದು, ನೊಂದವರಿಗೆ ಭರವಸೆಯ ಬೆಳಕಾಗಿವೆ. ಇವರು ನವಕೋಟಿ ನಾರಾಯಣ ಎಂದು ಜನಪ್ರಿಯರಾಗಿದ್ದರು. ಶಾಲೆಗಳಲ್ಲಿ ಇಂದಿಗೂ ಪುರಂದರ ದಾಸರ ಕೀರ್ತನೆಗಳನ್ನು ಹೇಳಿಕೊಡಲಾಗುತ್ತದೆ.

ಪುರಂದರ ದಾಸರು 1480 ರಿಂದ 1564 ರವರಿಗೆ ಜೀವಿಸಿದ್ದರು. ಇಂದಿನ ಮಹಾರಾಷ್ಟ್ರದ ಸಣ್ಣ ಪಟ್ಟಣವಾದ ಪುರಂದರ ಗಧಾದಲ್ಲಿ ವಾಸಿಸುತ್ತಿದ್ದರು. ಆದರೆ ಅಂದಿನ ವಿಜಯನಗರ ಸಾಮ್ರಾಜ್ಯಕ್ಕೆ ಸೇರಿದವರು. ಪುರಂದರ ದಾಸರ ಹಿಂದಿನ ಹೆಸರು ಶ್ರೀನಿವಾಸ ನಾಯ್ಕ. ಇವರು ಕುಟುಂಬದವರು ಚಿನ್ನದ ವ್ಯಾಪಾರ ಮಾಡುತ್ತಿದ್ದರು. ಅಮೂಲ್ಯವಾದ ಕಲ್ಲುಗಳ ವ್ಯವಹಾರ ಇವರ ಕುಟುಂಬದವರ ವೃತ್ತಿಯಾಗಿತ್ತು. ಅತ್ಯಂತ ಶ್ರೀಮಂತ ಕುಟುಂಬವೂ ಆಗಿತ್ತು. ಶ್ರೀನಿವಾಸ ನಾಯ್ಕ ಅವರು ಸ್ವಭಾತಃ ಜಿಪುಣನಾಗಿದ್ದನು. ಹಣವನ್ನು ಹೊರತುಪಡಿಸಿ ಯಾವುದಕ್ಕೂ ಹೆಚ್ಚು ಕಾಳಜಿ ವಹಿಸುತ್ತಿರಲಿಲ್ಲ. ಆರಂಭದಲ್ಲಿ ಈತನಿಗೆ ಎಲ್ಲವೂ ಹಣವೇ ಆಗಿತ್ತು.

ಶ್ರೀನಿವಾಸ ನಾಯ್ಕ ಪುರಂದರ ದಾಸರಾಗಿ ಬದಲಾಗಿದ್ದು

ಒಂದು ದಿನ ಹಣದ ವ್ಯಾಮೋಹವನ್ನು ತ್ಯಜಿಸಲು ಶ್ರೀನಿವಾಸ ನಾಯ್ಕ ನಿರ್ಧಾರ ಮಾಡುತ್ತಾರೆ. ಸಂತರಲ್ಲಿ ತನ್ನ ನ್ಯಾಯಯುತ ಪಾತ್ರವನ್ನು ವಹಿಸುವ ಸಮಯ ಬಂದಿದೆ ಎಂದು ಹೇಳುತ್ತಾನೆ. ಇದೇ ಸಮಯದಲ್ಲಿ ಒಬ್ಬ ಬಡ ಬ್ರಾಹ್ಮಣ ತನ್ನ ಮಗನಿಗೆ ಉಪನಯನ ಮಾಡಲು ಹಣಕ್ಕಾಗಿ ಶ್ರೀನಿವಾಸ ನಾಯ್ಕನ ಬಳಿ ಬರುತ್ತಾನೆ. ಆದರೆ ಈತ ಸಹಾಯ ಮಾಡುವುದಿಲ್ಲ. ಆದರೂ ಪಟ್ಟು ಬಿಡದೆ ಮತ್ತೆ ಮತ್ತೆ ಶ್ರೀನಿವಾಸ ನಾಯ್ಕ ಅವರ ಅಂಗಡಿಗೆ ಬರಲು ಶುರು ಮಾಡುತ್ತಾನೆ. ಒಂದು ದಿನ ಶ್ರೀನಿವಾಸ ನಾಯ್ಕ ತನ್ನ ಬಳಿ ಇರುವ ನಿಷ್ಪ್ರಯೋಜಕವಾಗಿದ್ದ ನಾಣ್ಯಗಳನ್ನು ಆತನಿಗೆ ನೀಡುತ್ತಾನೆ.

ಶ್ರೀನಿವಾಸ ನಾಯ್ಕನ ಪತ್ನಿ ಸರಸ್ವತಿ, ಪತಿಯ ಜಿಪುಣತನವನ್ನು ತನ್ನದೇ ರೀತಿಯಲ್ಲಿ ತಿದ್ದಲು ಪ್ರಯತ್ನಿಸುತ್ತಾಳೆ. ಆದರೆ ಸಾಧ್ಯವಾಗಿರಲಿಲ್ಲ. ಬಡ ಬ್ರಹ್ಮಣನಿಗೆ ಹಳೆಯ ನಾಣ್ಯಗಳನ್ನು ನೀಡಿರುವುದು ಪತ್ನಿ ಸರಸ್ವತಿಗೆ ತಿಳಿಯುತ್ತದೆ. ಈ ವಿಚಾರವಾಗಿ ಆಕೆ ಬೇಸರ ಮಾಡಿಕೊಳ್ಳುತ್ತಾಳೆ. ಕೊನೆಯ ಆಕೆ ತಮ್ಮ ಬಳಿಯ ತುಂಬಾ ಬೆಲೆ ಬಾಳುವ ಆಭರಣವನ್ನು ಬಡ ಬ್ರಹ್ಮಣನಿಗೆ ನೀಡುತ್ತಾಳೆ. ಆತ ಆ ಆಭರಣವನ್ನು ತೆಗೆದುಕೊಂಡು ಹೋಗಿ ಶ್ರೀನಿವಾಸ ನಾಯ್ಕನ ಅಂಗಡಿಗೆ ಕೊಟ್ಟು ಇದನ್ನು ಇಟ್ಟುಕೊಂಡು ಹಣ ನೀಡುವಂತೆ ಕೇಳುತ್ತಾನೆ. ಆ ಭರಣವನ್ನು ನೋಡಿದ ಕೂಡಲೇ ಇದು ತನ್ನ ಹೆಂಡತಿಯೆಂದು ತಿಳಿದು ವಿಚಾರಿಸುವ ಸಲುವಾಗಿ ಮನೆಗೆ ಹೋಗುತ್ತಾನೆ. ಆದರೆ ಅದೇ ಸಮಯದಲ್ಲಿ ಪತಿ ಆಭರಣ ಎಲ್ಲಿ ಎಂದು ಕೇಳಿದರೆ ಏನು ಹೇಳುವುದು ಎಂದು ಭಯಬೀತರಾದ ಪತ್ನಿ ಸರಸ್ವತಿ ವಿಷ ಕುಡಿಯಲು ಮುಂದಾಗುತ್ತಾಳೆ. ಆಗ ಆಕೆಗೆ ಒಂದು ಶಬ್ದ ಕೇಳುತ್ತವೆ. ಆಭರಣ ಇಲ್ಲಿಯೇ ಇದೆ. ಆಕೆಗೆ ತನ್ನ ಕಣ್ಣುಗಳನ್ನು ನಂಬಲಾಗಲಿಲ್ಲ. ಆಭರಣವನ್ನು ತನ್ನ ಪತಿಗೆ ನೀಡಿ ಎದುರಾಗಿದ್ದ ಸಮಸ್ಯೆಯಿಂದ ಪಾರಾಗುತ್ತಾಳೆ.

ಶ್ರೀನಿವಾಸ ನಾಯ್ಕ ಮತ್ತೆ ತನ್ನ ಅಂಗಡಿಗೆ ಬಂದು ಪೆಟ್ಟಿಗೆ ತೆರೆದು ನೋಡಿದಾಗ ಆಭರಣ ಇರಲಿಲ್ಲ. ಇದನ್ನು ನೋಡಿದ ಕೂಡಲೇ ಆತ ಮೂಕವಿಸ್ಮಿತನಾಗುತ್ತಾನೆ. ಮನೆಗೆ ಬಂದು ಘಟನೆಯ ಬಗ್ಗೆ ವಿಚಾರಿಸಿದಾಗ ಆಕೆ ನಡೆದಿದ್ದೆಲ್ಲವನ್ನು ವಿವರಿಸುತ್ತಾಳೆ. ಅಂತಿಮವಾಗಿ ಆ ಬ್ರಹ್ಮಣ ಶ್ರೀ ಹರಿಯೇ ಹೊರತು ಬೇರೆ ಯಾರೂ ಅಲ್ಲ ಎಂಬ ನಿರ್ಧಾರಕ್ಕೆ ಬರುತ್ತಾನೆ. ಆ ದಿನದಿದಂಲೇ ಶ್ರೀ ಹರಿಯ ಭಕ್ತರಾಗುತ್ತಾರೆ. ಚಿನ್ನ ಮತ್ತು ವಜ್ರವನ್ನು ಹಿಡಿಯುತ್ತಿದ್ದ ಕೈಗೆ ತಂಬೂರಿ ಬರುತ್ತದೆ. ಹರಿನಾಮ ಸ್ಮರಣೆ ಮಾಡುತ್ತಾ ಊರೂರು ತಿರುಗುತ್ತಾರೆ. ಕನ್ನಡದ ಸರಳ ಭಾಷೆಯಲ್ಲಿ ಅನೇಕ ಕೀರ್ತನೆಗಳನ್ನು ರಚಿಸಿದರು.

Whats_app_banner