ಕನ್ನಡ ಸುದ್ದಿ  /  ಜೀವನಶೈಲಿ  /  Study Tips: ಎಂಬಿಎ ಪದವಿ ಪಡೆಯಲು ಸರಿಯಾದ ವಯಸ್ಸು ಯಾವುದು? ಹೀಗಿರಬೇಕು ನಿಮ್ಮ ತಯಾರಿ

Study tips: ಎಂಬಿಎ ಪದವಿ ಪಡೆಯಲು ಸರಿಯಾದ ವಯಸ್ಸು ಯಾವುದು? ಹೀಗಿರಬೇಕು ನಿಮ್ಮ ತಯಾರಿ

Right age to persue MBA: ಕಲಿಯಲು ವಯಸ್ಸಿನ ಹಂಗಿಲ್ಲ. ನೀವು ಯಾವ ವಯಸ್ಸಿನಲ್ಲಿ ಬೇಕಿದ್ದರೂ ನಿಮ್ಮ ಶೈಕ್ಷಣಿಕ ಜೀವನವನ್ನು ಮುಂದುವರಿಸಬಹುದು. ಕಾಲೇಜಿಗೆ ಗುಡ್​ ಬೈ ಹೇಳಿ ಬಹಳ ವರ್ಷದ ಬಳಿಕ ನಿಮಗೆ ಎಂಬಿಎ ಕಲಿಯುವ ಮನಸ್ಸಾಗಿದ್ದರೆ ಇಲ್ಲೊಂದಿಷ್ಟು ಉತ್ತಮ ಸಲಹೆಗಳು ನಿಮಗಾಗಿ ತಿಳಿಸಲಾಗಿದೆ.

ಎಂಬಿಎ ಪದವಿ (ಪ್ರಾತಿನಿಧಿಕ ಚಿತ್ರ)
ಎಂಬಿಎ ಪದವಿ (ಪ್ರಾತಿನಿಧಿಕ ಚಿತ್ರ)

ವಯಸ್ಸು ಎನ್ನುವುದು ಕೇವಲ ಸಂಖ್ಯೆ ಮಾತ್ರ ಎಂಬ ಮಾತೊಂದಿದೆ. ಕಲಿಯಬೇಕು ಎಂದುಕೊಂಡವನಿಗೆ ಎಂದಿಗೂ ವಯಸ್ಸಿನ ಹಂಗು ಇರುವುದಿಲ್ಲ. ಜ್ಞಾನ ಸಂಪಾದಿಸಲು ನೀವು ಯಾವ ವಯಸ್ಸಿನಲ್ಲಿ ಬೇಕಿದ್ದರೂ ಪ್ರಯತ್ನಿಸಬಹುದಾಗಿದೆ. ಅದೇ ರೀತಿ ಎಂಬಿಎ ಕೂಡ ಒಂದು ಒಳ್ಳೆಯ ಸ್ನಾತಕೋತ್ತರ ಪದವಿಯಾಗಿದ್ದು ಇವುಗಳು ನಿಮ್ಮ ವೃತ್ತಿ ಜೀವನಕ್ಕೆ ತುಂಬಾನೇ ಸಹಕಾರಿ ಎನಿಸಲಿವೆ. ಭವಿಷ್ಯದ ಉದ್ಯಮಿ ಆಗಲು, ಮಾರ್ಕೆಟಿಂಗ್​ ಕ್ಷೇತ್ರವನ್ನು ಆಳಲು ಎಂಬಿಎ ಪದವಿ ಅತಿ ಮುಖ್ಯವಾಗಿ ಬಳಕೆಯಾಗುತ್ತದೆ. 26-30 ವರ್ಷದ ಒಳಗಾಗಿ ನೀವು ಎಂಬಿಎ ಪದವಿಯನ್ನು ಪಡೆದುಕೊಳ್ಳುವುದು ನಿಮ್ಮ ಕರಿಯರ್​ ದೃಷ್ಟಿಯಿಂದ ಒಳ್ಳೆಯದು ಎಂದು ಹೇಳಬಹುದಾಗಿದೆ.

ಟ್ರೆಂಡಿಂಗ್​ ಸುದ್ದಿ

ಎಂಬಿಎಯಲ್ಲಿ ಮುಖ್ಯವಾಗಿ ನಿಮಗೆ ಎರಡು ಬಗೆಯ ಪ್ರೋಗ್ರಾಂಗಳು ಲಭ್ಯವಿವೆ :

1) 2 ವರ್ಷಗಳ ಎಂಬಿಎ ಪ್ರೋಗ್ರಾಂ :

ನೀವು ಡಿಗ್ರಿಯನ್ನು ಮುಗಿಸಿದ ಬಳಿಕ ಎಂಬಿಎ ಅಧ್ಯಯನ ಶುರು ಮಾಡಿದರೆ ಅದು 2 ವರ್ಷಗಳ ಅವಧಿಯ ಎಂಬಿಎ ಪ್ರೋಗ್ರಾಂ ಆಗಿರುತ್ತದೆ. ಈ ಎಂಬಿಎ ಮಾಡಲು ಯಾವುದೇ ರೀತಿಯ ನಿಬಂಧನೆಗಳು ಇರುವುದಿಲ್ಲ. ಡಿಗ್ರಿ ಪೂರ್ಣಗೊಳಿಸಿದ ಯಾರು ಬೇಕಿದ್ದರೂ ಈ ಎಂಬಿಎಯನ್ನು ಆಯ್ಕೆ ಮಾಡಿಕೊಳ್ಳಬಹುದು. 2 ವರ್ಷಗಳ ಈ ಎಂಬಿಎ ಸ್ನಾತಕೋತ್ತರ ಪದವಿಯಲ್ಲಿ ನೀವು ಸಾಕಷ್ಟು ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಬ್ಯುಸಿನೆಸ್​ ಅನಾಲಿಟಿಕ್ಸ್​, ಡಿಜಿಟಲ್​ ಮಾರ್ಕೆಟಿಂಗ್​, ಫೈನಾನ್ಸ್​, ಮಾರ್ಕೆಟಿಂಗ್​, ಅಡ್ವಟೈಸಿಂಗ್​, ಬ್ಯುಸಿನೆಸ್​ ಎಕಾನಾಮಿಕ್ಸ್​, ಮಟಿರಿಯಲ್ಸ್​ ಮ್ಯಾನೇಜ್​ಮೆಂಟ್​​ ಹಾಗೂ ಅಂತಾರಾಷ್ಟ್ರೀಯ ಬ್ಯುಸಿನೆಸ್​ ಹೀಗೆ ಸಾಕಷ್ಟು ವಿಷಯಗಳನ್ನು ನೀವು ಆಯ್ಕೆ ಮಾಡಿಕೊಳ್ಳಬಹುದು. ಇವುಗಳಲ್ಲಿ ಅತ್ಯಂತ ಪ್ರಚಲಿತದಲ್ಲಿರುವ 2 ಆಯ್ಕೆಯಗಳು ಎಂದರೆ ಮಾರ್ಕೆಟಿಂಗ್​ ಹಾಗೂ ಫೈನಾನ್ಸ್​.

2) ಎಕ್ಸಿಕ್ಯುಟಿವ್ ಎಂಬಿಎ ಪ್ರೋಗ್ರಾಂ:

ಎಕ್ಸಿಕ್ಯುಟಿವ್​ ಎಂಬಿಎ ಅಥವಾ ಇಎಂಬಿಎ (eMBA) ಇದು ಪದವಿ ಮಟ್ಟದ ವ್ಯಾಪಾರ ಪದವಿ ಆಗಿರುತ್ತದೆ. ನಿರ್ದೇಶಕರು, ವ್ಯಾಪಾರಸ್ಥರು ಮತ್ತು ಇತರ ವ್ಯಾಪಾರ ಪ್ರವರ್ತಕರ ಕೌಶಲ್ಯಗಳನ್ನು ಸುಧಾರಿಸಿಕೊಳ್ಳಲು ಇ-ಎಂಬಿಎಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ . ಇ-ಎಂಬಿಎ ಎನ್ನುವುದು ಎಂಬಿಎ ಪದವಿಯ ಸುಧಾರಿತ ರೂಪವಾಗಿದ್ದರೂ ಸಹ ಈ ಪದವಿಯನ್ನು ಹೊಂದುವವರು ಕೆಲಸದ ಅನುಭವವನ್ನು ಹೊಂದಿರುವುದು ಕಡ್ಡಾಯವಾಗಿರುತ್ತದೆ, ಈ ಕೆಳಗೆ ಸೂಚಿಸಲಾದ ವಿಷಯಗಳ ಮೇಲೆ ನೀವು ಇ-ಎಂಬಿಎ ಪದವಿಯನ್ನು ಪಡೆದುಕೊಳ್ಳಬಹುದಾಗಿದೆ .

-ಮಾರ್ಕೆಟಿಂಗ್​​

-ಫೈನಾನ್ಸ್​

-ಹ್ಯೂಮನ್​ ರಿಸೋರ್ಸ್​

-ಹಾಸ್ಪಿಟಲ್​ ಮ್ಯಾನೇಜ್​ಮೆಂಟ್​

-ಇನ್ಫಾರ್ಮೇಷನ್​ ಟೆಕ್ನಾಲಜಿ

ವಯಸ್ಸನ್ನು ಹೊರತುಡಿಸಿ ಎಕ್ಸಿಕ್ಯುಟಿವ್​ ಎಂಬಿಎ ಮಾಡುವ ಮುನ್ನ ನೀವು ಈ ಎರಡು ವಿಚಾರಗಳ ಬಗ್ಗೆ ಗಮನ ಹರಿಸಬೇಕಿದೆ. ಒಂದು ಕಾಲೇಜಿನಿಂದ ಇನ್ನೊಂದು ಕಾಲೇಜಿಗೆ ನೀವು ಎಕ್ಸಿಕ್ಯೂಟಿವ್​ ಎಂಬಿಎಗೆ ಅರ್ಜಿ ಸಲ್ಲಿಸಲು ಬೇಕಾದ ಕನಿಷ್ಠ ಕೆಲಸದ ಅನುಭವ ಬದಲಾಗುತ್ತಾ ಹೋಗುತ್ತದೆ. ಇದು ವೃತ್ತಿಪರರಿಗೆ ಮೀಸಲಾದ ಎಂಬಿಎ ಪದವಿ ಆಗಿರುವುದರಿಂದ ಕೆಲಸದ ಅನುಭವ ಈ ಪದವಿಗೆ ಇರಬೇಕಾದ ಪ್ರಾಥಮಿಕ ಮಾನದಂಡವಾಗಿದೆ.

ಎಕ್ಸಿಕ್ಯೂಟಿವ್​ ಎಂಬಿಎ ಅಥವಾ ಸಾಮಾನ್ಯ ಎಂಬಿಎ ಇವರೆಡರಲ್ಲಿ ಆಯ್ಕೆ ಹೀಗೆ ಮಾಡಬೇಕು:

ನೀವು ನಿಮ್ಮ ಕಚೇರಿ ಕೆಲಸನ್ನೂ ಮಾಡಿಕೊಂಡು ಇಎಂಬಿಎ ಕೋರ್ಸ್​ನ್ನೂ ಸಹ ನಿಭಾಯಿಸಬೇಕಾಗುತ್ತದೆ. ಹೀಗಾಗಿ ಓದು ಕೆಲಸದ ಮೇಲೆ ಅಥವಾ ಕೆಲಸವು ಓದಿನ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇಲ್ಲಿ ಹೆಚ್ಚಿರುತ್ತದೆ, ಯಾವುದಕ್ಕೆ ಹೆಚ್ಚು ಸಮಯ ನೀಡಬೇಕು ಎಂಬ ಗೊಂದಲ ನಿಮ್ಮನ್ನು ಬಿಟ್ಟು ಬಿಡದಂತೆ ಕಾಡಬಹುದು. ಇ-ಎಂಬಿಎ ಕೋರ್ಸ್​ಗೆ ಸೇರಿಕೊಳ್ಳಲು ಸೂಕ್ತವಾದ ವಯಸ್ಸು 28. ಆದರೆ ಸಾಮಾನ್ಯ ಎಂಬಿಎ ಬಗ್ಗೆ ನೀವು ಇಷ್ಟು ಚಿಂತಿಸಬೇಕಿಲ್ಲ. ಇಲ್ಲಿ ನಿಮಗೆ ಕೆಲಸಕ್ಕೆ ಹೋಗಬೇಕಾದ ಅನಿವಾರ್ಯತೆ ಇರುವುದಿಲ್ಲ.

ವಯಸ್ಸು ಮೀರಿದ ಬಳಿಕ ಎಂಬಿಎ ಪದವಿ ಮಾಡಬೇಕೆಂದುಕೊಂಡವರಿಗೆ ಎದುರಾಗಬಲ್ಲ ಸವಾಲುಗಳು :

ಹೆಚ್ಚಿನ ಕಾಲೇಜುಗಳು ಇಪ್ಪತ್ತರ ಕೊನೆಯಲ್ಲಿ ಅಥವಾ ಮೂವತ್ತರ ಮಧ್ಯ ವಯಸ್ಸಿನಲ್ಲಿ ಎಂಬಿಎ ಕೋರ್ಸ್ ಆಯ್ಕೆಮಾಡಿಕೊಳ್ಳುವುದು ಉತ್ತಮ ಎಂಬ ಸಲಹೆ ನೀಡುತ್ತವೆ. ಆದರೆ ನೀವು ಎಂಬಿಎ ಕೋರ್ಸ್ ಆಯ್ಕೆ ಮಾಡುವ ಮುನ್ನ ಈ ವಿಚಾರಗಳ ಬಗ್ಗೆ ಒಮ್ಮೆ ಯೋಚಿಸಬೇಕು.

ಮೂವತ್ತರ ಆರಂಭದಲ್ಲಿ ಅಥವಾ ಇಪ್ಪತ್ತನೇ ವಯಸ್ಸಿನ ಕೊನೆಯಲ್ಲಿ ಎಂಬಿಎ ಮಾಡಬೇಕು ಎಂದುಕೊಳ್ಳುವವರನ್ನು ಡೀಪ್​ ಕರಿಯರ್​ ಸ್ವಿಚರ್ಸ್ ಎಂದು ಕರೆಯಲಾಗುತ್ತದೆ. ಈ ಹಂತದಲ್ಲಿ ಸಾಮಾನ್ಯವಾಗಿ ನಿಮಗೆ ವೃತ್ತಿ ಜೀವನದಲ್ಲಿ ಹೆಚ್ಚು ಲಾಭ ಸಿಗುತ್ತಿರುತ್ತದೆ. ನಿಮ್ಮ ಆದಾಯ ಕೂಡ ಸ್ಥಿರವಾಗಿರುತ್ತದೆ. ಈ ಸಮಯದಲ್ಲಿ ನೀವು ಎಂಬಿಎ ಪದವಿಯನ್ನೂ ಪಡೆದುಕೊಂಡಲ್ಲಿ ಉನ್ನತ ಸ್ಥಾನಕ್ಕೆ ಬಡ್ತಿ ಪಡೆಯಲು ಸಹಾಯಕವಾಗುತ್ತದೆ.

ವೈಯಕ್ತಿಕ ಜೀವನ ಹಾಗೂ ಅಧ್ಯಯನ ಸಾಮಗ್ರಿಗಳು

ನಿಮಗೆ ವಯಸ್ಸಾದಂತೆ ನಿಮ್ಮಲ್ಲಿನ ಓದಿನ ಹಸಿವು ಹೆಚ್ಚಾಗುತ್ತಿದ್ದರೆ ನೀವು ಈ ಎಂಬಿಎ ಕೋರ್ಸ್​ಗಳ ಬಗ್ಗೆ ಯೋಚಿಸಲು ಆರಂಭಿಸುತ್ತೀರಿ. ಮೂವತ್ತರ ಮಧ್ಯ ವಯಸ್ಸು ಎಂದರೆ ಅದಾಗಲೇ ನಿಮ್ಮದೇ ಆದ ಒಂದು ಕುಟುಂಬ ಕೂಡ ಶುರುವಾಗಿರುತ್ತದೆ. ಹೀಗಾಗಿ ವೈಯಕ್ತಿಕ ಜೀವನವನ್ನೂ ನಿಭಾಯಿಸಿಕೊಂಡು ಅಧ್ಯಯನಕ್ಕೆ ಬೇಕಾದ ಸಾಮಗ್ರಿಗಳನ್ನೂ ನೀವು ಖರೀದಿ ಮಾಡಿಕೊಂಡು ಎರಡೂ ಖರ್ಚುಗಳನ್ನು ನಿಭಾಯಿಸಬೇಕಾಗಿ ಬರಲಿದೆ.