Success Tips: ಜೀವನದಲ್ಲಿ ಯಶಸ್ಸು ನಿಮ್ಮನ್ನು ಸದಾ ಹಿಂಬಾಲಿಸಬೇಕಾ, ಸಂಜೆಯಾಗುವ ಮೊದಲು ಈ 5 ಕೆಲಸಗಳನ್ನು ಮಾಡಿ
ಜೀವನದಲ್ಲಿ ಮುಂದೆ ಬರಬೇಕು ಅಂತ ಪ್ರತಿಯೊಬ್ಬರಿಗೂ ಆಸೆ ಇರುತ್ತೆ, ಆದರೆ ಎಲ್ಲರಿಗೂ ಯಶಸ್ಸು ಕಾಣಲು ಸಾಧ್ಯವಾಗುವುದಿಲ್ಲ. ಬದುಕಿನಲ್ಲಿ ಗೆಲುವು ಸದಾ ನಿಮ್ಮದಾಗಬೇಕು ಎಂದರೆ ಸಂಜೆಯಾಗುವ ಮೊದಲು ಈ 5 ಕೆಲಸ ಪೂರ್ಣಗೊಳಿಸಿ.

ಪ್ರತಿಯೊಬ್ಬ ಮನುಷ್ಯನು ಜೀವನದಲ್ಲಿ ಏನನ್ನಾದರೂ ಸಾಧಿಸಲು ಬಯಸುತ್ತಾನೆ. ಸಾಧನೆ ಅಂದ್ರೆ ಯಶಸ್ಸು. ಈ ಯಶಸ್ಸು ಪಡೆಯಲು ಅವಿರತ ಶ್ರಮ ಅಗತ್ಯ. ಜೀವನದಲ್ಲಿ ಯಶಸ್ವಿಯಾಗಲು ಆರೋಗ್ಯವಾಗಿರುವುದು ಕೂಡ ಬಹಳ ಮುಖ್ಯ. ಮಾನಸಿಕವಾಗಿ ಮತ್ತು ದೈಹಿಕವಾಗಿ ಆರೋಗ್ಯವಾಗಿರುವ ವ್ಯಕ್ತಿಯು ಮಾತ್ರ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು. ಜೀವನದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವ ಜೊತೆಗೆ ಯಶಸ್ಸನ್ನು ಸಾಧಿಸಲು ಪ್ರಯತ್ನಿಸಿ. ವಿಷಯಗಳನ್ನು ಅಥವಾ ಪ್ರಮುಖ ಕೆಲಸವನ್ನು ಮುಂದೂಡುವ ಅಭ್ಯಾಸವನ್ನು ಸಹ ಬದಲಾಯಿಸುವುದು ಅತ್ಯಗತ್ಯ.
ಕೆಲವು ಪ್ರಮುಖ ಕೆಲಸವಿದ್ದರೂ ನಾಳೆ ಮಾಡಿದರಾಯ್ತು ಬಿಡು ಅನ್ನೋ ಮನೋಭಾವ ಕೆಲವರದ್ದು. ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಬೇಕಾದುದು ತುಂಬಾನೇ ಮುಖ್ಯ. ಕೆಲವು ಕೆಲಸಗಳನ್ನು ರಾತ್ರಿಯಲ್ಲಿ ಮಾಡಬಾರದು. ಸಂಜೆ 7 ಗಂಟೆಯ ನಂತರ ಮಾಡಬಾರದ ಕೆಲವು ವಿಷಯಗಳಿವೆ. ಮಾಡಬೇಕಾದ ಮತ್ತು ಮಾಡಬಾರದ ಕೆಲಸಗಳು ನಿಮ್ಮ ಜೀವನವನ್ನು ಬದಲಾಯಿಸಬಹುದು.
ನೀವು ಮಾಡುವ ಕೆಲವು ಕೆಲಸಗಳು ನಿಮ್ಮ ಅನುಭವಗಳನ್ನು ಅರ್ಥಮಾಡಿಕೊಳ್ಳಲು, ನಿದ್ರೆಯನ್ನು ಸುಧಾರಿಸಲು, ಆತಂಕವನ್ನು ಕಡಿಮೆ ಮಾಡಲು ಮತ್ತು ನಿಮ್ಮ ಮನಸ್ಸನ್ನು ಉಲ್ಲಾಸಗೊಳಿಸಲು ಸಹಾಯ ಮಾಡುತ್ತದೆ. ಇದು ವೈಯಕ್ತಿಕ ಬೆಳವಣಿಗೆಗೆ ಮತ್ತು ಸಂತೋಷದ ಭವಿಷ್ಯಕ್ಕೆ ದಾರಿ ಮಾಡಿಕೊಡುತ್ತದೆ. ಜೀವನವು ಕೆಲವೊಮ್ಮೆ ಕಷ್ಟಕರವೆನಿಸಬಹುದು, ಇನ್ನೂ ಕೆಲವೊಮ್ಮೆ ಅದು ಸುಲಭ ಅನಿಸುತ್ತದೆ. ಸಂಜೆ 7 ಗಂಟೆಯ ಮೊದಲು ನೀವು ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಸಂಜೆ 7 ಗಂಟೆಗೂ ಮುನ್ನ ಏನು ಮಾಡಬೇಕು, ಏನು ಮಾಡಬಾರದು ಎಂಬ ಬಗ್ಗೆ ಇಲ್ಲಿದೆ ಸಲಹೆ
ದಿನವನ್ನು ಮೆಲುಕು ಹಾಕಿ: ದಿನವಿಡೀ ನೀವು ಏನು ಮಾಡಿದ್ದೀರಿ ಮತ್ತು ಸಾಧಿಸಿದ್ದೀರಿ ಎಂಬುದನ್ನು ನೆನಪಿಟ್ಟುಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳಿ. ನಿಮ್ಮನ್ನು ನಗಿಸಿದ ವಿಷಯಗಳು, ನಿಮಗೆ ಸವಾಲು ಹಾಕಿದ ಕ್ಷಣಗಳ ಬಗ್ಗೆ ಯೋಚಿಸಿ. ಆ ದಿನ ನೀವು ಮಾಡಿದ ಎಲ್ಲವನ್ನೂ ನೆನಪಿಸಿಕೊಳ್ಳಿ. ಕೆಲವು ವಿಷಯಗಳನ್ನು ಅರ್ಥಮಾಡಿಕೊಳ್ಳಲು ಇದು ನಿಮಗೆ ಸಹಾಯ ಮಾಡುತ್ತದೆ. ನಿಮ್ಮ ತಪ್ಪುಗಳಿಂದ ಕಲಿಯಲು ಇದು ಉತ್ತಮ ಅವಕಾಶ.
ಮೊಬೈಲ್ ವೀಕ್ಷಣೆಯನ್ನು ಕಡಿಮೆ ಮಾಡಿ: ಇತ್ತೀಚೆಗೆ ಬಹುತೇಕ ಮಂದಿ ಮೊಬೈಲ್ ವೀಕ್ಷಣೆಯಲ್ಲೇ ಸಮಯ ಕಳೆಯುತ್ತಾರೆ. ಫೋನ್‌ನಲ್ಲಿಯೇ ಸಾಮಾಜಿಕ ಮಾಧ್ಯಮವನ್ನು ಸ್ಕ್ರಾಲ್ ಮಾಡುವುದು ಮತ್ತು ಇನ್ಸ್ಟಾಗ್ರಾಮ್‌ನಲ್ಲಿ ರೀಲ್ಸ್ ನೋಡುವುದನ್ನು ಕಡಿಮೆ ಮಾಡಿ. ಹಾಗೆಯೇ ಸಂಜೆ 7 ಗಂಟೆಯ ನಂತರ ಒಟಿಟಿಯಲ್ಲಿ ಚಲನಚಿತ್ರಗಳನ್ನು ನೋಡಬೇಡಿ. ಸಂಜೆ 7 ಗಂಟೆಯ ನಂತರ ಫೋನ್ ನೋಡುವುದನ್ನು ಕಡಿಮೆ ಮಾಡಿ, ಕ್ರಮೇಣ ನಿಲ್ಲಿಸಿ. ಫೋನ್ ವೀಕ್ಷಣೆ ಮಾಡುವುದರಿಂದ ನಿಮ್ಮ ನಿದ್ರೆಯ ಚಕ್ರವನ್ನು ಅಡ್ಡಿಪಡಿಸುತ್ತವೆ. ಫೋನ್‌ನಿಂದ ನೀಲಿ ಬೆಳಕನ್ನು ಬಿಡುಗಡೆಯಾಗುವುದರಿಂದ ಇದು ನಿದ್ರೆಯ ಹಾರ್ಮೋನ್‌ಗೆ ಅಡ್ಡಿಪಡಿಸುತ್ತದೆ. ಮಲಗುವ ಒಂದು ಗಂಟೆ ಮೊದಲು ಇಂಟರ್ನೆಟ್ ಸಂಪರ್ಕ ಕಡಿತಗೊಳಿಸಿ. ಇದರ ಬದಲು ಪುಸ್ತಕ ಓದಿ ಹಾಗೂ ಬಿಸಿ ನೀರಿನ ಸ್ನಾನ ಮಾಡಿ.
ಮರುದಿನ ಏನು ಮಾಡಬೇಕು ಎಂದು ಯೋಚಿಸಿ: ಮರುದಿನ ಮಾಡಬೇಕಾದ ಕಾರ್ಯಗಳ ಬಗ್ಗೆ ಯೋಚಿಸಿ. ಮರುದಿನಕ್ಕಾಗಿ ವಿಷಯಗಳನ್ನು ಯೋಜಿಸಲು ಪ್ರಾರಂಭಿಸಿ. ಮರುದಿನ ಮಾಡಬೇಕಾದ ಪ್ರಮುಖ ಕಾರ್ಯಗಳನ್ನು ನಿಗದಿಪಡಿಸಿ. ಮಾಡಬೇಕಾದ ಕೆಲಸಗಳ ಬಗ್ಗೆ ವೇಳಾಪಟ್ಟಿ ಸಿದ್ಧಪಡಿಸಿ.
ಉಸಿರಾಟದ ವ್ಯಾಯಾಮ ಮಾಡಿ: ಸಂಜೆ 7 ಗಂಟೆಗೆ ಆಳವಾದ ಉಸಿರಾಟದ ವ್ಯಾಯಾಮ ಮಾಡಿ. ಇದು ನಿಮ್ಮ ನರಮಂಡಲವನ್ನು ಶಾಂತಗೊಳಿಸುತ್ತದೆ. ಇದು ಒತ್ತಡವನ್ನು ಕಡಿಮೆ ಮಾಡುತ್ತದೆ. ಅಲ್ಲದೆ ಉತ್ತಮ ನಿದ್ರೆಯನ್ನು ಪ್ರೇರೇಪಿಸುತ್ತದೆ. ನಿಮ್ಮ ಮನಸ್ಸನ್ನು ಶಾಂತಗೊಳಿಸಲು ಮತ್ತು ವಿಶ್ರಾಂತಿ ಪಡೆಯಲು ಧ್ಯಾನ ಅಥವಾ ಆಳವಾದ ಉಸಿರಾಟದ ವ್ಯಾಯಾಮಗಳನ್ನು ಪ್ರಯತ್ನಿಸಿ.
ಸ್ವಯಂ ಆರೈಕೆ: ಸಂಜೆ 7 ಗಂಟೆಯ ನಂತರ ಸ್ವಯಂ ಆರೈಕೆಗೆ ಆದ್ಯತೆ ನೀಡಿ. ನಿಮ್ಮ ಬಗ್ಗೆಯೂ ಯೋಚಿಸಿ. ನಿಮ್ಮ ಚರ್ಮದ ಬಗ್ಗೆಯೂ ಕಾಳಜಿ ವಹಿಸಿ. ಸ್ವಯಂ ಆರೈಕೆ ನಿಮಗೆ ಬಹಳ ಮುಖ್ಯ. ಇದು ನಿಮ್ಮ ದೇಹವನ್ನು ಪುನಶ್ಚೇತನಗೊಳಿಸುತ್ತದೆ. ಸಂಜೆ 7 ಗಂಟೆಯ ಮೊದಲು ತಿನ್ನಲು ಯೋಜಿಸಿ. ರಾತ್ರಿ 8 ಗಂಟೆಯ ಹೊತ್ತಿಗೆ ನಿದ್ದೆ ಮಾಡಿ, ಬೆಳಗ್ಗೆ ಬೇಗ ಎದ್ದೇಳಿ. 7 ರಿಂದ 9 ಗಂಟೆಗಳ ನಿದ್ದೆ ಅತ್ಯಗತ್ಯ.
(ಗಮನಿಸಿ: ಈ ಮಾಹಿತಿಯು ಸಾಮಾನ್ಯ ಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ.)
