Sugar Or Jaggery: ಸಕ್ಕರೆಗಿಂತ ಬೆಲ್ಲ ಉತ್ತಮವೇ? ಬೆಲ್ಲದ ಆರೋಗ್ಯಗುಣಗಳ ಬಗ್ಗೆ ನಿಮಗೆಷ್ಟು ಗೊತ್ತು?
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Sugar Or Jaggery: ಸಕ್ಕರೆಗಿಂತ ಬೆಲ್ಲ ಉತ್ತಮವೇ? ಬೆಲ್ಲದ ಆರೋಗ್ಯಗುಣಗಳ ಬಗ್ಗೆ ನಿಮಗೆಷ್ಟು ಗೊತ್ತು?

Sugar Or Jaggery: ಸಕ್ಕರೆಗಿಂತ ಬೆಲ್ಲ ಉತ್ತಮವೇ? ಬೆಲ್ಲದ ಆರೋಗ್ಯಗುಣಗಳ ಬಗ್ಗೆ ನಿಮಗೆಷ್ಟು ಗೊತ್ತು?

  • ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಸಕ್ಕರೆ ತಿನ್ನುವುದನ್ನು ನಿಲ್ಲಿಸಿ ಎಂದು ಹಲವರು ಶಿಫಾರಸು ಮಾಡುತ್ತಾರೆ. ಆದರೆ ಕೆಲವರಿಗೆ ಸಿಹಿ ಇಲ್ಲದೆ ಬದುಕಲು ಸಾಧ್ಯವಾಗುವುದಿಲ್ಲ, ಅಂತಹವರು ಬೆಲ್ಲವನ್ನು ಆಯ್ಕೆ ಮಾಡಿಕೊಳ್ಳಬಹುದು.

ಮನೆಯಲ್ಲಿ ಚಹಾ, ಕಾಫಿ ಅಥವಾ ಇನ್ನಾವುದೇ ಸಿಹಿ ಆಗಿರಲಿ, ಸಕ್ಕರೆಯನ್ನು ಬಳಸುವುದು ಸಾಮಾನ್ಯ. ಆದರೆ ಅತಿಯಾಗಿ ಸಕ್ಕರೆ ತಿನ್ನುವುದರಿಂದ ಮಧುಮೇಹದಂತಹ ರೋಗಗಳ ಜೊತೆಗೆ ದೇಹತೂಕವೂ ಹೆಚ್ಚಬಹುದು. ಆ ಕಾರಣಕ್ಕೆ ಕೆಲವರು ಸಕ್ಕರೆಗಿಂತ ಬೆಲ್ಲ ಬಳಸುವುದು ಉತ್ತಮ ಎನ್ನುತ್ತಾರೆ. ಹಾಗಾದರೆ ಈ ಬಗ್ಗೆ ತಜ್ಞರು ಏನು ಹೇಳುತ್ತಾರೆ ನೋಡಿ.   
icon

(1 / 5)

ಸಕ್ಕರೆ ಮತ್ತು ಬೆಲ್ಲ ಎರಡನ್ನೂ ಕಬ್ಬಿನಿಂದಲೇ ತಯಾರಿಸಲಾಗುತ್ತದೆ ಎಂಬುದು ಸತ್ಯ. ಆದರೆ ಅವುಗಳನ್ನು ತಯಾರಿಸುವ ವಿಧಾನ ಮಾತ್ರ ವಿಭಿನ್ನವಾಗಿದೆ. ಆದರೆ ಬೆಲ್ಲವು ಸಕ್ಕರೆಗಿಂತ ಹೆಚ್ಚಿನ ಪ್ರಯೋಜನಗಳನ್ನು ಹೊಂದಿದೆ. ಬೆಲ್ಲವು ಸಂಪೂರ್ಣವಾಗಿ ಸಾವಯವವಾಗಿದ್ದು, ಸಕ್ಕರೆಯನ್ನು ಬ್ಲೀಚಿಂಗ್ ಪ್ರಕ್ರಿಯೆಯ ಮೂಲಕ ಉತ್ಪಾದಿಸಲಾಗುತ್ತದೆ.
icon

(2 / 5)

ಬೆಲ್ಲದಲ್ಲಿ ಪೊಟ್ಯಾಶಿಯಂ, ಮೆಗ್ನೀಷಿಯಂ, ವಿಟಮಿನ್ ಬಿ1, ಬಿ6, ಸಿ ಅಂಶಗಳಿವೆ. ಇದು ಫೀನಾಲಿಕ್ಸ್ ಅಂಶವನ್ನು ಸಹ ಒಳಗೊಂಡಿದೆ. ಅದು ನಮ್ಮನ್ನು ಖಿನ್ನತೆಯಿಂದ ದೂರವಿಡುತ್ತದೆ. ಒತ್ತಡವನ್ನು ಕಡಿಮೆ ಮಾಡುವ ಜೊತೆಗೆ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗಾಗಿ ತೂಕ ಇಳಿಸಿಕೊಳ್ಳಲು ಬಯಸುವವರು ಸಕ್ಕರೆಯ ಬದಲು ಬೆಲ್ಲದ ಟೀ ಕುಡಿಯಬಹುದು. ನೀವು ಕೇಕ್ ಮಾಡಲು ಬೆಲ್ಲವನ್ನು ಸಹ ಬಳಸಬಹುದು.
icon

(3 / 5)

ವಿಟಮಿನ್‌ಗಳ ಜೊತೆಗೆ ಬೆಲ್ಲವು ಆಂಟಿಆಕ್ಸಿಡೆಂಟ್‌ಗಳು ಮತ್ತು ನಾರಿನಂಶವನ್ನು ಹೊಂದಿದೆ. ಇದು ನಮ್ಮ ದೇಹಕ್ಕೆ ತುಂಬಾ ಒಳ್ಳೆಯದು. ಬೆಲ್ಲ ಜೀರ್ಣಕ್ರಿಯೆಗೂ ಸಹಾಯ ಮಾಡುತ್ತದೆ. ಕಡಿಮೆ ಕ್ಯಾಲೋರಿಗಳನ್ನು ಹೊಂದಿರುವ ಇದು, ದೇಹದಿಂದ ವಿಷವನ್ನು ಹೊರಹಾಕುತ್ತದೆ. ಪ್ರತಿದಿನ ಬೆಳಗ್ಗೆ ನಾಟಿ ಬೆಲ್ಲ, ನೆನೆಸಿದ ಕಡಲೆ ಮತ್ತು ಶುಂಠಿ ತಿನ್ನುವುದರಿಂದ ದೇಹದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.
icon

(4 / 5)

ಆದರೆ ಬೆಲ್ಲವನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸಿ. ಏಕೆಂದರೆ ಇದು ಸಕ್ಕರೆಗೆ ಬದಲಿಯಾಗಲು ಸಾಧ್ಯವಿಲ್ಲ. ಏಕೆಂದರೆ ಬೆಲ್ಲದಲ್ಲಿ ಕ್ಯಾಲೋರಿಯೂ ಇದೆ. ಮಧುಮೇಹದ ಸಮಸ್ಯೆ ಇರುವವರು ಬೆಲ್ಲವನ್ನು ಬಳಸುವಾಗ ಜಾಗರೂಕರಾಗಿಬೇಕು. ಇದನ್ನು ಹೊರತು ಪಡಿಸಿಯೂ ತಜ್ಞ ವೈದ್ಯರನ್ನು ಸಂಪರ್ಕಿಸಿ ನಂತರ ಬಳಸುವುದು ಉತ್ತಮ. 
icon

(5 / 5)

ಇತರ ಗ್ಯಾಲರಿಗಳು