ಕನ್ನಡ ಸುದ್ದಿ  /  Lifestyle  /  Summer Care Tips For Kids Diseases That Plague Children In Summer

Summer Care Tips for Kids: ಬೇಸಿಗೆ ಬಂತು, ಮನೆಯಲ್ಲಿ ಮಕ್ಕಳಿದ್ದರೆ ಇರಲಿ ಎಚ್ಚರ; ಈ ಸಮಸ್ಯೆಗಳಿಗೆ ಪುಟಾಣಿಗಳು ತುತ್ತಾಗಬಹುದು..

ಬೇಸಿಗೆ ಬಂದೇ ಬಿಟ್ಟಿದೆ. ಮನೆಯಲ್ಲಿ ಚಿಕ್ಕ ಮಕ್ಕಳಿದ್ದರೆ, ಅವರು ಆಟಕ್ಕೆ ಹೊರಬಿಡುವ ಮುನ್ನ ಪೋಷಕರಾದ ನಿಮಗೆ ಈ ವಿಷಯಗಳು ಗಮನದಲ್ಲಿರಲಿ.

ಬೇಸಿಗೆ ಬಂತು, ಮನೆಯಲ್ಲಿ ಮಕ್ಕಳಿದ್ದರೆ ಇರಲಿ ಎಚ್ಚರ; ಈ ಸಮಸ್ಯೆಗಳಿಗೆ ಪುಟಾಣಿಗಳು ತುತ್ತಾಗಬಹುದು..
ಬೇಸಿಗೆ ಬಂತು, ಮನೆಯಲ್ಲಿ ಮಕ್ಕಳಿದ್ದರೆ ಇರಲಿ ಎಚ್ಚರ; ಈ ಸಮಸ್ಯೆಗಳಿಗೆ ಪುಟಾಣಿಗಳು ತುತ್ತಾಗಬಹುದು..

Summer Care Tips for Kids: ನೀವು ಮನೆಯಲ್ಲಿ ಮಕ್ಕಳನ್ನು ಹೊಂದಿದ್ದೀರಾ? ಆದರೆ ಬೇಸಿಗೆಯಲ್ಲಿ ಅವರೊಂದಿಗೆ ಜಾಗರೂಕರಾಗಿರಿ. ಬೇಸಿಗೆಯಲ್ಲಿ ಮಕ್ಕಳು ಶಾಲೆಗೆ ಹೋಗುವುದಿಲ್ಲ. ಅವರು ತಮ್ಮ ಬೇಸಿಗೆ ರಜೆಯನ್ನು ಆನಂದಿಸಲು ತಮ್ಮ ಹೆಚ್ಚಿನ ಸಮಯವನ್ನು ಹೊರಗೆ ಕಳೆಯುತ್ತಾರೆ. ಬಿಸಿಲನ್ನೂ ಲೆಕ್ಕಿಸದೆ ಆಟವಾಡುತ್ತಾರೆ. ಈ ಬಿಸಿಲು ಮತ್ತು ಬಿಸಿ ವಾತಾವರಣವು ಮಕ್ಕಳ ಆರೋಗ್ಯವನ್ನು ಹಾಳುಮಾಡುತ್ತದೆ. ಮಾತ್ರವಲ್ಲದೆ ಅವರಲ್ಲಿ ಚರ್ಮದ ಸಮಸ್ಯೆಗಳನ್ನೂ ಉಂಟುಮಾಡುತ್ತದೆ.

ಗಾಳಿಯಲ್ಲಿರುವ ಹಾನಿಕಾರಕ ಮಾಲಿನ್ಯಕಾರಕಗಳು, ಸೂರ್ಯನಿಂದ ಬರುವ ಕಿರಣಗಳು, ಆ ಶಾಖದಿಂದ ಉಂಟಾಗುವ ಬೆವರು ಮಕ್ಕಳಲ್ಲಿ ಅನೇಕ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತವೆ. ಹಾಗಾಗಿ ಈ ಬೇಸಿಗೆಯಲ್ಲಿ ನಿಮ್ಮ ಮಗುವಿನ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಈ ಬೇಸಿಗೆಯಲ್ಲಿ ಮಕ್ಕಳಲ್ಲಿ ಉಂಟಾಗುವ ಆರೋಗ್ಯ ಸಮಸ್ಯೆಗಳ ಕುರಿತು ಮದರ್ ಹುಡ್ ಆಸ್ಪತ್ರೆಯ ಮಕ್ಕಳ ತಜ್ಞ ಡಾ.ತುಷಾರ್ ವಿವರಿಸಿದ್ದಾರೆ.

ಮಕ್ಕಳಲ್ಲಿ ಬೇಸಿಗೆಯ ಆರೋಗ್ಯ ಸಮಸ್ಯೆಗಳು (Summer Health Problems in Kids)

ಹೊಟ್ಟೆ ಸಮಸ್ಯೆ

ಕಲುಷಿತ ಆಹಾರವನ್ನು ತಿನ್ನುವುದು ಅಥವಾ ಕಲುಷಿತ ಪಾನೀಯಗಳನ್ನು ಕುಡಿಯುವುದು ಅನೇಕ ರೀತಿಯ ಜಠರ ಮತ್ತು ಕರುಳಿನ ಸಮಸ್ಯೆಗಳನ್ನು ಉಂಟುಮಾಡಬಹುದು. ಹೊಟ್ಟೆನೋವು, ಗ್ಯಾಸ್, ಅಸಿಡಿಟಿಯಂತಹ ಸಮಸ್ಯೆಗಳು ಹೆಚ್ಚು. ಕಳಪೆ ಗುಣಮಟ್ಟದ ಮತ್ತು ಕಲುಷಿತ ಆಹಾರವನ್ನು ತಿನ್ನುವುದು ಹಾನಿಕಾರಕ ವೈರಸ್‌ಗಳು ಆಹಾರದ ಮೂಲಕ ಹೊಟ್ಟೆ ಸೇರುವುದರಿಂದ ಅದು ವಿಷವಾಗಿ ಬದಲಾಗಬಹುದು..

ನಿರ್ಜಲೀಕರಣ (ಡಿಹೈಡ್ರೇಷನ್)

ಮಕ್ಕಳು ಸದಾ ಬಿಸಿಲಿನಲ್ಲಿ ಆಟ ಆಡುವುದರಿಂದ ಮಕ್ಕಳು ನೀರು ಕುಡಿಯುವುದನ್ನು ಮರೆತು ಬಿಡಬಹುದು. ಇದರಿಂದ ಡಿಹೈಡ್ರೇಷನ್‌ ಅಥವಾ ನಿರ್ಜಲೀಕರಣ ಸಮಸ್ಯೆ ಎದುರಾಗುವ ಸಾಧ್ಯತೆ ಹೆಚ್ಚು. ಹಾಗಾಗಿ ಈ ಬೇಸಿಗೆಯಲ್ಲಿ ಯಾವಾಗಲೂ ನೀರಿನ ಬಾಟಲಿಯನ್ನು ತಮ್ಮ ಬಳಿ ಇಟ್ಟುಕೊಳ್ಳಿ. ಕಲ್ಲಂಗಡಿ, ಹಣ್ಣಿನ ಜ್ಯೂಸ್‌ ಅನ್ನು ಜತೆಗಿಟ್ಟುಕೊಳ್ಳುವುದು ಉಪಯುಕ್ತ.

ಕಾಡಲಿದೆ ಚರ್ಮದ ಸಮಸ್ಯೆಗಳು

ಬಿಸಿ ಮತ್ತು ಆರ್ದ್ರ ವಾತಾವರಣವು ಹೆಚ್ಚಿದ ಬೆವರುವಿಕೆಗೆ ಕಾರಣವಾಗುತ್ತದೆ. ಇದು ಚರ್ಮದ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಅತಿಯಾದ ಬೆವರುವಿಕೆಯು ದೇಹದಲ್ಲಿ ತುರಿಕೆಯನ್ನು ಉಂಟುಮಾಡಬಹುದು. ಹಾಗಾಗಿ ಸಾಧ್ಯವಾದಷ್ಟು ಮಕ್ಕಳು ಆಟ ಆಡಿ ಬಂದ ತಕ್ಷಣ ನೀರಿನಲ್ಲಿ ಕೈ ಕಾಲು ತೊಳೆಯಬೇಕು. ತೆಳುವಾದ ಕೈ ಮತ್ತು ಕಾಲು ಪೂರ್ತಿ ಮುಚ್ಚುವ ರೀತಿಯ ಉಡುಪು ಧರಿಸುವುದು ಉತ್ತಮ.

ಬೇಸಿಗೆ ಜ್ವರ

5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಸಾಮಾನ್ಯವಾಗಿ ವರ್ಷವಿಡೀ ಈ ಸಮಸ್ಯೆಗಳನ್ನು ಎದುರಿಸುತ್ತಾರೆ. ಹಾಗಾಗಿ ಮಕ್ಕಳನ್ನು ಸದಾ ಬಿಸಿಲಿಗೆ ಬಿಡಬಾರದು. ಸಂಜೆ ಅಥವಾ ಬೆಳಗ್ಗೆ ಹವಾಮಾನವು ತಂಪಾಗಿರುವಾಗ ಆಟವಾಡಲು ಅವರಿಗೆ ಅನುಮತಿಸಬೇಕು.

ಕೀಟ ಕಡಿತ

ಬೇಸಿಗೆಯಲ್ಲಿ ಸೊಳ್ಳೆಗಳ ಕಾಟ ಹೆಚ್ಚು. ಇದಲ್ಲದೆ ಮಕ್ಕಳು ಒಮ್ಮೊಮ್ಮೆ ಕೀಟಗಳ ಕಡಿತಕ್ಕೂ ಒಳಗಾಗುತ್ತಾರೆ. ಕೀಟ ಕಚ್ಚಿದ ಜಾಗದಲ್ಲಿ ತುರಿಕೆ ಮತ್ತು ಊತವೂ ಕಾಣಿಸುತ್ತದೆ. ಹಾಗಾಗಿ ಸಾಧ್ಯವಾದರೆ, ಮೈ ಪೂರ್ತಿ ಮುಚ್ಚುವ ಬಟ್ಟೆಯ ಜೊತೆಗೆ ಮಾರುಕಟ್ಟೆಯಲ್ಲಿ ಸಿಗುವ ಬಾಡಿ ಲೋಷನ್‌ ಲೇಪನ ಮಾಡುವುದು ಇನ್ನೂ ಒಳ್ಳೆಯದು.