ಬೇಸಿಗೆಯಲ್ಲಿ ದೇಹವನ್ನು ತಂಪಾಗಿಸಲು ಮಜ್ಜಿಗೆ ಕುಡಿಯಿರಿ; ಮೊಸರಿಗಿಂತ ಮಜ್ಜಿಗೆ ಏಕೆ ಒಳ್ಳೆಯದು ಎಂಬ ಬಗ್ಗೆ ಇಲ್ಲಿದೆ ಮಾಹಿತಿ
ಬೇಸಿಗೆಯಲ್ಲಿ ದೇಹವನ್ನು ತಂಪಾಗಿಸುವ ಪಾನೀಯ ಸೇವಿಸಬೇಕು. ದೇಹವು ನಿರ್ಜಲೀಕರಣಗೊಳ್ಳದಂತೆ ತಡೆಯಲು ಪ್ರತಿದಿನ ಮಜ್ಜಿಗೆ ಕುಡಿಯುವುದು ಮುಖ್ಯ. ಬೇಸಿಗೆಯಲ್ಲಿ ಮೊಸರು ತಿನ್ನುವ ಬದಲು ಮಜ್ಜಿಗೆ ಕುಡಿಯುವುದು ಏಕೆ ಮುಖ್ಯ ಎಂಬುದು ಇಲ್ಲಿದೆ.

ಮಜ್ಜಿಗೆ ಕುಡಿಯುವುದರಿಂದ ಬೇಸಿಗೆಯಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಬೇಸಿಗೆಯ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಪ್ರತಿಯೊಬ್ಬರೂ ಹೈಡ್ರೇಟ್ ಆಗಿ ಉಳಿಯುವ ಸಮಯ ಇದು. ದೇಹ ತೇವಾಂಶಯುಕ್ತವಾಗಿರಲು ಸಾಕಷ್ಟು ನೀರು ಕುಡಿಯುವುದು ಮುಖ್ಯ. ಕೇವಲ ನೀರು ಕುಡಿದು ಬೇಜಾರಾದರೆ ಹಣ್ಣುಗಳ ರಸ, ಮಜ್ಜಿಗೆಯನ್ನು ಸಹ ಕುಡಿಯಬಹುದು.
ಬೇಸಿಗೆಯಲ್ಲಿ ಹೈಡ್ರೇಟ್ ಆಗಲು, ನೀವು ದಿನಕ್ಕೆ ಎರಡು ಬಾರಿ ಕಿತ್ತಳೆ ರಸ, ನೀರು, ಹಣ್ಣುಗಳು ಮತ್ತು ಮಜ್ಜಿಗೆಯನ್ನು ಆಹಾರದಲ್ಲಿ ಸೇರಿಸಬೇಕು. ಮೊಸರಿಗಿಂತ ಮಜ್ಜಿಗೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಪ್ರತಿದಿನ ಒಂದು ಲೋಟ ಮಜ್ಜಿಗೆ ಕುಡಿಯಲು ತಜ್ಞರು ಸಲಹೆ ನೀಡುತ್ತಾರೆ. ಬೇಸಿಗೆಯಲ್ಲಿ ಆರೋಗ್ಯಕ್ಕಾಗಿ ಮೊಸರಿಗಿಂತ ಮಜ್ಜಿಗೆ ಉತ್ತಮ. ಮಜ್ಜಿಗೆಯನ್ನು ಮೊಸರಿನಿಂದ ತಯಾರಿಸಲಾಗಿದ್ದರೂ, ಮೊಸರಿಗಿಂತ ಮಜ್ಜಿಗೆ ಏಕೆ ಉತ್ತಮ ಎಂದು ಆಶ್ಚರ್ಯವಾಗಬಹುದು. ಈ ಪ್ರಶ್ನೆಗೆ ಇಲ್ಲಿದೆ ಉತ್ತರ.
ಮಜ್ಜಿಗೆ ಏಕೆ ಒಳ್ಳೆಯದು?
ಕೆಲವು ವರದಿಗಳ ಪ್ರಕಾರ, ಮೊಸರು ಸಕ್ರಿಯ ಬ್ಯಾಕ್ಟೀರಿಯಾವನ್ನು ಹೊಂದಿರುತ್ತದೆ. ಅವು ಶಾಖಕ್ಕೆ ಒಡ್ಡಿಕೊಂಡಾಗ ಹುದುಗಲು ಪ್ರಾರಂಭಿಸುತ್ತವೆ. ಮೊಸರು ಸೇವಿಸಿದಾಗ, ಅದು ಹೊಟ್ಟೆಗೆ ಸೇರಿ ಶಾಖಕ್ಕೆ ಹುದುಗಲು ಪ್ರಾರಂಭಿಸುತ್ತದೆ. ಅಂತಹ ಸಂದರ್ಭದಲ್ಲಿ ಅದು ದೇಹವನ್ನು ತಂಪಾಗಿಸುವ ಬದಲು ಬಿಸಿ ಮಾಡುತ್ತದೆ. ಈ ಹುದುಗುವಿಕೆ ಪ್ರಕ್ರಿಯೆಯನ್ನು ತಡೆಯಲು ಮಜ್ಜಿಗೆ ಉತ್ತಮ. ಏಕೆಂದರೆ ಮೊಸರಿನಲ್ಲಿ ನೀರನ್ನು ಬೆರೆಸುವ ಮೂಲಕವೂ ಇದನ್ನು ತಯಾರಿಸಲಾಗುತ್ತದೆ. ಕೆಲವರು ಮಜ್ಜಿಗೆಗೆ ಶುಂಠಿ ಬೆರೆಸಿ ಕುಡಿಯಲು ಇಷ್ಟಪಡುತ್ತಾರೆ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.
ಇದನ್ನೂ ಓದಿ: ದೇಹ ತಂಪಾಗಿಸುವ ಬೇಸಿಗೆ ಪಾನೀಯಗಳಿವು
ಆಯುರ್ವೇದ ಏನು ಹೇಳುತ್ತದೆ?
ಆಯುರ್ವೇದ ತಜ್ಞರ ಪ್ರಕಾರ, ಮಜ್ಜಿಗೆ ತಂಪಾಗಿಸುವ ಗುಣಗಳನ್ನು ಹೊಂದಿದೆ. ಬೇಸಿಗೆಯಲ್ಲಿ ದೇಹವನ್ನು ತಂಪಾಗಿಡಲು ಇದು ಅತ್ಯುತ್ತಮ ಪಾನೀಯವಾಗಿದೆ. ಆಯುರ್ವೇದದಲ್ಲಿ, ಮೊಸರಿಗಿಂತ ಮಜ್ಜಿಗೆಯನ್ನು ಆರೋಗ್ಯಕರ ಆಯ್ಕೆ ಎಂದು ಪರಿಗಣಿಸಲಾಗಿದೆ. ಮೊಸರಿನೊಂದಿಗೆ ನೀರನ್ನು ಬೆರೆಸಿ ಮಜ್ಜಿಗೆ ತಯಾರಿಸುವುದು ಜೀರ್ಣಕ್ರಿಯೆಯನ್ನು ವೇಗಗೊಳಿಸುತ್ತದೆ. ಜೀರ್ಣಕಾರಿ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಈ ಪಾನೀಯವು ಪ್ರಯೋಜನಕಾರಿಯಾಗಿದೆ.
ಹಾಗಂತ ಮೊಸರು ಪ್ರಯೋಜನವಿಲ್ಲ ಎಂದು ಹೇಳುತ್ತಿಲ್ಲ. ಮೊಸರು ತಿನ್ನುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಆದರೆ ಬೇಸಿಗೆಯಲ್ಲಿ, ಮೊಸರಿಗಿಂತ ಮಜ್ಜಿಗೆ ಕುಡಿಯುವುದು ಉತ್ತಮ. ಇದು ಬೇಸಿಗೆಯ ಆರೋಗ್ಯಕರ ತಂಪು ಪಾನೀಯವಾಗಿದೆ. ಆದ್ದರಿಂದ ಬೇಸಿಗೆಯ ತಿಂಗಳುಗಳಲ್ಲಿ ಪ್ರತಿದಿನ ಒಂದು ಅಥವಾ ಎರಡು ಲೋಟ ಮಜ್ಜಿಗೆ ಕುಡಿಯಲು ಪ್ರಯತ್ನಿಸಿ.
(ಗಮನಿಸಿ: ಈ ಮಾಹಿತಿಯು ಸಾಮಾನ್ಯ ಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ).