Summer Health Tips: ಬೇಸಿಗೆಯಲ್ಲಿ ದೇಹ ದಂಡಿಸಬೇಡಿ; ಕೆಟ್ಟ ಕೊಲೆಸ್ಟ್ರಾಲ್‌ ತಗ್ಗಿಸೋಕೆ ಈ ಹಣ್ಣು, ತರಕಾರಿ ಸೇವನೆ ಮರೆಯಬೇಡಿ-summer health tips in kannada bad cholesterol fruits vegetables to lower cholesterol levels okra bitter guard rst ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Summer Health Tips: ಬೇಸಿಗೆಯಲ್ಲಿ ದೇಹ ದಂಡಿಸಬೇಡಿ; ಕೆಟ್ಟ ಕೊಲೆಸ್ಟ್ರಾಲ್‌ ತಗ್ಗಿಸೋಕೆ ಈ ಹಣ್ಣು, ತರಕಾರಿ ಸೇವನೆ ಮರೆಯಬೇಡಿ

Summer Health Tips: ಬೇಸಿಗೆಯಲ್ಲಿ ದೇಹ ದಂಡಿಸಬೇಡಿ; ಕೆಟ್ಟ ಕೊಲೆಸ್ಟ್ರಾಲ್‌ ತಗ್ಗಿಸೋಕೆ ಈ ಹಣ್ಣು, ತರಕಾರಿ ಸೇವನೆ ಮರೆಯಬೇಡಿ

Summer Health: ಬೇಸಿಗೆಯಲ್ಲಿ ಹಲವು ಕಾರಣಗಳಿಂದ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್‌ ಅಥವಾ ಎಲ್‌ಡಿಎಲ್‌ ಪ್ರಮಾಣ ಹೆಚ್ಚಬಹುದು. ಆದರೆ ಈ ಕೊಲೆಸ್ಟ್ರಾಲ್‌ ಪ್ರಮಾಣವನ್ನು ತಗ್ಗಿಸಲು ಬೇಸಿಗೆಯಲ್ಲಿ ಸಿಗುವ ಹಣ್ಣು, ತರಕಾರಿಗಳು ಸಹಾಯ ಮಾಡುತ್ತವೆ. ಅಂತಹ ಕೆಲವು ಹಣ್ಣು, ತರಕಾರಿಗಳು ಯಾವುವು ಹಾಗೂ ಕೊಲೆಸ್ಟ್ರಾಲ್‌ ಪ್ರಮಾಣ ತಗ್ಗಿಸಲು ಹೇಗೆ ಸಹಾಯ ಮಾಡುತ್ತವೆ ನೋಡಿ.

ಬೇಸಿಗೆಯಲ್ಲಿ ಕೆಟ್ಟ ಕೊಲೆಸ್ಟ್ರಾಲ್‌ ಪ್ರಮಾಣ ತಗ್ಗಿಸುವ ಹಣ್ಣು, ತರಕಾರಿಗಳು
ಬೇಸಿಗೆಯಲ್ಲಿ ಕೆಟ್ಟ ಕೊಲೆಸ್ಟ್ರಾಲ್‌ ಪ್ರಮಾಣ ತಗ್ಗಿಸುವ ಹಣ್ಣು, ತರಕಾರಿಗಳು

ಬೇಸಿಗೆಯಲ್ಲಿ ತೂಕ ಇಳಿಕೆಯ ಪ್ರಮಾಣ ಹೆಚ್ಚಿರುತ್ತದೆ. ಬೇರೆ ಋತುಮಾನಗಳಿಗೆ ಹೋಲಿಸಿದರೆ ಬೇಸಿಗೆಯಲ್ಲಿ ದೇಹದಲ್ಲಿ ಕೊಬ್ಬಿನಾಂಶ ಸಂಗ್ರಹವಾಗುವುದರ ಪ್ರಮಾಣ ಕಡಿಮೆ ಇರುತ್ತದೆ. ಬೇಸಿಗೆಯಲ್ಲಿ ಕೊಬ್ಬಿನಾಂಶ ಹೆಚ್ಚಿರುವ ಹಾಗೂ ಎಣ್ಣೆಯ ಪ್ರಮಾಣ ಅಧಿಕವಿರುವ ಆಹಾರ ಪದಾರ್ಥಗಳ ಸೇವನೆಯ ಪ್ರಮಾಣವೂ ಕಡಿಮೆ ಇರುತ್ತದೆ.

ಆದರೆ ಬಿಸಿಲಿನ ತಾಪ ಹೆಚ್ಚಿರುವ ಕಾರಣ ಹೊರಗಡೆ ಓಡಾಡುವುದು ಅಹಿತಕರ ಹಾಗೂ ಅಪಾಯಕಾರಿ ಎನ್ನಿಸುತ್ತದೆ. ಆ ಕಾರಣಕ್ಕೆ ನಾವು ಹೆಚ್ಚಾಗಿ ಒಳಗಡೆ ಕುಳಿತಿರುತ್ತೇವೆ. ಹಲವರು ಹವಾನಿಯಂತ್ರಿತ ಕೋಣೆಯಲ್ಲಿ ಕುಳಿತು ಬಿಸಿಲಿನ ತಾಪವನ್ನು ನೀಗಿಸಿಕೊಳ್ಳಲು ಬಯಸುತ್ತಾರೆ. ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತಾಗ ನೀರು ಕುಡಿಯುವ ಪ್ರಮಾಣವೂ ಕಡಿಮೆಯಾಗುತ್ತದೆ. ಅಲ್ಲದೆ ಐಸ್‌ಕ್ರೀಮ್‌ ಹಾಗೂ ಇತರ ಸಕ್ಕರೆಯಂಶದ ಪ್ರಮಾಣದ ಹೆಚ್ಚಿರುವ ಪದಾರ್ಥಗಳ ಸೇವನೆಗೆ ಒತ್ತು ನೀಡುತ್ತಾರೆ. ಇದು ದೇಹದಲ್ಲಿ ಕೊಲೆಸ್ಟ್ರಾಲ್‌ ಮಟ್ಟ ಏರಿಕೆಯಾಗಲು ಕಾರಣವಾಗಬಹುದು. ಆ ಕಾರಣಕ್ಕೆ ನಿಮ್ಮ ಡಯೆಟ್‌ ಕ್ರಮದಲ್ಲಿ ಸಮರ್ಪಕ ಆಹಾರವನ್ನು ಸೇರಿಸುವುದು ಅವಶ್ಯವಾಗುತ್ತದೆ.

ನಾರಿನಾಂಶ ಸಮೃದ್ಧವಾಗಿರುವ ಹಣ್ಣು ಹಾಗೂ ತರಕಾರಿಗಳ ಸಲಾಡ್‌ ಅನ್ನು ಸಾಕಷ್ಟು ಪ್ರಮಾಣದಲ್ಲಿ ಸೇವಿಸುವುದರಿಂದ ಕೇವಲ ದೇಹದ ಉಷ್ಣಾಂಶ ಕಡಿಮೆಯಾಗುವುದು ಮಾತ್ರವಲ್ಲ, ಇದರಿಂದ ದೀರ್ಘಕಾಲದ ಕಾಡುವ ಹಾಗೂ ಋತುಮಾನದ ಕಾಯಿಲೆಗಳಿಂದ ದೂರ ಇರಬಹುದು.

ʼಬೇಸಿಗೆಯು ತಾಜಾ ಹಾಗೂ ನೀರಿನಂಶ ಹೆಚ್ಚಿರುವ ಹಣ್ಣು, ತರಕಾರಿಗಳು ಸಮೃದ್ಧವಾಗಿ ಸಿಗುವ ಕಾಲ. ರಸಭರಿತ ಮಾವಿನಹಣ್ಣಿನಿಂದ ಹಿಡಿದು ಕಲ್ಲಂಗಡಿವರೆಗೆ ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತವೆ. ಆದರೆ ಬೇಸಿಗೆಯಲ್ಲಿ ರುಚಿಕರ ಆಹಾರ ಸೇವನೆಗೂ ಮುನ್ನ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅಷ್ಟೇ ಮುಖ್ಯ. ನಾವು ಸೇವಿಸುವ ಆಹಾರವು ದೇಹದಲ್ಲಿ ಕೊಲೆಸ್ಟ್ರಾಲ್‌ ಪ್ರಮಾಣವನ್ನು ಹೆಚ್ಚಿಸಬಹುದು. ಕೊಲೆಸ್ಟ್ರಾಲ್‌ನಲ್ಲಿ ಎಲ್‌ಡಿಎಲ್‌ ಹಾಗೂ ಎಚ್‌ಡಿಎಲ್‌ ಎಂಬ ಎರಡು ಅಂಶಗಳಿವೆ. ದೇಹಕ್ಕೆ ಕೊಲೆಸ್ಟ್ರಾಲ್‌ ಅಂಶ ಅವಶ್ಯವಾದರೂ ಕೂಡ ಕೆಟ್ಟ ಕೊಲೆಸ್ಟ್ರಾಲ್‌ ಅಥವಾ ಎಲ್‌ಡಿಎಲ್‌ ಪ್ರಮಾಣದ ಹೆಚ್ಚಳವು ಮೂತ್ರಪಿಂಡದ ಸಮಸ್ಯೆಗಳಿಗೆ ಕಾರಣವಾಗಬಹುದು ಹಾಗೂ ಇದು ಹೃದ್ರೋಗದ ಅಪಾಯವನ್ನು ಹೆಚ್ಚಿಸಬಹುದುʼ ಎನ್ನುತ್ತಾರೆ ಪೌಷ್ಟಿಕ ತಜ್ಞೆ ಗಗನ್‌ ಸಿಧು.

ಸಂಸ್ಕರಿತ ಆಹಾರ, ಕರಿದ ಆಹಾರ, ಡೇರಿ ಉತ್ಪನ್ನಗಳು, ಕೆಂಪು ಮಾಂಸ, ಬೇಕರಿ ಉತ್ಪನ್ನಗಳು, ಫ್ರೋಜನ್‌ ಆಹಾರಗಳಲ್ಲಿ ಸಂಸ್ಕರಿಸಿದ ಕೊಬ್ಬಿನಾಂಶ ಹೆಚ್ಚಿರುತ್ತದೆ. ಇವು ಎಲ್‌ಡಿಎಲ್‌ ಕೊಲೆಸ್ಟ್ರಾಲ್‌ ಮಟ್ಟವನ್ನು ಹೆಚ್ಚಿಸಬಹುದು.

ದೇಹದಲ್ಲಿ ಕೊಲೆಸ್ಟ್ರಾಲ್‌ ಪ್ರಮಾಣ ಕಡಿಮೆ ಮಾಡುವ ಕೆಲವು ಪ್ರಮುಖ ಆಹಾರ ಪದಾರ್ಥಗಳನ್ನು ಸಿಧು ಇಲ್ಲಿ ತಿಳಿಸಿದ್ದಾರೆ.

ಬೆಂಡೆಕಾಯಿ

ಬೇಸಿಗೆಯಲ್ಲಿ ಬೆಂಡೆಕಾಯಿ ಸೇವನೆಯ ಪ್ರಮಾಣವನ್ನು ಹೆಚ್ಚಿಸಬೇಕು. ಇದರಿಂದ ಆರೋಗ್ಯಕ್ಕೆ ಹಲವು ರೀತಿಯ ಪ್ರಯೋಜನಗಳಿವೆ. ಇದರಲ್ಲಿ ವಿಟಮಿನ್‌ ಕೆ, ಸಿ, ಎ ಹಾಗೂ ಮೆಗ್ನಿಶಿಯಂ, ಫೋಲೆಟ್‌ ಹಾಗೂ ನಾರಿನಂಶ ಸಮೃದ್ಧವಾಗಿದ್ದು, ಇದು ಸುಲಭವಾಗಿ ಜೀರ್ಣವಾಗುತ್ತದೆ ಮಾತ್ರವಲ್ಲ, ಕೆಟ್ಟ ಕೊಲೆಸ್ಟ್ರಾಲ್‌ ಪ್ರಮಾಣ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಬೆಂಡೆಕಾಯಿಯಲ್ಲಿರುವ ಪೆಕ್ಟಿನ್‌ ಅಂಶ ಎಲ್‌ಡಿಎಲ್‌ ಪ್ರಮಾಣ ಕಡಿಮೆ ಮಾಡಲು ಸಹಕರಿಸುತ್ತದೆ.

ಹಾಗಲಕಾಯಿ

ಹಾಗಲಕಾಯಿ ಬಹುತೇಕರಿಗೆ ಇಷ್ಟವಾಗುವುದಿಲ್ಲ. ಆದರೆ ಇದರಲ್ಲಿ ದೇಹಕ್ಕೆ ಅಗತ್ಯ ಪೌಷ್ಟಿಕಾಂಶದ ಪ್ರಮಾಣ ಅಧಿಕವಾಗಿದೆ. ಇದು ಆಂಟಿಆಕ್ಸಿಡೆಂಟ್‌ ಸಮೃದ್ಧವಾಗಿದ್ದು, ಕೊಲೆಸ್ಟ್ರಾಲ್‌ ತಗ್ಗಿಸಲು ನೆರವಾಗುವ ಪ್ರಮುಖ ಘಟಕಗಳನ್ನು ಹೊಂದಿದೆ. ಇದರಲ್ಲಿ ವಿಟಮಿನ್‌ ಹಾಗೂ ಮಿನರಲ್ಸ್‌ ಸಮೃದ್ಧವಾಗಿರುತ್ತದೆ.

ತೊಂಡೆಕಾಯಿ

ಬೇಸಿಗೆಯಲ್ಲಿ ತೊಂಡೆಕಾಯಿ ಹೇರಳವಾಗಿ ಸಿಗುತ್ತದೆ. ಇದು ಕೊಲೆಸ್ಟ್ರಾಲ್‌ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಲ್ಲಿ ವಿಟಮಿನ್‌ ಸಿ, ಬಿ1, ಬಿ2 ಹಾಗೂ ಎ ಅಂಶವಿರುತ್ತದೆ. ಇದು ದೇಹದಲ್ಲಿ ಉತ್ತಮ ಕೊಲೆಸ್ಟ್ರಾಲ್‌ (ಎಚ್‌ಎಲ್‌ಡಿ) ಮಟ್ಟವನ್ನು ಹೆಚ್ಚಿಸುತ್ತದೆ.

ಕಲ್ಲಂಗಡಿ

ಬೇಸಿಗೆಯಲ್ಲಿ ಕಲ್ಲಂಗಡಿ ಕೊಟ್ಟರೆ ಯಾರು ಬೇಡ ಎನ್ನುತ್ತಾರೆ ಹೇಳಿ. ಇದರಲ್ಲಿ ಪೋಷಕಾಂಶ ಸಮೃದ್ಧವಾಗಿರುತ್ತದೆ. ಇದರಲ್ಲಿನ ಲೈಕೋಪೊನ್‌ ಅಂಶವು ದೇಹದಲ್ಲಿ ಕೊಲೆಸ್ಟ್ರಾಲ್‌ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಸೌತೆಕಾಯಿ

ಬೇಸಿಗೆಕಾಲದಲ್ಲಿ ಸೌತೆಕಾಯಿ ಹೇರಳವಾಗಿ ಸಿಗುತ್ತದೆ. ಇದರಲ್ಲಿ ನೀರಿನಂಶ ಸಮೃದ್ಧವಾಗಿರುತ್ತದೆ. ಇದು ದೇಹವನ್ನು ಬಿಸಿಲಿನ ಶಾಖದಿಂದ ರಕ್ಷಿಸುತ್ತದೆ. ಫೈಟೊಸ್ಟೆರಾಲ್‌ಗಳು ದೇಹದಲ್ಲಿ ಕೊಲೆಸ್ಟ್ರಾಲ್‌ ಮಟ್ಟ ಕಡಿಮೆಯಾಗಲು ನೆರವಾಗುತ್ತವೆ. ಇದರಲ್ಲಿ ಪೆಕ್ಟಿನ್‌ ಎಂಬ ಕರಗುವ ನಾರಿನಾಂಶವಿದ್ದು ಇದು ಕೂಡ ಕೊಲೆಸ್ಟ್ರಾಲ್‌ ಪ್ರಮಾಣವನ್ನು ತಗ್ಗಿಸಲು ಸಹಾಯ ಮಾಡುತ್ತದೆ.

mysore-dasara_Entry_Point