ಕನ್ನಡ ಸುದ್ದಿ  /  Lifestyle  /  Summer Holidays 2023: Summer Trip With Children And Tips To Parents

Summer holidays 2023: ಮಕ್ಕಳೊಂದಿಗೆ ಬೇಸಿಗೆ ಪ್ರವಾಸ; ಹೀಗಿರಲಿ ಪೋಷಕರ ಪಾತ್ರ

Summer holidays 2023: ಬೇಸಿಗೆಯ ಪ್ರವಾಸ ಮಕ್ಕಳು ಹಾಗೂ ಪೋಷಕರು ಒಂದಾಗಿ ಖುಷಿಯಿಂದ ಸಮಯ ಕಳೆಯಲು ಹೇಳಿ ಮಾಡಿಸಿದ್ದು.‌ ಆದರೆ ಮಕ್ಕಳೊಂದಿಗೆ ಪ್ರವಾಸ ಹೊರಡುವಾಗ ಇನ್ನೊಂದಿಷ್ಟು ಸಿದ್ಧತೆ ಅವಶ್ಯವಾಗಿರುತ್ತದೆ. ಬೇಸಿಗೆ ಪ್ರವಾಸದಲ್ಲಿ ಪೋಷಕರ ಪಾತ್ರವೇನು? ಇಲ್ಲಿದೆ ಕೆಲವು ಸಲಹೆ

ಬೇಸಿಗೆ ಪಾತ್ರ
ಬೇಸಿಗೆ ಪಾತ್ರ

ಬೇಸಿಗೆ ರಜೆ ಸಮೀಪವಿದೆ. ಮಕ್ಕಳು ಬೇಸಿಗೆ ರಜೆಯ ಮಜವನ್ನು ಅನುಭವಿಸಲು ತುದಿಗಾಲಲ್ಲಿ ನಿಂತಿರುತ್ತಾರೆ. ಬೇಸಿಗೆ ರಜೆಯಲ್ಲಿ ಪ್ರವಾಸಕ್ಕೆ ಹೋಗುವುದು ಮಕ್ಕಳಿಗೂ, ಪೋಷಕರಿಗೂ ಒಂದು ರೀತಿಯ ರಿಲ್ಯಾಕ್ಸ್‌ ಭಾವ ಮೂಡಿಸುವಂತೆ ಮಾಡುತ್ತದೆ. ಬೇಸಿಗೆಯ ಪ್ರವಾಸ ಮಕ್ಕಳು ಹಾಗೂ ಪೋಷಕರು ಒಂದಾಗಿ ಖುಷಿಯಿಂದ ಸಮಯ ಕಳೆಯಲು ಹೇಳಿ ಮಾಡಿಸಿದ್ದೂ ಹೌದು. ಮನೆಯ ಪ್ರತಿದಿನದ ಒತ್ತಡ ವಾತಾವರಣದಿಂದ ಹೊರ ಬರಲು ಇದು ಉತ್ತಮ ದಾರಿ. ಆದರೆ ಬೇಸಿಗೆ ರಜೆ ಆಯೋಜನೆಗೂ ಮುನ್ನ ಸರಿಯಾಗಿ ಪ್ಲಾನ್‌ ಮಾಡುವುದು ಅವಶ್ಯ. ಅದರಲ್ಲೂ ಮಕ್ಕಳೊಂದಿಗೆ ಪ್ರವಾಸ ಹೊರಡುವಾಗ ಇನ್ನೊಂದಿಷ್ಟು ಸಿದ್ಧತೆ ಅವಶ್ಯವಾಗಿರುತ್ತದೆ.

ಮನೆಯಲ್ಲಿ ಕುರುಕಲು ತಿಂಡಿ ತಯಾರಿಸಿ

ಶಾಲಾ ದಿನಗಳಲ್ಲಿ ಕುರುಕಲು ತಿಂಡಿಯಿಂದ ಆರೋಗ್ಯ ಕೆಡುತ್ತದೆ ಎಂಬ ಕಾರಣದಿಂದ ಅವುಗಳಿಂದ ಅವರನ್ನು ದೂರ ಇರಿಸಿ ಇರುತ್ತೀರಿ. ಬೇಸಿಗೆ ರಜೆಯಲ್ಲಿ ಮಕ್ಕಳಿಗೆ ಕುರುಕಲು ತಿಂಡಿ ಸೇವೆನೆಗೆ ಅವಕಾಶ ನೀಡಿ. ಹಾಗಂತ ಹೊರಗಡೆ ತಿನಿಸುಗಳು ಬೇಡ. ಪ್ರವಾಸ ಹೊರಡಲು ಕೆಲವು ದಿನಗಳು ಇರುವಾಗಲೇ ಮನೆಯಲ್ಲೇ ಕುರುಕಲು ತಿಂಡಿಗಳನ್ನು ತಯಾರಿಸಿ ಡಬ್ಬಿಯಲ್ಲಿ ತುಂಬಿಟ್ಟುಕೊಳ್ಳಿ. ಮಾರ್ಗ ಮಧ್ಯದಲ್ಲಿ ಮಕ್ಕಳು ತಿಂಡಿಗಾಗಿ ಹಠ ಮಾಡಿದಾಗ ಈ ತಿಂಡಿಗಳನ್ನು ನೀಡುವುದರಿಂ ಆರೋಗ್ಯ ಹಾನಿಯಾಗುವುದನ್ನು ತಪ್ಪಿಸುವ ಜೊತೆಗೆ ಮಕ್ಕಳನ್ನೂ ಸಾಮಾಧಾನ ಮಾಡಬಹುದು.

ಪ್ರವಾಸ ಯೋಜನೆಯಲ್ಲಿ ಮಕ್ಕಳನ್ನೂ ಸೇರಿಸಿಕೊಳ್ಳಿ

ಬೇಸಿಗೆ ಪ್ರವಾಸ ನಿಮ್ಮ ಮನಸ್ಸಿಗೆ ಖುಷಿ ಕೊಡಬೇಕು ನಿಜ. ಆದರೆ ಈ ಪ್ರವಾಸವನ್ನು ಆಯೋಜಿಸುತ್ತಿರುವ ಉದ್ದೇಶ ಮಕ್ಕಳು ಎಂಬುದನ್ನು ಮರೆಯಬೇಡಿ. ಪ್ರವಾಸ ಯೋಜನೆಯ ಹಂತದಲ್ಲಿ ಮಕ್ಕಳನ್ನೂ ಸೇರಿಸಿಕೊಳ್ಳಿ. ಪ್ರವಾಸ ಹಂತಗಳನ್ನು ಹಂಚಿಕೊಳ್ಳಲು ಅವರಿಗೆ ಅವಕಾಶ ನೀಡಿ. ಪ್ರವಾಸ ಖರ್ಚು, ವೆಚ್ಚದ ಬಗ್ಗೆ ಅವರಲ್ಲಿ ಅರಿವು ಮೂಡಿಸಿ. ಮಕ್ಕಳಿಗೆ ಇಷ್ಟವಾಗುವ ಸ್ಥಳಗಳೂ ನಿಮ್ಮ ಪ್ರವಾಸದ ಯೋಜನೆಯಲ್ಲಿರಲಿ. ಪ್ರೇಕ್ಷಣೀಯ ಸ್ಥಳಗಳನ್ನು ಹುಡುಕಲು ಹಾಗೂ ಆ ಸ್ಥಳಗಳ ಬಗ್ಗೆ ಓದಲು ಹೇಳಿ. ಇದರಿಂದ ಮಕ್ಕಳು ನಿರೀಕ್ಷೆ ಇರಿಸಿಕೊಂಡು ಹೋಗಿ ನಿರಾಶರಾಗುವುದನ್ನು ತಪ್ಪಿಸಬಹುದು.

ಸರ್ಪ್ರೈಸ್‌ ನೀಡಿ

ಪ್ರವಾಸ ಯೋಜನೆಗಳಲ್ಲಿ ಹಾಗೂ ಸ್ಥಳ ಆಯ್ಕೆಗಳಲ್ಲಿ ಮಕ್ಕಳು ನಿಮ್ಮೊಂದಿಗೆ ಕೈ ಜೋಡಿಸಿದ್ದರೂ ಕೂಡ, ಪ್ರವಾಸದಲ್ಲಿ ಅವರಿಗಾಗಿ ಕೆಲವೊಂದು ಸರ್ಪ್ರೈಸ್‌ ನೀಡಿ ಪ್ಲಾನ್‌ ಮಾಡಿ. ಫನ್ನಿ ಗೇಮ್‌ ಆಯೋಜನೆ, ಹೊಸ ಪ್ರವಾಸಿ ಸ್ಥಳಗಳನ್ನು ಸೇರಿಸುವುದು ಹಾಗೂ ಹೊಸ ಅಡುಗೆ ಖಾದ್ಯದ ರುಚಿಯನ್ನು ತಿನ್ನಿಸುವುದು ಈ ಮೂಲಕ ಅವರಿಗೆ ಸರ್ಪ್ರೈಸ್‌ ನೀಡಿ ನೀಡಬಹುದು. ಇದರಿಂದ ಅವರಿಗೆ ಸದಾ ನೆನಪಿನಲ್ಲಿ ಉಳಿಯುವಂತಹ ಪ್ರವಾಸ ಮಾಡಿಸಬಹುದು.

ಮನರಂಜನೆ ನೀಡುವ ವಸ್ತುಗಳು ಜೊತೆ ಇರಲಿ

ಪ್ರವಾಸಕ್ಕೆ ಹೋಗುವಾಗ ಮಕ್ಕಳಿಗೆ ಮೋಜು ನೀಡುವಂತಹ ಮನರಂಜನ ವಸ್ತುಗಳು ಜೊತೆಗಿರಲಿ. ಬೋರ್ಡ್‌ ಗೇಮ್‌, ವಿಡಿಯೊ ಗೇಮ್‌, ಕತೆ ಪುಸ್ತಕಗಳು, ಫೋಟೊ ಪ್ರಿಂಟ್‌ ಕ್ಯಾಮೆರಾಗಳು ಜೊತೆಗಿರಲಿ. ಕ್ಯಾಮೆರಾ, ಮೊಬೈಲ್‌ಗಳನ್ನೂ ನೀಡಿ, ಆದರೆ ಸುರಕ್ಷತೆಯ ಬಗ್ಗೆ ಮೊದಲೇ ತಿಳಿಸಿ. ಈಗಿನ ಮಕ್ಕಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಆಕ್ಟಿವ್‌ ಇರುವ ಕಾರಣ ಇದು ಅವರಿಗೆ ಹೆಚ್ಚು ಖುಷಿ ನೀಡಬಹುದು. ಮೊಬೈಲ್‌ ಅಥವಾ ಕ್ಯಾಮೆರಾದಿಂದ ಫೋಟೊಗಳು ಸೆರೆ ಹಿಡಿಯುವುದು ಮಕ್ಕಳಿಗೆ ಖುಷಿ ಕೊಡಬಹುದು.

ಮಕ್ಕಳೊಂದಿಗೆ ಚಟುವಟಿಕೆಗಳಲ್ಲಿ ಭಾಗವಹಿಸಿ

ಸಾಹಸೀ ಕ್ರೀಡೆಗಳಲ್ಲಿ ಭಾಗವಹಿಸುವುದು, ಮ್ಯೂಸಿಯಂಗಳಿಗೆ ಭೇಟಿ ನೀಡುವುದು, ಬೀಚ್‌ನಲ್ಲಿ ಸಮಯ ಕಳೆಯುವುದು ಇಂತಹ ಚಟುವಟಿಕೆಗಳಲ್ಲಿ ಮಕ್ಕಳೊಂದಿಗೆ ನೀವು ತೊಡಗಿಕೊಳ್ಳಿ. ಮಕ್ಕಳೊಂದಿಗೆ ಮಕ್ಕಳಾಗಿ ಅವರಿಗೆ ತಿಳಿಯದ ವಿಷಯಗಳ ಬಗ್ಗೆ ತಿಳಿಸಿ. ಆ ಸಮಯದಲ್ಲೇ ಮಕ್ಕಳ ಸಾಮರ್ಥ್ಯ ಹಾಗೂ ದೌರ್ಬಲ್ಯ ಏನೂ ಎಂಬುದನ್ನೂ ತಿಳಿದುಕೊಳ್ಳಿ.

ಪೂಲ್‌ ಹಾಗೂ ಮನೋರಂಜನಾ ಸ್ಥಳಗಳ ಆಯ್ಕೆ

ಮಕ್ಕಳು ನೀರಿನಲ್ಲಿ ಆಟವಾಡಲು ಹೆಚ್ಚು ಖುಷಿ ಪಡುತ್ತಾರೆ. ಹಾಗಂತ ಬೇಸಿಗೆಯಲ್ಲಿ ಸಮುದ್ರತೀರಗಳಲ್ಲಿ ಎಂಜಾಯ್‌ ಮಾಡುವುದೂ ಕಷ್ಟ. ಆ ಕಾರಣಗಳಿಗೆ ಈಜುಕೊಳ, ಮೋಜಿನ ಜಲಕ್ರೀಡೆಗಳು ಇರುವಂತಹ ವಾಟರ್‌ ಪಾರ್ಕ್‌, ರೆಸಾರ್ಟ್‌ಗಳಿಗೆ ಹೋಗಿ ಕರೆದುಕೊಂಡು ಹೋಗಿ.

ವಿಭಾಗ