Vanilla Ice Cream: ಅಬ್ಬಾ, ಶುರುವಾಯ್ತಪ್ಪಾ ಬೇಸಿಗೆ, ಸುಡು ಬಿಸಿಲಿನ ತಾಪಕ್ಕೆ ಮನೆಯಲ್ಲೇ ತಯಾರಿಸಿ ಸಿಂಪಲ್ ವೆನಿಲಾ ಐಸ್‌ಕ್ರೀಮ್;ವಿಧಾನ 1
Ice cream Recipe: ಹೊರಗಡೆ ನಾನಾ ವಿಧದ ಐಸ್‌ಕ್ರೀಮ್ ದೊರೆಯುತ್ತದೆ. ಮನೆಯಲ್ಲೇ ಐಸ್‌ಕ್ರೀಮ್ ತಯಾರಿಸಲು ಹೆಚ್ಚು ಸಾಮಗ್ರಿಗಳು ಬೇಕು ಎಂದು ಕೆಲವರು ತಪ್ಪು ತಿಳಿದಿರುತ್ತಾರೆ. ಆದರೆ ಮನೆಯಲ್ಲೇ ಸುಲಭವಾಗಿ ದೊರೆಯುವ ಸಾಮಗ್ರಿಗಳಿಂದ ರುಚಿಯಾದ, ಸಿಂಪಲ್ ವೆನಿಲಾ ಐಸ್‌ಕ್ರೀಮ್ ತಯಾರಿಸಬಹುದು.
ಐಸ್‌ಕ್ರೀಮ್ ರೆಸಿಪಿ: ಬೇಸಿಗೆ ಶುರುವಾಗಿದೆ. ಸ್ವಲ್ಪ ದಿನ ಕಳೆದರೆ ಮನೆ ಒಳಗೂ ಇರಲಾಗದೆ, ಹೊರಗೂ ಹೋಗಲಾರದಂಥ ಪರಿಸ್ಥಿತಿ ಉಂಟಾಗುತ್ತದೆ. ಒಂದು ವೇಳೆ ಹೊರಗೆ ಹೋಗಬೇಕಾಗಿ ಬಂದರೆ ಆಗ್ಗಾಗ್ಗೆ ಏನಾದರೂ ತಣ್ಣಗೆ ಕುಡಿಯಬೇಕು ಎನಿಸುತ್ತದೆ. ಆದರೆ ಬೇಸಿಗೆಯಲ್ಲಿ ಎಲ್ಲರೂ ಹೆಚ್ಚು ಇಷ್ಟಪಟ್ಟು ತಿನ್ನುವುದು ಐಸ್‌ಕ್ರೀಮ್.
ಹೊರಗೆ ಹೋದರೆ ಈಗಂತೂ ವಿಧ ವಿಧವಾದ ಐಸ್‌ಕ್ರೀಮ್ ದೊರೆಯುತ್ತದೆ. ಒಂದಕ್ಕಿಂತ ಮತ್ತೊಂದು ರುಚಿಯಲ್ಲಿ ಭಿನ್ನವಾಗಿರುತ್ತದೆ. ಆದರೆ ನೀವು ಪ್ರತಿ ಬಾರಿ ಹೊರಗೆ ಹೋಗಿ ಹಣ ಕೊಟ್ಟು ತಿನ್ನುವ ಬದಲಿಗೆ ಮನೆಯಲ್ಲೇ ಸುಲಭವಾಗಿ ಐಸ್‌ಕ್ರೀಮ್ ತಯಾರಿಸಬಹುದು. ಈಗಂತೂ ಬಹುತೇಕ ಎಲ್ಲರ ಮನೆಯಲ್ಲೂ ರೆಫ್ರಿಜರೇಟರ್ ಇರುತ್ತದೆ. ಅಯ್ಯೋ, ಐಸ್‌ಕ್ರೀಮ್ ಮಾಡಲು ಬಹಳ ಸಾಮಗ್ರಿಗಳು ಬೇಕು, ಅದೆಲ್ಲಾ ಮನೆಯಲ್ಲಿ ಇಲ್ಲ ಎಂದುಕೊಳ್ಳಬೇಡಿ. ಎಲ್ಲರ ಮನೆಯಲ್ಲೂ ಸುಲಭವಾಗಿ ದೊರೆಯುವ ಸಾಮಗ್ರಿಗಳಿಂದ ನೀವು ರುಚಿಯಾದ ವೆನಿಲಾ ಐಸ್‌ಕ್ರೀಮ್ ತಯಾರಿಸಬಹುದು.
ವೆನಿಲಾ ಐಸ್‌ಕ್ರೀಮ್ ತಯಾರಿಸಲು ಬೇಕಾಗುವ ಸಾಮಗ್ರಿಗಳು
- ಗಟ್ಟಿ ಹಾಲು - 1/4 ಲೀಟರ್
- ಸಕ್ಕರೆ - 1/2 ಕಪ್
- ಕಾರ್ನ್‌ಫ್ಲೋರ್ - 1 ಟೇಬಲ್ ಸ್ಪೂನ್
- ಹಾಲಿನ ಪುಡಿ - 2 ಟೇಬಲ್ ಸ್ಪೂನ್
- ವೆನಿಲಾ ಎಸೆನ್ಸ್ - 1 ಟೀ ಸ್ಪೂನ್
ಇದನ್ನೂ ಓದಿ: ತೂಕ ಇಳಿಸಲು ಅತ್ಯುತ್ತಮ ಆಯ್ಕೆ ರಾಗಿ; ಈ ಸೂಪರ್‌ಫುಡ್‌ನಿಂದ ತಯಾರಿಸಬಹುದಾದ 5 ರೆಸಿಪಿಗಳಿವು
ತಯಾರಿಸುವ ವಿಧಾನ
- ಒಂದು ದಪ್ಪ ತಳದ ಪಾತ್ರೆಗೆ ಹಾಲು, ಸಕ್ಕರೆ, ಕಾರ್ನ್‌ಫ್ಲೋರ್ ಸೇರಿಸಿ ಗಂಟುಗಳು ಇಲ್ಲದಂತೆ ಮಿಕ್ಸ್ ಮಾಡಿ.
- ಮಿಶ್ರಣ ಬಿಸಿ ಆಗಿ ಕುದಿಯಲು ಆರಂಭವಾಗುವರೆಗೂ ನಿಧಾನವಾಗಿ ತಿರುವುತ್ತಿರಿ.
- ಹಾಲಿನ ಮಿಶ್ರಣ ಗಟ್ಟಿಯಾದಾಗ ಸ್ಟೌವ್ ಆಫ್ ಮಾಡಿ ತಣ್ಣಗಾಗುವವರೆಗೂ ಬಿಡಿ.
- ನಂತರ ಮಿಕ್ಸಿ ಜಾರ್‌ಗೆ ವರ್ಗಾಯಿಸಿಕೊಂಡು, ಹಾಲಿನ ಪುಡಿ ವೆನಿಲಾ ಎಸೆನ್ಸ್ ಸೇರಿಸಿ ಒಂದೆರಡು ಸುತ್ತು ಬ್ಲೆಂಡ್ ಮಾಡಿ.
- ಇದನ್ನು ಮುಚ್ಚಳ ಇರುವ ಕಂಟೇನರ್ ಅಥವಾ ಬಾಕ್ಸ್‌ಗೆ ಸೇರಿಸಿ ಡೀಪ್ ಫ್ರೀಜರ್‌ನಲ್ಲಿ ಒಂದು ರಾತ್ರಿ ಬಿಡಿ.
- ರುಚಿಯಾದ ವೆನಿಲಾ ಐಸ್‌ಕ್ರೀಮ್ ಎಂಜಾಯ್ ಮಾಡಿ.
ಇದನ್ನೂ ಓದಿ: ಮನೆಯಲ್ಲೇ ಮಾಡಿ ಹೋಟೆಲ್ ಶೈಲಿಯ ಪರ್ಫೆಕ್ಟ್ ಮಸಾಲೆ ದೋಸೆ; ಇಲ್ಲಿದೆ ರೆಸಿಪಿ
ಗಮನಿಸಿ: ಒಂದು ವೇಳೆ ನಿಮಗೆ ಚಾಕೊಲೇಟ್ ಫ್ಲೇವರ್ ಬೇಕಿದ್ದರೆ ಕಂಟೇನರ್‌ಗೆ ಮಿಶ್ರಣ ಹಾಕಿದ ನಂತರ ಚಾಕೋ ಚಿಪ್ಸ್ ಅಥವಾ ಚಾಕೊಲೇಟ್ ಸಿರಪ್ ಸೇರಿಸಿ ಮಿಕ್ಸ್ ಮಾಡಬಹುದು. ಅಥವಾ ಬೇರೆ ಯಾವ ಫ್ಲೇವರ್ ಬೇಕಿದ್ದರೆ ಕೂಡಾ ಸೇರಿಸಿಕೊಳ್ಳಬಹುದು.
ನಾಳೆ ಮತ್ತೊಂದು ವಿಧಾನದಲ್ಲಿ ವೆನಿಲಾ ಐಸ್‌ಕ್ರೀಮ್ ರೆಸಿಪಿ ತಿಳಿಸಿಕೊಡಲಾಗುವುದು.
ವಿಭಾಗ