Vanilla Ice Cream: ವಿಪ್ಪಿಂಗ್ ಕ್ರೀಮ್ ಬಳಸಿ ಡಿಲೀಶಿಯಸ್ ವೆನಿಲಾ ಐಸ್‌ಕ್ರೀಮ್ ತಯಾರಿಸೋದು ಹೇಗೆ? ಇಲ್ಲಿದೆ ಸಂಪೂರ್ಣ ರೆಸಿಪಿ- ವಿಧಾನ 2
Ice Cream Recipe: ಸುಲಭವಾಗಿ ದೊರೆಯುವ ಸಾಮಗ್ರಿಗಳಿಂದ ಮನೆಯಲ್ಲೇ ಸುಲಭವಾಗಿ ಐಸ್‌ಕ್ರೀಮ್ ತಯಾರಿಸಬಹುದು. ಕಾರ್ನ್‌ಫ್ಲೋರ್ ಬಳಸಿ ತಯಾರಿಸುವ ಐಸ್‌ಕ್ರೀಮ್‌ಗಿಂತ ವಿಪ್ಪಿಂಗ್ ಕ್ರೀಮ್ ಬಳಸಿ ತಯಾರಿಸುವ ಐಸ್‌ಕ್ರೀಮ್ ಇನ್ನಷ್ಟು ರುಚಿಯಾಗಿರುತ್ತದೆ.
Ice Cream Recipe: ಪುಟ್ಟ ಮಕ್ಕಳಿಂದ ಹಿಡಿದು ದೊಡ್ಡವರು ಇಷ್ಟಪಟ್ಟುವ ತಿನ್ನುವ ಐಸ್‌ಕ್ರೀಮ್‌ಗೆ ಎಲ್ಲಾ ಕಾಲದಲ್ಲೂ ಬಹಳ ಬೇಡಿಕೆ. ಅದರಲ್ಲೂ ಬೇಸಿಗೆಯಲ್ಲಂತೂ ಇತರ ಕಾಲಕ್ಕಿಂತ ಜನರು ಹೆಚ್ಚು ಇಷ್ಟಪಟ್ಟು ತಿನ್ನುತ್ತಾರೆ. ಅದರ ರುಚಿ ಎಲ್ಲರನ್ನೂ ಸೆಳೆಯುವ ಕಾರಣ ಒಂದಾದರೆ, ಬಿಸಿಲಿನ ಧಗೆಯಲ್ಲಿ ಏನಾದರೂ ತಣ್ಣಗೆ ತಿನ್ನಬೇಕು ಎನಿಸುವುದು ಮತ್ತೊಂದು ಕಾರಣ.
ಈಗಂತೂ ಕ್ಯಾಂಡಿ, ಕ್ರೀಮ್, ಕೇಕ್‌ಗಳ ರೂಪದಲ್ಲಿ ನಾನಾ ವೆರೈಟಿ ಐಸ್‌ಕ್ರೀಮ್ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ವೆನಿಲಾ, ಚಾಕೊಲೇಟ್, ಸ್ಟ್ರಾಬೆರಿ, ಮ್ಯಾಂಗೋ, ಪಿಸ್ತಾ , ಚಾಕೊಚಿಪ್, ಬಟರ್ ಸ್ಕ್ರಾಚ್ ಸೇರಿದಂತೆ ನಾನಾ ಫ್ಲೇವರ್‌ಗಳಲ್ಲಿ ಐಸ್‌ಕ್ರೀಮ್ ದೊರೆಯಲಿದೆ. ಅದರಲ್ಲೂ ಡೆತ್‌ಬೈಟ್ ಚಾಕೊಲೇಟ್, ಗಡ್‌ಬಡ್, ಬ್ರೌನಿ ವಿತ್ ಐಸ್‌ಕ್ರೀಮ್, ಡ್ರೈ ಫ್ರೂಟ್ ಸ್ಪೆಷಲ್, ತಿರಮಿಸು, ಐಸ್‌ಕ್ರೀಮ್ ಪಿಜ್ಜಾ ಹೀಗೆ ನಾನಾ ವೆರೈಟಿಗಳ ಐಸ್‌ಕ್ರೀಮ್ ಲಭ್ಯವಿದೆ. ಆದರೆ ಇವೆಲ್ಲವನ್ನೂ ಮನೆಯಲ್ಲಿ ತಯಾರಿಸಲು ಸ್ವಲ್ಪ ಕಷ್ಟವೇ.
ಮನೆಯಲ್ಲಿ ಇರುವ ವಸ್ತುಳಿಂದಲೇ ನೀವು ಸುಲಭವಾಗಿ ವೆನಿಲಾ ಐಸ್‌ಕ್ರೀಮ್ ತಯಾರಿಸಬಹುದು. ಕಾರ್ನ್‌ಫ್ಲೋರ್‌ನಿಂದ ಹೇಗೆ ಸುಲಭವಾಗಿ ವೆನಿಲಾ ಐಸ್‌ಕ್ರೀಮ್ ತಯಾರಿಸುವುದನ್ನು ಕಲಿತಿದ್ದೇವೆ. ಈಗ ವೆನಿಲಾ ಐಸ್‌ಕ್ರೀಮ್ ತಯಾರಿಸುವ ಮತ್ತೊಂದು ವಿಧಾನ ನೋಡೋಣ. ಇದನ್ನು ತಯಾರಿಸಲು ಮೂರೇ ಸಾಮಗ್ರಿಗಳು ಸಾಕು.
ವೆನಿಲಾ ಐಸ್‌ಕ್ರೀಮ್ ತಯಾರಿಸಲು ಬೇಕಾಗುವ ಸಾಮಗ್ರಿಗಳು
- ವಿಪ್ಪಿಂಗ್ ಕ್ರೀಮ್ - 2 ಕಪ್
- ಕಂಡನ್ಸಡ್ ಮಿಲ್ಕ್ - 1 ಕಪ್
- ವೆನಿಲಾ ಎಸೆನ್ಸ್ - 1 ಟೀ ಸ್ಪೂನ್
ವೆನಿಲಾ ಐಸ್‌ಕ್ರೀಮ್ ತಯಾರಿಸುವ ವಿಧಾನ
- ಒಂದು ದೊಡ್ಡ ಬೌಲ್‌ನಲ್ಲಿ ವಿಸ್ಕರ್ ಕಡ್ಡಿಗಳನ್ನು ಇಟ್ಟು ಅರ್ಧ ಗಂಟೆಗಳ ಕಾಲ ಚಿಲ್ ಆಗಲು ಬಿಡಿ.
- ಚಿಲ್ ಆದ ಬೌಲ್‌ಗೆ 2 ಕಪ್ ವಿಪ್ಪಿಂಗ್ ಕ್ರೀಮ್ ಸೇರಿಸಿ
- ವಿಪ್ಪಿಂಗ್ ಕ್ರೀಮ್ ಗಟ್ಟಿಯಾಗುವವರೆಗೂ ಬ್ಲೆಂಡರ್‌ನಲ್ಲಿ ಬ್ಲೆಂಡ್ ಮಾಡಿ
- ಗಟ್ಟಿ ಆದ ವಿಪ್ಪಿಂಗ್ ಕ್ರೀಮ್‌ಗೆ ಕಂಡನ್ಸಡ್ ಮಿಲ್ಕ್, ವೆನಿಲಾ ಎಸೆನ್ಸ್ ಸೇರಿಸಿ ಮತ್ತೊಮ್ಮೆ ಬ್ಲೆಂಡ್ ಮಾಡಿ
- ಐಸ್‌ಕ್ರೀಮ್ ಕಂಟೇನರ್‌ಗೆ ವಿಪ್ಪಿಂಗ್ ಕ್ರೀಮ್ ಮಿಶ್ರಣವನ್ನು ಸೇರಿಸಿ ಮುಚ್ಚಳ ಮುಚ್ಚಿ ಅಥವಾ ರಾಪಿಂಗ್ ಪೇಪರ್‌ನಿಂದ ಸುತ್ತಲೂ ಕವರ್ ಮಾಡಿ
- ಕಂಟೇನರನ್ನು ಸುಮಾರು 6 ಗಂಟೆಗಳ ಕಾಲ ರೆಫ್ರಿಜರೇಟರ್‌ನಲ್ಲಿಡಿ
- ಸ್ಕೂಪ್ ಸಹಾಯದಿಂದ ಸರ್ವಿಂಗ್ ಪ್ಲೇಟ್‌ಗೆ ಐಸ್‌ಕ್ರೀಮ್ ವರ್ಗಾಯಿಸಿ
- ಬೇಕಿದ್ದರೆ ಚಾಕೊಲೇಟ್ ಸಿರಪ್, ಚೆರ್ರಿ ಅಥವಾ ಟೂಟಿ ಫ್ರೂಟಿಯಿಂದ ಗಾರ್ನಿಶ್ ಮಾಡಿ ಸರ್ವ್ ಮಾಡಿ
ಇದನ್ನೂ ಓದಿ: ಬೇಲದ ಹಣ್ಣಿನಿಂದ ಅಮೃತಪಾನಕದವರೆಗೆ; ಬೇಸಿಗೆಯ ದಾಹ ತಣಿಸಿ ಆರೋಗ್ಯ ವೃದ್ಧಿಸುವ ಬಗೆ ಬಗೆ ಪಾನೀಯಗಳಿವು
ಗಮನಿಸಿ
ಸೂಪರ್ ಮಾರ್ಕೆಟ್‌ಗಳಲ್ಲಿ ವಿಪ್ಪಿಂಗ್ ಕ್ರೀಮ್ ದೊರೆಯುತ್ತದೆ.
ಕಂಡನ್ಸಡ್ ಮಿಲ್ಕ್ ಕೂಡಾ ಜನರಲ್ ಸ್ಟೋರ್‌ಗಳಲ್ಲಿ ಲಭ್ಯವಿರುತ್ತದೆ.
ವಿಭಾಗ