ಕನ್ನಡ ಸುದ್ದಿ  /  Lifestyle  /  Summer Tips Air Cooler How To Clean Air Cooler How To Prevent Bad Smell From Air Cooler Rsa

Air Cooler: ಶುದ್ಧವಾದ ಗಾಳಿ ಪಡೆಯಲು ಏರ್ ಕೂಲರ್‌ ಸ್ವಚ್ಛಗೊಳಿಸುವುದು ಹೇಗೆ..? ಇಲ್ಲಿ ತಿಳಿಸಿರುವಂತೆ ಹಂತ ಹಂತವಾಗಿ ಕ್ಲೀನ್‌ ಮಾಡಿ

Summer Tips: ಬೇಸಿಗೆ ಕಾಲ ಬಂತು ಎಂದಾಕ್ಷಣ ಏರ್‌ ಕೂಲರ್‌ಗೆ ಡಿಮಾಂಡ್ ಜಾಸ್ತಿಯಾಗುತ್ತದೆ. ದುಡ್ಡು ಕೊಟ್ಟು ಏರ್‌ ಕೂಲರ್‌ ಖರೀದಿಸಿದರೆ ಸಾಲದು. ಕಾಲ ಕಾಲಕ್ಕೆ ಅದನ್ನು ಸ್ವಚ್ಛಗೊಳಿಸಬೇಕು. ಹಾಗೆಂದ ಮಾತ್ರಕ್ಕೆ ಹೇಗೆ ಬೇಕು ಹಾಗೇ ಸ್ವಚ್ಛಗೊಳಿಸಲು ಸಾಧ್ಯವಿಲ್ಲ. ಇಲ್ಲಿ ಹಂತ ಹಂತವಾದ ಮಾಹಿತಿ ಇದೆ ಗಮನಿಸಿ.

ಏರ್‌ ಕೂಲರ್‌ ಸ್ವಚ್ಛಗೊಳಿಸುವ ವಿಧಾನ
ಏರ್‌ ಕೂಲರ್‌ ಸ್ವಚ್ಛಗೊಳಿಸುವ ವಿಧಾನ

ಬೇಸಿಗೆ ಟಿಪ್ಸ್‌: ಬೇಸಿಗೆ ಸಮಯದಲ್ಲಿ ಸೆಖೆಯ ಧಗೆಯಿಂದ ಪಾರಾಗಲು ಸಾಮಾನ್ಯವಾಗಿ ಮಧ್ಯಮ ವರ್ಗದ ಕುಟುಂಬಗಳು ಏರ್ ಕೂಲರ್‌ಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಪರಿಸರ ಸ್ನೇಹಿಯಾಗಿರುವ ಏರ್ ಕೂಲರ್‌ಗಳು ಬೇಸಿಗೆಯಲ್ಲಿ ತಂಪಾದ ಗಾಳಿಯನ್ನು ನೀಡುತ್ತವೆ. ಏರ್ ಕೂಲರ್‌ ತಮ್ಮ ಕಾರ್ಯಕ್ಷಮತೆಯನ್ನು ಸರಿಯಾಗಿಟ್ಟುಕೊಳ್ಳಬೇಕು ಎಂದರೆ ಅವುಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸುವುದು ಕೂಡ ಮುಖ್ಯವಾಗಿರುತ್ತದೆ. ನೀವು ಆಗಾಗ ಏರ್ ಕೂಲರ್‌ ಶುದ್ಧಗೊಳಿಸಿದಾಗ ಮಾತ್ರ ಅವುಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತದೆ ಮಾತ್ರವಲ್ಲದೇ ಕೂಲರ್‌ಗಳ ಒಳಗೆ ಧೂಳು, ಕೊಳಕು ಹಾಗೂ ಬ್ಯಾಕ್ಟೀರಿಯಾಗಳ ಸಂಗ್ರಹವಾಗುವುದು ತಪ್ಪುತ್ತದೆ.

ಏರ್ ಕೂಲರ್‌ ಸ್ವಚ್ಛಗೊಳಿಸುವುದು ಏಕೆ ಅನಿವಾರ್ಯ..?

ಶುದ್ಧವಾದ ಗಾಳಿ ಪಡೆಯಲು ಹಾಗೂ ಕಾರ್ಯಕ್ಷಮತೆಯನ್ನು ಚೆನ್ನಾಗಿ ಇಟ್ಟುಕೊಳ್ಳಲು ಏರ್ ಕೂಲರ್‌ ಕಾಲ ಕಾಲಕ್ಕೆ ಸ್ವಚ್ಛಗೊಳಿಸುವುದು ಬಹುಮುಖ್ಯವಾಗಿದೆ. ಏರ್ ಕೂಲರ್‌ ಒಳಗೆ ಸಂಗ್ರಹವಾಗುವ ಕೊಳಕನ್ನು ಆಗಾಗ ಸ್ವಚ್ಛಗೊಳಿಸುವ ಮೂಲಕ ಅದರ ಸಾಮರ್ಥ್ಯವನ್ನು ಇನ್ನೂ ಹೆಚ್ಚಿನ ವರ್ಷಗಳ ಕಾಲ ಮುಂದುವರಿಸಲು ಸಾಧ್ಯವಾಗುತ್ತದೆ.

ಏರ್ ಕೂಲರ್ ಸ್ವಚ್ಛಗೊಳಿಸುವುದರಿಂದ ಆಗುವ ಲಾಭಗಳು

ಗಾಳಿಯ ಶುದ್ಧತೆ : ಕಾಲ ಕಳೆದಂತೆ ಕೂಲರ್‌ಗಳಲ್ಲಿ ಧೂಳು ಸೇರಿಕೊಳ್ಳಲು ಆರಂಭಿಸುತ್ತದೆ. ಇದು ಗಾಳಿಯ ಗುಣಮಟ್ಟವನ್ನು ಕಳಪೆಯಾಗಿಸುತ್ತದೆ. ಹೀಗಾಗಿ ನಿಯಮಿತವಾಗಿ ಅವನ್ನು ಶುದ್ಧಗೊಳಿಸುವುದರಿಂದ ಏರ್ ಕೂಲರ್‌ ಒಳಗಿನ ಮಾಲಿನ್ಯಕಾರಕಗಳು ನಿರ್ಮೂಲನೆಯಾಗುತ್ತದೆ ಹಾಗೂ ಶುದ್ಧ ಮತ್ತು ಆರೋಗ್ಯಕರ ಗಾಳಿಯು ನಿಮ್ಮದಾಗಲಿದೆ.

ಬ್ಯಾಕ್ಟೀರಿಯಾ ಬೆಳವಣಿಗೆಯನ್ನು ತಡೆಯುತ್ತದೆ : ಕೂಲರ್‌ಗಳಲ್ಲಿ ನಿಂತ ನೀರು, ಬ್ಯಾಕ್ಟೀರಿಯಾಗಳ ಉತ್ಪಾದನೆಗೆ ಕಾರಣವಾಗುತ್ತದೆ. ಅಲ್ಲದೆ ಶಿಲೀಂಧ್ರಗಳು ಕೂಡ ಉತ್ಪತ್ತಿಯಾಗುತ್ತದೆ. ಹೀಗಾಗಿ ಕಾಲ ಕಾಲಕ್ಕೆ ಏರ್ ಕೂಲರ್‌ನಲ್ಲಿ ನೀರು ಸಂಗ್ರಹಗೊಳ್ಳುವ ಜಾಗವನ್ನು ಶುದ್ಧೀಕರಿಸುತ್ತಿರಬೇಕು. ಇದರಿಂದ ಹಾನಿಕಾರಕ ಸೂಕ್ಷ್ಮ ಜೀವಿಗಳು ನೀರಿನಲ್ಲಿ ಬೆಳೆಯುವುದು ತಪ್ಪುತ್ತದೆ.

ಕೂಲಿಂಗ್ ಕಾರ್ಯಕ್ಷಮತೆ ಹೆಚ್ಚುತ್ತದೆ : ಧೂಳು ಸಂಗ್ರಹವಾಗುತ್ತಾ ಹೋದಂತೆ ಏರ್ ಕೂಲರ್‌ ಕೂಲಿಂಗ್ ಪ್ಯಾಡ್‌ ಮುಚ್ಚಿ ಹೋಗಬಹುದು. ಇದರಿಂದ ಕೂಲಿಂಗ್ ದಕ್ಷತೆ ಕಡಿಮೆಯಾಗುತ್ತದೆ. ಹೀಗಾಗಿ ಪ್ಯಾಡ್‌ಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸುವುದರಿಂದ ಉತ್ತಮ ಗಾಳಿಯನ್ನು ಪಡೆಯುವುದರ ಜೊತೆಗೆ ಕೂಲಿಂಗ್ ಕಾರ್ಯಕ್ಷಮತೆ ಕೂಡ ಹೆಚ್ಚುತ್ತದೆ.

ಏರ್ ಕೂಲರ್‌ ಸ್ವಚ್ಛಗೊಳಿಸುವುದು ಹೇಗೆ..?

ಮೊದಲನೇ ಹಂತ : ನೀರಿನ ಟ್ಯಾಂಕ್ ಸ್ವಚ್ಛಗೊಳಿಸಿ

ಏರ್ ಕೂಲರ್‌ ಸ್ವಚ್ಛಗೊಳಿಸುವ ಮುನ್ನ ಮೊದಲು ನೀವು ಏರ್‌ಕೂಲರ್‌ ಪ್ಲಗ್‌ ತೆಗೆಯಬೇಕು. ವಿದ್ಯುತ್ ಸಂಪರ್ಕ ಕಡಿತಗೊಳಿಸಿದ ಬಳಿಕ ನೀರಿನ ಟ್ಯಾಂಕ್‌ನಲ್ಲಿ ಉಳಿದಿರುವ ನೀರನ್ನು ತೆಗೆದು ಹಾಕಿ. ಬಳಿಕ ತೊಟ್ಟಿಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ. ಮೂಲೆ ಮೂಲೆಗಳನ್ನು ಬಿಡದೇ ನೀವು ಶುಚಿಗೊಳಿಸಬೇಕು.

ಎರಡನೇ ಹಂತ : ಪ್ಯಾಡ್‌ಗಳ ಸ್ವಚ್ಛತೆ

ಏರ್ ಕೂಲರ್‌ನಿಂದ ಮೊದಲು ಕೂಲಿಂಗ್ ಪ್ಯಾಡ್‌ಗಳನ್ನು ಸ್ವಚ್ಛಗೊಳಿಸಿ. ಇದರಲ್ಲಿ ಧೂಳು ಹಾಗೂ ಕೊಳೆಯನ್ನು ತೆಗೆದು ಹಾಕಿ. ಬ್ರಶ್‌ನಿಂದ ನಿಧಾನವಾಗಿ ಪ್ಯಾಡ್‌ಗಳನ್ನು ತೊಳೆಯಿರಿ. ಪ್ಯಾಡ್‌ಗಳನ್ನು ಸ್ವಚ್ಛಗೊಳಿಸಿದ ಬಳಿಕ ಅದು ಸಂಪೂರ್ಣ ಒಣಗಿದ ಬಳಿಕವೇ ಮತ್ತೆ ಫಿಟ್ ಮಾಡಿ.

ಮೂರನೇ ಹಂತ : ಉಳಿದ ನೀರು ತೆಗೆಯಿರಿ

ಏರ್ ಕೂಲರ್‌ನಲ್ಲಿ ನಿಂತ ನೀರಿನಿಂದ ಬರುವ ಅಹಿತಕರ ವಾಸನೆಯನ್ನು ತಡೆಗಟ್ಟಲು ಆಗಾಗ ನೀವು ಏರ್ ಕೂಲರ್‌ನಿಂದ ಉಳಿದಿರುವ ನೀರನ್ನು ತೆಗೆದು ಹಾಕಬೇಕು. ಸಂಪೂರ್ಣವಾಗಿ ನೀರನ್ನು ಶುಚಿಗೊಳಿಸಿದ ಬಳಿಕ ಏರ್ ಕೂಲರ್‌ ಒಳ ಭಾಗವನ್ನು ತೇವವಾದ ಬಟ್ಟೆಯಿಂದ ಒರೆಸಿ.

ನಾಲ್ಕನೇ ಹಂತ : ರೆಕ್ಕೆಗಳನ್ನು ಸ್ವಚ್ಛಗೊಳಿಸಿ

ಮೃದುವಾದ ಬಟ್ಟೆ ಅಥವಾ ಬ್ರಶ್‌ ಬಳಕೆ ಮಾಡಿಕೊಂಡು ಕೂಲರ್‌ ರೆಕ್ಕೆಗಳು ಅಥವಾ ಬ್ಲೇಡ್‌ಗಳನ್ನು ಸ್ವಚ್ಛಗೊಳಿಸಿ. ಇವುಗಳು ಶುದ್ಧ ಗಾಳಿಯನ್ನು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹೀಗಾಗಿ ರೆಕ್ಕೆಯ ಮೇಲೆ ಕುಳಿತ ಸಂಪೂರ್ಣ ಧೂಳನ್ನು ತೆಗೆದು ಹಾಕಬೇಕು.

ಐದನೇ ಹಂತ : ಏರ್ ಕೂಲರ್‌ನ ಹೊರ ಭಾಗವನ್ನು ಶುಚಿಗೊಳಿಸಿ

ಏರ್‌ ಕೂಲರ್‌ನ ಹೊರ ಭಾಗವನ್ನು ಒದ್ದೆ ಬಟ್ಟೆಯಿಂದ ಆಗಾಗ ಒರೆಸಿ. ಏರ್ ಕೂಲರ್‌ ದ್ವಾರಗಳು ಹಾಗೂ ಗ್ರಿಲ್‌ಗಳಲ್ಲಿ ಧೂಳು ಕೂರುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ಹತ್ತಿ ಬಟ್ಟೆಯಿಂದ ಒರೆಸುವುದು ಉತ್ತಮ. ಒರಟಾದ ಬಟ್ಟೆಗಳಿಂದ ಏರ್‌ ಕೂಲರ್‌ ಮೇಲ್ಭಾಗದಲ್ಲಿ ಸ್ಕ್ರಾಚ್‌ ಉಂಟಾಗುವ ಸಾಧ್ಯತೆ ಇರುತ್ತದೆ.

ಆರನೇ ಹಂತ : ಇನ್ನೊಮ್ಮೆ ಪರೀಕ್ಷೆ ಮಾಡಿ

ಕೂಲರ್‌ ಒಳಗಡೆ ಎಲ್ಲಾದರೂ ಕೊಳೆ ಅಂಟಿದೆಯೇ ಎಂಬುದನ್ನು ಮತ್ತೊಮ್ಮೆ ಪರೀಕ್ಷೆ ಮಾಡಿಕೊಳ್ಳಿ. ಫ್ಯಾನ್‌ ಹಾಗೂ ಮೋಟಾರು ಇರುವ ಜಾಗವನ್ನು ಇನ್ನೊಮ್ಮೆ ಪರಿಶೀಲನೆ ಮಾಡಿ.

ಇದನ್ನೂ ಓದಿ: ಬೇಸಿಗೆಯಲ್ಲಿ ಡಿಹೈಡ್ರೇಷನ್ ತಡೆಯಲು ಇಲ್ಲಿದೆ ಸುಲಭ ಸಲಹೆಗಳು

ಏಳನೇ ಹಂತ : ಎಲ್ಲಾ ಭಾಗ ಒಣಗುವವರೆಗೆ ಕಾಯಿರಿ

ಏರ್‌ ಕೂಲರ್‌ನ ಪ್ರತಿಯೊಂದು ಭಾಗವನ್ನು ಒದ್ದೆ ಬಟ್ಟೆಯಿಂದ ಶುದ್ಧಗೊಳಿಸಿದ ಬಳಿಕ ಪ್ರತಿಯೊಂದು ಭಾಗವನ್ನು ಒಣಗಿಸಿ. ಮರು ಜೋಡಣೆ ಮಾಡುವ ಮೊದಲು ಎಲ್ಲಾ ಬಿಡಿ ಭಾಗಗಳಲ್ಲಿ ತೇವಾಂಶ ಹೋಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.

ಎಂಟನೇ ಹಂತ : ರಕ್ಷಣಾತ್ಮಕ ಕವರ್

ಎಲ್ಲಾ ಭಾಗಗಳು ಒಣಗಿದೆ ಎಂದು ಖಚಿತವಾದ ಬಳಿಕ ಕೂಲರನ್ನು ಬಹಳ ಎಚ್ಚರಿಕೆಯಿಂದ ಮರು ಜೋಡಣೆ ಮಾಡಿ. ಎಲ್ಲಾ ಭಾಗಗಳನ್ನು ಸುರಕ್ಷಿತವಾಗಿ ಸರಿಯಾದ ಜಾಗದಲ್ಲೇ ಮರುಜೋಡಣೆ ಮಾಡಿದ್ದೀರೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಏರ್ ಕೂಲರ್‌ಗೆ ಒಳ್ಳೆ ಹೊದಿಕೆಯನ್ನು ಹಾಕಿ.

ವಿಭಾಗ