ಕನ್ನಡ ಸುದ್ದಿ  /  Lifestyle  /  Summer Tips How To Choose Ups For Home Best Ups For Home Important Factors About Ups Rsa

Summer Tips: ಬೇಸಿಗೆ ಪವರ್‌ ಕಟ್‌ ತಲೆ ಬಿಸಿ ಅನ್ನಿಸ್ತಿದ್ಯಾ; ಯುಪಿಎಸ್ ಖರೀದಿಸುವ ಮೊದಲು ಈ ಅಂಶಗಳನ್ನು ಗಮನದಲ್ಲಿಡಿ

Summer Tips: ಬೇಸಿಗೆ ಕಾಲದಲ್ಲಿ ವಿದ್ಯುತ್ ಕೈಗೊಡುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ಮನೆಯಲ್ಲೊಂದು ಯುಪಿಎಸ್ ಅಗತ್ಯವಿರುತ್ತದೆ. ಮನೆಗೆ ಹೊಸ ಯುಪಿಎಸ್ ಖರೀದಿ ಮಾಡುವ ಮೊದಲು ನೀವು ಯಾವೆಲ್ಲ ವಿಚಾರಗಳ ಬಗ್ಗೆ ಗಮನಹರಿಸಬೇಕು ಎನ್ನುವುದಕ್ಕೆ ಮಾಹಿತಿ ಇಲ್ಲಿದೆ.

ಯುಪಿಎಸ್ ಖರೀದಿಸುವ ಮೊದಲು ಈ ಅಂಶಗಳನ್ನು ಗಮನದಲ್ಲಿಡಿ
ಯುಪಿಎಸ್ ಖರೀದಿಸುವ ಮೊದಲು ಈ ಅಂಶಗಳನ್ನು ಗಮನದಲ್ಲಿಡಿ (PC: Pixabay)

Summer Tips: ಬೇಸಿಗೆ ಶುರುವಾಗಿದೆ. ಇತ್ತ ರಾಜ್ಯದಲ್ಲಿ ನೀರಿಗೆ ಅಭಾವ ಕೂಡ ಇರುವುದರಿಂದ ಮುಂದಿನ ದಿನಗಳಲ್ಲಿ ಪವರ್ ಕಟ್ ಎನ್ನುವುದು ಕಟ್ಟಿಟ್ಟ ಬುತ್ತಿ ಎಂದೇ ಹೇಳಬಹುದು. ಈ ಬಾರಿ ಸೆಖೆ ಯಾವ ಮಟ್ಟದಲ್ಲಿದೆ ಎಂದರೆ ಒಂದೈದು ನಿಮಿಷ ಕರೆಂಟ್ ಹೋದರೂ ಸಹ ಫ್ಯಾನ್, ಎಸಿಯಿಲ್ಲದೇ ಬದುಕಲು ಅಸಾಧ್ಯ ಎಂಬಂತಹ ಸ್ಥಿತಿಯಿದೆ. ಹೀಗಾಗಿ ಕರೆಂಟ್ ಕೈ ಕೊಟ್ಟ ಸಮಯದಲ್ಲಿ ಸಹಾಯಕ್ಕೆ ಬರಲೆಂದು ಅನೇಕರು ವಿವಿಧ ಮಾರ್ಗಗಳನ್ನು ಆರಿಸಿಕೊಳ್ಳುತ್ತಾರೆ. ಅದರಲ್ಲಿ ಮುಖ್ಯವಾಗಿ ಅನೇಕರು ತಮ್ಮ ಮನೆಗಳಿಗೆ ಯುಪಿಎಸ್ ಅಳವಡಿಸುತ್ತಾರೆ.

ಮಾರುಕಟ್ಟೆಯಲ್ಲಿ ಯುಪಿಎಸ್ ಎಂದಾಕ್ಷಣ ತರಹೇವಾರಿ ರೀತಿಯ ಆಯ್ಕೆಗಳು ನಿಮಗೆ ಸಿಗುತ್ತದೆ. ಸೂಕ್ತವಾದ ಯುಪಿಎಸ್‌ ಖರೀದಿಸುವ ಮುನ್ನ ನೀವು ಯಾವೆಲ್ಲ ವಿಚಾರಗಳ ಬಗ್ಗೆ ಗಮನ ಹರಿಸಬೇಕು ಎನ್ನುವುದಕ್ಕೆ ಮಾಹಿತಿ ಇಲ್ಲಿದೆ ನೋಡಿ .

ಬೆಲೆ : ಮಾರುಕಟ್ಟೆಯಲ್ಲಿ ಸಾಕಷ್ಟು ಬಗೆಯ ಯುಪಿಎಸ್‌ಗಳು ಲಭ್ಯವಿರುತ್ತದೆ. ಅವುಗಳ ಬೆಲೆ ಕೂಡ ಬದಲಾಗುತ್ತಾ ಹೋಗುತ್ತದೆ. ಹೀಗಾಗಿ ಬೆಲೆಗೆ ತಕ್ಕ ಸೌಕರ್ಯಗಳನ್ನು ಯುಪಿಎಸ್ ಹೊಂದಿದೆಯೇ ಇಲ್ಲವೇ ಎಂಬುದನ್ನು ನೀವು ಖಚಿತಪಡಿಸಿಕೊಳ್ಳಬೇಕು.

ಬಾಳಿಕೆ ಸಮಯ : ವಿದ್ಯುತ್ ಕಡಿತಗೊಂಡ ಬಳಿಕ ಯುಪಿಎಸ್‌ಗಳು ಎಷ್ಟು ಸಮಯದವರೆಗೆ ವಿದ್ಯುತ್ ಸೌಕರ್ಯವನ್ನು ಒದಗಿಸುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಕೆಲವೊಂದು ಯುಪಿಎಸ್‌ಗಳು ಕೆಲವೇ ಗಂಟೆಗಳಲ್ಲಿ ಬ್ಯಾಟರಿ ಸಾಮರ್ಥ್ಯವನ್ನು ಕಳೆದುಕೊಂಡು ಬಿಡುತ್ತವೆ. ಇನ್ನೂ ಕೆಲವು ಹಲವು ಗಂಟೆಗಳ ಕಾಲ ವಿದ್ಯುತ್ ಸಂಪರ್ಕ ನೀಡುತ್ತದೆ. ಇವುಗಳನ್ನು ಸರಿಯಾಗಿ ಗಮನಿಸಬೇಕು.

ಕನೆಕ್ಷನ್‌: ನೀವು ಆಯ್ಕೆ ಮಾಡಿಕೊಂಡ ಯುಪಿಎಸ್ ಯಾವ ಸಿಸ್ಟಂ ಹೊಂದಿದೆ ಎಂಬುದನ್ನು ನೀವು ತಿಳಿದುಕೊಳ್ಳಬೇಕು. ನೀವು ಆಯ್ಕೆ ಮಾಡಿಕೊಂಡ ಯುಪಿಎಸ್ ಮನೆಯಲ್ಲಿರುವ ಹೆಚ್ಚಿನ ಸಾಧನಗಳಿಗೆ ವಿದ್ಯುತ್ ಸಂಪರ್ಕ ನೀಡುವಂತಿರಬೇಕು.

ಗಾತ್ರ : ಒಂದೊಂದು ಯುಪಿಎಸ್‌ಗಳು ಒಂದೊಂದು ಗಾತ್ರವನ್ನು ಹೊಂದಿರುತ್ತದೆ. ಹೀಗಾಗಿ ನಿಮ್ಮ ಮನೆಗೆ ಯಾವ ಗಾತ್ರದ್ದು ಬೇಕು ಎಂಬುದನ್ನು ಸರಿಯಾಗಿ ಯೋಚಿಸಿ. ಮನೆ ತುಂಬಾ ದೊಡ್ಡದಾಗಿದ್ದರೆ ಅಲ್ಲಿರುವ ಎಲ್ಲಾ ಸಾಧನಗಳಿಗೆ ವಿದ್ಯುತ್ ಪೂರೈಸಲು ದೊಡ್ಡ ಯುಪಿಎಸ್‌ಗಳನ್ನೇ ಬಳಸುವುದು ಒಳ್ಳೆಯದು.

ಸಾಮರ್ಥ್ಯ : ನಿಮ್ಮ ಮನೆಗೆ ಎಷ್ಟು ಪ್ರಮಾಣದಲ್ಲಿ ವಿದ್ಯುತ್ ಬೇಕು..? ಯುಪಿಎಸ್ ಖರೀದಿಸುವ ಮುನ್ನ ನೀವು ಈ ವಿಚಾರದ ಬಗ್ಗೆ ಯೋಚಿಸಬೇಕು. ನಿಮ್ಮ ಮನೆಯ ಎಲ್ಲಾ ಎಲೆಕ್ಟ್ರಿಕ್ ಸಾಧನಗಳಿಗೆ ವಿದ್ಯುತ್ ಪೂರೈಸುವ ಸಾಮರ್ಥ್ಯ ನೀವು ಖರೀದಿಸುವ ಯುಪಿಎಸ್‌ಗೆ ಇದೆಯೇ ಎಂಬುದನ್ನು ನೋಡಿಕೊಳ್ಳಬೇಕು.

ಮನೆಯಲ್ಲಿ ಯುಪಿಎಸ್ ಬಳಸುವ ವೇಳೆ ನೀವು ಗಮನಹರಿಸಬೇಕಾದ ಅಂಶಗಳು

ನಿಮ್ಮ ಯುಪಿಎಸ್ ಸರಿಯಾಗಿ ಚಾರ್ಜ್ ಆಗುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಯುಪಿಎಸ್‌ ಎದುರು ಇರುವ ಲೈಟ್‌ ಬಣ್ಣದ ಮೇಲೆ ಕಣ್ಣಿಡಿ. ಅದು ಮಿನುಗಲು ಆರಂಭಿಸಿತು ಎಂದರೆ ಬ್ಯಾಟರಿ ಕಡಿಮೆಯಾಗುತ್ತಿದೆ ಎಂದು ಅರ್ಥವಾಗಿದೆ. ಯಾವಾಗಲೂ ನಿಮ್ಮ ಯುಪಿಎಸ್ ಚಾರ್ಜ್ ಆಗಿರುವಂತೆ ನೋಡಿಕೊಳ್ಳಿ. ಏಕೆಂದರೆ ವಿದ್ಯುತ್ ಯಾವಾಗ ಬೇಕಿದ್ದರೂ ಕೈ ಕೊಡಬಹುದು. ಈ ಸಂದರ್ಭದಲ್ಲಿ ಯುಪಿಎಸ್‌ಗಳು ನಿಮಗೆ ರಕ್ಷಣೆ ನೀಡುತ್ತದೆ.

ವಿಭಾಗ