ಕನ್ನಡ ಸುದ್ದಿ  /  Lifestyle  /  Summer2023 And Mango: Why We Soak Mangoes Before Eating? What Experts Says?

Summer 2023 and mango: ಮಾವಿನಹಣ್ಣನ್ನು ನೆನೆಸಿಟ್ಟು ತಿನ್ನಬೇಕೇ? ಈ ಬಗ್ಗೆ ತಜ್ಞರು ಏನಂತಾರೆ ನೋಡಿ

Summer2023 and Mango: ಹಣ್ಣುಗಳ ರಾಜ ಮಾವಿನಹಣ್ಣು ತಿನ್ನಲು ರುಚಿ ಮಾತ್ರವಲ್ಲ, ಆರೋಗ್ಯಕ್ಕೂ ಉತ್ತಮ. ಕೆಲವರು ಮಾವಿನಹಣ್ಣನ್ನು ನೀರಿನಲ್ಲಿ ನೆನೆಸಿ ತಿನ್ನುತ್ತಾರೆ. ಇದು ಪ್ರಾಚೀನ ಕಾಲದಿಂದಲೂ ನಡೆದ ಬಂದ ವಾಡಿಕೆಯೂ ಹೌದು. ಹಾಗಾದರೆ ಇದನ್ನು ನೆನೆಸಿ ತಿನ್ನುವುದು ಏಕೆ? ಇದರಿಂದ ಆರೋಗ್ಯ ಪ್ರಯೋಜನಗಳಿವೆಯೇ? ಈ ಬಗ್ಗೆ ತಜ್ಞರು ಏನು ಹೇಳುತ್ತಾರೆ ನೋಡಿ.

ಮಾವಿನಹಣ್ಣು
ಮಾವಿನಹಣ್ಣು

ವಸಂತ ಋತು ಮುಗಿದು ಬಿರು ಬಿಸಿಲು ಆರಂಭವಾಯಿತು ಎಂದರೆ ಮಾರುಕಟ್ಟೆಗಳಲ್ಲಿ ಹಣ್ಣುಗಳ ರಾಜನಿಗೆ ಸ್ವಾಗತ ಕೋರಲಾಗುತ್ತದೆ. ಮಾರುಕಟ್ಟೆಯಲ್ಲಿ ಎಲ್ಲಿ ನೋಡಿದರೂ ಹಣ್ಣುಗಳ ರಾಜನದ್ದೇ ಸದ್ದು.

ಹೌದು ಇದು ಮಾವಿನ ಹಣ್ಣಿನ ಕಾಲ. ಈಗ ಎಲ್ಲಿ ನೋಡಿದರೂ ಮಾವಿನ ಪರಿಮಳವೇ ಹರಡಿರುತ್ತದೆ. ಬೇಸಿಗೆಯಲ್ಲಿ ಹಣ್ಣುಗಳ ರಾಜನ ಆಗಮನ ಹೊಟ್ಟೆಯ ಹಸಿವನ್ನು ತಣಿಸುವ ಜೊತೆಗೆ ಬಾಯಿ ಚಪಲವನ್ನೂ ತೀರಿಸುತ್ತದೆ. ಮಾವಿನಹಣ್ಣಿನ ಸೇವನೆಯಿಂದ ಹಲವು ರೀತಿಯ ಆರೋಗ್ಯ ಪ್ರಯೋಜನಗಳೂ ಇವೆ. ಆ ಕಾರಣದಿಂದ ಬಹುತೇಕರಿಗೆ ಮಾವಿನಹಣ್ಣು ಪ್ರಿಯ. ಈ ಸೀಸನ್‌ಗಾಗಿ ಕಾದು ಕುಳಿತಿರುವವರೂ ಇದ್ದಾರೆ. ಆದರೆ ಮಾವಿನ ಹಣ್ಣು ತಿನ್ನುವ ವಿಧಾನದಲ್ಲಿ ಕೆಲವರಿಗೆ ಜಿಜ್ಞಾಸೆ ಇದೆ. ಯಾಕೆಂದರೆ ಕೆಲವು ಮಾವಿನಹಣ್ಣಗಳನ್ನು ಕೆಲ ಹೊತ್ತು ನೀರಿನಲಿ ನೆನೆಸಿಟ್ಟು ನಂತರ ಸೇವಿಸುತ್ತಾರೆ. ಹಾಗಾದರೆ ನೆನೆಸಿಟ್ಟು ತಿನ್ನುವುದು ಯಾಕೆ? ಅದರಿಂದಾಗುವ ಉಪಯೋಗ ಏನು ಎಂದು ತಿಳಿಯುವ ಮೊದಲು ಮಾವಿನಹಣ್ಣಿನ ಆರೋಗ್ಯ ಪ್ರಯೋಜನವೇನು ತಿಳಿಯೋಣ,

ಮಾವಿನಹಣ್ಣಿನ ಆರೋಗ್ಯ ಪ್ರಯೋಜನಗಳು

ಮಾವಿನಹಣ್ಣು ಪೋಷಕಾಂಶ ಸಮೃದ್ಧವಾಗಿರುತ್ತದೆ. ಇದರಲ್ಲಿ ಆಂಟಿಆಕ್ಸಿಡೆಂಟ್‌ ಹಾಗೂ ನಾರಿನಾಂಶ ಅಧಿಕವಾಗಿರುತ್ತದೆ. ಇವು ದೇಹಕ್ಕೆ ಶಕ್ತಿ ನೀಡುವುದು ಮಾತ್ರವಲ್ಲ; ಜೀರ್ಣಶಕ್ತಿ ಹೆಚ್ಚಿಸುವ ಜೊತೆಗೆ ಮಲಬದ್ಧತೆಯಂತಹ ಸಮಸ್ಯೆಗೂ ಪರಿಹಾರ ನೀಡುತ್ತದೆ. ಇದರಲ್ಲಿ ವಿಟಮಿನ್‌ ಎ ಹಾಗೂ ಸಿ ಅಂಶ ಸಮೃದ್ಧವಾಗಿದೆ. ಇದು ಚರ್ಮ ಹಾಗೂ ಕೂದಲ ಸೇವನೆಗೂ ಉತ್ತಮ. ಕೆಲವು ಅಧ್ಯಯನಗಳ ಪ್ರಕಾರ ಹೃದಯದ ಆರೋಗ್ಯ ಹಾಗೂ ಕೊಲೆಸ್ಟ್ರಾಲ್‌ ಮಟ್ಟವನ್ನು ಕಡಿಮೆ ಮಾಡಲು ಈ ಹಣ್ಣಿನ ಸೇವನೆ ಉತ್ತಮ.

ನೆನೆಸಿ ತಿನ್ನಬೇಕೆ? ಹಾಗೇ ತಿನ್ನಬೇಕೇ?

ಹಲವರು ಮಾವಿನಹಣ್ಣನ್ನು ಮಾರುಕಟ್ಟೆಯಿಂದ ಖರೀದಿಸಿ ತಂದ ಮೇಲೆ ಫ್ರಿಜ್‌ನಲ್ಲಿ ಇಡುತ್ತಾರೆ. ಇನ್ನೂ ಕೆಲವರು ಮಾವಿನ ಹಣ್ಣು ತಿನ್ನುವ ಮೊದಲು ಆಳವಾದ ಪಾತ್ರೆಯಲ್ಲಿ ನೆನೆಸಿಟ್ಟು ತಿನ್ನುತ್ತಾರೆ.

ಹಾಗಾದರೆ ಮಾವಿನಹಣ್ಣನ್ನು ನೀರಿನಲ್ಲಿ ನೆನೆಸಿ ತಿನ್ನುವುದು ಯಾಕೆ ಇದರಿಂದ ಆರೋಗ್ಯಕ್ಕೆ ಏನಾದರೂ ಪ್ರಯೋಜನಗಳಿವೆಯೇ? ಅಥವಾ ಇದೊಂದು ನಂಬಿಕೆಯೆ? ಈ ಬಗ್ಗೆ ತಜ್ಞರು ಏನು ಹೇಳುತ್ತಾರೆ ನೋಡಿ.

ʼಮಾವಿನ ಹಣ್ಣು ರುಚಿಕರ ಮಾತ್ರವಲ್ಲ, ಪೋಷಕಾಂಶ ಸಮೃದ್ಧವಾಗಿದೆ. ಇದರಲ್ಲಿ ಜೀವಸತ್ವ, ಖನಿಜಗಳು ಹಾಗೂ ಆಂಟಿಆಕ್ಸಿಡೆಂಟ್‌ ಅಂಶ ಸಮೃದ್ಧವಾಗಿದೆ. ಇದು ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸುತ್ತದೆ ಹಾಗೂ ಆರೋಗ್ಯವನ್ನು ಉತ್ತೇಜಿಸುತ್ತದೆ. ಆದರೆ ಈ ಹಣ್ಣನ್ನು ಸರಿಯಾದ ವಿಧಾನದಲ್ಲಿ ಸೇವಿಸುವುದು ಮುಖ್ಯವಾಗುತ್ತದೆ. ತಿನ್ನುವ ಮೊದಲು ಈ ಹಣ್ಣನ್ನು ನೀರಿನಲ್ಲಿ ನೆನೆಸಿಡುವುದರಿಂದ ಸರಿಯಾದ ಪೋಷಣೆ ಪಡೆಯಲು ಸಾಧ್ಯ. ಮಾವಿನ ಹಣ್ಣಿನಲ್ಲಿ ಫೈಟಿಕ್‌ ಆಮ್ಲ ಇರುತ್ತದೆ, ಮಾವಿನಹಣ್ಣನ್ನು ನೀರಿನಲ್ಲಿ ನೆನೆಸಿ ತಿನ್ನುವುದರಿಂದ ಫೈಟಿಕ್‌ ಆಮ್ಲವನ್ನು ತೊಡೆದು ಹಾಕಬಹುದು. ಫೈಟಿಕ್‌ ಆಮ್ಲ ಪೋಷಕಾಂಶ ವಿರೋಧಿಯಾಗಿದೆ. ಇದು ದೇಹ ಪೋಷಕಾಂಶ ಹೀರಿಕೊಳ್ಳುವುದಕ್ಕೆ ಕಡಿವಾಣ ಹಾಕುತ್ತದೆ. ಆ ಕಾರಣಕ್ಕೆ ನೆನೆಸುವುದು ಉತ್ತಮʼ ಎನ್ನುತ್ತಾರೆ ಝೆನ್‌ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಡಯೆಟಿಷಿಯನ್‌ ಪ್ರಿಯಾ ಪಾಲನ್‌.

ʼಮಾವಿನ ಹಣ್ಣನ್ನು ತಿನ್ನುವ ಮೊದಲು ನೆನೆಸಿ ಇಡುವುದು ಪ್ರಾಚೀನ ಸಂಪ್ರದಾಯವಾಗಿದೆ ಮತ್ತು ಇದರ ಹಿಂದೆ ಉತ್ತಮ ಕಾರಣವಿದೆ. ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಸಿ ಇಡುವುದರಿಂದ ಕೀಟನಾಶಕಗಳನ್ನು ತೊಡೆದು ಹಾಕಬಹುದು. ಇದರಿಂದ ಪೋಷಕಾಂಶ, ಖನಿಜಾಂಶ ಹಾಗೂ ಕ್ಯಾಲ್ಸಿಯಂಗಳು ಹಣ್ಣಿನಲ್ಲಿ ಹಾಗೇ ಉಳಿಯುತ್ತವೆ. ಆ ಕಾರಣಕ್ಕೆ ನೆನೆಸಿ ತಿನ್ನಬೇಕುʼ ಎನ್ನುತ್ತಾರೆ ಅಹಮದಾಬಾದ್‌ ನಾರಾಯಣ ಹೃದಯಾಲಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಹಿರಿಯ ಕ್ಲಿನಿಲಲ್‌ ಡಯೆಟಿಷಿಯನ್‌ ಶ್ರುತಿ ಭಾರದ್ವಾಜ್‌.

ಮಾವಿನಹಣ್ಣನ್ನು ನೆನೆಸಿ ತಿನ್ನುವುದರಿಂದ ಆಗುವ ಆರೋಗ್ಯ ಪ್ರಯೋಜನಗಳೇನು?

ಫೈಟಿಕ್‌ ಆಮ್ಲವನ್ನು ತೊಡೆದು ಹಾಕುತ್ತದೆ

ಮಾವಿನ ಹಣ್ಣಿನಲ್ಲಿ ಫೈಟಿಕ್‌ ಆಮ್ಲ ಎಂದು ಕರೆಯುವ ನೈಸರ್ಗಿಕ ಅಂಶವಿರುತ್ತದೆ, ಇದು ಹಲವಾರು ಹಣ್ಣು, ತರಕಾರಿಗಳಲ್ಲಿ ಕಂಡುಬರುತ್ತದೆ. ಇದು ದೇಹಕ್ಕೆ ಕೆಟ್ಟದ್ದು. ಆ ಕಾರಣಕ್ಕೆ ತಿನ್ನುವ ಮೊದಲು ಕೆಲವು ಗಂಟೆಗಳ ಹಣ್ಣನ್ನು ನೀರಿನಲ್ಲಿ ನೆನೆಸಿ ಇಡಬೇಕು.

ಕೊಬ್ಬು ಕರಗಿಸುವುದು

ಮಾವಿನಹಣ್ಣಿನಲ್ಲಿರುವ ಫೈಟೋಕೆಮಿಕಲ್‌ಗಳಿವೆ. ಇವು ದೇಹಕ್ಕೆ ಹಾನಿಯುಂಟು ಮಾಡುತ್ತವೆ. ಆ ಕಾರಣಕ್ಕೆ ತಿನ್ನುವ ಮೊದಲು ನೀರಿನಲ್ಲಿ ನೆನೆಸುವುದು ಅವುಗಳ ಪ್ರಭಾವ ಕಡಿಮೆಯಾಗುತ್ತದೆ. ಅಲ್ಲದೆ ಆಗ ಮಾವಿನಹಣ್ಣು ನೈಸರ್ಗಿಕವಾಗಿ ದೇಹದಲ್ಲಿ ಕೊಬ್ಬಿನಂಶ ಕಡಿಮೆಯಾಗುವಂತೆ ಮಾಡುತ್ತದೆ.

ರೋಗಗಳನ್ನು ತಡೆಯುತ್ತದೆ

ಮಾವಿನಹಣ್ಣನ್ನು ನೀರಿನಲ್ಲಿ ನೆನೆಸುವುದರಿಂದ ಕೀಟನಾಶಕಗಳು ಹಾಗೂ ರಾಸಾಯನಿಕಗಳು ದೂರವಾಗುತ್ತವೆ. ಜೊತೆಗೆ ಹಣ್ಣಿನ ಮೇಲಿನ ಕೊಳೆ, ಧೂಳು ಹಾಗೂ ಮಣ್ಣು ಸಂಪೂರ್ಣವಾಗಿ ನಿವಾರಣೆಯಾಗುತ್ತದೆ. ಇದರಿಂದ ಹಲವು ಆರೋಗ್ಯ ಸಮಸ್ಯೆಗಳಿಂದ ದೂರ ಇರಬಹುದು. ಮಾವಿನಹಣ್ಣು ತಿನ್ನುವುದರಿಂದ ದೇಹದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ, ಜೀರ್ಣಕ್ರಿಯೆ ಮತ್ತು ಕರುಳಿನ ಆರೋಗ್ಯ ಸುಧಾರಿಸುತ್ತದೆ. ಇದಲ್ಲದೆ, ಮಾವು ಕಣ್ಣು, ಕೂದಲು ಮತ್ತು ಚರ್ಮಕ್ಕೆ ಸಹ ಪ್ರಯೋಜನಕಾರಿಯಾಗಿದೆ. ಮಾವಿನ ಎಲ್ಲಾ ಪ್ರಯೋಜನಗಳನ್ನು ಪಡೆಯಲು, ತಿನ್ನುವ ಮೊದಲು ಸ್ವಲ್ಪ ಸಮಯದವರೆಗೆ ಅದನ್ನು ನೀರಿನಲ್ಲಿ ನೆನೆಸಿಡುವುದು ಅವಶ್ಯಕ.

ವಾಯುವನ್ನು ತಡೆಯುತ್ತದೆ

"ನೆನೆಸುವಿಕೆಯು ಜೀರ್ಣವಾಗದ ಆಲಿಗೋಸ್ಯಾಕರೈಡ್‌ಗಳಿಂದ ಉಂಟಾಗುವ ವಾಯು ಪ್ರಮಾಣವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಿಂದ ಕೀಟನಾಶಕಗಳು ಸ್ವಚ್ಛವಾಗುತ್ತವೆ. ನೆನೆಸುವುದು ಮಾವಿನ ಥರ್ಮೋಜೆನಿಕ್ ಪರಿಣಾಮವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ತಿನ್ನುವಾಗ ಉತ್ಪತ್ತಿಯಾಗುವ ಶಾಖವನ್ನು ಕಡಿಮೆ ಮಾಡುತ್ತದೆ.

ವಿಭಾಗ