Sunday Motivation: ಜೀವನಕ್ಕೊಂದು ಸ್ಫೂರ್ತಿಮಾತು; ಅವಮಾನಗಳನ್ನ ಬದಿಗಿಟ್ಟು ಮುನ್ನಡೆದರೆ ಮಾತ್ರ ಯಶಸ್ಸು ಸಾಧ್ಯ
ಕನ್ನಡ ಸುದ್ದಿ  /  ಜೀವನಶೈಲಿ  /  Sunday Motivation: ಜೀವನಕ್ಕೊಂದು ಸ್ಫೂರ್ತಿಮಾತು; ಅವಮಾನಗಳನ್ನ ಬದಿಗಿಟ್ಟು ಮುನ್ನಡೆದರೆ ಮಾತ್ರ ಯಶಸ್ಸು ಸಾಧ್ಯ

Sunday Motivation: ಜೀವನಕ್ಕೊಂದು ಸ್ಫೂರ್ತಿಮಾತು; ಅವಮಾನಗಳನ್ನ ಬದಿಗಿಟ್ಟು ಮುನ್ನಡೆದರೆ ಮಾತ್ರ ಯಶಸ್ಸು ಸಾಧ್ಯ

Sunday Motivation: ಅದೃಷ್ಟ ಇಲ್ಲದ ಜೀವನ ಇರಬಹುದು. ಅವಮಾನಗಳಿಲ್ಲದೆ ಜೀವನವಿಲ್ಲ. ಆದರೆ ಅವಮಾನಗಳನ್ನು ಬದಿಗಿಟ್ಟು ಮುನ್ನಡೆದರೆ ಮಾತ್ರ ಯಶಸ್ಸು ನಿಮ್ಮದಾಗುತ್ತದೆ. ಈ ಸ್ಫೂರ್ತಿದಾಯಕ ಸ್ಟೋರಿ ಓದಿ.

ಭಾನುವಾರದ ಸ್ಫೂರ್ತಿಯ ಸ್ಟೋರಿ ಓದಿ.
ಭಾನುವಾರದ ಸ್ಫೂರ್ತಿಯ ಸ್ಟೋರಿ ಓದಿ.

ಜೀವನವು ಅನೇಕ ತಿರುವುಗಳನ್ನು ಹೊಂದಿರುತ್ತದೆ. ಅವಮಾನಗಳನ್ನು ಎದುರಿಸಿ ಸನ್ಮಾನಿಸಿಕೊಂಡವರಿದ್ದಾರೆ. ನೂರಕ್ಕೆ ತೊಂಬತ್ತು ರಷ್ಟು ಜನ ಅವಮಾನಗಳಿಗೆ ತುತ್ತಾಗುತ್ತಾರೆ. ಈ ಹಂತದಲ್ಲೇ ನಿಲುವವರು ಮುಂದೆ ಸಾಗಲು ಸಾಧ್ಯವಿಲ್ಲ. ಒಂದು ವೇಳೆ ನೀವು ಅವಮಾನಗಳ ಬಗ್ಗೆಯೇ ಯೋಚಿಸುತ್ತಾ ಕುಳಿತರೆ ನಿಮ್ಮನ್ನು ನೀವು ಕಳೆದುಕೊಳ್ಳುತ್ತೀರಿ. ನಿಮ್ಮನ್ನು ಅವಮಾನಿಸಿದವರಿಗೆ ಸರಿಯಾದ ರೀತಿಯಲ್ಲಿ ಉತ್ತರ ಕೊಡಬೇಕು. ಜೀವನವನ್ನು ಸುಲಭವಾಗಿ ತೆಗೆದುಕೊಳ್ಳಬೇಡಿ.

ಇತ್ತೀಚೆಗಷ್ಟೇ ಯುಪಿಎಸ್‌ಸಿ ಸಿವಿಲ್ ಫಲಿತಾಂಶ ಪ್ರಕಟವಾಗಿದ್ದು, ಇದರಲ್ಲಿ ಹಲವರು ಉತ್ತೀರ್ಣರಾಗಿದ್ದಾರೆ. ತೆಲುಗು ರಾಜ್ಯದ ಓರ್ವ ಕಾನ್ಸ್‌ಟೇಬಲ್ ಕೂಡ ಸಿವಿಲ್ ಪೂರ್ಣಗೊಳಿಸಿರುವುದು ತುಂಬಾ ರೋಚಕವಾಗಿದೆ. ಉದಯ ಕೃಷ್ಣಾ ರೆಡ್ಡಿ ಅವರ ಸಾಧನೆ ಎಲ್ಲರಿಗೂ ಮಾದರಿಯಾಗಿದೆ. ಸಿಐ ಗದರಿದರು, ಎಲ್ಲರ ಮುಂದೆ ಅವಮಾನಿಸಿದರು ಎಂಬ ಒಂದೇ ಒಂದು ಕಾರಣಕ್ಕೆ ಸಿಟ್ಟಿನಿಂದಲೇ ಇದನ್ನು ಗಂಭೀರವಾಗಿ ತೆಗೆದುಕೊಂಡು ಸಿವಿಲ್ ಪಾಸ್ ಮಾಡಿದ್ದಾರೆ.

ಆಂಧ್ರಪ್ರೇದಶದ ಪ್ರಕಾಶಂ ಜಿಲ್ಲೆಯ ಸಿಂಗರಾಯಕೊಂಡ ಮಂಡಲದ ಉಲ್ಲಪಾಲೆಂ ಗ್ರಾಮದ ಉದಯ್ ಕೃಷ್ಣಾ ರೆಡ್ಡಿಗೆ 2012 ರಲ್ಲಿ ಕಾನ್ಸ್‌ಟೇಬಲ್ ಕೆಲಸ ಸಿಗುತ್ತದೆ. 2019 ರವರೆಗೂ ಅದೇ ಕೆಲಸವನ್ನು ಮಾಡುತ್ತಾರೆ. ಸುಮಾರು 60 ಜನರ ಸಮ್ಮುಖದಲ್ಲಿಯೇ ಸಿಐ ಇವರನ್ನು ನಿಂದಿಸಿದ್ದಾರೆ. ಇದೇ ಇವರ ಸಾಧನೆಗೆ ಅಡಿಪಾಯ ಹಾಕಿತು. ಸಿಐ ನಿಂದಿಸಿದನ್ನೇ ಗಂಭೀರವಾಗಿ ಪರಿಗಣಿಸಿದ ಇವರು ಮೊದಲು ಕಾನ್ಸ್‌ಟೇಬಲ್ ಹುದ್ದೆಗೆ ರಾಜೀನಾಮೆ ನೀಡಿ ಸಿವಿಲ್‌ಗೆ ತಯಾರಿ ಆರಂಭಿಸುತ್ತಾರೆ. ಮೂರು ಪ್ರಯತ್ನಗಳಲ್ಲಿ ಪಾಸ್ ಆಗಲಿಲ್ಲ. ಆದರೆ ನಾಲ್ಕನೇ ಯತ್ನದಲ್ಲಿ ಸಿವಿಲ್ ಪರೀಕ್ಷೆಯಲ್ಲಿ ರ‍್ಯಾಂಕ್ ಪಡೆದಿದ್ದಾರೆ.

ಎಷ್ಟು ಜನರು ಹೀಗೆ ಮಾಡಲು ಸಾಧ್ಯ? ಯಾವುದೂ ಅಸಾಧ್ಯವಲ್ಲ

ಹೌದು, ಎಷ್ಟು ಜನರು ಹೀಗೆ ಮಾಡಬಹುದು? ಸಿಐ ಗದರಿದರೂ ಉದಯ ಕೃಷ್ಣಾ ರೆಡ್ಡಿ ಎದೆಗುಂದಲಿಲ್ಲ. ಅಥವಾ ಸಿಐಗೆ ಸೆಲ್ಯೂಟ್ ಹೇಳುತ್ತಾ ಕುಳಿತುಕೊಳ್ಳಲಿಲ್ಲ. ತನ್ನ ಉದ್ದೇಶ ಏನು ಎಂಬುದನ್ನು ಅರಿತುಕೊಂಡು ಅದಕ್ಕಾಗಿ ಕೆಲಸ ಮಾಡಿದರು. ಅವಮಾನಗಳನ್ನೇ ಆಭರಣವನ್ನಾಗಿ ಮಾಡಿಕೊಂಡರು. ಈಗ ಅದೇ ಸಿಐ ಉದಯ ಕೃಷ್ಣಾ ರೆಡ್ಡಿಗೆ ಸೆಲ್ಯೂಟ್ ಹೊಡೆಯುವ ಮಟ್ಟಕ್ಕೆ ಹೋಗಿದ್ದಾರೆ. ಇದರ ಅರ್ಥ ಜೀವನದಲ್ಲಿ ಗೆಲುವು ತುಂಬಾ ಮುಖ್ಯವಾಗುತ್ತದೆ. ಅವಮಾನ ಮಾಡಿದ್ದಾರೆ ಅಂತ ಹೇಳಿ ಅದರ ಬಗ್ಗೆಯೇ ಚಿಂತಿಸುತ್ತಾ ಕುಳಿತುಕೊಂಡಿದ್ದರೆ ಗೆಲುವು ಸಾಧ್ಯವಾಗುತ್ತಿರಲಿಲ್ಲ. ಅದಕ್ಕಾಗಿಯೇ ನೀವು ನಿಮ್ಮ ಜೀವನವನ್ನು ಸರಿಯಾಗಿ ಪ್ಲಾನ್ ಮಾಡಿದರೆ ಅವಮಾನಗಳು ಆಭರಣಗಳಾಗುತ್ತವೆ. ಟೀಕೆಗಳು ಆಶೀರ್ವಾದಗಳಾಗುತ್ತವೆ. ಅದುವೇ ಗೆಲುವಿಗೆ ಮುತ್ತು. ಅದುವೇ ಜೀವನ.

ಜೀವನದಲ್ಲಿ ನಮ್ಮನ್ನು ಅವಮಾನಿಸಲು ಅನೇಕರು ಕಾಯುತ್ತಿರುತ್ತಾರೆ. ಏಕೆಂದರೆ ಅದು ಅವರ ಕೆಲಸ. ಆದರೆ ನೀವು ಆ ಬಲೆಗೆ ಬೀಳಬಾರದು. ನೀವು ತಲುಪಬೇಕಾಗಿರುವ ಗುರಿಯ ಕಡೆಗೆ ಸಾಗಬೇಕು ಅಷ್ಟೇ. ಅನೇಕರು ಮಾಡುವ ಕೆಟ್ಟ ಕೆಲಸವೆಂದರೆ ತಮಗೆ ಇಷ್ಟ ಬಂದಂತೆ ನಡೆದುಕೊಳ್ಳುವ ಯೋಚನೆಗೆ ಹೋಗುವುದು. ನಿಮ್ಮ ಕಡೆಯಿಂದ ಯಾವುದೇ ತಪ್ಪಿಲ್ಲದಿದ್ದಾಗ ಈ ರೀತಿಯ ವರ್ತನೆ ಹಿನ್ನಡೆಗೆ ಕಾರಣವಾಗುತ್ತದೆ. ಮೊದಲು ನಿಮ್ಮನ್ನು ನೀವು ಸಾಬೀತು ಮಾಡಿಕೊಳ್ಳಬೇಕು. ಸಾಧ್ಯವಾಗದಿದ್ದರೆ ಅಲ್ಲಿಂದ ಹೊರಟು ಹೋಗಬೇಕು. ಆದರೆ ಜೀವನದ ಓಟದಲ್ಲಿ ದಣಿಯಬೇಡಿ.

ಯಾರೇ ನಿಮ್ಮನ್ನು ನಿಂದಿಸಿದರೂ, ಯಾರೇ ನಿಮ್ಮನ್ನು ಟೀಕಿಸಲಿ, ಅವರು ನಿಮ್ಮನ್ನು ಸೂಜಿಗಲ್ಲಿನಂತೆ ಚುಚ್ಚಿದರೂ ನಿಮ್ಮ ಮನಸ್ಸು ಮಾತ್ರ ಗುರಿಯ ಬಗ್ಗೆಯೇ ಯೋಚಿಸಬೇಕು. ಯಾವುದೇ ಕಾರಣಕ್ಕೂ ನಿಮ್ಮನ್ನ ನೀವು ಕುಗ್ಗಲು ಬಿಡಬೇಡಿ. ಆಗ ಮಾತ್ರ ಜೀವನದಲ್ಲಿ ಯಶಸ್ಸು ಸಾಧ್ಯವಾಗುತ್ತದೆ. ಎಲ್ಲರ ಮುಂದೆ ನಿರಾಸೆಯಾಗಿದ್ದೇನೆ ಎಂದು ಬೇಸರಿಸಿಕೊಳ್ಳಬೇಡಿ. ಮೇಲಕ್ಕೆ ಹೋಗಿ ಆಗ ಎಲ್ಲರೂ ನಿಮ್ಮತ್ತು ನೋಡುತ್ತಾರೆ. ಅದೇ ನೀವು ಅವರಿಗೆ ಕೊಡುವ ಉತ್ತರ. ಜಗಳ ಮಾಡಿ ಅವರೊಂದಿಗೆ ನಿಲ್ಲುವ ಬದಲು ಮುಂದೆ ಹೋಗಿ ನಮಸ್ಕಾರ ಹಾಕಿ. ಜೀವನದಲ್ಲಿ ಒಂದು ವಿಷಯ ನೆನಪಿನಲ್ಲಿ ಇಟ್ಟುಕೊಳ್ಳಿ ತಡವಾದರೂ ಪರವಾಗಿಲ್ಲ ಕೆಲವು ಅವಮಾನಗಳಿಗೆ ನಿಮ್ಮ ಸಾಧನೆಯೇ ಉತ್ತರವಾಗಬೇಕು.

Whats_app_banner