ಕನ್ನಡ ಸುದ್ದಿ  /  Lifestyle  /  Sunscreen Cream And Its Benefits

Sunscreen cream and its benefits: ಸನ್‌ಸ್ಕ್ರೀನ್‌ ಕ್ರೀಮ್‌ ಬಳಕೆಯಿಂದ ಇಷ್ಟೊಂದು ಉಪಯೋಗಗಳಿವೆ ಗೊತ್ತೇ?

Sunscreen cream and its benefits: ಬೇಸಿಗೆಯಲ್ಲಿ ಮಾತ್ರ ಸನ್‌ಸ್ಕ್ರೀನ್‌ ಬಳಸಬೇಕು ಎಂಬುದು ತಪ್ಪು ಅಭಿಪ್ರಾಯ. ಮಳೆ, ಚಳಿ, ಬೇಸಿಗೆ ಯಾವುದೇ ಕಾಲವಿರಲಿ ಬೇಸಿಗೆ ಚರ್ಮವನ್ನು ಒಡ್ಡುವಾಗ ಸನ್‌ಸ್ಕ್ರೀನ್‌ ಬಳಕೆ ಕಡ್ಡಾಯ.

ಸನ್‌ಸ್ಕ್ರೀನ್‌ ಕ್ರೀಮ್‌ ಬಳಕೆ
ಸನ್‌ಸ್ಕ್ರೀನ್‌ ಕ್ರೀಮ್‌ ಬಳಕೆ

ಚರ್ಮದ ರಕ್ಷಣೆಗೆ ಸನ್‌ಸ್ಕ್ರೀನ್‌ ಬಳಸಬೇಕು, ಬೇಸಿಗೆಯಲ್ಲಿ ಸನ್‌ಸ್ಕ್ರೀನ್‌ ಬಳಸದೇ ಮನೆಯಿಂದ ಹೊರಗಡೆ ಹೆಜ್ಜೆ ಇಡುವುದು ತಪ್ಪು. ಸನ್‌ಸ್ಕ್ರೀನ್‌ ಬಳಕೆಯಿಂದ ಚರ್ಮಕ್ಕೆ ಹಲವು ರೀತಿಯ ಉಪಯೋಗಗಳಿವೆ ಎಂದೆಲ್ಲಾ ಕೇಳಿರುತ್ತೇವೆ. ಆದರೆ ನಮ್ಮಲ್ಲಿ ಹಲವರಿಗೆ ಚರ್ಮಕ್ಕೆ ಸನ್‌ಸ್ಕ್ರೀನ್‌ ಬಳಸುವುದರಿಂದಾಗುವ ಪ್ರಯೋಜನಗಳ ಬಗ್ಗೆ ಅರಿವಿಲ್ಲ.

ಬೇಸಿಗೆಯಲ್ಲಿ ಮಾತ್ರ ಸನ್‌ಸ್ಕ್ರೀನ್‌ ಬಳಸಬೇಕು ಎಂಬುದು ತಪ್ಪು ಅಭಿಪ್ರಾಯ. ಮಳೆ, ಚಳಿ, ಬೇಸಿಗೆ ಯಾವುದೇ ಕಾಲವಿರಲಿ ಬೇಸಿಗೆ ಚರ್ಮವನ್ನು ಒಡ್ಡುವಾಗ ಸನ್‌ಸ್ಕ್ರೀನ್‌ ಬಳಕೆ ಕಡ್ಡಾಯ.

ಹಾಗಾದರೆ ಚರ್ಮಕ್ಕೆ ಸನ್‌ಸ್ಕ್ರೀನ್‌ ಬಳಕೆ ಎಷ್ಟು ಮುಖ್ಯ? ಇದರಿಂದಾಗುವ ಪ್ರಯೋಜನಗಳೇನು? ಇದು ಚರ್ಮವನ್ನು ಯಾವ ರೀತಿ ರಕ್ಷಣೆ ಮಾಡುತ್ತದೆ? ಈ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

ಯುವಿ ಕಿರಣಗಳಿಂದ ರಕ್ಷಣೆ

ನಿರಂತರವಾಗಿ ಕ್ಷೀಣಿಸುತ್ತಿರುವ ಓಝೋನ್‌ ಪದರವು ಸೂರ್ಯನ ಹಾನಿಕಾರಕ ಕಿರಣಗಳು ಚರ್ಮವನ್ನು ನೇರವಾಗಿ ಸ್ಪರ್ಷಿಸುವಂತೆ ಮಾಡುತ್ತದೆ. ದೇಹಕ್ಕೆ ವಿಟಮಿನ್‌ ಡಿ ಒದಗಿಸುವ ಸೂರ್ಯನ ಬೆಳಕು ನಮಗೆ ಅವಶ್ಯ, ಹಾಗಂತ ನಮ್ಮ ಆರೋಗ್ಯಕ್ಕೆ ಹಾನಿ ಉಂಟು ಮಾಡುವಷ್ಟು ಬಿಸಿಲು ಒಳ್ಳೆಯದಲ್ಲ. ಆ ಕಾರಣಕ್ಕೆ ಹೊರಗಡೆ ಹೋಗುವಾಗ ಯುವಿ ಕಿರಣಗಳಿಂದ ರಕ್ಷಣೆ ಪಡೆಯಲು ಸನ್‌ಸ್ಕ್ರೀನ್‌ ಕ್ರೀಮ್‌ ಬಳಸುವುದು ಅಗತ್ಯ.

ವಯಸ್ಸಿನ ಅಕಾಲಿಕ ಲಕ್ಷಣಗಳನ್ನು ತಡೆಯಲು

ನಮ್ಮ ತ್ವಚೆ ಸದಾ ಕಾಂತಿಯಿಂದ ಹೊಳೆಯುತ್ತಿರಬೇಕು, ಆರೋಗ್ಯಕರ ಚರ್ಮ ನಮ್ಮದಾಗಬೇಕು ಎಂಬುದು ಎಲ್ಲರಿಗೂ ಆಸೆ. ಆದರೆ ನಿಮ್ಮ ಆಸೆ ನೆರವೇರಲು ಸನ್‌ಸ್ಕ್ರೀನ್‌ ಬಳಕೆ ಉತ್ತಮ. ಇದು ಅಕಾಲಿಕ ವಯಸ್ಸಾದಂತೆ ಕಾಣುವುದನ್ನು ತಡೆಯುತ್ತದೆ, ಇದರೊಂದಿಗೆ ಚರ್ಮ ಸುಕ್ಕುಗಟ್ಟುವುದು, ನೆರಿಗೆ ಉಂಟಾಗುವುದು, ಸನ್‌ಟ್ಯಾನ್‌, ಹೈಪರ್‌ಪಿಗ್ಮಂಟೇಶನ್‌ ಸಮಸ್ಯೆಯನ್ನೂ ನಿವಾರಿಸುತ್ತದೆ. ಚರ್ಮದ ಸಮಸ್ಯೆಯನ್ನೂ ಇದು ನಿವಾರಿಸುತ್ತದೆ.

ಚರ್ಮದ ಕ್ಯಾನ್ಸರ್‌ ನಿಯಂತ್ರಣ

ಸನ್‌ಸ್ಕ್ರೀನ್‌ ಬಳಕೆಯಿಂದ ಚರ್ಮಕ್ಕೆ ಮಾತ್ರವಲ್ಲ, ಆರೋಗ್ಯಕ್ಕೂ ಪ್ರಯೋಜನಗಳಿವೆ. ನಿರಂತರವಾಗಿ ಸನ್‌ಸ್ಕ್ರೀನ್‌ ಬಳಸುವುದರಿಂದ ಚರ್ಮಕ್ಕೆ ಸಂಬಂಧಿಸಿದ ಕ್ಯಾನ್ಸರ್‌ ರೋಗಗಳು ಬಾರದಂತೆ ತಡೆಯಬಹುದು.

ಮಚ್ಚೆಯನ್ನು ಕಡಿಮೆ ಮಾಡುತ್ತದೆ

ನಿರಂತರವಾಗಿ ಹಾಗೂ ಅಧಿಕ ಪ್ರಮಾಣದಲ್ಲಿ ಸನ್‌ಸ್ಕ್ರೀನ್‌ ಬಳಸುವುದರಿಂದ ಚರ್ಮಕ್ಕೆ ಕಿರಿಕಿರಿ ಉಂಟು ಮಾಡುವ ಮಚ್ಚೆಗಳು ಹಾಗೂ ಕೆಂಪುದದ್ದುಗಳ ನಿವಾರಣೆಗೆ ಸಹಾಯ ಮಾಡುತ್ತದೆ. ಇದರಿಂದ ಮೊಡವೆ ಕಲೆಗಳು ನಿವಾರಣೆಯಾಗುತ್ತದೆ.

ಸನ್‌ಬರ್ನ್‌ ಅನ್ನು ತಡೆಯುತ್ತದೆ

ಸನ್‌ಬರ್ನ್‌ ಕಾರಣದಿಂದ ಚರ್ಮ ದಪ್ಪಗಾಗಬಹುದು. ಸನ್‌ಬರ್ನ್‌ನಿಂದ ಚರ್ಮದಲ್ಲಿ ಸಿಪ್ಪೆ ಏಳುವುದು, ಊತ, ಕೆಂಪಾಗುವುದು, ತುರಿಕೆಯಂತಹ ಲಕ್ಷಣಗಳನ್ನು ಎದುರಿಸಬಹುದು. ಸೂರ್ಯನ ಅತಿ ನೇರಳೆ ಕಿರಣಗಳು ಸನ್‌ಬರ್ನ್‌ಗೆ ಕಾರಣವಾಗಬಹುದು. ಈ ಕಾರಣದಿಂದ ಉಂಟಾದ ಗುಳ್ಳೆಗಳು ಕ್ಯಾನ್ಸರ್‌ಗೂ ಕಾರಣವಾಗಬಹುದು. ಆ ಕಾರಣಕ್ಕೆ ಇದನ್ನು ತಡೆಯಲು ಅವಶ್ಯವಾಗಿ ಮನೆಯಿಂದ ಹೊರಗೆ ಹೊರಡುವಾಗ ಸನ್‌ಸ್ಕ್ರೀನ್‌ ಬಳಸಲೇ ಬೇಕು.

ಟ್ಯಾನ್‌ ತಡೆಯಲು

ಸೂರ್ಯನ ಅತಿ ನೇರಳೆ ಕಿರಣಗಳು ನೇರವಾಗಿ ಚರ್ಮದ ಮೇಲೆ ಬಿದ್ದಾಗ ಟ್ಯಾನ್‌ ಆಗುವುದು ಸಹಜ. ಆ ಕಾರಣಕ್ಕೆ ಬೇಸಿಗೆಯಲ್ಲಿ ಕನಿಷ್ಠ ಎಸ್‌ಪಿಎಫ್‌ 30 ಇರುವ ಸನ್‌ಸ್ಕ್ರೀನ್‌ ಬಳಸಿ. ಇದರಿಂದ ಸೂರ್ಯನ ಅತಿ ನೇರಳೆ ಕಿರಣಗಳಿಂದ ರಕ್ಷಣೆ ಪಡೆಯಬಹುದು. ಬಿಸಿಲಿನಲ್ಲಿ ಇದ್ದಾಗ ಕನಿಷ್ಠ 2 ಗಂಟೆಗಳಿಗೊಮ್ಮೆ ಸನ್‌ಸ್ಕ್ರೀನ್‌ ಬಳಸಬೇಕು. ಇದರಲ್ಲೂ ಸೂಕ್ಷ್ಮ ಚರ್ಮದವರು ಆಗಾಗ ಸನ್‌ಸ್ಕ್ರೀನ್‌ ಹಚ್ಚುವುದನ್ನು ಮರೆಯಬಾರದು.

ಚರ್ಮದ ಆರೋಗ್ಯ ಸುಧಾರಣೆ

ಚರ್ಮದ ಆರೋಗ್ಯಕ್ಕೆ ಅವಶ್ಯವಿರುವ ಕೊಲಾಜನ್‌, ಕೆರಾಟಿನ್‌ ಹಾಗೂ ಇಲಾಸ್ಟಿನ್‌ ಅಂಶಗಳ ರಕ್ಷಣೆಗೆ ಸನ್‌ಸ್ಕ್ರೀನ್‌ ಬಳಸುವುದು ಅವಶ್ಯ. ಇದು ಚರ್ಮದ ಆರೋಗ್ಯ ಕಾಪಾಡುವ ಜೊತೆಗೆ ಚರ್ಮವನ್ನು ಮೃದುವಾಗಿಸುತ್ತದೆ. ನಿಮ್ಮ ಸನ್‌ಸ್ಕ್ರೀನ್‌ ಕ್ರೀಮ್‌ನಲ್ಲಿ ಟೈಟಾನಿಯಂ ಡೈಆಕ್ಸೈಡ್‌ ಅಂಶ ಇರುವುದನ್ನು ಖಚಿತಪಡಿಸಿಕೊಳ್ಳಿ.

ವಿಭಾಗ