ಕನ್ನಡ ಸುದ್ದಿ  /  Lifestyle  /  Suzuki Motorcycle India Launches Solid Ice Green And Pearl Mirage White Colour

Suzuki Access 125 New Look: ಸುಜುಕಿ ಆಕ್ಸೆಸ್ 125 ಇದೀಗ ಹೊಸ ಅವತಾರದಲ್ಲಿ, ಹೊಸ ಫೀಚರ್ಸ್‌ನೊಂದಿಗೆ...

ಸುಜುಕಿ ಮೋಟಾರ್‌ಸೈಕಲ್ಸ್ ತನ್ನ ಜನಪ್ರಿಯ ಸ್ಕೂಟರ್ ಸುಜುಕಿ ಆಕ್ಸೆಸ್ 125ರ ಹೊಸ ಮಾಡೆಲ್‌ ಪರಿಚಯಿಸಿದೆ. ಈ ಸಲ ಸಾಲಿಡ್ ಐಸ್ ಗ್ರೀನ್ ಮತ್ತು ಪರ್ಲ್ ವೈಟ್ ಕಲರ್‌ ಕಾಂಬಿನೇಷನ್‌ನಲ್ಲಿ ಹೊರತಂದಿದೆ. ಬರೀ ಬಣ್ಣ ಮಾತ್ರವಲ್ಲ ಒಂದಷ್ಟು ಫೀಚರ್ಸ್‌ ಸಹ ಕಾಣಬಹುದಾಗಿದೆ.

ಸುಜುಕಿ ಆಕ್ಸೆಸ್ 125 ಇದೀಗ ಹೊಸ ಅವತಾರದಲ್ಲಿ, ಹೊಸ ಫೀಚರ್ಸ್‌ನೊಂದಿಗೆ...
ಸುಜುಕಿ ಆಕ್ಸೆಸ್ 125 ಇದೀಗ ಹೊಸ ಅವತಾರದಲ್ಲಿ, ಹೊಸ ಫೀಚರ್ಸ್‌ನೊಂದಿಗೆ...

ಸುಜುಕಿ ಮೋಟಾರ್‌ಸೈಕಲ್ಸ್ ತನ್ನ ಜನಪ್ರಿಯ ಸ್ಕೂಟರ್ ಸುಜುಕಿ ಆಕ್ಸೆಸ್ 125ರ ಹೊಸ ಮಾಡೆಲ್‌ ಪರಿಚಯಿಸಿದೆ. ಈ ಸಲ ಸಾಲಿಡ್ ಐಸ್ ಗ್ರೀನ್ ಮತ್ತು ಪರ್ಲ್ ವೈಟ್ ಕಲರ್‌ ಕಾಂಬಿನೇಷನ್‌ನಲ್ಲಿ ಹೊರತಂದಿದೆ. ಬರೀ ಬಣ್ಣ ಮಾತ್ರವಲ್ಲ ಒಂದಷ್ಟು ಫೀಚರ್ಸ್‌ ಸಹ ಕಾಣಬಹುದಾಗಿದೆ.

ಸ್ಕೂಟರ್ ಸೈಡ್ ಪ್ಯಾನಲ್‌ಗಳು ಮತ್ತು ಮುಂಭಾಗದ ಏಪ್ರನ್‌ಗಳ ಸೆಂಟರ್‌ನಲ್ಲಿ ಹಸಿರು ಬಣ್ಣವಿದೆ. ಸೈಡ್ ಸ್ಕರ್ಟ್‌ಗಳು ಮತ್ತು ಮುಂಭಾಗದ ಏಪ್ರನ್‌ಗಳ ಸೈಡ್ ಪ್ಯಾನೆಲ್‌ಗಳಲ್ಲಿಯೂ ಈ ಬಣ್ಣವನ್ನು ಕಾಣಬಹುದಾಗಿದೆ. ಈ ಸ್ಕೂಟರ್‌ನ ಸದ್ಯದ ಎಕ್ಸ್ ಶೋ ರೂಂ ಬೆಲೆ 83 ಸಾವಿರ ರೂಪಾಯಿ ಆಗಿದೆ. ಪರ್ಲ್ ಸುಜುಕಿ ಡೀಪ್ ಬ್ಲೂ, ಮೆಟಾಲಿಕ್ ಮ್ಯಾಟ್ ಪ್ಲಾಟಿನಂ ಸಿಲ್ವರ್, ಪರ್ಲ್ ಮಿರಾಜ್ ವೈಟ್, ಗ್ಲಾಸ್ ಸ್ಪಾರ್ಕಲ್ ಬ್ಲಾಕ್, ಗ್ಲೋಸಿ ಗ್ರೇ ಕಲರ್ ಮತ್ತು ಮೆಟಾಲಿಕ್ ಮ್ಯಾಟ್ ಫೈಬ್ರಾನ್ ಗ್ರೇ ಮುಂತಾದ ಬಣ್ಣಗಳಲ್ಲಿಯೂ ಈ ಸ್ಕೂಟರ್ ಲಭ್ಯವಿದೆ.

ಸ್ಕೂಟರ್‌ನ ಡಿಸ್‌ಪ್ಲೇಯಲ್ಲಿ ಸ್ಮಾರ್ಟ್‌ಫೋನ್

ಸುಜುಕಿ ಆಕ್ಸೆಸ್ 125 ಸ್ಮಾರ್ಟ್‌ಫೋನ್ ಕನೆಕ್ಷನ್‌ ಕಂಡುಕೊಳ್ಳಬಹುದು. ಬ್ಲೂಟೂತ್‌ ಮೂಲಕ ಡಿಜಿಟಲ್ ಡಿಸ್ಪ್ಲೇ ಆನ್‌ ಮಾಡಬಹುದು. ಬೈಕ್‌ಗೆ ಸಿಂಕ್‌ ಆಗುವುದಲ್ಲದೆ, ಇದರಿಂದಾಗಿ ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ಇನ್‌ಕಮಿಂಗ್‌ ಕಾಲ್‌, SMS, ಮಿಸ್ಡ್ ಕಾಲ್‌ಗಳು ಮತ್ತು WhatsApp ನೋಟಿಫಿಕೇಷನ್‌ಗಳನ್ನು ಡಿಸ್ಪ್ಲೇನಲ್ಲಿ ಕಾಣಬಹುದು. ಅತಿಯಾದ ವೇಗದ ಎಚ್ಚರಿಕೆ, ಫೋನ್‌ನ ಬ್ಯಾಟರಿ ಮಟ್ಟ ಮತ್ತು ಡೆಸ್ಟಿನೇಷನ್‌ ತಲುಪಲು ಬೇಕಿರುವ ಅಂದಾಜು ಸಮಯವನ್ನು ಸಹ ತೋರಿಸುತ್ತದೆ.

ಎಂಜಿನ್‌ನಲ್ಲಿ ಯಾವುದೇ ಬದಲಾವಣೆಗಳಿಲ್ಲ..

ಸೂಪರ್ ಬ್ರೈಟ್ ಎಲ್ಇಡಿ ಹೆಡ್ಲ್ಯಾಂಪ್, ಎಲ್ಇಡಿ ಪೊಸಿಷನ್ ಲೈಟ್ ಮತ್ತು ಯುಎಸ್ಬಿ ಸಾಕೆಟ್ ಇರಲಿದ್ದು, ಸ್ಕೂಟರ್‌ನ ಎಂಜಿನ್‌ನಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಇದು 124cc ಎಂಜಿನ್ ಹೊಂದಿದ್ದು, 8.6 bhp ಪವರ್ ಮತ್ತು 10 Nm ಟಾರ್ಕ್ ನೀಡುತ್ತದೆ. ಇದು 5 ಲೀಟರ್ ಇಂಧನ ಟ್ಯಾಂಕ್ ಹೊಂದಿದೆ.

<p>ಸುಜುಕಿ ಆಕ್ಸೆಸ್ 125 ಇದೀಗ ಹೊಸ ಅವತಾರದಲ್ಲಿ, ಹೊಸ ಫೀಚರ್ಸ್‌ನೊಂದಿಗೆ...</p>
ಸುಜುಕಿ ಆಕ್ಸೆಸ್ 125 ಇದೀಗ ಹೊಸ ಅವತಾರದಲ್ಲಿ, ಹೊಸ ಫೀಚರ್ಸ್‌ನೊಂದಿಗೆ...

ಸುಜುಕಿ ಆಕ್ಸೆಸ್ 125 ರೇಟ್‌ ಎಷ್ಟು

ಸುಜುಕಿ ಆಕ್ಸೆಸ್ 125 ಸ್ಕೂಟರ್‌ನ ಸ್ಟ್ಯಾಂಡರ್ಡ್ ಮಾದರಿಯ ಡ್ರಮ್ ವೇರಿಯೆಂಟ್‌ನ ಬೆಲೆ 77,600 ರೂ. ಡ್ರಮ್ ಬ್ರೇಕ್ ಅಲಾಯ್ ವ್ಹೀಲ್‌ ಸ್ಕೂಟರ್‌ಗೆ 79,300 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ. ಡ್ರಮ್ ಬ್ರೇಕ್ ಹೊಂದಿರುವ ಅಲಾಯ್ ವೀಲ್ ಬೆಲೆ 85,200 ರೂ., ಡಿಸ್ಕ್ ಬ್ರೇಕ್ ಹೊಂದಿರುವ ಅಲಾಯ್ ವೀಲ್ 87,200 ರೂ. ಮತ್ತು 125 ವಿಶೇಷ ಆವೃತ್ತಿಯ ಡಿಸ್ಕ್ ಬ್ರೇಕ್ ವೆರಿಯಂಟ್ ಬೆಲೆ 83,000 ರೂ ಪಾವತಿಸಬೇಕಾಕುತ್ತದೆ.

ವಿಭಾಗ