Breast Cancer: ಸ್ತನ ಕ್ಯಾನ್ಸರ್ ಬಗ್ಗೆ ಭಯ ಬೇಡ.. ಕೊಂಚ ಮುನ್ನೆಚರಿಕೆ ವಹಿಸಿದರೆ ಖಂಡಿತ ಈ ಸಮಸ್ಯೆ ಗೆಲ್ಲಬಹುದು-symptoms and treatment for breast cancer ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Breast Cancer: ಸ್ತನ ಕ್ಯಾನ್ಸರ್ ಬಗ್ಗೆ ಭಯ ಬೇಡ.. ಕೊಂಚ ಮುನ್ನೆಚರಿಕೆ ವಹಿಸಿದರೆ ಖಂಡಿತ ಈ ಸಮಸ್ಯೆ ಗೆಲ್ಲಬಹುದು

Breast Cancer: ಸ್ತನ ಕ್ಯಾನ್ಸರ್ ಬಗ್ಗೆ ಭಯ ಬೇಡ.. ಕೊಂಚ ಮುನ್ನೆಚರಿಕೆ ವಹಿಸಿದರೆ ಖಂಡಿತ ಈ ಸಮಸ್ಯೆ ಗೆಲ್ಲಬಹುದು

ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಬೆಳವಣಿಗೆಯನ್ನು ಕೆಲವು ಆರಂಭಿಕ ಚಿಹ್ನೆಗಳಿಂದ ಕಂಡು ಹಿಡಿಯಬಹುದು. ಸ್ತನ ಕ್ಯಾನ್ಸರ್ ಲಕ್ಷಣಗಳು ಹೀಗಿರುತ್ತದೆ. ಎದೆಯಲ್ಲಿ ಗಡ್ಡೆ, ಸ್ತನದ ಆಕಾರ ಮತ್ತು ಗಾತ್ರದಲ್ಲಿ ಬದಲಾವಣೆ, ನಿಪ್ಪಲ್‌ಗಳಿಂದ ಅಸಹಜ ಸ್ರವಿಸುವಿಕೆ, ಕಂಕುಳಲ್ಲಿ ಗಡ್ಡೆ, ಸ್ತನದ ಸುತ್ತ ಕೊಬ್ಬು ಮತ್ತು ಚರ್ಮವು ಮಡಿಕೆಗಳು ಸ್ತನ ಕ್ಯಾನ್ಸರ್‌ನ ಲಕ್ಷಣಗಳಾಗಿರಬಹುದು.

ಸ್ತನ ಕ್ಯಾನ್ಸರ್‌ ಲಕ್ಷಣಗಳು ಹಾಗೂ ಚಿಕಿತ್ಸೆ
ಸ್ತನ ಕ್ಯಾನ್ಸರ್‌ ಲಕ್ಷಣಗಳು ಹಾಗೂ ಚಿಕಿತ್ಸೆ

ಸ್ತನ ಕ್ಯಾನ್ಸರ್ ಎನ್ನುವುದು ಸ್ತನದಲ್ಲಿನ ಅಂಗಾಂಶದ ಮೇಲೆ ಪರಿಣಾಮ ಬೀರುವ ಒಂದು ರೀತಿಯ ಕ್ಯಾನ್ಸರ್ ಆಗಿದೆ. ಇದು ಮಹಿಳೆಯರಲ್ಲಿ ಕಂಡು ಬರುವ ಸಾಮಾನ್ಯ ರೀತಿಯ ಕ್ಯಾನ್ಸರ್ ಆಗಿದೆ. ಪ್ರತಿ ಎಂಟು ಮಹಿಳೆಯರಲ್ಲಿ ಒಬ್ಬರು ತಮ್ಮ ಜೀವಿತಾವಧಿಯಲ್ಲಿ ಸ್ತನ ಕ್ಯಾನ್ಸರ್‌ಗೆ ಒಳಗಾಗುತ್ತಾರೆ ಎಂದು ವರದಿಗಳು ಹೇಳುತ್ತವೆ. ಆದಾರೂ, ಸಮಯೋಚಿತ ರೋಗ ನಿರ್ಣಯ ಮತ್ತು ಸರಿಯಾದ ಚಿಕಿತ್ಸೆಯೊಂದಿಗೆ, ಈ ಮಾರಣಾಂತಿಕ ರೋಗವನ್ನು ತಡೆಗಟ್ಟಬಹುದು.

ನಿಯಮಿತ ಮ್ಯಾಮೊಗ್ರಾಮ್‌ಗಳ ಮೂಲಕ ಸ್ತನ ಕ್ಯಾನ್ಸರನ್ನು ಮೊದಲೇ ಕಂಡುಹಿಡಿಯಬಹುದು. ಆದರೆ ಎಲ್ಲಾ ಸ್ತನ ಕ್ಯಾನ್ಸರ್‌ ಸಮಸ್ಯೆಯನ್ನು ಮ್ಯಾಮೊಗ್ರಾಮ್ ಮೂಲಕ ಪತ್ತೆ ಹಚ್ಚಲು ಸಾಧ್ಯವಿಲ್ಲ ಎನ್ನುವುದು ನೀವು ಗಮನಿಸಬೇಕಾದ ಅಂಶ.

ಸ್ತನ ಕ್ಯಾನ್ಸರ್‌ನ ಲಕ್ಷಣಗಳು

ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಬೆಳವಣಿಗೆಯನ್ನು ಕೆಲವು ಆರಂಭಿಕ ಚಿಹ್ನೆಗಳಿಂದ ಕಂಡು ಹಿಡಿಯಬಹುದು. ಸ್ತನ ಕ್ಯಾನ್ಸರ್ ಲಕ್ಷಣಗಳು ಹೀಗಿರುತ್ತದೆ. ಎದೆಯಲ್ಲಿ ಗಡ್ಡೆ, ಸ್ತನದ ಆಕಾರ ಮತ್ತು ಗಾತ್ರದಲ್ಲಿ ಬದಲಾವಣೆ, ನಿಪ್ಪಲ್‌ಗಳಿಂದ ಅಸಹಜ ಸ್ರವಿಸುವಿಕೆ, ಕಂಕುಳಲ್ಲಿ ಗಡ್ಡೆ, ಸ್ತನದ ಸುತ್ತ ಕೊಬ್ಬು ಮತ್ತು ಚರ್ಮವು ಮಡಿಕೆಗಳು ಸ್ತನ ಕ್ಯಾನ್ಸರ್‌ನ ಲಕ್ಷಣಗಳಾಗಿರಬಹುದು.

ಆದರೆ ಕೆಲವೊಮ್ಮೆ ಈ ಲಕ್ಷಣಗಳಿಲ್ಲದಿದ್ದರೂ ಸ್ತನ ಕ್ಯಾನ್ಸರ್ ಬರಬಹುದು. ಸ್ತನದ ಸುತ್ತಮುತ್ತ ಈ ರೀತಿಯ ಯಾವುದೇ ಲಕ್ಷಣಗಳು ಕಂಡು ಬಂದಾಗ ಅಥವಾ ಏನಾದರೂ ವಿಚಿತ್ರ ಅನುಭವ ಆದಾಗ ಕೂಡಲೇ ವೈದ್ಯರನ್ನು ಸಂಪರ್ಕಿಸುವುದು ಉತ್ತಮ. 50 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಿಗೆ ಪ್ರತಿ ಎರಡು ವರ್ಷಗಳಿಗೊಮ್ಮೆ ಮ್ಯಾಮೊಗ್ರಮ್ ಮಾಡಲು ಸಲಹೆ ನೀಡಲಾಗುತ್ತದೆ. ಆದರೆ ದಟ್ಟವಾದ ಸ್ತನ ಅಂಗಾಂಶವನ್ನು ಹೊಂದಿರುವ ಮಹಿಳೆಯರಲ್ಲಿ, ಮ್ಯಾಮೊಗ್ರಾಮ್‌ನೊಂದಿಗೆ ರೋಗ ಲಕ್ಷಣಗಳನ್ನು ಪತ್ತೆಹಚ್ಚಲು ಕಷ್ಟವಾಗುತ್ತದೆ. ಅಂತಹ ಸಂದರ್ಭಗಳಲ್ಲಿ, ವೈದ್ಯರು ರೋಗವನ್ನು ಪತ್ತೆ ಹಚ್ಚಲು ಹೆಚ್ಚು ಆಳವಾದ ವಿಶ್ಲೇಷಣೆ ಮಾಡುತ್ತಾರೆ.

ಸ್ತನ ಕ್ಯಾನ್ಸರ್‌ನ ಯಾವುದೇ ರೋಗಲಕ್ಷಣಗಳು ಅಥವಾ ಅನುಮಾನ ಇದ್ದಲ್ಲಿ, ಸ್ಥಿತಿಯನ್ನು ಪತ್ತೆ ಹಚ್ಚಲು ವೈದ್ಯರು ಕೆಲವು ಪರೀಕ್ಷೆಗಳನ್ನು ಸೂಚಿಸಬಹುದು. ಇವುಗಳು ಮ್ಯಾಮೊಗ್ರಾಮ್‌, ಅಲ್ಟ್ರಾಸೌಂಡ್, MRI, ಅಥವಾ ಬಯಾಪ್ಸಿಯನ್ನು ಒಳಗೊಂಡಿರಬಹುದು. ಬಯಾಪ್ಸಿ, ಸ್ತನ ಅಂಗಾಂಶದ ಸಣ್ಣ ಮಾದರಿಯನ್ನು ತೆಗೆದುಕೊಂಡು ಕ್ಯಾನ್ಸರ್ ಕೋಶಗಳ ಉಪಸ್ಥಿತಿಗಾಗಿ ಸೂಕ್ಷ್ಮದರ್ಶಕದ ಮೂಲಕ ಪರಿಶೀಲಿಸಲಾಗುತ್ತದೆ.

ಸ್ತನ ಕ್ಯಾನ್ಸರ್‌ಗೆ ಚಿಕಿತ್ಸೆ

ಸ್ತನ ಕ್ಯಾನ್ಸರ್‌ ಯಾವ ಹಂತದಲ್ಲಿದೆ ಎಂಬುದರ ಮೇಲೆ ಅದರ ಚಿಕಿತ್ಸೆ ಅವಲಂಬಿತವಾಗಿರುತ್ತದೆ. ಸ್ತನ ಕ್ಯಾನ್ಸರ್‌ಗೆ ಅತ್ಯಂತ ಸಾಮಾನ್ಯವಾದ ಚಿಕಿತ್ಸೆಗಳಲ್ಲಿ ಶಸ್ತ್ರಚಿಕಿತ್ಸೆ, ಕೀಮೋಥೆರಪಿ ಮತ್ತು ವಿಕಿರಣ ಚಿಕಿತ್ಸೆ ಸೇರಿವೆ. ಹೆಚ್ಚಿನ ರೀತಿಯ ಸ್ತನ ಕ್ಯಾನ್ಸರ್‌ಗೆ ಸ್ತನದಿಂದ ಕ್ಯಾನ್ಸರ್ ಅಂಗಾಂಶವನ್ನು ತೆಗೆದುಹಾಕಲು ಶಸ್ತ್ರಚಿಕಿತ್ಸೆಯ ಅಗತ್ಯವಿರುತ್ತದೆ. ಉಳಿದ ಕ್ಯಾನ್ಸರ್ ಕೋಶಗಳನ್ನು ನಾಶ ಮಾಡಲು ಕೀಮೋಥೆರಪಿ ಮತ್ತು ವಿಕಿರಣ ಚಿಕಿತ್ಸೆಯನ್ನು ಬಳಸಲಾಗುತ್ತದೆ.

ದೇಹಾದ್ಯಂತ ಕ್ಯಾನ್ಸರ್ ಕೋಶಗಳನ್ನು ಕೊಲ್ಲಲು ಕೀಮೋ ಥೆರಪಿಯನ್ನು ಕೂಡಾ ಬಳಸಬಹುದು. ಕ್ಯಾನ್ಸರ್ ಹಾರ್ಮೋನ್ ರಿಸೆಪ್ಟರ್-ಪಾಸಿಟಿವ್ ಆಗಿದ್ದರೆ ಹಾರ್ಮೋನ್ ಚಿಕಿತ್ಸೆಯನ್ನು ಬಳಸಬಹುದು. ನಿರ್ದಿಷ್ಟ ರೀತಿಯ ಸ್ತನ ಕ್ಯಾನ್ಸರ್‌ಗೆ ಉದ್ದೇಶಿತ ಚಿಕಿತ್ಸೆಯನ್ನು ಕೂಡಾ ಬಳಸಬಹುದು. ಆದರೆ ಯಾವುದೇ ಚಿಕಿತ್ಸೆಯು ರೋಗಿಯ ಆರೋಗ್ಯ, ಕ್ಯಾನ್ಸರ್ ಹಂತ ಮತ್ತು ಕ್ಯಾನ್ಸರ್ ಪ್ರಕಾರವನ್ನು ಅವಲಂಬಿಸಿರುತ್ತದೆ.

mysore-dasara_Entry_Point