Chicken Pickle recipe: ಊಟಕ್ಕಾದ್ರೂ ನಂಚಿಕೊಳ್ಳಿ, ಅನ್ನದೊಂದಿಗಾದ್ರೂ ತಿನ್ನಿ...ಸಖತ್‌ ರುಚಿ ಈ ಚಿಕನ್‌ ಉಪ್ಪಿನಕಾಯಿ
ಕನ್ನಡ ಸುದ್ದಿ  /  ಜೀವನಶೈಲಿ  /  Chicken Pickle Recipe: ಊಟಕ್ಕಾದ್ರೂ ನಂಚಿಕೊಳ್ಳಿ, ಅನ್ನದೊಂದಿಗಾದ್ರೂ ತಿನ್ನಿ...ಸಖತ್‌ ರುಚಿ ಈ ಚಿಕನ್‌ ಉಪ್ಪಿನಕಾಯಿ

Chicken Pickle recipe: ಊಟಕ್ಕಾದ್ರೂ ನಂಚಿಕೊಳ್ಳಿ, ಅನ್ನದೊಂದಿಗಾದ್ರೂ ತಿನ್ನಿ...ಸಖತ್‌ ರುಚಿ ಈ ಚಿಕನ್‌ ಉಪ್ಪಿನಕಾಯಿ

ಚಿಕನ್‌ನಿಂದ ಎಷ್ಟೆಲ್ಲಾ ವೆರೈಟಿ ಡಿಶ್‌ ಮಾಡಬಹುದು ಅನ್ನೋದು ನಾನ್‌ವೆಜ್‌ಪ್ರಿಯರಿಗೆ ಗೊತ್ತು. ಅದರಲ್ಲಿ ಚಿಕನ್‌ ಉಪ್ಪಿನಕಾಯಿ ಕೂಡಾ ಒಂದು. ಒಮ್ಮೆ ನೀವು ಚಿಕನ್‌ ಉಪ್ಪಿನಕಾಯಿ ಮಾಡಿಟ್ಟುಕೊಂಡರೆ ಚಿಕನ್‌ ತಿನ್ನಬೇಕೆನಿಸಿದಾಗಲೆಲ್ಲಾ ಇದನ್ನು ತಿನ್ನಬಹುದು.

ಚಿಕನ್‌ ಉಪ್ಪಿನಕಾಯಿ ರೆಸಿಪಿ
ಚಿಕನ್‌ ಉಪ್ಪಿನಕಾಯಿ ರೆಸಿಪಿ

ಸಾಮಾನ್ಯವಾಗಿ ನಾವೆಲ್ಲಾ ಊಟಕ್ಕೆ ಉಪ್ಪಿನಕಾಯಿ ಬಳಸುತ್ತೇವೆ. ಅದರಲ್ಲೂ ಹೆಚ್ಚಿನ ಜನರು ಮಾವಿನ ಕಾಯಿ ಉಪ್ಪಿನಕಾಯಿ, ನಿಂಬೆಹಣ್ಣು, ಮಿಕ್ಸ್‌ ತರಕಾರಿ ಉಪ್ಪಿನಕಾಯಿಯನ್ನೇ ಹೆಚ್ಚು ಟೇಸ್ಟ್‌ ಮಾಡಿರುತ್ತೇವೆ. ಆದರೆ ಚಿಕನ್‌ ಉಪ್ಪಿನಕಾಯಿಯನ್ನು ಹೆಚ್ಚಿನ ಜನರು ತಿಂದಿರುವುದಿಲ್ಲ.

ಚಿಕನ್‌ನಿಂದ ಎಷ್ಟೆಲ್ಲಾ ವೆರೈಟಿ ಡಿಶ್‌ ಮಾಡಬಹುದು ಅನ್ನೋದು ನಾನ್‌ವೆಜ್‌ಪ್ರಿಯರಿಗೆ ಗೊತ್ತು. ಅದರಲ್ಲಿ ಚಿಕನ್‌ ಉಪ್ಪಿನಕಾಯಿ ಕೂಡಾ ಒಂದು. ಒಮ್ಮೆ ನೀವು ಚಿಕನ್‌ ಉಪ್ಪಿನಕಾಯಿ ಮಾಡಿಟ್ಟುಕೊಂಡರೆ ಚಿಕನ್‌ ತಿನ್ನಬೇಕೆನಿಸಿದಾಗಲೆಲ್ಲಾ ಇದನ್ನು ತಿನ್ನಬಹುದು. ಚಿಕನ್‌ ಉಪ್ಪಿನಕಾಯಿ ತಯಾರಿಸುವುದು ಕಷ್ಟದ ಮಾತೇನಲ್ಲ. ಚಿಕನ್‌ ಉಪ್ಪಿನಕಾಯಿ ತಯಾರಿಸಲು ಬೇಕಾಗುವ ಸಾಮಗ್ರಿಗಳು ಹಾಗೂ ತಯಾರಿಸುವ ವಿಧಾನ ಹೇಗೆ ನೋಡೋಣ.

ಚಿಕನ್‌ ಉಪ್ಪಿನಕಾಯಿ ತಯಾರಿಸಲು ಬೇಕಾಗುವ ಸಾಮಗ್ರಿಗಳು

ಬೋನ್‌ಲೆಸ್‌ ಚಿಕನ್‌ - 1/2 ಕೆಜಿ

ಎಣ್ಣೆ - 1 ಕಪ್‌

ರೆಡ್‌ ಚಿಲ್ಲಿ ಪೌಡರ್‌ - 1/4 ಕಪ್‌

ಅರಿಶಿನ - 1/4 ಟೀ ಸ್ಪೂನ್‌

ಚೆಕ್ಕೆ - 1 ಇಂಚು

ಏಲಕ್ಕಿ - 2

ಲವಂಗ - 5

ಧನಿಯಾ - 2 ಟೇಬಲ್‌ ಸ್ಪೂನ್

ಜೀರ್ಗೆ - 1/2 ಟೇಬಲ್‌ ಸ್ಪೂನ್

‌ಸಾಸಿವೆ - 1 ಟೇಬಲ್‌ ಸ್ಪೂನ್

ಮೆಂತ್ಯ - 1/4 ಟೇಬಲ್‌ ಸ್ಪೂನ್‌

ಶುಂಠಿ ಬೆಳ್ಳುಳ್ಳಿ ಪೇಸ್ಟ್‌ - 1 ಟೇಬಲ್‌ ಸ್ಪೂನ್‌

ನಿಂಬೆರಸ - 2

‌ಉಪ್ಪು - 1/4 ಕಪ್

‌ಚಿಕನ್‌ ಉಪ್ಪಿನಕಾಯಿ ತಯಾರಿಸುವ ವಿಧಾನ

2-3 ಬಾರಿ ಚಿಕನ್‌ ತೊಳೆದು ನೀರು ಸೋರಲು ಬಿಡಿ, ನಂತರ ಒಂದು ಬೌಲ್‌ನಲ್ಲಿ ಚಿಕನ್‌ ಸೇರಿಸಿ

ಇದಕ್ಕೆ ಸ್ವಲ್ಪ ಉಪ್ಪು, ಅರಿಶಿನ ಸೇರಿಸಿ ಎಲ್ಲವೂ ಹೊಂದಿಕೊಳ್ಳುವಂತೆ ಮಿಕ್ಸ್‌ ಮಾಡಿ ಅರ್ಧ ಗಂಟೆ ಮ್ಯಾರಿನೇಟ್‌ ಆಗಲು ಬಿಡಿ

ನಂತರ ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿಕೊಂಡು ಮ್ಯಾರಿನೇಟ್‌ ಮಾಡಿದ ಚಿಕನನ್ನು ಕಂದು ಬಣ್ಣ ಬರುವರೆಗೂ ಫ್ರೈ ಮಾಡಿಕೊಳ್ಳಿ

ಮತ್ತೊಂದು ಪಾತ್ರೆಯಲ್ಲಿ ಚೆಕ್ಕೆ, ಏಲಕ್ಕಿ, ಲವಂಗ ಸೇರಿಸಿ ಕಡಿಮೆ ಉರಿಯಲ್ಲಿ ಫ್ರೈ ಮಾಡಿ ( ಡ್ರೈ ರೋಸ್ಟ್‌)

ನಂತರ ಧನಿಯಾ, ಸಾಸಿವೆ, ಜೀರ್ಗೆ, ಮೆಂತ್ಯ ಸೇರಿಸಿ 2 ನಿಮಿಷ ಹುರಿದು ಸ್ಟೋಪ್‌ ಆಫ್‌ ಮಾಡಿ, ತಣ್ಣಗಾದ ನಂತರ ಪುಡಿ ಮಾಡಿಕೊಳ್ಳಿ

ಚಿಕನ್‌ ಬೇಯಿಸಿದ ಎಣ್ಣೆಗೆ ಶುಂಠಿ ಬೆಳ್ಳುಳ್ಳಿ ಪೇಸ್ಟ್‌ ಸೇರಿಸಿ 2 ನಿಮಿಷ ಫ್ರೈ ಮಾಡಿ, ನಂತರ ಫ್ರೈ ಮಾಡಿಕೊಂಡ ಚಿಕನ್‌ ಸೇರಿಸಿ ಮಿಕ್ಸ್‌ ಮಾಡಿ

ಇದರೊಂದಿಗೆ ಪುಡಿ ಮಾಡಿಕೊಂಡ ಮಸಾಲೆ, ಉಳಿದ ಉಪ್ಪು, ರೆಡ್‌ ಚಿಲ್ಲಿ ಪೌಡರ್‌ ಸೇರಿಸಿ ಕಡಿಮೆ ಉರಿಯಲ್ಲಿ 2-3 ನಿಮಿಷ ಫ್ರೈ ಮಾಡಿ

ಮಿಶ್ರಣ ತಣ್ಣಗಾದಾಗ ನಿಂಬೆರಸ ಸೇರಿಸಿ ಮತ್ತೊಮ್ಮೆ ಮಿಕ್ಸ್‌ ಮಾಡಿ ಇದನ್ನು ಒಂದು ಗಾಜಿನ ಬಾಟಲ್‌ಗೆ ಸೇರಿಸಿ

ರೆಫ್ರಿಜರೇಟರ್‌ನಲ್ಲಿ ಇಡದೆ ಸುಮಾರು 2-3 ತಿಂಗಳ ಕಾಲ ಈ ಚಿಕನ್‌ ಉಪ್ಪಿನಕಾಯನ್ನು ಸ್ಟೋರ್‌ ಮಾಡಬಹುದು.

ಈ ಚಿಕನ್‌ ಉಪ್ಪಿನಕಾಯನ್ನು ಊಟದ ಜೊತೆಗಾದರೂ ತಿನ್ನಬಹುದು. ಅಥವಾ ಸಾಂಬಾರ್‌ ಇಲ್ಲದಿದ್ದಾಗ ಅನ್ನದೊಂದಿಗೆ ಕೂಡಾ ತಿನ್ನಬಹುದು, ದೋಸೆ, ರೊಟ್ಟಿ, ಚಪಾತಿಯೊಂದಿಗೆ ಕೂಡಾ ಇದು ಬೆಸ್ಟ್‌ ಕಾಂಬಿನೇಶನ್.‌

ಗಮನಿಸಿ: ಚಿಕನ್‌ ಚೆನ್ನಾಗಿ ಫ್ರೈ ಮಾಡದಿದ್ದರೆ ಉಪ್ಪಿನ ಕಾಯಿ ಬೇಗ ಕೆಡುತ್ತದೆ.

ಉಪ್ಪಿನಕಾಯಿಗೆ ನೀರು ತಾಕದಂತೆ ಜಾಗ್ರತೆ ವಹಿಸಿ

Whats_app_banner