ಬ್ರೆಝಾಗೆ ಭಾರೀ ಹಿನ್ನಡೆ: ನವೆಂಬರ್‌ನಲ್ಲಿ ಎಸ್‌ಯುವಿ ಪ್ರಿಯರನ್ನು ಸೆಳೆದಿದ್ದು ಯಾವ ಕಾರು ನೋಡಿ
ಟಾಟಾ ನೆಕ್ಸಾನ್ ಕಳೆದ ತಿಂಗಳು ಭರ್ಜರಿ ಪುನರಾಗಮನ ಮಾಡಿದೆ. ಮಾರಾಟದ ಪಟ್ಟಿಯಲ್ಲಿ ಬ್ರೆಝಾವನ್ನು ಹಿಂದಕ್ಕೆ ತಳ್ಳುವುದು ಮಾತ್ರವಲ್ಲದೆ ದಾಖಲೆ ನಿರ್ಮಿಸಿದೆ. ಕಳೆದ ತಿಂಗಳು ಎರಡೂ ಎಸ್‌ಯುವಿಗಳು ಎಷ್ಟು ಗ್ರಾಹಕರನ್ನು ಪಡೆದಿವೆ ಮತ್ತು ವಾರ್ಷಿಕ ಅಥವಾ ಮಾಸಿಕ ಮಾರಾಟದಲ್ಲಿ ಎಷ್ಟು ಹೆಚ್ಚಳ ದಾಖಲಾಗಿದೆ ಎಂಬ ಮಾಹಿತಿ ಇಲ್ಲಿದೆ. (ವರದಿ: ವಿನಯ್ ಭಟ್)
Tata Nexon Beats Maruti Suzuki Brezza: ಟಾಟಾ ಮೋಟಾರ್ಸ್ ನವೆಂಬರ್ ತಿಂಗಳಲ್ಲಿ ಪಂಚ್ ಮತ್ತು ನೆಕ್ಸಾನ್ ಮೂಲಕ SUV ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಿದೆ. ಈ ಮೂಲಕ ಎಸ್ಯುವಿಪ್ರಿಯರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಜನರು ನೆಕ್ಸಾನ್ ಬಗ್ಗೆ ಹುಚ್ಚರಾಗಿದ್ದ ಕಾಲವಿತ್ತು, ಆದರೆ ಈ ವರ್ಷ ಸುಮಾರು ತಿಂಗಳುಗಳವರೆಗೆ ಮಾರುತಿ ಸುಜುಕಿ ಬ್ರೆಝಾ ನೆಕ್ಸಾನ್‌ಗಿಂತ ತನ್ನ ಮುನ್ನಡೆಯನ್ನು ಕಾಯ್ದುಕೊಂಡಿತ್ತು. ಸಬ್-4 ಮೀಟರ್ ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಬ್ರೆಝಾ ಅಗ್ರ ಮಾರಾಟವಾಗಿ ಉಳಿಯಿತು.
ಆದಾಗ್ಯೂ, ಈಗ ಸಮಯ ಬದಲಾಗಿದೆ. ಟಾಟಾ ನೆಕ್ಸಾನ್ ಕಳೆದ ತಿಂಗಳು ಭರ್ಜರಿ ಪುನರಾಗಮನವನ್ನು ಮಾಡಿದೆ. ಮಾರಾಟದ ಪಟ್ಟಿಯಲ್ಲಿ ಬ್ರೆಝಾವನ್ನು ಹಿಂದಕ್ಕೆ ತಳ್ಳುವುದು ಮಾತ್ರವಲ್ಲದೆ ದಾಖಲೆ ನಿರ್ಮಿಸಿದೆ. ಕಳೆದ ತಿಂಗಳು ಎರಡೂ ಎಸ್‌ಯುವಿಗಳು ಎಷ್ಟು ಗ್ರಾಹಕರನ್ನು ಪಡೆದಿವೆ ಮತ್ತು ವಾರ್ಷಿಕ ಅಥವಾ ಮಾಸಿಕ ಮಾರಾಟದಲ್ಲಿ ಎಷ್ಟು ಹೆಚ್ಚಳ ದಾಖಲಾಗಿದೆ ಎಂಬ ಮಾಹಿತಿ ಇಲ್ಲಿದೆ. ಕಳೆದ ನವೆಂಬರ್‌ನಲ್ಲಿ, ಟಾಟಾ ನೆಕ್ಸಾನ್ ದೇಶದಲ್ಲಿ ನಾಲ್ಕನೇ ಅತಿ ಹೆಚ್ಚು ಮಾರಾಟವಾದ ಕಾರಾಗಿದೆ. ಇದನ್ನು 15,329 ಗ್ರಾಹಕರು ಖರೀದಿಸಿದ್ದಾರೆ. ನೆಕ್ಸಾನ್ ಮಾರಾಟವು ವರ್ಷದಿಂದ ವರ್ಷಕ್ಕೆ 3 ಪ್ರತಿಶತದಷ್ಟು ಹೆಚ್ಚಾಗಿದೆ. ಅದೇ ಸಮಯದಲ್ಲಿ, ಈ ವರ್ಷದ ಅಕ್ಟೋಬರ್‌ನಲ್ಲಿ, ಟಾಟಾ ನೆಕ್ಸನ್ ಟಾಪ್ 10 ರಲ್ಲಿ 9 ನೇ ಸ್ಥಾನದಲ್ಲಿತ್ತು ಮತ್ತು 14,759 ಯುನಿಟ್‌ಗಳು ಮಾರಾಟವಾಗಿತ್ತು. ಈ ಮೂಲಕ ನೆಕ್ಸಾನ್‌ನ ಮಾಸಿಕ ಮಾರಾಟವೂ ಹೆಚ್ಚಾಗಿದೆ.
ಬ್ರೆಝಾ ಸ್ಥಿತಿ ಹೇಗಿದೆ?
ಕಳೆದ ನವೆಂಬರ್‌ನಲ್ಲಿ ಮಾರುತಿ ಸುಜುಕಿ ಬ್ರೆಝಾದ ಮಾರಾಟ ವರದಿಯ ಬಗ್ಗೆ ನೋಡುವುದಾದರೆ, ಕಳೆದ ತಿಂಗಳು ಈ ಜನಪ್ರಿಯ ಸಬ್-4 ಮೀಟರ್ ಕಾಂಪ್ಯಾಕ್ಟ್ ಎಸ್‌ಯುವಿ ಮಾರುತಿಯನ್ನು 14,918 ಗ್ರಾಹಕರು ಖರೀದಿಸಿದ್ದಾರೆ. ಈ ಸಂಖ್ಯೆಯು ವಾರ್ಷಿಕ 11 ಪ್ರತಿಶತದಷ್ಟು ಹೆಚ್ಚಳವಾಗಿದೆ. ಈ ವರ್ಷದ ಅಕ್ಟೋಬರ್‌ನಲ್ಲಿ ಬ್ರೆಝಾ ನಾಲ್ಕನೇ ಸ್ಥಾನದಲ್ಲಿದ್ದರೆ, ನವೆಂಬರ್‌ನಲ್ಲಿ ನೆಕ್ಸಾನ್ ಕಾರು ಬ್ರೆಝಾವನ್ನು ಆರನೇ ಸ್ಥಾನಕ್ಕೆ ತಳ್ಳಿದೆ. ಬ್ರೆಝಾವನ್ನು ಅಕ್ಟೋಬರ್‌ನಲ್ಲಿ 16,565 ಗ್ರಾಹಕರು ಖರೀದಿಸಿದ್ದರು. ಆದರೆ, ನವೆಂಬರ್‌ನಲ್ಲಿ 1600 ಕ್ಕೂ ಹೆಚ್ಚು ಯುನಿಟ್‌ಗಳು ಕುಸಿದಿದ್ದರಿಂದ ಮಾಸಿಕ ಮಾರಾಟವು ಡೌನ್ ಆಗಿದೆ.
ನೆಕ್ಸಾನ್ ಮತ್ತು ಬ್ರೆಝಾ ಬೆಲೆಗಳು
ಮಾರುತಿ ಸುಜುಕಿ ಮತ್ತು ಟಾಟಾ ಮೋಟಾರ್ಸ್‌ನ ಈ ಎರಡು ಜನಪ್ರಿಯ ಎಸ್‌ಯುವಿಗಳ ಬೆಲೆಗಳ ಬಗ್ಗೆ ನೋಡುವುದಾದರೆ, ಬ್ರೆಝಾದ ಪ್ರಸ್ತುತ ಎಕ್ಸ್ ಶೋ ರೂಂ ಬೆಲೆ ರೂ. 8.34 ಲಕ್ಷದಿಂದ ಪ್ರಾರಂಭವಾಗಿ ರೂ. 14.14 ಲಕ್ಷಕ್ಕೊರಗಿದೆ. ಬ್ರೆಝಾವನ್ನು ಪೆಟ್ರೋಲ್ ಮತ್ತು ಸಿಎನ್‌ಜಿ ಆಯ್ಕೆಯಲ್ಲಿ ಪರಿಚಯಿಸಲಾಗಿದೆ. ಅದೇ ಸಮಯದಲ್ಲಿ, ಟಾಟಾ ನೆಕ್ಸಾನ್ ಪೆಟ್ರೋಲ್ ಮತ್ತು ಡೀಸೆಲ್ ಜೊತೆಗೆ CNG ಮತ್ತು ಎಲೆಕ್ಟ್ರಿಕ್ ರೂಪಾಂತರಗಳನ್ನು ಹೊಂದಿದೆ. IC ಎಂಜಿನ್ ಹೊಂದಿರುವ ನೆಕ್ಸಾನ್‌ನ ಎಕ್ಸ್ ಶೋ ರೂಂ ಬೆಲೆ 8 ಲಕ್ಷ ರೂ. ಗಳಿಂದ ಆರಂಭವಾಗಿ 15.80 ಲಕ್ಷ ರೂ. ವರೆಗೆ ಇದೆ. ಅದೇ ಸಮಯದಲ್ಲಿ, Nexon EV ನ ಎಕ್ಸ್ ಶೋ ರೂಂ ಬೆಲೆ. 12.49 ಲಕ್ಷದಿಂದ 17.19 ಲಕ್ಷದವರೆಗೆ ಇದೆ.
ವರದಿ: ವಿನಯ್ ಭಟ್