Teachers Day Short Speech: 1ರಿಂದ 5ನೇ ತರಗತಿ ಮಕ್ಕಳಿಗಾಗಿ ಇಲ್ಲಿದೆ ನೋಡಿ ಸುಲಭ ಹಾಗೂ ಸರಳ ಭಾಷಣ, ನಾಳೆ ವೇದಿಕೆ ಮೇಲೆ ಇದೇ ರೀತಿ ಮಾತನಾಡಿ-teachers day short speech on sarvepalli radhakrishnan in kannada september 5 smk ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Teachers Day Short Speech: 1ರಿಂದ 5ನೇ ತರಗತಿ ಮಕ್ಕಳಿಗಾಗಿ ಇಲ್ಲಿದೆ ನೋಡಿ ಸುಲಭ ಹಾಗೂ ಸರಳ ಭಾಷಣ, ನಾಳೆ ವೇದಿಕೆ ಮೇಲೆ ಇದೇ ರೀತಿ ಮಾತನಾಡಿ

Teachers Day Short Speech: 1ರಿಂದ 5ನೇ ತರಗತಿ ಮಕ್ಕಳಿಗಾಗಿ ಇಲ್ಲಿದೆ ನೋಡಿ ಸುಲಭ ಹಾಗೂ ಸರಳ ಭಾಷಣ, ನಾಳೆ ವೇದಿಕೆ ಮೇಲೆ ಇದೇ ರೀತಿ ಮಾತನಾಡಿ

Teachers day short speech: ನಿಮ್ಮ ಮಕ್ಕಳು ತುಂಬಾ ಚಿಕ್ಕವರಾಗಿದ್ದರೆ, ಅವರನ್ನು ವೇದಿಕೆ ಮೇಲೆ ಕಾಣುವ ಆಸೆ ನಿಮಗಿದ್ದರೆ, ನಿಮ್ಮ ಮಕ್ಕಳಿಗೆ ಈ ರೀತಿ ಪುಟ್ಟದಾಗಿ ಭಾಷಣ ರೆಡಿ ಮಾಡಿಕೊಡಿ. ಅವರು ಇದನ್ನೇ ಅಭ್ಯಾಸ ಮಾಡಲಿ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನಿಮ್ಮ ಮಕ್ಕಳು ಇನ್ನೂ ಚಿಕ್ಕವರು ತುಂಬಾ ಉದ್ದದ ಭಾಷಣ ಮಾಡಲು ಸಾಧ್ಯವಿಲ್ಲ ಎಂದಾದರೆ ಅವರಿಗೆ ನೀವು ಈ ರೀತಿ ಚಿಕ್ಕದಾದ ಭಾಷಣವನ್ನು ಹೇಳಿಕೊಡಿ.

  1. ಎಲ್ಲರಿಗೂ ನಮಸ್ಕಾರ,

ನಾವು ಇಲ್ಲಿ ಇಂದು ಶಿಕ್ಷಕರ ದಿನಾಚರಣೆಯನ್ನು ಆಚರಿಸಲು ಸೇರಿದ್ದೇವೆ. ಈ ವಿಶೇಷ ದಿನವನ್ನು ಶ್ರದ್ಧಾ ಮತ್ತು ಗೌರವದಿಂದ ಆಚರಿಸುತ್ತೇವೆ.

ಶಿಕ್ಷಕರು ನಮ್ಮ ಜೀವನದ ಬೆಳಕಾಗಿದ್ದಾರೆ. ಅವರ ಪರಿಶ್ರಮ, ಕಾಳಜಿ ಮತ್ತು ಮಾರ್ಗದರ್ಶನದ ಮೂಲಕ ನಾವು ನಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಅಣಿಯಾಗುತ್ತಿದ್ದೇವೆ. ಅವರು ನಮಗೆ ಜ್ಞಾನವನ್ನು ನೀಡುವವರಾಗಿದ್ದು ಜೀವನದ ಮೌಲ್ಯಗಳನ್ನು ಮತ್ತು ನೈತಿಕತೆಯನ್ನು ಸಹ ಕಲಿಸುತ್ತಾರೆ.

ಪ್ರತಿಯೊಬ್ಬ ಶಿಕ್ಷಕ, ವಿದ್ಯಾರ್ಥಿಗಳಿಗೆ ಹೊಸದೊಂದು ಅನುಭವವನ್ನು ನೀಡಲು ಸದಾ ಪ್ರಯತ್ನಿಸುತ್ತಾರೆ. ಅವರು ನಮ್ಮ ಶಕ್ತಿಯನ್ನು, ಆಸೆಯನ್ನು ಮತ್ತು ಪ್ರತಿಭೆಯನ್ನು ಗುರುತಿಸುತ್ತಾರೆ. ಅವರು ನಮಗೆ ಕೇವಲ ವಿಷಯವಲ್ಲ ಜೀವನದ ನಿಖರ ಪಾಠಗಳನ್ನು ಕೂಡ ತಿಳಿಸಿಕೊಡುತ್ತಾರೆ.

ನಾನು ಎಲ್ಲಾ ಶಿಕ್ಷಕರಿಗೆ ಗೌರವ ಮತ್ತು ಧನ್ಯವಾದಗಳನ್ನು ತಿಳಿಸುತ್ತಿದ್ದೇನೆ. ಶ್ರದ್ಧೆಯಿಂದ ಪಾಠ ಕಲಿಯುತ್ತೇನೆ

ಧನ್ಯವಾದಗಳು

2. ಎಲ್ಲ ಶಿಕ್ಷಕರಿಗೂ ಹಾಗೂ ನನ್ನ ಸಹಪಾಠಿಗಳಿಗೂ ಶುಭೋದಯ

ನಾವು ಇಂದು ಇಲ್ಲಿ ಸೇರಿರು ಕಾರಣ ಶಿಕ್ಷಣ, ಶಿಕ್ಷಕರು ಮತ್ತು ನಮ್ಮೀ ಶಾಲೆ. ಸಮಾಜ ಇಂದು ಈರೀತಿಯಲ್ಲಿ ಬೆಳವಣಿಗೆ ಅಥವಾ ಬದಲಾವಣೆ ಹೊಂದುತ್ತಿದೆ ಎಂದರೆ ಅದಕ್ಕೆ ಕಾರಣ ನಮ್ಮ ಶಿಕ್ಷಕರು. ಅವರು ಕಲಿಸಿದ ಪಾಠವನ್ನು ಅರ್ಥ ಮಾಡಿಕೊಂಡು ಅದರಂತೆ ನಡೆದುಕೊಂಡು ಸಮಾಜ ಸಾಗುತ್ತಿದೆ. ನಾವೆಲ್ಲರೂ ಈ ಸಮಾಜದ ಒಂದು ಭಾಗವಾದರೆ ಇದನ್ನು ಮುನ್ನಡೆಸಿ ಮಾರ್ಗದರ್ಶನ ಮಾಡುವವರು ಶಿಕ್ಷಕರು.

ಆದ್ದರಿಂದ ನಾವೆಲ್ಲರೂ ಇಂದು ನಮ್ಮ ಶಿಕ್ಷಕರಿಗೆ ಗೌರವ ಅರ್ಪಣೆ ಮಾಡಲು ಒಂದು ಅವಕಾಶವನ್ನು ಹೊಂದಿದ್ದೇವೆ. ಈ ಸಂದರ್ಭದಲ್ಲಿ ನಾನು ನನ್ನೆಲ್ಲಾ ಗುರು, ಹಿರಿಯರಿಗೆ ಧನ್ಯವಾದ ತಿಳಿಸುತ್ತೇನೆ.

3. ಎಲ್ಲರಿಗೂ ನಮಸ್ಕಾರ,

ಅವರು ಉತ್ತಮ ವ್ಯಕ್ತಿಗಳಾಗಲು, ಉತ್ತಮ ವಿದ್ಯಾರ್ಥಿಗಳಾಗಲು, ಹಾಗೂ ಸಮಾಜದ ಉತ್ತಮ ಪ್ರಜೆಯಾಗಲು ಅವಕಾಶ ಮಾಡಿಕೊಡುತ್ತಾರೆ. ನಾವು ಈ ದಿನವನ್ನು, ಅವರ ಪರಿಶ್ರಮ ಮತ್ತು ಸಮಾಜಕ್ಕೆ ನೀಡುತ್ತಿರುವ ಶಿಕ್ಷಕರ ಕೊಡುಗೆಯನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ಗೌರವ ಸಮರ್ಪಣೆ ಮಾಡಬೇಕು. ಅದಕ್ಕಾಗಿಯೇ ಈ ದಿನವನ್ನು ಮೀಸಲಿಟ್ಟಿದ್ದಾರೆ. ಎಲ್ಲ ಶಿಕ್ಷಕರಿಗೆ ನಾನು ಪ್ರಣಾಮ ಸಲ್ಲಿಸುತ್ತೇನೆ.

ಮಾತನಾಡಲು ಅವಕಾಶ ನೀಡಿದ್ದಕ್ಕಾಗಿ ಧನ್ಯವಾದ

ವಿಷಯ ಹೀಗಿರಲಿ

ಡಾಕ್ಟರ್ ಸರ್ವೆಪಲ್ಲಿ ರಾಧಾಕೃಷ್ಣನ್ ಅವರ ಸ್ಮರಣಾರ್ಥವಾಗಿ ಪ್ರತಿ ವರ್ಷ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಈ ವರ್ಷ ಕೂಡ ಸೆಪ್ಟೆಂಬರ್ 5ರಂದು ಆಚರಿಸಲಾಗುತ್ತದೆ. ನೀವು ಭಾಷಣ ಮಾಡಬೇಕು ಎಂದು ತಯಾರಿ ನಡೆಸುತ್ತಿದ್ದರೆ ನಾವಿಲ್ಲಿ ನೀಡಿದ ಭಾಷಣವನ್ನು ಪ್ರತಿನಿತ್ಯ ಓದಿ ರೂಡಿ ಮಾಡಿಕೊಳ್ಳಿ. ಶಿಕ್ಷಣ ಮತ್ತು ಸಮಾಜಕ್ಕಾಗಿ ಕೊಡುಗೆ ನೀಡುತ್ತಿರುವ ಶಿಕ್ಷಕರನ್ನು ಗೌರವಿಸುವ ನಿಟ್ಟಿನಲ್ಲಿ ಈ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಗುತ್ತದೆ. ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವಲ್ಲಿ ಶಿಕ್ಷಕರು ಮಹತ್ವದ ಕಾರ್ಯವನ್ನು ವಹಿಸುತ್ತಾರೆ. ಈ ದಿನ ವಿದ್ಯಾರ್ಥಿಗಳು ತಮ್ಮ ಶಿಕ್ಷಕರಿಗೆ ಕೃತಜ್ಞತೆ ಸಲ್ಲಿಸುತ್ತಾರೆ. ಗೌರವಾರ್ಪಣೆ ಮಾಡುತ್ತಾರೆ. ಅದೇ ರೀತಿ ನೀವು ನಿಮ್ಮ ಭಾಷಣದಲ್ಲಿ ಈ ಎಲ್ಲಾ ವಿಷಯವನ್ನು ಒಳಗೂಡಿ ಮಾತನಾಡಬೇಕು.